ಫೈನಲ್ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ, ಬಿಜೆಪಿ ಸೇರಲು ಕಾಂಗ್ರೆಸ್ ನಾಯಕ ರೆಡಿ; ಜೂ.18ರ ಟಾಪ್ 10 ಸುದ್ದಿ!

By Suvarna NewsFirst Published Jun 18, 2021, 4:54 PM IST
Highlights

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ಅಥಿಯಾ ಶೆಟ್ಟಿ ಜೊತೆಗಿನ ರೋಮ್ಯಾಂಟಿಕ್ ಫೋಟೋ ಕೆಲ್ ರಾಹುಲ್ ರಿವೀಲ್ ಮಾಡಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಬಾಬಾ ಕಾ ಡಾಬಾ, ಮೌನ ಮುರಿದ ರಾಗಿಣಿ ಸೇರಿದಂತೆ ಜೂನ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಕಾಂಗ್ರೆಸ್ ತೊರೆದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ರುಪ್‌ಜ್ಯೋತಿ BJP ಸೇರಲು ರೆಡಿ!...


 ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಾಹುಲ್ ಗಾಂಧಿ ನಾಯಕತ್ವ ಕುರಿತು ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕ ರುಪ್‌ಜ್ಯೋತಿ ಕುರ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟೇ ಅಲ್ಲ ತಾನೂ ಬಿಜೆಪಿ ಸೇರಿಕೊಳ್ಳುವುದಾಗಿ ಘೋಷಿಸಿದ್ದಾರೆ.

ಸ್ವಿಸ್‌ ಬ್ಯಾಂಕಲ್ಲಿ ಭಾರತೀಯರ ಹಣ 20,700 ಕೋಟಿಗೆ ಏರಿಕೆ...

ಭಾರತೀಯರು ವೈಯಕ್ತಿಕವಾಗಿ ಮತ್ತು ಸಂಸ್ಥೆಗಳ ಮೂಲಕ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಹಣದ ಮೊತ್ತ 20700 ಕೋಟಿ ರು.ಗೆ ಏರಿಕೆಯಾಗಿದೆ. ಇದರಲ್ಲಿ ಭಾರತದಲ್ಲಿನ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ ಖಾತೆಗಳಲ್ಲಿ ಇಟ್ಟಿರುವ ಹಣವೂ ಸೇರಿದೆ ಎಂದು ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಅಥಿಯಾ ಶೆಟ್ಟಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್‌ ಮಾಡಿಕೊಂಡ ಕೆ.ಎಲ್‌ ರಾಹುಲ್‌!...

ಟೀಮ್‌ ಇಂಡಿಯಾದ ಆಟಗಾರ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿಯ ರಿಲೆಷನ್‌ಶಿಪ್‌ ರೂಮರ್ಸ್ ಕೆಲ ಕಾಲದಿಂದ ಸುದ್ದಿಯಲ್ಲಿದೆ. ಇಬ್ಬರ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ  ಸದ್ದು ಮಾಡುತ್ತವೆ. ಇಬ್ಬರೂ ಪರಸ್ಪರ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಈವರೆಗೆ ತಮ್ಮ ಸಂಬಧವನ್ನು, ಅಧಿಕೃತವಾಗಿ ಆನೌನ್ಸ್‌ ಮಾಡಿಲ್ಲ. ರಾಹುಲ್‌ ಹಾಗೂ ಅಥಿಯಾರ ರೊಮ್ಯಾಂಟಿಕ್ ಪೋಟೋವೊಂದು ಸಖತ್‌ ವೈರಲ್‌ ಆಗಿದೆ. 

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್: ಮೊದಲ ದಿನದ ಮೊದಲ ಸೆಷನ್ ಬಲಿ ಪಡೆದ ಮಳೆರಾಯ..!...

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದೆ. ಪರಿಣಾಮ ಮೊದಲ ದಿನದಾಟದ ಮೊದಲ ಸೆಷನ್‌ ಮಳೆಗೆ ಆಹುತಿಯಾಗಿದೆ.

ಪ್ರಶಾಂತ್ ಸಂಬರಗಿ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ!...

ನಟಿ ರಾಗಿಣಿಯನ್ನು ಪದೇ ಪದೇ ಟಾರ್ಗೇಟ್ ಮಾಡಿದ ವ್ಯಕ್ತಿ ಮೈಂಡ್‌ ಸೆಟ್‌ ಏನು ಗೊತ್ತಾ? ಡ್ರಗ್ಸ್‌ ಮಾಫಿಯಾ ಬಗ್ಗೆ ರಾಗಿಣಿ ಮಾತು...

ಮೈಕ್ರೋಸಾಫ್ಟ್‌ ಅಧ್ಯಕ್ಷರಾಗಿ ಭಾರತೀಯ ಮೂಲದ ಸಿಇಒ...

ಅಮೆ​ರಿ​ಕದ ಮೈಕ್ರೋ​ಸಾಫ್ಟ್‌ ಕಂಪ​ನಿಯ ಸಿಇಒ ಆಗಿ​ರುವ ಭಾರತ ಮೂಲದ ಸತ್ಯಾ ನಾಡೆಲ್ಲಾ ಅವರು ಇದೇ ಕಂಪ​ನಿಯ ಅಧ್ಯ​ಕ್ಷ​ರಾಗಿ ಪದ​ನ್ನೋತಿ ಹೊಂದಿ​ದ್ದಾರೆ. 

ಪಿಜಿಯಿಂದಲೇ ಲಕ್ಷಾಂತರ ಹಣ ದೋಚಿದ್ದ ಪ್ರಖ್ಯಾತ ವೆಬ್‌ಸಿರೀಸ್ ನಟಿಯರು!...

ಅಪರಾಧ ಜಗತ್ತಿನ ಕತೆಯನ್ನು ಆಧರಿಸಿದ್ದ ವೆಬ್ ಸೀರಿಸ್ ಗಳಲ್ಲಿಅಭಿನಯ ಮಾಡುತ್ತಿದ್ದ ಇಬ್ಬರು ನಟಿಯರನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದೆ

ಮುರುಡೇಶ್ವರದ ಶಿವನಮೂರ್ತಿಗೆ ಅಮೆರಿಕದ ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿ ...

ಅಮೆರಿಕದ ಗ್ಲೋಬಲ್‌ ಪೀಪಲ್ಸ್‌ ಚಾಯ್ಸ್‌ ಸ್ಪರ್ಧೆಯಲ್ಲಿ ಕರ್ನಾಟಕದ ವಿಶ್ವವಿಖ್ಯಾತ ಮುರುಡೇಶ್ವರದ ಶಿವನಮೂರ್ತಿ ಪ್ರಶಸ್ತಿ ಪಡೆದಿದೆ. 

ಆತ್ಮಹತ್ಯೆಗೆ ಯತ್ನಿಸಿದ ಬಾಬಾ ಕಾ ಡಾಬಾ ಕಾಂತ ಪ್ರಸಾದ್ ಆಸ್ಪತ್ರೆ ದಾಖಲು!...

ಯುಟ್ಯೂಬರ್ ಮೂಲಕ ಪ್ರಸಿದ್ದಿಯಾದ ಕಾಂತ ಪ್ರಸಾದ್, ಹೊಸ ರೆಸ್ಟೋರೆಂಟ್ ತೆರೆದಿದ್ದು ಇತಿಹಾಸ. ಬಳಿಕ ಅದೆ ಯ್ಯೂಟೂಬರ್ ಮೇಲೆ ಕೇಸ್ ಹಾಕಿ, ಲಾಕ್‌ಡೌನ್ ಕಾರಣ ರೆಸ್ಟೋರೆಂಟ್ ಕ್ಲೋಸ್ ಮಾಡಿ ಮತ್ತೆ ಪೆಟ್ಟಿಗೆ ಅಂಗಡಿಗೆ ಮರಳಿದ ಕಾಂತ ಪ್ರಸಾದ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮ ಆತ್ಯಹತ್ಯೆ ಯತ್ನಿಸಿದ್ದಾರೆ. 

ನಾಯಕತ್ವ ಬದಲಾವಣೆ: ಹಳೇ 'ಹುಲಿ'ನಾ.? ಹೊಸ 'ಕಲಿ'ನಾ.? ಅಂತಿಮ ವಿಜಯ ಯಾರದ್ದು..?...

ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಆಡಳಿತಾರೂಢ ಬಿಜೆಪಿ ಶಾಸಕರಿಂದ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ, ಮುಗಿದಿದ್ದು ಸುಮಾರು 52 ಶಾಸಕರು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪರ-ವಿರೋಧದ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.

click me!