
ನವದೆಹಲಿ: ಆಯ್ಕೆ ಟ್ರಯಲ್ಸ್ ವೇಳೆ ಉದ್ದೀಪನ ಪರೀಕ್ಷೆಗೆ ರಕ್ತದ ಮಾದರಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕುಸ್ತಿಪಟು ಬಜರಂಗ್ ಪೂನಿಯಾರನ್ನು ರಾಷ್ಟ್ರೀಯ ಡೋಪಿಂಗ್ ನಿಗ್ರಹ ಘಟಕ(ನಾಡಾ) ತಾತ್ಕಾಲಿಕ ಅಮಾನತುಗೊಳಿಸಿದೆ. ಹೀಗಾಗಿ ಭಾರತದ ಅಗ್ರ ಕುಸ್ತಿಪಟು ಬಜರಂಗ್‌ರ ಪ್ಯಾರಿಸ್ ಒಲಿಂಪಿಕ್ಸ್ ಕನಸು ಭಗ್ನಗೊಳ್ಳುವ ಸಾಧ್ಯತೆಯಿದೆ.
ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ಮಾ.10ರಂದು ನಡೆದಿದ್ದ ಆಯ್ಕೆ ಟ್ರಯಲ್ಸ್ ಬಳಿಕ ಬಜರಂಗ್ ರಕ್ತದ ಮಾದರಿ ನೀಡಿರಲಿಲ್ಲ. ಹೀಗಾಗಿ ಅವರನ್ನು ಅಮಾನತಿನಲ್ಲಿಡಲಾಗಿದೆ. ಆದರೆ ರಕ್ತದ ಮಾದರಿ ನೀಡಿಲ್ಲ ಎಂಬುದನ್ನು ಬಜರಂಗ್ ನಿರಾಕರಿಸಿದ್ದಾರೆ. ‘ಅವಧಿ ಮುಗಿದ ಪರೀಕ್ಷೆ ಕಿಟ್ ನೀಡಿದ್ದಕ್ಕೆ ಪ್ರಶ್ನಿಸಿದ್ದೆ. ಅದಕ್ಕೆ ಉತ್ತರ ಸಿಕ್ಕ ಬಳಿಕ ರಕ್ತದ ಮಾದರಿ ನೀಡುತ್ತೇನೆ ಎಂದಿದ್ದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
3 ವರ್ಷಗಳ ಬಳಿಕ ಜಾವೆಲಿನ್ ತಾರೆ ನೀರಜ್ ಚೋಪ್ರಾ ಭಾರತದಲ್ಲಿ ಸ್ಪರ್ಧೆ
ಏ.23ರಂದೇ ಅವರನ್ನು ಅಮಾನತುಗೊಳಿಸಲಾಗಿದ್ದು, ಮೇ 7ರೊಳಗೆ ಉತ್ತರಿಸಲು ನಾಡಾ ಕಾಲಾವಕಾಶ ನೀಡಿದೆ. ಉತ್ತರಿಸದಿದ್ದರೆ ಅವರ ಅಮಾನತು ಮುಂದುವರಿಯುವ ಸಾಧ್ಯತೆಯಿದೆ. ಆದರೆ ಮೇ 9ರಿಂದ ಒಲಿಂಪಿಕ್ಸ್‌ಗೆ ಕೊನೆಯ ಅರ್ಹತಾ ಟೂರ್ನಿ ನಡೆಯಲಿದೆ. ಬಜರಂಗ್ ಈ ಟೂರ್ನಿಯಲ್ಲಿ ಸ್ಪರ್ಧಿಸಬೇಕಿದ್ದರೆ ಅಮಾನತಿನಿಂದ ಹೊರಬರಬೇಕಿದೆ. ಅಮಾನತು ಮುಂದುವರಿದರೆ ಬಜರಂಗ್‌ರ ಪ್ಯಾರಿಸ್ ಒಲಿಂಪಿಕ್ಸ್ ಕನಸು ಭಗ್ನಗೊಳ್ಳುವುದು ಖಚಿತ.
ಭಾರತದಿಂದ ಈ ವರೆಗೆ ವಿವಿಧ ಅರ್ಹತಾ ಕೂಟಗಳ ಮೂಲಕ ನಾಲ್ವರು ಮಹಿಳಾ ಕುಸ್ತಿಪಟುಗಳು ಒಲಿಂಪಿಕ್ಸ್ ಪ್ರವೇಶಿಸಿದ್ದಾರೆ. ಪುರುಷರು ಈ ವರೆಗೂ ಒಂದೂ ಕೋಟಾ ಗೆದ್ದಿಲ್ಲ. ಇತ್ತೀಚೆಗೆ ಕಜಕಸ್ತಾನದ ಬಿಷ್ಕೆಕ್‌ನಲ್ಲಿ ನಡೆದಿದ್ದ ಅರ್ಹತಾ ಟೂರ್ನಿಯಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿತ್ತು. ಮೇ 12ರ ವರೆಗೆ ನಡೆಯಲಿರುವ ಕೂಟದಲ್ಲಿ ಪುರುಷರ ಗ್ರೀಕೊ-ರೋಮನ್ ವಿಭಾಗದಲ್ಲಿ 6, ಫ್ರೀಸ್ಟೈಲ್‌ನಲ್ಲಿ 6, ಮಹಿಳಾ ಫ್ರೀಸ್ಟೈಲ್‌ನಲ್ಲಿ ಇಬ್ಬರು ಸ್ಪರ್ಧಿಸಲಿದ್ದಾರೆ.
ಲಖನೌ ಹೀನಾಯವಾಗಿ ಸೋಲುತ್ತಿದ್ದಂತೆಯೇ ಕೆ ಎಲ್ ರಾಹುಲ್ ಮೇಲೆ ಸಂಜೀವ್ ಗೋಯೆಂಕಾ ಸಿಡಿಮಿಡಿ.! ವಿಡಿಯೋ ವೈರಲ್
ಡಬ್ಲ್ಯುಎಫ್‌ಐ ಆಕ್ರೋಶ: ಇನ್ನು, ಬಜರಂಗ್ ಅಮಾನತು ವಿಷಯವನ್ನು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ)ಗೆ ತಿಳಿಸದ್ದಕ್ಕೆ ನಾಡಾ ವಿರುದ್ಧ ಅಧ್ಯಕ್ಷ ಸಂಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ನಾಡಾ ಜೊತೆ ಸಂಪರ್ಕದಲ್ಲಿದ್ದರೂ ಬಜರಂಗ್‌ರ ವಿಷಯ ತಿಳಿಸಿರಲಿಲ್ಲ. ಈ ಬಗ್ಗೆ ವಿಶ್ವ ಡೋಪಿಂಗ್ ನಿಗ್ರಹ ಘಟಕ(ವಾಡಾ)ಕ್ಕೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.