ಬ್ರಿಜ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ವಿನೇಶ್ ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಈಗ ನಾವು ಬ್ರಿಜ್‌ಭೂಷಣ್‌ರ ಎದುರು ನಿಂತು, ಅವರ ಕಣ್ಣಲ್ಲಿ ಕಣ್ಣಿಟ್ಟು ನಾವೆಲ್ಲೂ ಹೋಗುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ನ್ಯಾಯ ಸಿಗುವವರೆಗೂ ನಾವು ವಿರಮಿಸಲ್ಲ’ ಎಂದಿದ್ದಾರೆ.
ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ವಿರುದ್ಧ ವಿಚಾರಣೆ ಆರಂಭಗೊಂಡಿದ್ದಕ್ಕೆ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಸಂತಸ ವ್ಯಕ್ತಪಡಿಸಿದ್ದು, ಇದು ನಮಗೆ ಸಿಕ್ಕ ಮೊದಲ ಜಯ ಎಂದಿದ್ದಾರೆ.
ಬ್ರಿಜ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ವಿನೇಶ್ ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಈಗ ನಾವು ಬ್ರಿಜ್‌ಭೂಷಣ್‌ರ ಎದುರು ನಿಂತು, ಅವರ ಕಣ್ಣಲ್ಲಿ ಕಣ್ಣಿಟ್ಟು ನಾವೆಲ್ಲೂ ಹೋಗುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ನ್ಯಾಯ ಸಿಗುವವರೆಗೂ ನಾವು ವಿರಮಿಸಲ್ಲ’ ಎಂದಿದ್ದಾರೆ. ಪ್ರಭಾವಿ ವ್ಯಕ್ತಿಯ ವಿರುದ್ಧ ಹೋರಾಟ ಸುಲಭವಲ್ಲ. ಆದರೆ ಮಹಿಳೆಯರು ಭಯಪಡಬೇಕಿಲ್ಲ. ಪ್ರಭಾವಿ ವ್ಯಕ್ತಿಯ ವಿರುದ್ಧ ಮಹಿಳೆಯರು ಗೆಲ್ಲಬಹುದು ಎಂಬ ದೊಡ್ಡ ಸಂದೇಶವನ್ನು ನಾವು ರವಾನಿಸಿದ್ದೇವೆ’ ಎಂದು ಫೋಗಟ್ ಹೇಳಿದ್ದಾರೆ.
undefined
ಕುಸ್ತಿ: ಭಾರತದ ಅಮನ್‌ಗೆ ಪ್ಯಾರಿಸ್ ಒಲಿಂಪಿಕ್ಸ್ ಕೋಟಾ
ಇಸ್ತಾಂಬುಲ್(ಟರ್ಕಿ): ಭಾರತದ ತಾರಾ ಕುಸ್ತಿಪಟು ಅಮನ್ ಶೆಹ್ರಾವತ್ 2024ರ ಪ್ಯಾರಿಸ್ ಒಲಿಂಪಿಕ್ಸ್ ಕೋಟಾ ಗೆದ್ದಿದ್ದಾರೆ. ಇದು ಭಾರತಕ್ಕೆ ಪುರುಷರ ವಿಭಾಗದಲ್ಲಿ ಲಭಿಸಿದ ಮೊದಲ ಕೋಟಾ ಮತ್ತು ಒಟ್ಟಾರೆ 6ನೇ ಕೋಟಾ. ಮಹಿಳಾ ವಿಭಾಗದಲ್ಲಿ ಭಾರತಕ್ಕೆ 5 ಕೋಟಾಗಳು ಲಭ್ಯವಾಗಿವೆ.
ಶನಿವಾರ ರಾತ್ರಿ ಒಲಿಂಪಿಕ್ಸ್ ವಿಶ್ವ ಕುಸ್ತಿ ಅರ್ಹತಾ ಟೂರ್ನಿಯ ಪುರುಷರ ಫ್ರೀಸ್ಟೈಲ್ 57 ಕೆ.ಜಿ. ವಿಭಾಗದಲ್ಲಿ ಏಷ್ಯನ್ ಚಾಂಪಿಯನ್ ಅಮನ್, ಉತ್ತರ ಕೊರಿಯಾದ ಚೊಂಗ್ ಸಾಂಗ್ ಹಾನ್‌ರನ್ನು 12-2 ಅಂಕಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು. ಇದರೊಂದಿಗೆ ಅಮನ್ ಒಲಿಂಪಿಕ್ಸ್ ಕೋಟಾ ಗೆದ್ದುಕೊಂಡರು.
ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) 57 ಕೆ.ಜಿ. ವಿಭಾಗದಲ್ಲಿ ಅಮನ್‌ರನ್ನೇ ಒಲಿಂಪಿಕ್ಸ್‌ಗೆ ಕಳುಹಿಸುವ ಸಾಧ್ಯತೆಯಿದೆ. ಆಯ್ಕೆ ಟ್ರಯಲ್ಸ್ ನಡೆಸಿ ಬೇರೆ ಕುಸ್ತಿಪಟುವನ್ನು ಕಳುಹಿಸುವ ಆಯ್ಕೆಯೂ ಇದೆ.
1500 ಮೀಟರ್ ರೇಸ್‌ನಲ್ಲಿ ದೀಕ್ಷಾ ರಾಷ್ಟ್ರೀಯ ದಾಖಲೆ
ಲಾಸ್ ಏಂಜಲೀಸ್(ಅಮೆರಿಕ): ಭಾರತದ ಕೆ.ಎಂ. ದೀಕ್ಷಾ ಲಾಸ್ ಏಂಜಲೀಸ್‌ನಲ್ಲಿ ನಡೆದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ 1500 ಮೀ. ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.
ಶನಿವಾರ ಉತ್ತರ ಪ್ರದೇಶದ 25 ವರ್ಷದ ದೀಕ್ಷಾ 4 ನಿಮಿಷ 04.78 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನಿಯಾದರು. ಈ ಮೂಲಕ ಹರ್ಮಿಲನ್ ಬೇನ್ಸ್ 2021ರಲ್ಲಿ ವಾರಂಗಲ್‌ನಲ್ಲಿ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ(4 ನಿಮಿಷ 05.39 ಸೆಕೆಂಡ್)ಯನ್ನು ಮುರಿದರು. ಇದೇ ವೇಳೆ ಪುರುಷರ 5000 ಮೀ.ನಲ್ಲಿ ಅವಿನಾಶ್ ಸಾಬ್ಳೆ(13 ನಿಮಿಷ 20.37 ಸೆಕೆಂಡ್) 2ನೇ ಸ್ಥಾನ ಪಡೆದರು.
ಫೆಡರೇಶನ್ ಕಪ್ ಅಥ್ಲೆಟಿಕ್ಸ್: ಕರ್ನಾಟಕದ ಕರಿಶ್ಮಾಗೆ ಕಂಚಿನ ಪದಕ
ಭುವನೇಶ್ವರ: ಇಲ್ಲಿ ಭಾನುವಾರ ಆರಂಭಗೊಂಡ 27ನೇ ರಾಷ್ಟ್ರೀಯ ಫೆಡರೇಶನ್ ಕಪ್ ಹಿರಿಯರ ಅಥ್ಲೆಟಿಕ್ಸ್ ಕೂಟದ ಮಹಿಳೆಯರ ಜಾವೆಲಿನ್ ಥ್ರೋನಲ್ಲಿ ಕರ್ನಾಟಕದ ಕರಿಶ್ಮಾ ಸನಿಲ್ ಬೆಳ್ಳಿ ಪದಕ ಜಯಿಸಿದರು. 49.91 ಮೀ. ದೂರಕ್ಕೆ ಜಾವೆಲಿನ್ ಎಸೆದ ಕರಿಶ್ಮಾ 2ನೇ ಸ್ಥಾನ ಪಡೆದರು. ಆಂಧ್ರದ ರಶ್ಮಿ 54.75 ಮೀ. ಎಸೆದು ಚಿನ್ನ ಗೆದ್ದರೆ, ಪಂಜಾಬ್‌ನ ರೂಪಿಂದರ್ ಕೌರ್ 47.66 ಮೀ. ದೂರಕ್ಕೆ ಎಸೆದು ಕಂಚಿಗೆ ತೃಪ್ತಿಪಟ್ಟರು.