ವಕ್ಫ್ ಬೋರ್ಡ್‌ಗೆ ಚಾಮರಾಜಪೇಟೆ ಪಶು ಆಸ್ಪತ್ರೆ ಭೂಮಿ ಕೊಟ್ಟ ಸರ್ಕಾರಿ ಆದೇಶಕ್ಕೆ ತಡೆಯೊಡ್ಡಿದ ಹೈಕೋರ್ಟ್!

By Sathish Kumar KHFirst Published May 2, 2024, 1:33 PM IST
Highlights

ಬೆಂಗಳೂರಿನ ಚಾಮರಾಜಪೇಟೆ ಪಶು ಆಸ್ಪತ್ರೆಯ ಭೂಮಿಯನ್ನು ವಕ್ಫ್‌ ಬೋರ್ಡ್‌ಗೆ ನೀಡಲಾಗಿದ್ದ ಸರ್ಕಾರಿ ಆದೇಶಕ್ಕೆ ಹೈಕೋರ್ಟ್‌ನಿಂದ ತಡೆ ನೀಡಲಾಗಿದೆ.

ಬೆಂಗಳೂರು (ಮೇ 02): ಬೆಂಗಳೂರಿನ ಕೇಂದ್ರಭಾಗದಲ್ಲಿರುವ ಕೋಟ್ಯಾಂತರ ರೂ. ಮೌಲ್ಯದ ಚಾಮರಾಜಪೇಟೆಯ ಪಶು ಆಸ್ಪತ್ರೆಯ (Chamarajpet veterinary Hospital) ಭೂಮಿಯನ್ನು ವಕ್ಫ್‌ ಬೋರ್ಡ್‌ಗೆ (Waqf Board) ನೀಡಲಾಗಿದ್ದ ಸರ್ಕಾರಿ ಆದೇಶಕ್ಕೆ ಹೈಕೋರ್ಟ್‌ನಿಂದ ತಡೆ ನೀಡಲಾಗಿದೆ.

ರಾಜ್ಯ ರಾಜ್ಯಧಾನಿ ಬೆಂಗಳೂರಿನ ಚಾಮರಾಜಪೇಟೆ ಪಶು ಆಸ್ಪತ್ರೆಯು ಹಲವು ವರ್ಷಗಳಿಂದ ಪಶುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಆಸ್ಪತ್ರೆ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ನೀಡಿ ಆದೇಶ ಹೊರಡಿಸಿತ್ತು. ಜೊತೆಗೆ, ಪಶು ಆಸ್ಪತ್ರೆಯನ್ನೂ ಸ್ಥಳಾಂತ ಮಾಡಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಚಾಮರಾಜಪೇಟೆ ನಿವಾಸಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ವಿಚಾರಣೆ ಮಾಡಿದ ನ್ಯಾಯಾಲಯವು ಚಾಮರಾಜಪೇಟೆ ಪಶು ಆಸ್ಪತ್ರೆಯನ್ನು ವಕ್ಫ್ ಬೋರ್ಡ್‌ಗೆ ನೀಡಲಾದ ಸರ್ಕಾರಿ ಆದೇಶಕ್ಕೆ ತಡೆಯನ್ನು ನೀಡಿದೆ. ಜೊತೆಗೆ, ಚಾಮರಾಜಪೇಟೆಯ ಪಶು ಆಸ್ಪತ್ರೆ ಸ್ಥಳಾಂತರ ಮಾಡುವುದನ್ನು ಕೂಡ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುಯಂತೆ ಹೈಕೊರ್ಟ್ ಸೂಚನೆ ನೀಡಿದೆ.

ಪಶು ಚಿಕಿತ್ಸಾಲಯಕ್ಕೆ ಸೇರಿದ 2 ಎಕರೆ ಜಾಗ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ನೀಡಿದ ರಾಜ್ಯ ಸರ್ಕಾರ!

ರಾಜ್ಯ ಸರ್ಕಾರದಿಂದ ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಚಾಮರಾಜಪೇಟೆ ಪಶು ಆಸ್ಪತ್ರೆಯನ್ನು ವಕ್ಪ್ ಬೋರ್ಡ್‌ಗೆ ಬಿಟ್ಟುಕೊಡಲಾಗಿತ್ತು. ಪಶು ಇಲಾಖೆಯ ಭೂಮಿ ಹಸ್ತಾಂತರದ ವಿರುದ್ದ ಹಿಂದೂ ಸಂಘಟನೆಗಳು ಹಾಗೂ ಚಾಮರಾಪೇಟೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧ ಸಂಘಟನೆಯಿಂದ ಆಕ್ರೋಶ ವ್ಯಕ್ತವಾಗಿತ್ತು. ಈ ಸರ್ಕಾರಿ ಆದೇಶಕ್ಕೆ ಸಂಬಂಧಪಟ್ಟಂತೆ ಜನರು ಪ್ರತಿಭಟನೆ ಮಾಡಿದ್ದ ಘಟನೆಯ ಬಗ್ಗೆ ಸುವರ್ಣ ನ್ಯೂಸ್‌ನಲ್ಲಿ ಫೆಬ್ರವರಿ 29 ರಂದು ಸುದ್ದಿ ಪ್ರಕಟಿಸಲಾಗಿತ್ತು.

ಇದರ ನಂತರ ಚಾಮರಾಜಪೇಟೆ ಹೋರಾಟಗಾರರು ಹಾಗೂ ಚಾಮರಾಜಪೇಟೆ ನಿವಾಸಿಗಳ ಸಂಘದ ನೇತೃತ್ವದಲ್ಲಿ ಶಶಾಂಕ್ ಎನ್ನುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪಶು ಸಂಗೋಪನಾ ಇಲಾಖೆಗೆ ಸೇರಿದ್ದ ಎರಡು ಎಕರೆ ಜಾಗವನ್ನು ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ನಿರ್ಮಿಸಲ್ಪಟ್ಟ ವಕ್ಫ್‌ ಬೋರ್ಡ್‌ಗೆ ಬಿಟ್ಟುಕೊಡಲಾಗಿದೆ. ಮರಾಠ ನೇತಾರರೊಬ್ಬರು ಪಶುಗಳಿಗೆ ಉತ್ತಮ ಚಿಕಿತ್ಸೆ ನೀಡುವುದಕ್ಕೆ ಅನುಕೂಲ ಆಗಲೆಂದು ಪಶು ಆಸ್ಪತ್ರೆ ನಿರ್ಮಾಣಕ್ಕಾಗಿ ಬರೋಬ್ಬರಿ 2 ಎಕರೆಯಷ್ಟು ಭೂಮಿಯನ್ನು ದಾನ ಮಾಡಿದ್ದರು. ಆದರೆ, ಈಗ ಏಕಾಏಕಿ ವಕ್ಫ್‌ ಬೋರ್ಡ್‌ಗೆ ಬಿಟ್ಟುಕೊಟ್ಟಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು.

ಡಿಕೆಶಿಯಿಂದ ಲೀಲಾವತಿ ಪಶು ಆಸ್ಪತ್ರೆ ಉದ್ಘಾಟನೆ: ಹಿರಿಯ ನಟಿಯ ಆರೋಗ್ಯ ವಿಚಾರಿಸಿದ ಡಿಸಿಎಂ!

ಇನ್ನು ಹೈಕೋರ್ಟ್‌ನಲ್ಲಿ ಆಸ್ಪತ್ರೆ ಭೂಮಿ ಹಸ್ತಾಂತರ ಮತ್ತು ಆಸ್ಪತ್ರೆ ಸ್ಥಳಾಂತದರ ಬಗ್ಗೆ ವಿಚಾರಣೆ ನಡೆಸಿದ ನಂತರ ಪಶು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹೊರಡಿಸಿದ್ದ ಎರಡೂ ಆದೇಶಕ್ಕೆ ತಡೆ ನೀಡಲಾಗಿದೆ. ನ್ಯಾಯಮೂರ್ತಿ ಶಿವಶಂಕರೇಗೌಡ ಹಾಗೂ ನ್ಯಾಯಮೂರ್ತಿ ಶ್ಯಾಂ ಪ್ರಸಾದ್ ಅವರ ಪೀಠದಿಂದ ಸರ್ಕಾರಿ ಆದೇಶಕ್ಕೆ ತಡೆ ನೀಡಿ ಆದೇಶ ನೀಡಾಗಿದೆ.

click me!