Family Violence: ಪತಿ ಎಷ್ಟು ಹೊಡೆದು, ಬಡಿದು ಮಾಡಿದ್ರೂ ಮತ್ತವನ ಬಳಿ ಹೋಗೋದ್ಯಾಕೆ?

By Suvarna NewsFirst Published Dec 30, 2021, 2:07 PM IST
Highlights

ದಾಂಪತ್ಯ ಒಂದು ಸುಂದರ ಸಂಬಂಧ. ಪತಿ ಮತ್ತು ಪತ್ನಿ ಒಪ್ಪಿಕೊಂಡು ನಡೆದರೆ ಜೀವನ ರಸಮಯವಾಗಿರುತ್ತದೆ. ಇತರ ಸಂಬಂಧಗಳಿಗೆ ಹೋಲಿಸಿದರೆ ಈ ಮದುವೆ ಬಂಧ ಬಹಳ ಸೂಕ್ಷ್ಮವಾಗಿದ್ದು. ಇದರಲ್ಲಿ ಪ್ರತಿ ಕ್ಷಣವೂ ಎಚ್ಚರದಿಂದ ನಡೆಯಬೇಕು.ದಾಂಪತ್ಯ ಉಳಿಸಿಕೊಳ್ಳುವ ಜವಾಬ್ದಾರಿ ಪುರುಷರಿಗಿಂತ ಮಹಿಳೆಯರಿಗಿರುತ್ತದೆ.
 

ಕೌಟುಂಬಿಕ ದೌರ್ಜನ್ಯ (Family violence)ಕ್ಕೆ ಒಳಗಾಗುವವರಲ್ಲಿ ಪುರುಷ (Male)ರಿಗಿಂತ ಮಹಿಳೆಯರು ಹೆಚ್ಚು. ಈ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ.  ಕೆಲ ಮಹಿಳೆಯರು ಕೌಟುಂಬಿಕ ದೌರ್ಜನ್ಯದ ವಿರುದ್ಧ ದನಿ ಎತ್ತುತ್ತಾರೆ. ಸಂಗಾತಿಯಿಂದ ದೂರವಾಗಿ ಜೀವನ ನಡೆಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮತ್ತೆ ಬಹುತೇಕ ಮಹಿಳೆಯರು ಕೌಟುಂಬಿಕ ಸಮಸ್ಯೆಯನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಸಂಗಾತಿ(Partner )ಹಿಂಸೆಯನ್ನು ಸೆರಗಿನಲ್ಲಿ ಬಚ್ಚಿಟ್ಟು ಸಂಸಾರ ನಡೆಸುತ್ತಾರೆ. ಪತಿ (Husband )ಹೊಡೆದರೂ,ಬೈದರೂ ಅದನ್ನೆಲ್ಲ ಸಹಿಸಿಕೊಂಡು ಮತ್ತೆ ಬಾಳ್ವೆ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಜೀವನ ಪರ್ಯಂತ ಪತಿಯ ಹಿಂಸೆ (Violence)ಯನ್ನು ಸಹಿಸಿಕೊಂಡು ಬದುಕುತ್ತಾರೆ. ಸರ್ವೆಯೊಂದರಲ್ಲೂ ಈ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದ್ರಲ್ಲಿ ಪಾಲ್ಗೊಂಡಿದ್ದ ಕೆಲ ಮಹಿಳೆಯರು,ಹಿಂಸಾಚಾರದ ಸಂಬಂಧದಿಂದ ಹೊರ ಬರುವುದು ಯೋಗ್ಯ ಎಂದಿದ್ದಾರೆ. ಆದರೆ ಬಹುತೇಕ ಮಹಿಳೆಯರು, 'ಹಿಂಸಾತ್ಮಕ ಸಂಬಂಧದ ನಂತರವೂ ಮದುವೆಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಬೇಕೆಂದು’ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಮನೋವೈಜ್ಞರ ಪ್ರಕಾರ, ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ ಮದುವೆ (Weddubg)ಯನ್ನು ಉಳಿಸಲು ಪ್ರಯತ್ನಿಸುತ್ತಾರೆ. ಇದಕ್ಕೆ ಕಾರಣ ಪ್ರೀತಿ (Love),ವಿಶ್ವಾಸ,ಸಮಾಜ ಮಾತ್ರವಲ್ಲ,ಆರ್ಥಿಕ ಅನಿವಾರ್ಯತೆಯೂ ಕಾರಣವಾಗಿರುತ್ತದೆ. ಬೇರೆ ಆಸರೆಯಿಲ್ಲದ ಮಹಿಳೆಯರು,ಹಿಂಸೆಯ ಜೊತೆ ಜೀವನ ನಡೆಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ.

ಈ ಹಿಂಸೆ ಶುರುವಾಗುವುದು ಹೇಗೆ ಎಂಬುದನ್ನು ನಾವು ತಿಳಿಯಬೇಕು. ಸಂಗಾತಿ ವಿರುದ್ಧ ಭಾವನಾತ್ಮಕ,ಆರ್ಥಿಕ, ದೈಹಿಕ ಮತ್ತು ಲೈಂಗಿಕ ದುರುಪಯೋಗವು ಕೌಟುಂಬಿಕ ಹಿಂಸಾಚಾರಕ್ಕೆ ಕಾರಣವಾಗುತ್ತದೆ. ಇದು ಸಣ್ಣ ಘಟನೆಗಳಿಂದ ಪ್ರಾರಂಭವಾಗುತ್ತದೆ. ನಂತರ ದೊಡ್ಡ ರೂಪವನ್ನು ಪಡೆಯುತ್ತದೆ. ಮದುವೆಯ ನಂತ್ರ ಸಂಗಾತಿಯಿಂದ ಅಗೌರವಕ್ಕೊಳಗಾಗಲು,ಹಿಂಸೆ ಅನುಭವಿಸಲು ಹಲವು ಕಾರಣಗಳಿವೆ.

ತನ್ನನ್ನು ತಾನು ದೂಷಿಸುವುದು : ಮಹಿಳೆ ತನ್ನ ಸಂಗಾತಿಯಿಂದ ತಪ್ಪಾಗುತ್ತಿದ್ದರೂ ಸುಮ್ಮನಿರುತ್ತಾಳೆ. ಇದು ಆಕೆ ಮಾಡುವ ಮೊದಲ ತಪ್ಪು. ಸಂಗಾತಿ ತಪ್ಪು ಮಾಡಿ, ಸಂಬಂಧ (Relationship) ಹಾಳಾಗ್ತಿದೆ ಎನ್ನುವ ವೇಳೆ ಇದಕ್ಕೆಲ್ಲ ತಾನು ಕಾರಣವೆಂದು ತನ್ನನ್ನು ತಾನು ದೂಷಿಸಿಕೊಳ್ತಾಳೆ. ಎಲ್ಲ ಹೊಣೆಯನ್ನು ತನ್ನ ಮೇಲೆ ಹಾಕಿಕೊಳ್ತಾಳೆ. ಇದು ಸಂಗಾತಿಗೆ ಗೊತ್ತಿರುತ್ತದೆ. ತಾನೆಷ್ಟು ಹಿಂಸೆ ನೀಡಿದ್ರೂ ಪತ್ನಿಯಾದವಳು ಆ ತಪ್ಪನ್ನು ತನ್ನ ಮೇಲೆ ಹಾಕಿಕೊಳ್ತಾಳೆ ಎಂಬುದು ಗೊತ್ತಾದ ಸಂಗಾತಿ,ಹಿಂಸೆ ನೀಡಿದ ನಂತ್ರವೂ ಪಶ್ಚಾತಾಪ ಪಡುವುದಿಲ್ಲ. ಆರಂಭದಲ್ಲಿಯೇ ಮಹಿಳೆ ಈ ತಪ್ಪೊಪ್ಪಿಗೆ ಬಿಡಬೇಕು. ಸಂಗಾತಿಯಿಂದ ಹಿಂಸೆಯಾಗ್ತಿದೆ ಎಂದಾಗ ಆತನ ಮುಂದೆ ಕುಳಿತು ತನ್ನ ನಿಲುವನ್ನು ಹೇಳಬೇಕು. ಇದರಿಂದ ಪುರುಷ ಸಂಗಾತಿ ತಪ್ಪನ್ನು ತಿದ್ದಿಕೊಳ್ಳುವ ಸಾಧ್ಯತೆಯಿದೆ.

ಒಳ್ಳೆಯ ಸಂಗಾತಿ ಆಗೋದು ಹೇಗೆ?

ನನ್ನನು ಕ್ಷಮಿಸು : ಒಂದು ಕ್ಷಮೆ (Forgiveness )ಅನೇಕ ಕಷ್ಟಕ್ಕೆ ಕಾರಣವಾಗಬಹುದು. ದೌರ್ಜನ್ಯವೆಸಗಿದ ನಂತರವೂ ಪತ್ನಿ (Wife)ಯಾದವಳು ನನ್ನನ್ನು ಕ್ಷಮಿಸುತ್ತಾಳೆ ಎಂಬ ಸಂಗತಿ ಪತಿಗೆ ಗೊತ್ತಾದ್ರೆ ಅದನ್ನೇ ಆತ ಬಂಡವಾಳ ಮಾಡಿಕೊಳ್ತಾನೆ. ಆದ್ರೆ ತಾನು ಕ್ಷಮಿಸಿದ್ರೆ ಪತಿ ಬದಲಾಗ್ತಾನೆ ಎಂಬ ನಂಬಿಕೆಯಲ್ಲಿ ಪ್ರತಿ ಬಾರಿ ಮಹಿಳೆ ಕ್ಷಮಿಸುತ್ತಾಳೆ. ಮಹಿಳೆ ತನ್ನ ಜೀವನ ಮತ್ತು ಸ್ವಭಾವದಲ್ಲಿ ರಾಜಿ ಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ.  

ಭಾವನಾತ್ಮಕ ಸಂಬಂಧ : ಪತಿ ನಿರಂತರ ಹಿಂಸೆ ನೀಡುತ್ತಿದ್ದರೂ ಆ ಸಂಬಂಧದಿಂದ ಕೆಲ ಮಹಿಳೆಯರು ಹೊರ ಬರುವುದಿಲ್ಲ. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಯಿರುವುದಿಲ್ಲ. ಕೆಲವು ಬಾರಿ ಪತಿಗಿಂತ ಆಕೆಯೇ ಹೆಚ್ಚು ಗಳಿಸುತ್ತಿರುತ್ತಾಳೆ. ಆದ್ರೂ ಪತಿಯಿಂದ ದೂರವಾಗಲು ಇಚ್ಛಿಸುವುದಿಲ್ಲ. ಇದಕ್ಕೆ ಆಕೆಯ ಭಾವನಾತ್ಮಕ ಸಂಬಂಧ ಕಾರಣ. ಆ ವ್ಯಕ್ತಿಯನ್ನು ಮೀರಿ ಯೋಚಿಸಲು ಆಕೆಗೆ ಸಾಧ್ಯವಾಗುವುದಿಲ್ಲ. ಈತನನ್ನು ಬಿಟ್ಟು ಬೇರೆ ಯಾವ ಪುರುಷನೂ ತನ್ನನ್ನು ಪ್ರೀತಿಸುವುದಿಲ್ಲ ಎಂದು ಭಾವಿಸುತ್ತಾಳೆ. ಪತಿಯನ್ನು ಅತಿಯಾಗಿ ಪ್ರೀತಿಸುವ ಹಾಗೂ ಮತ್ತೊಂದು ಸಂಬಂಧಕ್ಕೆ ಮನಸ್ಸೊಪ್ಪದ ಮಹಿಳೆಯರು ಇರುವ ಸಂಬಂಧವನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಾರೆ. ಪತಿ ಎಷ್ಟೇ ದೌರ್ಜನ್ಯ ನೀಡಿದ್ರೂ ಅದನ್ನು ಒಪ್ಪಿಕೊಂಡು ಮುನ್ನಡೆಯುತ್ತಾಳೆ. 

click me!