ನಾಯಿ ಮರಿ ಗಿಫ್ಟ್ ಕೊಡೋ ವಸ್ತುವಲ್ಲ, ನೀರಜ್‌ಗೆ ಉಡುಗೊರೆ ನೀಡಿದ ಬಿಂದ್ರಾಗೆ ನೆಟ್ಟಿಗರ ಕ್ಲಾಸ್!

By Suvarna News  |  First Published Sep 24, 2021, 9:18 PM IST
  • ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ನಾಯಿ ಮರಿ ಗಿಫ್ಟ್ ನೀಡಿದ್ದ ಬಿಂದ್ರಾ
  • ನೀರಜ್ ಚೋಪ್ರಾ, ಅಭಿನವ್ ಬಿಂದ್ರಾ ಭೇಟಿ ವೇಳೆ ನಾಯಿ ಮರಿ ಗಿಫ್ಟ್
  • ನಾಯಿ ಮರಿಗಿಂತ ಬೇರೆ ಗಿಫ್ಟ್ ಸಿಕ್ಕಿಲ್ಲವೇ? ಎಂದು ನೆಟ್ಟಿಗರ ಕ್ಲಾಸ್

ನವದೆಹಲಿ(ಸೆ.24): ಟೋಕಿಯೋ ಒಲಿಂಪಿಕ್ಸ್ ಕೂಟದ ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೀರಜ್ ಚೋಪ್ರಾಗೆ ಪ್ರಧಾನಿ ಮೋದಿ, ಕೇಂದ್ರ ಕ್ರೀಡಾ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿದೆ. ಇತ್ತೀಚೆಗೆ ಒಲಿಂಪಿಕ್ಸ್ ಪದಕ ವಿಜೇತ ಅಭಿನವ್ ಬಿಂದ್ರಾ ಹಾಗೂ ನೀರಜ್ ಚೋಪ್ರಾ ಭೇಟಿಯಾಗಿದ್ದಾರೆ. ಈ ವೇಳೆ ಬಿಂದ್ರಾ, ಚಿನ್ನದ ಹುಡುಗ ನೀರಜ್ ಚೋಪ್ರಾಗೆ ನಾಯಿ ಮರಿ ಉಡುಗೊರೆ ನೀಡಿದ್ದರು. ಆದರೆ ಬಿಂದ್ರಾ ಉಡುಗೊರೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.

ಇಬ್ಬರು ಚಿನ್ನದ ಹುಡುಗರು... ಚೋಪ್ರಾಗೆ ಅಭಿನವ್ ವಿಶೇಷ ಗಿಫ್ಟ್!

Latest Videos

undefined

ಸಾಮಾಜಿಕ ಜಾಲತಾಣದಲ್ಲಿ ಅಭಿನವ್ ಬಿಂದ್ರಾ ಉಡುಗೊರೆಗೆ ಅಸಮಾಧಾನ ವ್ಯಕ್ತವಾಗಿದೆ. ನಾಯಿ ಮರಿ ಅಥವಾ ಯಾವುದೇ ಸಾಕು ಪ್ರಾಣಿ ಉಡುಗೊರೆ ನೀಡುವ ವಸ್ತುವಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಬಿಂದ್ರಾ ವಿದೇಶಿ ತಳಿಯನ್ನು ಉಡುಗೊರೆಯಾಗಿ ನೀಡುವುದಕ್ಕಿಂತ ಭಾರತದ ನಾಯಿ ಮರಿ ಅಥವಾ ನಾಯಿಗಳನ್ನು ದತ್ತು ಪಡೆಯುವುದು ಉತ್ತಮವಾಗಿತ್ತು ಎಂದು ಸಲಹೆ ನೀಡಿದ್ದಾರೆ.

ನಾಯಿ ಮರಿ ಉಡುಗೊರೆ ನೀಡಿದ ಬಳಿಕ ಅಭಿನವ್ ಬಿಂದ್ರಾ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದರು. ಚಿನ್ನದ ಹುಡುಗ ನೀರಜ್ ಚೋಪ್ರಾ ಭೇಟಿಯಾಗಿರುವುದು ಸಂತಸ ಹಾಗೂ ಹೆಮ್ಮೆ ತಂದಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಲು ಶುಭಹಾರೈಸುವೆ ಎಂದು ಬಿಂದ್ರಾ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು.

 

Was a pleasure to meet and interact with India’s golden man ! I hope that “Tokyo” will be a supportive friend and motivate you to get a sibling named Paris for him in 2024 ! pic.twitter.com/54QxnPgDn8

— Abhinav A. Bindra OLY (@Abhinav_Bindra)

ಚಿನ್ನದ ಹುಡುಗ ನೀರಜ್‌ ಚೋಪ್ರಾ ಹೊಸ ಜಾಹೀರಾತು: ವೈರಲ್‌!

ಇತ್ತ ನೀರಜ್ ಚೋಪ್ರಾ ಕೂಡ ಬಿಂದ್ರಾ ಭೇಟಿ ಕುರಿತು ಹರ್ಷ ವ್ಯಕ್ತಪಡಿಸಿದ್ದರು. ಬಿಂದ್ರಾ ಆತಿಥ್ಯ ಹಾಗೂ ಪ್ರೋತ್ಸಾಹದಾಯಕ ಮಾತುಗಳು ಸ್ಪೂರ್ತಿಯಾಗಿದೆ ಎಂದು ಟ್ವೀಟ್ ಮಾಡಿದ್ದರು.

 

Took my Olympic medal to meet its elder sibling from Beijing today 🙂
Thank you sir for your family's warm hospitality and for 'Tokyo' who I will cherish forever!
🇮🇳🥇🥇🐶 pic.twitter.com/XYqsKcW1IN

— Neeraj Chopra (@Neeraj_chopra1)

ನಾಯಿ ಮರಿಯನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ನಿಲ್ಲಿಸಿ. ನಾಯಿ ಮರಿ ಪಡೆದ ವ್ಯಕ್ತಿ ಅದನ್ನು ಆರೈಕೆ ಮಾಡಲು ಮತ್ತೊಬ್ಬರನ್ನು ನೇಮಿಸಬೇಕಾಗುತ್ತದೆ. ಸ್ವತಃ ಅವರೆ ಆರೈಕೆ ಮಾಡುವ ಸಮಯ ಹಾಗೂ ಪರಿಸ್ಥಿತಿ ಇರುವುದಿಲ್ಲ. ಹೀಗಾಗಿ ನಾಯಿ ಮರಿಗೆ ಸರಿಯಾದ ಆರೈಕೆ ಸಿಗದಿರುವ ಸಾಧ್ಯತೆ ಹೆಚ್ಚು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ನೀರಜ್‌ ಚೋಪ್ರಾ ಹೆಸರಲ್ಲಿ ಮಾರುಕಟ್ಟೆಗೆ ಬಂದ ಜೆರ್ಸಿ, ನೀರಿನ ಬಾಟಲಿ!

ನಾಯಿ ಮರಿ ಆಟಿಕೆ ವಸ್ತುಗಳಲ್ಲ. ನಾಯಿ ಮರಿಯನ್ನು ಉಡುಗೊರೆ ನೀಡುವಾಗ ಆ ಕುಟುಂಬದ ಎಲ್ಲರೂ ನಾಯಿ ಮರಿ ಆರೈಕೆಗೆ ಸಿದ್ಧರಾಗಿದ್ದಾರೆ ಅನ್ನೋದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾಯಿ ಮರಿ ಅನಾಥವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


 

Hopefully Neeraj asked for a puppy because you just don't give dogs , as other person needs to take care of it .

— Parv Chauhan (@ParvChauhan)

I really hope Neeraj Chopra knew about this“gift”and is committed to taking care of the baby lifelong.Dogs aren’t gifts.and furthermore a prominent person like Bindra promoting the exploitation of foreign breed mother dogs when there are so many indies on the streets is shameful

— Dr Shivani (@heyitsshivanii)

Neeraj bhai, it looks like a bred Labrador dog. There is lot of cruelty taking place in dog breeding business only because there are customers ready to pay high price. It lessens the chance to get an Indie dog adopted. Don't breed or buy, adopt. 🐶

— Vijay Singh (@vijaysinghTOI)

Wish you had gifted him an Indie dog. Would have sent out a great message to the wider society on the need to adopt Indie dogs and give them a home.

— Eternal Dissenter (@ShankarGopi)

Dogs are not toys. They shouldn't be gifted. All member in the family must agree & understand their responsibilities before getting an animal home. You are setting a very bad example. This attitude of most people later leads to abandoning of pets. Pls understand & apologize.

— AG (@agrima22kumar)

I am sorry your gesture may be nice, but animals are not meant to be gifted. Please influence right. 🙏🏻

— Garvita Garg (@garvitagarg)

giving a living being to as "supportive friend" perhaps as "gift". You make friends, you don't buy or give friends

I always knew as an animal lover and animal lovers cannot be selective https://t.co/9BRTaIEd1n

— Shivanya Pandey (@Shivu2512)
click me!