ಕೋವಿಡ್ 19 ವೈರಸ್ ಶ್ರೀಮಂತರು ಬಡವರೆನ್ನದೆ ಎಲ್ಲರನ್ನು ಬಾಧಿಸುತ್ತಿದೆ. ಮುಂದುವರಿದ ಹಿಂದುಳಿದ ಎಂಬ ಭೇದವಿಲ್ಲದೆ ಎಲ್ಲ ದೇಶಗಳನ್ನು ತತ್ತರಿಸುವಂತೆ ಮಾಡುತ್ತಿದೆ. ಈ ಸೋಂಕಿಗೆ ಹಲವು ಲಕ್ಷ ಮಂದಿ ಬಲಿಯಾಗಲಿರುವುದು ನಿಶ್ಚಿತ. ಬದುಕುಳಿದವರು ಆರ್ಥಿಕ ಕುಸಿತದಿಂದ ಕಂಗೆಡುತ್ತಾರೆ. ಹಲವು ಪಾಸಿಟಿವ್ ಬದಲಾವಣೆಗಳೂ ಆಗಬಹುದು.
ಕೋವಿಡ್ 19 ವೈರಸ್ ಶ್ರೀಮಂತರು ಬಡವರೆನ್ನದೆ ಎಲ್ಲರನ್ನು ಬಾಧಿಸುತ್ತಿದೆ. ಮುಂದುವರಿದ ಹಿಂದುಳಿದ ಎಂಬ ಭೇದವಿಲ್ಲದೆ ಎಲ್ಲ ದೇಶಗಳನ್ನು ತತ್ತರಿಸುವಂತೆ ಮಾಡುತ್ತಿದೆ. ಈ ಸೋಂಕಿಗೆ ಹಲವು ಲಕ್ಷ ಮಂದಿ ಬಲಿಯಾಗಲಿರುವುದು ನಿಶ್ಚಿತ. ಬದುಕುಳಿದವರು ಆರ್ಥಿಕ ಕುಸಿತದಿಂದ ಕಂಗೆಡುತ್ತಾರೆ. ಹಲವು ಪಾಸಿಟಿವ್ ಬದಲಾವಣೆಗಳೂ ಆಗಬಹುದು.
- ನಗರಗಳಲ್ಲಿ ಉದ್ಯೋಗಗಳು ಮಾಯವಾಗುವುದರಿಂದ ಯುವಜನ ಹಳ್ಳಿಯ ಕಡೆ ಮುಖ ಮಾಡಬಹುದು. ಕೃಷಿ ಚಟುವಟಿಕೆ ಹೆಚ್ಚಬಹುದು. ಯುವಜನರು ತಮ್ಮ ಹಿರಿಯರ ಜೊತೆಗೆ ಸಮಯ ಕಳೆಯಲು ಸಾಧ್ಯ ಆಗಬಹುದು.
- ಹೆಚ್ಚು ಜನ ಓಡಾಡುವಲ್ಲಿ, ನಿಗಾ ವ್ಯವಸ್ಥೆ ಹೆಚ್ಚಬಹುದು.
- ಮೆಟ್ರೋ ಸ್ಟೇಶನ್, ಥಿಯೇಟರ್ ಕೌಂಟರ್ ಮುಂತಾದ ಕಡೆ ಟಿಕೆಟ್ ಕೊಡುವಲ್ಲಿ ಮಾನವ ಸ್ಪರ್ಶ ತಪ್ಪಿಸಲು ಯಂತ್ರಗಳು, ರೊಬಾಟ್‌ಗಳು ಬರಬಹುದು.
- ಈಗಾಗಲೇ ಕೊರೋನಾ ಕಾರಣದಿಂದಾಗಿ ಪ್ರತಿಯೊಬ್ಬ ಪ್ರಜೆಯ ಆರೋಗ್ಯ ಮಾಹಿತಿಯೂ ಸರಕಾರಕ್ಕೆ ಸಿಕ್ಕಿದೆ. ಮುಂದೆ ಈ ಮಾಹಿತಿಗಳು ಖಾಸಗಿ ಮೆಡಿಕಲ್, ವಿಮಾ ಕಂಪನಿಗಳಿಗೆ ಸುಲಭವಾಗಿ ಸಿಕ್ಕಿ, ಅವು ಅದರ ದುರ್ಬಳಕೆ ಮಾಡಬಹುದು.
- ಹಳ್ಳಿಯ ತುಂಡು ಜಮೀನುಗಳು ಇನ್ನಷ್ಟು ತುಂಡಾಗಬಹುದು.
- ಮೊದಲಿಗಿಂತ ಜನರ ಓಡಾಟ ಕಡಿಮೆಯಾಗುತ್ತದೆ. ಹೀಗಾಗಿ ಪ್ರವಾಸೋದ್ಯಮ ಕೂಡ ಕುಸಿಯುತ್ತದೆ. ಉದ್ಯೋಗಿಗಳು ಹಣ ಖರ್ಚು ಮಾಡುವ ಬದಲು ಅದನ್ನು ಕೂಡಿಡುವುದರತ್ತ ಗಮನ ಹರಿಸುತ್ತಾರೆ.
- ಸಾರಿಗೆ ಕಡಿಮೆಯಾಗುವುದರಿಂದ ಪೆಟ್ರೋಲ್‌ಗೆ ಬೇಡಿಕೆ ಕಡಿಮೆಯಾಗಿ ಅದರ ಬೆಲೆ ಕುಸಿಯುತ್ತದೆ.
- ಚಿನ್ನದ ಬೆಲೆ ಈಗ ಹೆಚ್ಚಿದೆ. ಆದರೆ ಈಗ ಆಪತ್ಕಾಲಕ್ಕೆಂದು ತೆಗೆದಿಟ್ಟುಕೊಂಡ ಚಿನ್ನ ಎಲ್ಲರ ಸಂಸಾರದಲ್ಲೂ ಅಷ್ಟಿಷ್ಟು ಇದೆ. ಒಮ್ಮೆ ಉದ್ಯೋಗ ನಷ್ಟ ಆರಂಭವಾಗಿ ಸಂಸಾರ ಸಾಗಿಸುವುದು ಕಷ್ಟವಾದರೆ ಎಲ್ಲರೂ ಚಿನ್ನ ಮಾರಲು ಮುಂದಾಗುತ್ತಾರೆ. ಆಗ ಚಿನ್ನದ ಬೆಲೆ ಇಳಿಯುತ್ತದೆ.
ಮಕ್ಕಳನ್ನು ಕೊರೋನಾದಿಂದ ರಕ್ಷಿಸುವುದು ಹೇಗೆ?
- ಮೆಡಿಕಲ್ ಕೋರ್ಸಿಗೆ ಬೇಡಿಕೆ ಹೆಚ್ಚಲಿದೆ. ಆದರೆ ಅದು ಇನ್ನಷ್ಡು ಶ್ರೀಮಂತರ ಸೊತ್ತಾಗಲಿದೆ. ಮೆರಿಟ್ ಅಭ್ಯರ್ಥಿಗಳಿಗೆ ಕೊಡುವ ಸಬ್ಸಿಡಿಯನ್ನು ಸರಕಾರಗಳು ಖಜಾನೆ ಕೊರತೆಯಿಂದಾಗಿ ಕಡಿಮೆ ಮಾಡುವುದರಿಂದ, ಬಡವರು ಮೆಡಿಕಲ್ ಓದುವುದು ಕಷ್ಟವೆನಿಸಲಿದೆ.
- ಖಜಾನೆಯಲ್ಲಿ ಕಾಸು ಇಲ್ಲದಿರುವುದರಿಂದ ಬಡವರಿಗೆ ನೀಡುವ ಸೌಲಭ್ಯ ಸೇವೆಗಳಲ್ಲಿ ಕಡಿತವಾಗಲಿದೆ.
- ಔಪಚಾರಿಕ ಶಿಕ್ಷಣ ವ್ಯವಸ್ಥೆ ಕುಸಿಯಬಹುದು. ಅಲ್ಲೂ ಸರಕಾರದ ನೆರವು ಕಡಿತವಾಗುತ್ತೆ. ಜನ ಹೆಚ್ಚಹೆಚ್ಚಾಗಿ ತಮ್ಮ ಮಕ್ಕಳನ್ನು ಹೋಂ ಸ್ಕೂಲಿಂಗ್ ಮಾಡಿಸುತ್ತಾರೆ.
undefined
- ಐಟಿ ಕ್ಷೇತ್ರದ ಮೇಲಿದ್ದ ಅತಿಯಾದ ನಂಬಿಕೆ ಕುಸಿಯಲಿದೆ. ಯುವಕರು ಹೆಚ್ಚು ಹೆಚ್ಚಾಗಿ ಸರಕಾರಿ ಉದ್ಯೋಗಗಳ ಭದ್ರತೆಯ ಮೊರೆ ಹೋಗಬಹುದು.