ಬ್ರಿಜ್‌ಭೂಷಣ್‌ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎಂದ ಕೋರ್ಟ್‌: ವಿಚಾರಣೆ ಶುರು

By Kannadaprabha NewsFirst Published May 11, 2024, 12:12 PM IST
Highlights

ಒಟ್ಟು 6 ಪ್ರಕರಣಗಳ ಪೈಕಿ 5ರಲ್ಲಿ ಬ್ರಿಜ್ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ ಎಂದು ಡೆಲ್ಲಿಯ ರೋಸ್ ಅವೆನ್ಯೂ ಕೋರ್ಟ್ ಶುಕ್ರವಾರ ಹೇಳಿದೆ. ಆದರೆ ನ್ಯಾಯಾಲಯ ಬ್ರಿಜ್‌ ವಿರುದ್ಧದ 6ನೇ ಪ್ರಕರಣ ವಜಾಗೊಳಿಸಿದೆ.

ನವದೆಹಲಿ: ದೇಶದ ಅಗ್ರ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ, ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ದೆಹಲಿ ನ್ಯಾಯಾಲಯ ವಿಚಾರಣೆ ಆರಂಭಿಸಿದೆ.

ಒಟ್ಟು 6 ಪ್ರಕರಣಗಳ ಪೈಕಿ 5ರಲ್ಲಿ ಬ್ರಿಜ್ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ ಎಂದು ಡೆಲ್ಲಿಯ ರೋಸ್ ಅವೆನ್ಯೂ ಕೋರ್ಟ್ ಶುಕ್ರವಾರ ಹೇಳಿದೆ. ಆದರೆ ನ್ಯಾಯಾಲಯ ಬ್ರಿಜ್‌ ವಿರುದ್ಧದ 6ನೇ ಪ್ರಕರಣ ವಜಾಗೊಳಿಸಿದೆ. ಎಲ್ಲಾ ಆರೋಪಗಳಲ್ಲಿ ಸೆಕ್ಷನ್‌ 354 ಮತ್ತು 354ಎ ಅಡಿಯಲ್ಲಿ ಬ್ರಿಜ್ ವಿರುದ್ಧ ದೋಷಾರೋಪ ಹೊರಿಸಿದೆ. ಅಲ್ಲದೆ ಡಬ್ಲ್ಯುಎಫ್‌ಐ ಮಾಜಿ ಕಾರ್ಯದರ್ಶಿ ವಿನೋದ್‌ ತೋಮರ್‌ ವಿರುದ್ಧವೂ ವಿಚಾರಣೆಗೆ ಕೋರ್ಟ್‌ ಸೂಚಿಸಿದೆ.

Latest Videos

ಡೈಮಂಡ್‌ ಲೀಗ್‌ನಲ್ಲಿ ಎರಡನೇ ಸ್ಥಾನಕ್ಕೆ ನೀರಜ್‌ ಚೋಪ್ರಾ ತೃಪ್ತಿ, ಮೊದಲ ಸ್ಥಾನ ಜಸ್ಟ್ ಮಿಸ್

ಬ್ರಿಜ್‌ ವಿರುದ್ಧ 6 ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಇದರ ಆಧಾರದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿ, ಜೂ.15ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಗ್ರೀಕೊ-ರೋಮನ್ ಕುಸ್ತಿ: ಈ ಬಾರಿ ಒಲಿಂಪಿಕ್ಸ್‌ನಲ್ಲೂ ಭಾರತೀಯರ ಸ್ಪರ್ಧೆ ಇಲ್ಲ

ಇಸ್ತಾಂಬುಲ್: 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಗ್ರೀಕೊ-ರೋಮನ್ ಕುಸ್ತಿಪಟುಗಳು ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತಕ್ಕೆ ಈ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರಲಿಲ್ಲ.

ಕುಸ್ತಿಯಲ್ಲಿ ಮೂರು ವಿಭಾಗಗಳಿದ್ದು, ಮಹಿಳಾ ಮತ್ತು ಪುರುಷರ ಫ್ರೀಸ್ಟೈಲ್‌ನಲ್ಲಿ ಭಾರತ ಒಲಿಂಪಿಕ್ಸ್ ಕೋಟಾ ಗೆಲ್ಲುವ ನಿರೀಕ್ಷೆಯಿದೆ. ಸದ್ಯ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ವಿಶ್ವ ಅರ್ಹತಾ ಕುಸ್ತಿ ಟೂರ್ನಿಯಲ್ಲಿ ಭಾರತದ ಗ್ರೀಕೊ-ರೋಮನ್ ಕುಸ್ತಿಪಟುಗಳಾದ ಸುಮಿತ್(60 ಕೆ.ಜಿ.), ಆಶು(67 ಕೆ.ಜಿ.), ವಿಕಾಸ್(77 ಕೆ.ಜಿ.), ಸುನಿಲ್ ಕುಮಾರ್(87 ಕೆ.ಜಿ.), ನಿತೇಶ್(97 ಕೆ.ಜಿ.) ಹಾಗೂ ನವೀನ್ (130 ಕೆ.ಜಿ.) ಸೋಲನುಭವಿಸಿದರು.

ಮೂತ್ರ ಮಾದರಿ ನೀಡಲು ನಿರಾಕರಿಸಿಲ್ಲ: ಬಜರಂಗ್‌

ನವದೆಹಲಿ: ಡೋಪ್‌ ಟೆಸ್ಟ್‌ಗಾಗಿ ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದಕ್ಕೆ ಜಾಗತಿಕ ಕುಸ್ತಿ ಒಕ್ಕೂಟದಿಂದ ಅಮಾನತುಗೊಂಡಿರುವ ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ಬಜರಂಗ್‌ ಪೂನಿಯಾ, ತಾವು ಮೂತ್ರದ ಮಾದರಿ ನೀಡಲು ನಿರಾಕರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ಈ ಬಗ್ಗೆ ಶುಕ್ರವಾರ ಮಾತನಾಡಿರುವ ಅವರು, ‘ಆಯ್ಕೆ ಟ್ರಯಲ್ಸ್ ವೇಳೆ ಅಧಿಕಾರಿಗಳು ಸಮರ್ಪಕ ಕಿಟ್‌ ನೀಡಿರಲಿಲ್ಲ. ಹೀಗಾಗಿ ಅದರ ಬಗ್ಗೆ ಸ್ಪಷ್ಟನೆ ಕೇಳಿದ್ದೆ. ಆ ಬಳಿಕವೇ ಮಾದರಿ ನೀಡುವುದಾಗಿ ತಿಳಿಸಿದ್ದೆ. ಈ ಹಿಂದೆಯೂ 2 ಬಾರಿ ಅವಧಿ ಮುಗಿದ ಕಿಟ್‌ ಕೊಟ್ಟಿದ್ದರು. ಇದೇ ಕಾರಣಕ್ಕೆ ಕಿಟ್‌ ಬಗ್ಗೆ ಅಧಿಕಾರಿಗಳಿಂದ ವಿವರಣೆ ಬಯಸಿದ್ದೆ. ಹೀಗಾಗಿ ಮೂತ್ರದ ಮಾದರಿ ನೀಡಿರಲಿಲ್ಲ’ ಎಂದಿದ್ದಾರೆ. 

ಇತ್ತೀಚೆಗಷ್ಟೇ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಗುರುವಾರ ಜಾಗತಿಕ ಕುಸ್ತಿ ಸಂಸ್ಥೆಯೂ ಅವರ ಮೇಲೆ ಅಮಾನತು ಹೇರಿತ್ತು.

click me!