ದತ್ತು ಪುತ್ರನೊಂದಿಗೆ ಸಿಕ್ಕಿ ಬಿದ್ದ ಮಹಿಳಾ ರಾಜಕಾರಣಿ, ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್!

By Suvarna News  |  First Published May 2, 2024, 1:23 PM IST

ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ದೇಶದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದರೆ ಅತ್ತ ಥೈಲ್ಯಾಂಡ್‌ನಲ್ಲೂ ಮಹಿಳಾ ರಾಜಕಾರಣಿಯೊಬ್ಬರು ತನ್ನ ದತ್ತು ಪುತ್ರನೊಂದಿಗೆ ಸಿಕ್ಕಿಬಿದ್ದಿರುವ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. 


ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ದೇಶದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದರೆ ಅತ್ತ ಥೈಲ್ಯಾಂಡ್‌ನಲ್ಲೂ ಮಹಿಳಾ ರಾಜಕಾರಣಿಯೊಬ್ಬರು ತನ್ನ ದತ್ತು ಪುತ್ರನೊಂದಿಗೆ ಸಿಕ್ಕಿಬಿದ್ದಿರುವ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. 

ಥೈಲ್ಯಾಂಡ್ ಮಹಿಳಾ ರಾಜಕಾರಣಿಯೊಬ್ಬರು 24 ವರ್ಷದ ದತ್ತು ಪುತ್ರನೊಂದಿಗೆ ಅನೈತಿಕ ಸಂಬಂಧದಲ್ಲಿ ತೊಡಗಿದ್ದಲ್ಲದೇ ಗಂಡನಿಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ.  ಥೈಲ್ಯಾಂಡ್‌ನ ಪ್ರಭಾವಿ ಮಹಿಳಾ ರಾಜಕಾರಣಿಯಾದ 45 ವರ್ಷದ ಪ್ರಪಾಪೋರ್ನ್ ಚೋಯಿವಾಡ್ಕೋ  ತನ್ನ 24 ವರ್ಷದ ದತ್ತು ಪುತ್ರ ಫ್ರಾ ಮಹಾ ಜೊತೆ ಗಂಡನಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಇದಕ್ಕಿಂತಲೂ ವಿಚಿತ್ರ ಎಂದರೆ ಈ ದತ್ತು ಪುತ್ರ ಫ್ರ ಮಹಾ ಸನ್ಯಾಸಿ ಎಂಬುದು..!

Tap to resize

Latest Videos

ದತ್ತು ಪುತ್ರನೊಂದಿಗೆ ಸುತ್ತುತ್ತಿರುವ ತನ್ನ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯಲು ಟಿ ಎಂದು ಮಾಧ್ಯಮದಿಂದ ಗುರುತಿಸಲ್ಪಟ್ಟಿರುವ ವ್ಯಕ್ತಿ ಸುಮಾರು 5 ಗಂಟೆಗಳ ಕಾಲ ವಾಹನ ಚಲಾಯಿಸಿ ಅವರನ್ನು ಹಿಂಬಾಲಿಸಿದ್ದ. ತನ್ನ ಪತ್ನಿ ಹಾಗೂ ದತ್ತು ಪುತ್ರ ಸನ್ಯಾಸಿಯೂ ಆಗಿರುವ ಫ್ರ ಮಹಾ ನಡುವಿನ ಸಂಬಂಧದ ಬಗ್ಗೆ ಆತನಿಗೆ ಸಂಶಯವಿತ್ತು ಹೀಗಾಗಿ ಇವರನ್ನು ಸಾಕ್ಷಿ ಸಮೇತ ಹಿಡಿಯಲು ಆತ ಯೋಜನೆ ರೂಪಿಸಿದ್ದಎಂದು ಕೂಡ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. 

ರಾಸಲೀಲೆ ಕೇಸ್ : 'ಸಿಡಿ ಇದೆ ಅಂತ ಹೆದರಿಸೋರನ್ನ ಒದ್ ಒಳಗೆ ಹಾಕಿ'

24 ವರ್ಷದ ಈ ದತ್ತು ಪುತ್ರ ಫ್ರ ಮಹಾನನ್ನು ಈ ದಂಪತಿ ಕಳೆದ ವರ್ಷವಷ್ಟೇ ದೇಗುಲವೊಂದರಿಂದ ದತ್ತು ಪಡೆದಿದ್ದರು. ಪ್ರಸ್ತುತ ಘಟನೆಯ ಬಳಿಕ ಈ ದತ್ತು ಪುತ್ರ ತಲೆಮರೆಸಿಕೊಂಡಿದ್ದಾನೆ ಎಂದು ವರದಿ ಆಗಿದೆ. ಈ ಸುದ್ದಿ ಈಗ ಥೈಲ್ಯಾಂಡ್‌ನ ಸೋಶಿಯಲ್ ಮೀಡಿಯಾ ಸೇರಿದಂತೆ ನೆರೆಯ ದೇಶಗಳ ಮಾಧ್ಯಮಗಳಲ್ಲಿಯೂ ಸಂಚಲನ ಸೃಷ್ಟಿಸಿದೆ ಎಂದು ವರದಿ ಆಗಿದೆ.  ಹಲವಾರು ಅಂಶಗಳೊಂದಿಗೆ ಸ್ಫೋಟಕ ಸುದ್ದಿ ಇದಾಗಿದೆ.  ಇದು ಶುದ್ಧ ಕಾದಂಬರಿಯಂತೆ ಅನಿಸುತ್ತಿದೆ. ಶ್ರೀಮಂತರ ಪ್ರಪಂಚವು ನಿಜಕ್ಕೂ ಆಕರ್ಷಕ ಮತ್ತು ಅಸ್ತವ್ಯಸ್ತವಾಗಿದೆ ಎಂದು  ಘಟನೆಯ ಕುರಿತು ಒಬ್ಬ ಬಳಕೆದಾರರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಉಲ್ಲೇಖಿಸಿದ್ದಾರೆ. 

64 ವರ್ಷದ ಪತಿ, 45 ವರ್ಷದ ಹೆಂಡತಿ ಮತ್ತು 24 ವರ್ಷದ ದತ್ತು ಪುತ್ರ ಸನ್ಯಾಸಿಯೇ? ಇದೆಂತಹ ಅವ್ಯವಸ್ಥೆ. ಈ ರೀತಿ ದತ್ತು ತೆಗೆದುಕೊಳ್ಳುವುದರ ಬದಲು ಗಂಡು ಗೊಂಬೆಯನ್ನು ಇಟ್ಟುಕೊಳ್ಳುವುದು ಹೆಚ್ಚು ಚೆನ್ನಾಗಿದೆ ಎನಿಸುತ್ತಿದೆ. ಈ ರೀತಿ ಡ್ರಾಮಾ ಸಂಸ್ಥೆಗಳು ಸ್ಕ್ರಿಫ್ಟ್ ಬರೆಯಲು ಧೈರ್ಯ ಮಾಡುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಐಷಾರಾಮಿ ಹೋಟೆಲ್‌ನಲ್ಲಿ ‘ದೊಡ್ಡವರಿಗೆ’ ಬಲೆ ಬೀಸ್ತಿದ್ದ ಬಿಗ್ ಬಾಸ್ ಸ್ಪರ್ಧಿಯ ಮಾಜಿ ಲವರ್!

ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ವೀಡಿಯೋಗಳು ವೈರಲ್ ಆಗಿದ್ದು, ಇದನ್ನು ಆಕೆಯ ಪತಿಯೇ ಮಾಡಿದ್ದಾನೆ ಎಂದು ಸುದ್ದಿಯಾಗಿದೆ. ವೀಡಿಯೋದಲ್ಲಿ ಮಹಿಳಾ ರಾಜಕಾರಣಿಯನ್ನು ಆಕೆಯ ಪತಿ ನೀವಿಬ್ಬರೂ ಖುಷಿಯಾಗಿದ್ದೀರಾ ಎಂದು  ಕೇಳುವುದನ್ನು ಕೇಳುತ್ತಾನೆ. ಈ ವೇಳೆ ಈ ಮಹಿಳಾ ರಾಜಕಾರಣಿ ನಾವಿಬ್ಬರು ದೈಹಿಕ ಸಂಬಂಧ ಹೊಂದಿಲ್ಲ, ಜೊತೆಯಾಗಿ ಕುಳಿತು ಮಾತನಾಡುತ್ತಿದ್ದೆವು ಅಷ್ಟೇ ಎಂದು ಹೇಳುವುದನ್ನು ಕಾಣಬಹುದು. ಅಲ್ಲದೇ ಈ ದತ್ತು ಪುತ್ರ ಸನ್ಯಾಸಿಯೂ ಕೂಡ ಏನು ನಡೆದಿಲ್ಲ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.  

ಪ್ರಸ್ತುತ ಹೀಗೆ ದತ್ತು ಮಗನೊಂದಿಗೆ ಹೀಗೆ ಗಂಡನಿಗೆ ಸಿಕ್ಕಿಬಿದ್ದಳು ಎಂದು ವರದಿಯಾಗಿರುವ ಚೋಯಿವಾಡ್ಕೊಹ್ ಅವರು ಮಧ್ಯ ಥೈಲ್ಯಾಂಡ್‌ನ ಪ್ರಾಂತವಾದ ಸುಖೋಥಾಯ್‌ನ ಜನಪ್ರಿಯ ರಾಜಕಾರಣಿಯಾಗಿದ್ದಾರೆ.. ಅವರು ಪ್ರಸ್ತುತ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಕಳೆದ ವರ್ಷ ಮಾರ್ಚ್‌ನಿಂದ ಡೆಮಾಕ್ರಟ್ ಪಕ್ಷದ ಸದಸ್ಯರಾಗಿದ್ದಾರೆ. ಆದರೆ ಈಗ ಇವರ ಸೆಕ್ಸ್‌ ಸ್ಯಾಂಡಲ್ ವರದಿಯಾಗುತ್ತಿದ್ದಂತೆ ಪಕ್ಷವೂ ಅವರನ್ನು ಅಮಾನತುಗೊಳಿಸಿದ್ದು, ತನಿಖೆ ನಡೆಯುತ್ತಿದೆ.

click me!