ನಟಿ ಸುಹಾಸಿನಿ ಅವರು ಸದ್ಗುರು ಜಗ್ಗಿ ವಾಸುದೇವ ಅವರಿಗೆ ಮದುವೆ, ಸನ್ಯಾಸ, ಒಳ್ಳೆತನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಹೇಳಿದ್ದೇನು?
ಸದ್ಗುರು ಜಗ್ಗಿ ವಾಸುದೇವ ಅವರ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲಿಯೂ ಜೀವನದ ಬಗ್ಗೆ ಅವರು ಹಲವಾರು ಮಾಹಿತಿಗಳನ್ನು ನೀಡುತ್ತಲೇ ಇರುತ್ತಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸದ್ಗುರು ಸಂದರ್ಶನ ನೀಡಿದರೂ, ಅವರ ಸಂದರ್ಶನಗಳನ್ನು ಆಯಾ ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆ ಮಾಡಿ ಅದನ್ನು ಹರಿಬಿಡಲಾಗುತ್ತದೆ. ಈಗ ಅಂಥದ್ದೇ ಒಂದು ವಿಡಿಯೋ ಒಂದು ಕನ್ನಡಕ್ಕೆ ತರ್ಜುಮೆಗೊಂಡಿದ್ದು ಅದೀಗ ವೈರಲ್ ಆಗುತ್ತಿದೆ.
ಇದರಲ್ಲಿ ಸುಹಾಸಿನಿ ಅವರು ಒಂದೊಂದು ಶಬ್ದವನ್ನು ಕೇಳಿದ್ದಾರೆ. ಅದಕ್ಕೆ ಸದ್ಗುರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಮೊದಲಿಗೆ ಸುಹಾಸಿನಿ ಅವರು ಮದುವೆ ಎಂದು ಕೇಳಿದ್ದಾರೆ. ಅದಕ್ಕೆ ಸದ್ಗುರು ಅಗತ್ಯವಿದ್ದರಷ್ಟೇ ಮಾಡಿಕೊಳ್ಳಿ ಎಂದು ಜೋರಾಗಿ ನಕ್ಕಿದ್ದಾರೆ, ಸನ್ಯಾಸ ಎಂಬ ಪ್ರಶ್ನೆಗೆ ಇದು ಕೂಡ ಮದುವೆಯಂತೆಯೇ, ಅಗತ್ಯವಿದ್ದರಷ್ಟೇ ಮಾಡಿಕೊಳ್ಳಿ ಎಂದಿದ್ದಾರೆ.
ದೇವಸ್ಥಾನದಲ್ಲಿ ಭವಿಷ್ಯ ನುಡಿದು ಆ ಸಂತ ಮಾಯವಾದ: ವಿಚಿತ್ರ ಘಟನೆ ನೆನಪಿಸಿಕೊಂಡ ನಟ ವಿವೇಕ್ ಒಬೆರಾಯ್
ಸಾಮರ್ಥ್ಯ ಎಂಬ ಶಬ್ದಕ್ಕೆ ಸದ್ಗುರು, ಯಾವುದಾದರೂ ಒಂದು ವಿಷಯದಲ್ಲಿ ಸಮರ್ಥರಾಗಿರಬೇಕು ಎಂದಿದ್ದರೆ, ಗೆಲುವು ಶಬ್ದಕ್ಕೆ, ಮುಖ್ಯವಾಗಿ ಜೀವ ಗೆಲುವಾಗಿರಬೇಕು ಎಂದಿದ್ದಾರೆ. ಸೋಲನ್ನು ವ್ಯಾಖ್ಯಾನಿಸಲು ಹೇಳಿದಾಗ ಜಗ್ಗಿ ವಾಸುದೇವ ಅವರು, ಅದ್ಭುತ ವಿಶ್ಲೇಷಣೆ ನೀಡಿದ್ದಾರೆ. ಸೋಲು ಯಾವಾಗ ಬರುತ್ತದೆ ಎಂದರೆ, ಇನ್ನೊಬ್ಬರ ಜೊತೆ ಹೋಲಿಸಿಕೊಂಡಾಗಷ್ಟೇ. ಆದ್ದರಿಂದ ಯಾರೂ ಯಾರೊಂದಿಗೂ ಹೋಲಿಸಿಕೊಳ್ಳಬಾರದು. ನಾನು ನನ್ನನ್ನು ಯಾರೊಂದಿಗೂ ಹೋಲಿಸಿಕೊಳ್ಳುವುದಿಲ್ಲ, ಅದಕ್ಕೇ ಸೋಲಿಲ್ಲ ಎಂದಿದ್ದಾರೆ. ಪವಿತ್ರ ಎನ್ನುವ ಶಬ್ದಕ್ಕೂ ವಿವರಣೆ ನೀಡಿದ ಸದ್ಗುರು, ಯಾವುದೇ ಒಂದು ವಸ್ತುವನ್ನು ಪವಿತ್ರ ಎಂದು ನೋಡಿದರೆ, ಇನ್ನೊಂದನ್ನು ಅಪವಿತ್ರ ಅಂತ ನೋಡ್ಬೇಕು ತಾನೆ. ಇದೇ ಮುಮೂಲಭೂತ ತಪ್ಪು. ಹೀಗೆ ವಿಭಜಿಸಿ ನೋಡುವುದೇ ದೊಡ್ಡ ತಪ್ಪು ಎಂದಿದ್ದಾರೆ. ನೀವು ಒಳ್ಳೆಯವರು, ನಾನು ಕೆಟ್ಟವನು ಎಂಬೆಲ್ಲಾ ವಿಷಯ ಶುರುವಾಗುವುದೇ ಈ ವಿಭಜಿಸಿ ನೋಡಿದಾಗ ಯಾಕಿದೆಲ್ಲಾ ಬೇಕು? ಎಲ್ಲನೂ ಹೇಗಿದ್ಯೋ ಹಾಗೆಯೇ ನೋಡಬೇಕು, ನಾವು ನೋಡುವ ಕಣ್ಣಲ್ಲಿ ಪವಿತ್ರ, ಅಪವಿತ್ರ ಎಲ್ಲವೂ ಅಡಗಿದೆ ಎಂದಿದ್ದಾರೆ. ಇದೇ ರೀತಿ ಪಾಪದ ವ್ಯಾಖ್ಯಾನ ಕೂಡ ಎಂದಿದ್ದಾರೆ.
ಧೈರ್ಯ ಶಬ್ದ ಹೇಳಿದಾಗ, ಭಯ ಇದ್ದರೆ ತಾನೇ ಧೈರ್ಯ ಬೇಕಾಗೋದು ಎಂದಿರುವ ಸದ್ಗುರು ಯಾಕೆ ಭಯಪಡಬೇಕು ಎಂದು ಪ್ರಶ್ನಿಸಿದ್ದಾರೆ. ಇವೆಲ್ಲಾ ಮುಗಿದ ಮೇಲೆ ನಟಿ ಸುಹಾಸಿನಿ ಕೊನೆಯ ಪ್ರಶ್ನೆ, ಸದ್ಗುರು ನೀವು ಒಳ್ಳೆಯವರೋ ಕೆಟ್ಟವರೋ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮಾಮೂಲಿನಂತೆ ನಗುತ್ತ ಉತ್ತರ ನೀಡಿರುವ ಸದ್ಗುರು, ನಾನು ಎರಡನ್ನೂ ಮೀರಿ ಹೋಗಿದ್ದೇನೆ ಎಂದು ನಮಸ್ಕರಿಸಿದ್ದಾರೆ.
undefined
ಮೆಟ್ರೋಗೆ ದನಿ ನೀಡುವಾಗ್ಲೇ ಟೈಮ್ ಬಾಂಬ್ ಇರೋದು ಗೊತ್ತಿತ್ತು, ವಿಗ್ ಧರಿಸಿದ್ಲು; ಅಪರ್ಣಾರ ನೆನೆದ ನಾಗರಾಜ್ ವಸ್ತಾರೆ