ಹನಿಮೂನ್​ಗೆ ಹೋಗುವಾಗ ಐಶ್​ಗೆ ಮದ್ವೆಯಾಗಿದ್ದು ನೆನಪಾಯ್ತಂತೆ! ಅಂದಿನ ಘಟನೆ ನೆನೆದ ನಟಿ

By Suvarna News  |  First Published Apr 27, 2024, 5:57 PM IST

ಹನಿಮೂನ್​ಗೆ ಹೋಗುವಾಗ ಐಶ್ವರ್ಯ ರೈ​ಗೆ ಮದ್ವೆಯಾಗಿದ್ದು ನೆನಪಾಯ್ತಂತೆ! ಅಂದಿನ ಘಟನೆ ನೆನೆದ ನಟಿ ಹೇಳಿದ್ದೇನು?
 


ಕೆಲ ತಿಂಗಳಿನಿಂದ  ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿತ್ತು. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದರು. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದರು. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡಿತ್ತು.  ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗಿತ್ತು. 

 ಈ ಸುದ್ದಿ ಈಗ ಬಹುತೇಕ ತಣ್ಣಗಾಗಿದೆ. ಈ ಇಬ್ಬರೂ ವಿಚ್ಛೇದನ ಪಡೆಯುತ್ತಿಲ್ಲ ಎನ್ನುವುದು ಸಾಬೀತಾಗಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈಗ ಎಲ್ಲವೂ ಸರಿಯಾಗಿದೆ ಎಂದೇ ಹೇಳಲಾಗುತ್ತಿದ್ದು, ಡಿವೋರ್ಸ್‌ ಸುದ್ದಿಗೆ ತಾತ್ಕಾಲಿಕ  ಬ್ರೇಕ್‌ ಸಿಕ್ಕಿದೆ. ಇದಕ್ಕೂ ಮುನ್ನ  ನಡೆದಿದ್ದ ಘಟನೆಗಳನ್ನು ತಾಳೆ ಹಾಕಿ ನೋಡಿದಾಗ ಜೋಡಿ ಪ್ರತ್ಯೇಕ ಆಗುತ್ತಿರುವುದು ನಿಜ ಎಂದೇ ನಂಬಲಾಗಿತ್ತು. ಸಾಲದು ಎಂಬಂತೆ, ನಾನು ಹಾಗೂ ಪತ್ನಿ ಐಶ್ವರ್ಯಾ ಪೋಷಕರೊಂದಿಗೆ ಜೊತೆಯಾಗಿ ವಾಸ ಮಾಡುತ್ತಿಲ್ಲ ಎಂದು ಅಭಿಷೇಕ್ ಬಚ್ಚನ್ ಹೇಳಿರುವ ವೀಡಿಯೋವೊಂದು ವೈರಲ್ ಆಗಿತ್ತು.  ಕೆಲ ದಿನಗಳ ಹಿಂದಷ್ಟೇ ಐಶ್ವರ್ಯಾ ಅವರು ತಮ್ಮ ಅತ್ತೆ ಮಾವನ ಮನೆ ಜಲ್ಸಾದಿಂದ ಹೊರಬಂದು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದಾರೆ ಎಂದು ವರದಿ ಆದ ಬೆನ್ನಲ್ಲೇ ಈ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್​ ಆಗಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಸಾಬೀತಾಗಿದೆ.  

Tap to resize

Latest Videos

ಕಿರುತೆರೆಯಲ್ಲಿಯೂ ಕಾಸ್ಟಿಂಗ್​ ಕೌಚ್​? ರೂಮಿನಲ್ಲಿ ಕೂಡಾಕಿದ್ರು, ಬಟ್ಟೆ ಬದಲಿಸುವಾಗ... ನಟಿಯ ಕರಾಳ ಅನುಭವ

ಇದರ ನಡುವೆಯೇ ಐಶ್ವರ್ಯ ರೈ ತಮ್ಮ ಹನಿಮೂನ್​ ಕುರಿತು ಮಾತನಾಡಿದ್ದಾರೆ. ಅಷ್ಟಕ್ಕೂ ಈ ಜೋಡಿ ಮದುವೆಯಾಗುವ ಸಮಯದಲ್ಲಿ ಐಶ್ವರ್ಯ ರೈ ಖ್ಯಾತಿಯ ಉತ್ತುಂಗದಲ್ಲಿದ್ದರು. ಅಭಿಷೇಕ್​ ಬಚ್ಚನ್​ ಅವರು ಸ್ಟಾರ್​ ಕಿಡ್​ ಎನ್ನುವ ಕಾರಣಕ್ಕೆ ಸ್ವಲ್ಪ ಪ್ರಚಾರದಲ್ಲಿ ಇದ್ದರಷ್ಟೇ. ಹೆಣ್ಣುಮಕ್ಕಳು ಎಷ್ಟೇ ಖ್ಯಾತಿ ಪಡೆದರೂ ಮದುವೆಯಾದ ಮೇಲೆ ಗಂಡನ ಹೆಸರಿನಿಂದ ಇಲ್ಲವೇ ಸರ್​ನೇಮ್​ನಿಂದಲೇ ಗುರುತಿಸಿಕೊಳ್ಳುವುದು ಮಾಮೂಲಾಗಿದೆ. ಅದೇ ಅನುಭವವನ್ನು ನಟಿ ಐಶ್ವರ್ಯ ರೈ ಇದೀಗ ಹೇಳಿದ್ದಾರೆ. ಮಿಸಸ್​ ಬಚ್ಚನ್​ ಎಂದಾಗಲೇ ನನಗೆ ಮದುವೆಯಾಗಿದ್ದು ನೆನಪಾಯ್ತು ಎಂದಿದ್ದಾರೆ. 

ತಾವು ಹನಿಮೂನ್​ಗೆ ಹೋಗುವ ಸಮಯದಲ್ಲಿ, ಫ್ಲೈಟ್ ಅಟೆಂಡರ್ ತಮ್ಮನ್ನು ಮಿಸಸ್​ ಬಚ್ಚನ್​ ಎಂದು ಸಂಬೋಧಿಸಿದರು. ಆಗಲೇ ನನಗೆ ನಾನು ಮದುವೆಯಾಗಿರುವ ಹೆಣ್ಣು, ಅಭಿಷೇಕ್​ ಬಚ್ಚನ್​ ಅವರನ್ನು ಮದುವೆಯಾಗಿದ್ದೇನೆ ಎಂದು ನೆನಪಾಯಿತು ಎಂದು ತಮಾಷೆ ಮಾಡಿದ್ದಾರೆ.  ಮಿಸಸ್ ಬಚ್ಚನ್ ಎಂದು ಕರೆದಾಗ ನಮಗೆ ಮದುವೆಯಾಗಿದೆ ಎನಿಸಿತು ಎಂದು ಐಶ್ವರ್ಯಾ ಹೇಳಿದ್ದಾರೆ. ಸ್ವತಃ ಖ್ಯಾತ ನಟಿ, ವಿಶ್ವ ಸುಂದರಿಯಾಗಿ ಗುರುತಿಸಿಕೊಂಡಿದ್ದರೂ ಫ್ಲೈಟ್ ಅಟೆಂಡರ್ ಐಶ್ವರ್ಯಾ ರೈ ಅವರನ್ನು ಅಭಿಷೇಕ್ ಬಚ್ಚನ್ ಅವರ ಪತ್ನಿಯಾಗಿ ಗುರುತಿಸಿದ್ದರು. ಆದರೆ ಐಶ್ ಪತಿಗಿಂತಲೂ ಫೇಮಸ್ ಆಗಿದ್ದರು.

ಯಶ್​ ನಟನೆಯ ರಾಮಾಯಣ ಫೋಟೋಗಳು ಲೀಕ್​: ರಾಮ-ಸೀತೆಯನ್ನು ನೋಡಿ ಫ್ಯಾನ್ಸ್​ ಫುಲ್​ ಖುಷ್​

click me!