ಭಾರತಕ್ಕೆ ಯಾಸ್ ಚಂಡಮಾರುತ ಭೀತಿ, ಕೋವಿಡ್‌ ಸಾವಿನ ಸಂಖ್ಯೆ 1 ಕೋಟಿ?ಮೇ.23ರ ಟಾಪ್ 10 ಸುದ್ದಿ!

By Suvarna NewsFirst Published May 23, 2021, 4:39 PM IST
Highlights

ಯಾಸ್ ಚಂಡಮಾರುತ ಎದುರಿಸಲು ಭಾರತದ ಪೂರ್ವ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಕುಸ್ತಿಪಟು ಹತ್ಯೆ ಆರೋಪದಡಿ ಒಲಿಂಪಿಕ್ಸ್ ಪಟು ಸುಶೀಲ್ ಕುಮಾರ್ ಅರೆಸ್ಟ್ ಆಗಿದ್ದಾರೆ. ವಿಶ್ವದ ಕೋವಿಡ್‌ ಸಾವಿನ ನೈಜ ಸಂಖ್ಯೆ 1 ಕೋಟಿ ಎಂದು WHO ಅಂದಾಜಿಸಿದೆ. ಎರಡು ವಾರ ಒಂದೇ ಮಾಸ್ಕ್ ಬಳಕೆಯಿಂದ ಬ್ಲಾಕ್ ಫಂಗಸ್, ದುಬೈನಲ್ಲಿ ಐಪಿಎಲ್ ಸೇರಿದಂತೆ ಮೇ.23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಯಾಸ್ ಚಂಡಮಾರುತ: ಜನರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲು ಮೋದಿ ಸೂಚನೆ!...

ಮೇ 26ರಂದು ‘ಯಾಸ್‌’ ಚಂಡಮಾರುತ ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದು ಹೋಗಲಿದೆ. ಹೀಗಿರುವಾಗ ಈ ರಾಜ್ಯಗಳಲ್ಲಿ ಚಂಡಮಾರುತ ಎದುರಿಸಲು ಕೈಗೊಂಡಿರುವ ಪೂರ್ವ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ಸಭೆ ನಡೆಸಿದ್ದಾರೆ.

23 ವರ್ಷದ ಕುಸ್ತಿಪಟು ಕೊಲೆ ಪ್ರಕರಣ: ಒಲಿಂಪಿಕ್ಸ್ ಕುಸ್ತಿಪಟು ಸುಶೀಲ್ ಕುಮಾರ್ ಅರೆಸ್ಟ್...

ದೆಹಲಿಯಲ್ಲಿ ಸಹ ಕುಸ್ತಿಪಟು ಹತ್ಯೆಯಲ್ಲಿ ಭಾಗಿಯಾದ ಆರೋಪದ ಮೇಲೆ ಭಾರತದ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಅವರು ಸುಮಾರು 20 ದಿನಗಳಿಂದ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ವಿಶ್ವಾಸಾರ್ಹ ವ್ಯವಸ್ಥೆ ಇಲ್ಲ: ಕೋವಿಡ್‌ ಸಾವಿನ ನೈಜ ಸಂಖ್ಯೆ 1 ಕೋಟಿ?...

ಕೊರೋನಾ ವೈರಸ್‌ ಸೋಂಕಿನಿಂದ ಈವರೆಗೆ ವಿಶ್ವಾದ್ಯಂತ 34 ಲಕ್ಷ ಮಂದಿ ಬಲಿಯಾಗಿದ್ದಾರೆ. ಆದರೆ ನೈಜ ಸಾವಿನ ಸಂಖ್ಯೆ ಇದಕ್ಕಿಂತ 2ರಿಂದ 3 ಪಟ್ಟು ಅಧಿಕವಾಗಿರಬಹುದು. ಹಲವು ಸಾವುಗಳು ವರದಿಯಾಗಿರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಈ ಮೂಲಕ ನೈಜ ಸಾವಿನ ಸಂಖ್ಯೆ 1 ಕೋಟಿ ದಾಟಿರಬಹುದು ಎಂಬ ಸಂದೇಹ ವ್ಯಕ್ತಪಡಿಸಿದೆ.

ಎರಡು ವಾರ ಒಂದೇ ಮಾಸ್ಕ್ ಬಳಕೆ, ಬ್ಲ್ಯಾಕ್‌ ಫಂಗಸ್‌ಗೆ ಆಹ್ವಾನ!...

 ದೇಶ​ದಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕ​ರ​ಣ​ಗಳು ಏರಿಕೆ ಆಗು​ತ್ತಿ​ರು​ವಾ​ಗಲೇ, ಶುಚಿತ್ವ ಇಲ್ಲದ ಅಥವಾ ತೊಳೆ​ಯದೇ ಇರು​ವ ಮಾಸ್ಕ್‌​ಗ​ಳನ್ನು 2-3 ವಾರ​ಗಳ ಕಾಲ ಬಳಕೆ ಮಾಡು​ವು​ದು, ಗಾಳಿ ಆಡದ ಕೋಣೆ​ಯಲ್ಲಿ​ರು​ವು​ದು ಬ್ಲ್ಯಾಕ್‌ ಫಂಗ​ಸ್‌ ಉಗ​ಮಕ್ಕೆ ಕಾರ​ಣ​ವಾ​ಗ​ಬ​ಹುದು ಎಂದು ವೈದ್ಯರು ಎಚ್ಚ​ರಿಕೆ ನೀಡಿ​ದ್ದಾ​ರೆ.

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ IPL 2021; ದುಬೈನಲ್ಲಿ ಆಯೋಜಿಸಲು BCCI ಪ್ಲಾನ್!...

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿರುವ ಐಪಿಎಲ್ 2021 ಟೂರ್ನಿಯನ್ನು ಸ್ಥಗಿತಗೊಳಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ಲಂಕಾ ವಿರುದ್ಧದ ನಿಗದಿತ ಓವರ್ ಸರಣಿ ಬಳಿಕ ಐಪಿಎಲ್ ಟೂರ್ನಿಗೆ ಪ್ಲಾನ್ ಸಿದ್ಧಗೊಂಡಿದೆ. ಸದ್ಯ ಭಾರತದ ಪರಿಸ್ಥಿತಿ ಸುಧಾರಿಸುವ ಲಕ್ಷಣವಿಲ್ಲ. ಹೀಗಾಗಿ ದುಬೈನಲ್ಲಿ ಟೂರ್ನಿ ಆಯೋಜನೆಗೊಳ್ಳಲಿದೆ. 

ಮೊಬೈಲ್‌ನಲ್ಲಿ ಅಮ್ಮನ ನೆನಪಿದೆ, ಹುಡುಕಿಕೊಡಿ ಪ್ಲೀಸ್, ಡಿಸಿ, ಶಾಸಕರಿಗೆ ಪತ್ರ ಬರೆದ ಮಗಳು...

ಮಡಿಕೇರಿ ಆಸ್ಪತ್ರೆಯಲ್ಲಿ ಮನಕಲಕುವ ಘಟನೆ ನಡೆದಿದೆ. ತಾಯಿಯನ್ನು ಕಳೆದುಕೊಂಡ ಮಗಳು ಭಾವನಾತ್ಮಕ ಪತ್ರ ಬರೆದಿದ್ದಾಳೆ. ಮೇ 16 ರಂದು ಕೋವಿಡ್‌ನಿಂದ ತಾಯಿ ಮೃತಪಟ್ಟಿದ್ದರು. ಆ ವೇಳೆ ತಾಯಿಯ ಬಳಿಯಿದ್ದ ಮೊಬೈಲ್ ಸಿಕ್ಕಿರಲಿಲ್ಲ. 'ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ಬಳಿ ಇರುವ ಮೊಬೈಲ್‌ವೊಂದೇ ನನಗೆ ನೆನಪು. ಆ ಮೊಬೈಲನ್ನು ಹುಡುಕಿಕೊಡಿ ಎಂದು ಡಿಸಿ, ಶಾಸಕರಿಗೆ ಮಗಳು ಬಹಿರಂಗ ಪತ್ರ ಬರೆದಿದ್ದಾಳೆ. 

ಸನ್ನಿ ಲಿಯೋನ್ ಗೌನ್ ಫಿಟ್ ಮಾಡೋಕೆ ಇಷ್ಟೊಂದ್ ಜನರಾ ?...

ಬಾಲಿವುಡ್ ನಟಿ ಸನ್ನಿ ಲಿಯೋನ್ ಇತ್ತೀಚೆಗೆ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ನಟಿಯ ಹಳದಿ ಬಣ್ಣದ ಗೌನ್ ಫಿಟ್ ಮಾಡೋಕೆ ಬಹಳಷ್ಟು ಜನ ಕಷ್ಟಪಡುತ್ತಿರುವುದನ್ನು ಕಾಣಬಹುದು.

ಟ್ವಿಟರ್‌ನಲ್ಲಿ ನಿಮ್ಮ ಖಾತೆ ದೃಢೀಕರಣವಾಗಬೇಕಾ? ಹೀಗೆ ಮಾಡಿ......

ಬಳಕೆದಾರರ ಖಾತೆಯನ್ನು ದೃಢೀಕರಣಗೊಳಿಸುವ ಪ್ರಕ್ರಿಯೆಯನ್ನು ಟ್ವಿಟರ್ ಹೊಸ ನಿಯಮಗಳೊಂದಿಗೆ ಮತ್ತೆ ಪ್ರಾರಂಭಿಸಲಿದೆ. ಟ್ವಿಟರ್ ಸೂಚಿಸಿದ ಮಾನದಂಡ ವ್ಯಾಪ್ತಿಯಲ್ಲಿ ನಿಮ್ಮ ಖಾತೆ  ಬರುತ್ತಿದ್ದರೆ ಮತ್ತು ಖಾತೆ ದೃಢೀಕರಣಗೊಂಡ ಬಳಿಕ ಟ್ವಿಟರ್‌ನಲ್ಲಿ ಬ್ಲೂ ಬ್ಯಾಡ್ಜ್ ಮಾರ್ಕ್ ಪಡೆದುಕೊಳ್ಳುತ್ತೀರಿ. ಶೀಘ್ರದಲ್ಲೇ ಈ ಬಗೆಗಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಟ್ವಿಟರ್ ಹೇಳಿಕೊಂಡಿದೆ.

ಕೊರೊನಾ ಸಂಕಷ್ಟದಲ್ಲೂ ಬೊಕ್ಕಸಕ್ಕೆ ಬಂತು ಕೋಟಿ ಕೋಟಿ ರೂ, ಕೊರೊನಾ ಕುಬೇರರಿವರು..!...

ಕೊರೊನಾ ಸಂಕಷ್ಟ ಸಮಯದಲ್ಲಿ ಮಾಡುವುದಕ್ಕೆ ಉದ್ಯೋಗವಿಲ್ಲ, ಕೈಯಲ್ಲಿ ಹಣವಿಲ್ಲ, ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಇಂತಹ ಸಂಕಷ್ಟ ಸಮಯದಲ್ಲಿ 9 ಮಂದಿ ಕುಬೇರರಾಗಿದ್ದಾರೆ. 

ಡೌಟ್ ಪಟ್ಟೋರೆಲ್ಲಾ ವ್ಯಾಕ್ಸೀನ್‌ಗಾಗಿ ಓಡ್ತಿದ್ದಾರೆ: ಯೋಗಿ...

ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ಪ್ರತಿಪಕ್ಷಗಳು ನಕಲು ಅಭ್ಯಾಸ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಈ ಮೊದಲು ಲಸಿಕೆಗಳನ್ನು ವಿರೋಧಿಸುತ್ತಿದ್ದವರು ಈಗ ಅವುಗಳನ್ನು ಉಚಿತವಾಗಿ ಪಡೆಯಲು ಮುಂದಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

click me!