ಗಂಡ-ಹೆಂಡ್ತಿ ಸಂಬಂಧ ಚೆನ್ನಾಗಿರ್ಬೇಕು ಅಂದ್ರೆ ಇಬ್ರೂ ಇಂಥಾ ಅಭ್ಯಾಸ ಬಿಟ್ಬಿಡಿ!

By Vinutha PerlaFirst Published Apr 27, 2024, 5:31 PM IST
Highlights

ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕು ಅಂದ್ರೆ ಕೆಲವೊಂದು ಉತ್ತಮ ಅಭ್ಯಾಸಗಳಿರಬೇಕು. ಮತ್ತು ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ಪೂರ್ತಿಯಾಗಿ ಬಿಟ್ಟು ಬಿಡಬೇಕು. ಅಂಥಾ ಅಭ್ಯಾಸಗಳು ಯಾವುವು ತಿಳಿಯೋಣ.

ಮನುಷ್ಯನ ಜೀವನದಲ್ಲಿ ಅತೀ ಮಧುರವಾದ ಬಾಂಧವ್ಯವೆಂದರೆ ಸಂಬಂಧಗಳು. ಪೋಷಕರು, ಒಡಹುಟ್ಟಿದವರು, ಗಂಡ-ಹೆಂಡತಿ, ಸ್ನೇಹಿತರು ಇತ್ಯಾದಿ. ಆದರೆ ಕೆಲವೊಮ್ಮೆ ಕೆಲವು ಸಣ್ಣ ವಿಷಯಗಳಿಂದ ಅಥವಾ ನಡವಳಿಕೆಯಲ್ಲಿನ ಬದಲಾವಣೆಗಳಿಂದ ಆ ಸಂಬಂಧಗಳು ಬಿರುಕು ಬಿಡುವ ಸಾಧ್ಯತೆ ಹೆಚ್ಚು. ಅನೇಕ ಬಾರಿ ಜಗಳಗಳು ಆ ಸಂಬಂಧಗಳನ್ನು ಮುರಿಯುತ್ತವೆ. ಆಗ ಸಂಬಂಧಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ನಮ್ಮ ನಡವಳಿಕೆಯು ನಮ್ಮ ಪ್ರೀತಿಪಾತ್ರರಿಂದ ನಮ್ಮನ್ನು ದೂರ ಮಾಡುತ್ತದೆ. ಯಾವುದೇ ಬದಲಾವಣೆಗಳನ್ನು ಮಾಡದಿದ್ದರೆ, ಸಂಬಂಧಗಳ ನಡುವಿನ ಬಿರುಕು ಗಾಢವಾಗುತ್ತದೆ. 

ಅದರಲ್ಲೂ ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕು ಅಂದ್ರೆ ಕೆಲವೊಂದು ಉತ್ತಮ ಅಭ್ಯಾಸಗಳಿರಬೇಕು. ಮತ್ತು ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ಪೂರ್ತಿಯಾಗಿ ಬಿಟ್ಟು ಬಿಡಬೇಕು. ಅಂಥಾ ಅಭ್ಯಾಸಗಳು ಯಾವುವು ತಿಳಿಯೋಣ.

ಒಂದೇ ದಿನ ಬಾಯ್‌ಫ್ರೆಂಡ್‌ಗೆ 100ಕ್ಕೂ ಅಧಿಕ ಬಾರಿ ಕರೆ, ಚೀನಾದ ಹುಡುಗಿಗೆ 'ಲವ್‌ ಬ್ರೇನ್‌' ಕಾಯಿಲೆ!

ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವುದು  
ಸಂಸಾರ ಎಂದಾಗ ಅಲ್ಲಿ ಗಂಡ-ಹೆಂಡತಿ ಇಬ್ಬರಿಗೂ ಜವಾಬ್ದಾರಿ ಇರುತ್ತದೆ. ಇಬ್ಬರೂ ಇದನ್ನು ಸಮರ್ಥವಾಗಿ ನಿಭಾಯಿಸಬೇಕು. ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಅಭ್ಯಾಸ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಬಹುದು. ಉದಾಹರಣೆಗೆ, ಗಂಡ ಮತ್ತು ಹೆಂಡತಿ ಇಬ್ಬರೂ ಕೆಲಸ ಮಾಡುತ್ತಿದ್ದರೆ, ಮನೆಯ ಜವಾಬ್ದಾರಿಗಳನ್ನು ವಿಂಗಡಿಸಬೇಕು. ಸಂಸಾರ ಸುಖಮಯವಾಗಿರಲು ಗಂಡ ಹೆಂಡತಿ ಪರಸ್ಪರ ಸಹಾಯ ಮಾಡಬೇಕು. ವಾಟರ್‌, ಲೈಟ್‌, ಕೇಬಲ್ ಬಿಲ್ ಕಟ್ಟುವ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಂಡು ಮಾಡಬೇಕು. ಒಬ್ಬರ ಮೇಲೆಯೇ ಬರ್ಡನ್ ಬಿದ್ದಾಗ ಇದು ಸಹಜವಾಗಿ ದಾಂಪತ್ಯದಲ್ಲಿ ಕಲಹಕ್ಕೆ ಕಾರಣವಾಗುತ್ತದೆ.

ವಾದ ಮಾಡಬಾರದು
ಅನೇಕರಿಗೆ ಯಾರ ಮಾತನ್ನೂ ಕೇಳದೆ ಇರುವ ಅಭ್ಯಾಸವಿರುತ್ತದೆ. ಸಂಬಂಧದಲ್ಲಿ ಹೀಗೆ ಒಬ್ಬರು ಇನ್ನೊಬ್ಬರ ಮಾತನ್ನು ಕೇಲದೇ ವಾದ ಮೂಡಿದಾಗ ಬಿರುಕು ಮೂಡುತ್ತದೆ. ಪ್ರತಿ ಬಾರಿಯೂ ಇನ್ನೊಬ್ಬರ ಮಾತನ್ನು ಕೇಳದೆ ವಾದಿಸಿದರೆ, ಅದು ಅವರಿಗೆ ನೋವುಂಟು ಮಾಡುತ್ತದೆ. ಆದ್ದರಿಂದ, ಮೊದಲು ವಾದ ಮಾಡದೆ ಮತ್ತೊಬ್ಬರ ಮಾತನ್ನೂ ಆಲಿಸಿ. ಅವರಿಗೆ ಮಾತನಾಡಲು ಅವಕಾಶ ನೀಡಬೇಕು. ಅವರ ಮನಸ್ಥಿತಿಯನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದರಿಂದ ಸಂಬಂಧ ಚೆನ್ನಾಗಿರುತ್ತದೆ.

ಗಂಡ-ಹೆಂಡ್ತಿ ಸಂಬಂಧದಲ್ಲಿ 3ನೇಯವರು ಬರ್ಬಾರದು ಅಂದ್ರೆ, ಹೀಗಿರಿ!

ಅವಮಾನ ಮಾಡದಿರಿ
ಮನುಷ್ಯರು ಅಂದ್ಮೇಲೆ ಅವ್ರು ತಪ್ಪು ಮಾಡುವುದು ಸಹಜ. ಆದರೆ ಕೆಲವರು ಇಂಥಾ ತಪ್ಪನ್ನು ಮನಸ್ಸಿನಲ್ಲಿಟ್ಟುಕೊಂಡು ಅವಮಾನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಸಂಬಂಧಗಳ ನಡುವಿನ ಅಂತರ ಹೆಚ್ಚಾಗತೊಡಗುತ್ತದೆ. ಹಾಗಾಗಿ ಸಂಬಂಧವು ಚೆನ್ನಾಗಿರಬೇಕಾದರೆ, ಹಳೆಯ ವಿಷಯಗಳನ್ನು ತಕ್ಷಣವೇ ಮರೆತುಬಿಡುವುದು ಉತ್ತಮ. ಹೀಗಾಗಿ ಯಾವಾಗಲೂ ತಪ್ಪು ಮಾಡಿದಾಗ ಅದನ್ನು ಕ್ಷಮಿಸಿ ಮರೆಯುವುದನ್ನು ಕಲಿಯಬೇಕು.

ಗೌರವ ನೀಡುವುದು ಮುಖ್ಯ
ಯಾವುದೇ ಸಂಬಂಧದಲ್ಲಿ ಗೌರವ ಬಹಳ ಮುಖ್ಯ. ಅನೇಕ ಬಾರಿ ಕೆಲವರು ಉದ್ದೇಶಪೂರ್ವಕವಾಗಿ ಅಥವಾ ತಮಾಷೆಯಾಗಿ ಇತರರಿಗೆ ಏನನ್ನಾದರೂ ಹೇಳುತ್ತಾರೆ. ಆದರೆ ಇದರಿಂದ ಮನಸ್ಸಿಗೆ ನೋವಾಗುತ್ತದೆ ಎಂದು ಯೋಚಿಸುವುದಿಲ್ಲ. ಗಂಡ-ಹೆಂಡತಿಯ ಮಧ್ಯೆಯೂ ಹೀಗಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಇತರರನ್ನು ಅವಮಾನಿಸಬೇಡಿ. ಇಲ್ಲದಿದ್ದರೆ, ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.

ಚಿಕ್ಕ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದು
ಕೆಲವರಿಗೆ ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪ ಬರುತ್ತದೆ. ಆದರೆ ಅನಗತ್ಯವಾಗಿ ಕೋಪಗೊಳ್ಳುವುದನ್ನು ತಪ್ಪಿಸುವುದು ಉತ್ತಮ. ಅಲ್ಲದೆ, ಯಾರಾದರೂ ಹೇಳಿದ್ದು ನಿಮಗೆ ಇಷ್ಟವಾಗದಿದ್ದರೆ, ಅದನ್ನು ಇನ್ನೊಬ್ಬ ವ್ಯಕ್ತಿಗೆ ನಿಧಾನವಾಗಿ ವಿವರಿಸಬಹುದು. ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ಅದರ ಬದಲು ಚಿಕ್ಕ ಪುಟ್ಟ ವಿಷಯಕ್ಕೆ ಕೋಪ ಮಾಡಿಕೊಂಡರೆ ಸಂಬಂಧ ಹಾಳಾಗುವುದು ಖಂಡಿತ.

click me!