ತಂದೆಯನ್ನೇ ಮದುವೆಯಾದ ಮಗಳು, ವೈರಲ್ ಆಗ್ತಿರೋ ವಿಡಿಯೋ ನಿಜವೇ?

By Ravi Janekal  |  First Published Dec 16, 2024, 7:09 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ಮಗಳು ತನ್ನ ತಂದೆಯನ್ನೇ ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದಾಳೆ. ಈ ಹೇಳಿಕೆಯ ಹಿಂದಿನ ಸತ್ಯಾಸತ್ಯತೆ ಏನೆಂದು ತಿಳಿದುಕೊಳ್ಳೋಣ.


Father Daughter Marriage Video Viral  ಪ್ರಪಂಚದಲ್ಲಿ ಅತ್ಯಂತ ಪವಿತ್ರ ಸಂಬಂಧ ಅಂದ್ರೆ ತಂದೆ-ಮಗಳು, ತಾಯಿ-ಮಗ, ಅಣ್ಣ-ತಂಗಿ, ಮಾವ-ಸೊಸೆ ಅಂತ ಹೇಳಲಾಗುತ್ತೆ. ಭಾರತದಲ್ಲಿ ರಕ್ತಸಂಬಂಧದಲ್ಲಿ ಮದುವೆಗಳು ನಡೆಯುವುದಿಲ್ಲ. ಇದು ವೈಜ್ಞಾನಿಕವಾಗಿಯೂ ಸರಿಯಲ್ಲ. ಆದರೆ ಈ ಭೂಮಿಯಲ್ಲಿ ಕೆಲವು ಹುಚ್ಚರು ಸಮಾಜದ ಎಲ್ಲಾ ಬಂಧನಗಳನ್ನು ಮುರಿದು ತಾವು ಮಾಡಿದ್ದೇ ಸರಿ ಎನ್ನುತ್ತಾ ತಮ್ಮ ಇಷ್ಟದಂತೆ ನಡೆದುಕೊಳ್ಳಲು ಬಯಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಸಂಬಂಧದಲ್ಲಿ ತಂದೆ-ಮಗಳು(?) ಎನ್ನಲಾದ ಜೋಡಿಯೊಂದು ತಮ್ಮ ಮದುವೆಯನ್ನು ಘೋಷಿಸಿ ಸಮಾಜಕ್ಕೆ ಸವಾಲು ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತಂದೆಯನ್ನೇ ಗಂಡನನ್ನಾಗಿ ಮಾಡಿಕೊಂಡ್ಳಾ ಮಗಳು?

Tap to resize

Latest Videos

@JaysinghYadavSP ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮೂಗಿನಿಂದ ಹಣೆಯವರೆಗೆ ಸಿಂಧೂರ ಇಟ್ಟುಕೊಂಡಿರುವ ಯುವತಿ ಮತ್ತು 50-55 ವರ್ಷದ ವ್ಯಕ್ತಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಾವು ದೇವಸ್ಥಾನದಲ್ಲಿ ಮದುವೆಯಾಗಿದ್ದಾಗಿ ಹೇಳುತ್ತಿದ್ದಾರೆ. ಯುವತಿ ಹೇಳುವ ಪ್ರಕಾರ, ನಮ್ಮಿಬ್ಬರ ಬಗ್ಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದವರ ಬಾಯಿಗೆ ಈಗ ಬೀಗ ಬಿದ್ದಿರಬೇಕು. ಈ ವೇಳೆ ವಿಡಿಯೋ ಚಿತ್ರೀಕರಿಸುತ್ತಿರುವ ವ್ಯಕ್ತಿ ಇಬ್ಬರ ಬಗ್ಗೆ ಕೇಳಿದಾಗ, ಯುವತಿ ತನ್ನ ತಂದೆಯನ್ನೇ ಮದುವೆಯಾಗಿದ್ದಾಗಿ ಹೇಳುತ್ತಾಳೆ. ಇಬ್ಬರೂ ಬಹಳ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಈಗ ತಮ್ಮ ಸಂಬಂಧಕ್ಕೆ ಒಂದು ಹೆಸರು ಕೊಟ್ಟಿದ್ದಾರೆ.

ಟೈಮ್ಸ್ ನೌ, ನವಭಾರತ್, ಝೀ ನ್ಯೂಸ್ ಹಲವಾರು ಸುದ್ದಿವಾಹಿನಿಗಳು ವರದಿ ಮಾಡಿವೆ. ಆದರೆ ವಿಡಿಯೋದಲ್ಲಿ ತೋರಿಸಿರುವ ಮಹಿಳೆ-ಪುರುಷ ನಿಜವಾಗಿಯೂ ರಕ್ತಸಂಬಂಧದಲ್ಲಿ ತಂದೆ-ಮಗಳೇ ಅಥವಾ ಬೇರೆಯೇ ಎಂಬುದು ಖಚಿತವಾಗಿಲ್ಲ. ಒಂದು ವರದಿಯ ಪ್ರಕಾರ ಈ ವಿಡಿಯೋ 2020ರ ಹಿಂದಿನದು ಎಂದು ಹೇಳಲಾಗಿದೆ. ಅಲ್ಲದೆ ಇವರಿಬ್ಬರು ತಂದೆ-ಮಗಳಲ್ಲ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶದ ಜೊತೆಗೆ ಹೊಸ ಚರ್ಚೆ ಹುಟ್ಟುಹಾಕಿದೆ.

एक बेटी ने अपने बाप से शादी कर ली और बाप ने अपनी बेटी से शादी कर ली।

हिंदू रीति रिवाज के अनुसार सादी मंदिर में संपन्न हुई उसके बाद मीडिया से बात की किसी को अब दिक्कत नहीं होनी चाहिए दोनों सहमत हैं दोनों राजी हैं। pic.twitter.com/cSY6Yytcv5

— Jaysingh Yadav SP (@JaysinghYadavSP)
click me!