ದಶಕದ ಸಂಭ್ರಮದಲ್ಲಿ ವಿಶ್ವಕಪ್ ಗೆಲುವು, ಕಾಂಗ್ರೆಸ್ ಅಸಲಿಯತ್ತು ಬಯಲು; ಎ.2ರ ಟಾಪ್ 10 ಸುದ್ದಿ!

By Suvarna NewsFirst Published Apr 2, 2021, 5:10 PM IST
Highlights

ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಇದರ ಬೆನ್ನಲ್ಲೇ ಟ್ವೀಟ್ ಡಿಲೀಟ್ ಆಗಿದೆ. ಭಾರತದ ವಿಶ್ವಕಪ್ ಗೆಲುವಿಗೆ 10 ವರ್ಷ ಸಂದಿದೆ. ಮೂವರು ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ. ರಮೇಶ್ ಜಾರಕಿಹೊಳಿಗೆ ಶುರುವಾಯ್ತು ಭೀತಿ, ಹೊಸ ಲುಕ್‌ನಲ್ಲಿ ವಿದ್ಯಾ ಬಾಲನ್ ಸೇರಿದಂತೆ ಎಪ್ರಿಲ್ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಮೋದಿ ವಿಡಿಯೋ ಎಡಿಟ್ ಮಾಡಿ ಪೇಚಿಗೆ ಸಿಲುಕಿದ ಕಾಂಗ್ರೆಸ್; ಸತ್ಯ ಬಯಲಾದಾಗ ಟ್ವೀಟ್ ಡಿಲೀಟ್!...

ಕಾಂಗ್ರೆಸ್ ಮತ್ತೆ ಪೇಚಿಕೆ ಸಿಲುಕಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ವಿಡಿಯೋವನ್ನು ಪರಿಶೀಲಿಸದೆ ಪೋಸ್ಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡಿದ ಕಾಂಗ್ರೆಸ್ ಇದೀಗ ಮತ್ತೊಮ್ಮೆ ಮುಖಭಂಗಕ್ಕೆ ಒಳಗಾಗಿದೆ. ಜನರೇ ಇಲ್ಲದ ಕಡೆ ಮೋದಿ ಕ್ಯಾಮಾರಗಾಗಿ ಕೈಬೀಸುತ್ತಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಿದ ಕಾಂಗ್ರೆಸ್ ಅಸಲಿಯತ್ತು ಬಯಲಾಗಿದೆ

BJP ಮುಖಂಡನ ಮನೆ ಮೇಲೆ ದಾಳಿ ಮಾಡಿದ್ದ ಮೂವರು ಉಗ್ರರ ಸದೆ ಬಡಿದ ಭಾರತೀಯ ಸೇನೆ...

ಜಮ್ಮುಕಾಶ್ಮೀರದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಮೂವರು ಹೊಡೆದುರುಳಿಸಿದೆ. ಉಗ್ರರು ನೆಲೆಸಿದ್ದ ಸ್ಥಳದ ಖಚಿತ ಮಾಹಿತಿ ಮೇರೆಗೆ ಕಾಶ್ಮೀರ ಜಿಲ್ಲೆಯ ಕಾಕಾಪೋರಾ ಪ್ರದೇಶದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಚರಣೆಯಲ್ಲಿ 3 ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ.

ಜಾರಕಿಹೊಳಿಗೆ ಬಿಗ್ ಶಾಕ್ : ವೀಡಿಯೋ ಕಾಲ್, ವಾಟ್ಸಾಪ್ ರಹಸ್ಯ ಬಯಲು?...

 ರಮೇಶ್ ಜಾರಕಿಹೋಳಿ ವಿರುದ್ಧ ಎಸ್ ಐಟಿಗೆ ಸಿಕ್ಕಿದೆ ಮಹತ್ವದ ದಾಖಲೆ. ವಿಡಿಯೋ ನಂದೆ ಅಲ್ಲ ಎಂದಿದ್ದ ಜಾರಕಿಹೋಳಿಗೆ ಈ ನಿಟ್ಟಿನಲ್ಲಿ ಶಾಕ್ ಆಗೋದು ಖಚಿತ. 

ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್‌ ಗೆಲುವಿಗೆ 10 ವರ್ಷದ ಸಂಭ್ರಮ..!...

ಭಾರತ ಎರಡನೇ ಬಾರಿಗೆ ಏಕದಿನ ವಿಶ್ವಕಪ್‌ ಗೆದ್ದು ಇಂದಿಗೆ 10 ವರ್ಷಗಳು ಕಳೆದಿವೆ. ಧೋನಿಯ ಚಾಣಾಕ್ಷ ನಾಯಕತ್ವ, ಗಂಭೀರ್‌ ಕೆಚ್ಚೆದೆಯ ಬ್ಯಾಟಿಂಗ್, ಯುವಿ ಎನ್ನುವ ಸವ್ಯಸಾಚಿಯ ಪ್ರದರ್ಶನದ ಮೆಲುಕು ಇಲ್ಲಿದೆ ನೋಡಿ.   

ಬ್ಲಾಕ್‌ ಡ್ರೆಸ್‌ನಲ್ಲಿ ವಿದ್ಯಾ ಬಾಲನ್ ಮಿಂಚಿಂಗ್..! ಜೊತೆಗಿತ್ತು ಫನ್ನಿ ಕ್ಯಾಪ್ಶನ್...

ವಿದ್ಯಾ ಬಾಲನ್ ಅವರು ಫ್ಯಾಶನ್ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ಬಹುತೇಕ ಸೀರೆಯಲ್ಲೇ. ಆದ್ರೆ ಈ ಸಲ ಡಿಫರೆಂಟ್.

ಮಾಸ್ಟರ್‌ ಬ್ಲಾಸ್ಟರ್ ಸಚಿನ್‌ ತೆಂಡುಲ್ಕರ್ ಆಸ್ಪತ್ರೆಗೆ ದಾಖಲು..!...

ಮುಂಬೈ: ಒಂದು ಕಡೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಏಕದಿನ ವಿಶ್ವಕಪ್ ಜಯಿಸಿ 10 ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದರೆ, ಮತ್ತೊಂದು ಕಡೆಯಿಂದ ಕ್ರಿಕೆಟ್‌ ದಂತಕಥೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಆತಂಕಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ. 

ಕೋವಿಡ್ ನಿಯಮ ಉಲ್ಲಂಘನೆ; ಕಳೆದ 5 ದಿನದಲ್ಲಿ 3.18 ಕೋಟಿ ರೂ ದಂಡ ಹಾಕಿದ ಪೊಲೀಸ್!...

ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ದೇಶದ ಬಹುತೇಕ ಕಡೆಗಳಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ. ಕೋವಿಡ್ ಪ್ರೋಟೋಕಾಲ್ ಮುರಿದ ವಾಹನ ಸವಾರರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ. ಕಳೆದ 5 ದಿನದಲ್ಲಿ ಬರೋಬ್ಬರಿ 3.18 ಕೋಟಿ ರೂಪಾಯಿ ದಂಡ ಹಾಕಲಾಗಿದೆ.

ಕೊರೋನಾ 2ನೇ ಅಲೆ: ಮಕ್ಕಳು, ಯುವಕರಿಗೆ ಹೆಚ್ಚು ಅಪಾಯ...

ಕೊರೋನಾದ 2ನೇ ಅಲೆ ಯುವ ಸಮುದಾಯಕ್ಕೆ ಮತ್ತು ಮಕ್ಕಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಗ್ರಾಮೀಣ ಹಾಗು ಬುಡಕಟ್ಟು ಪ್ರದೇಶಗಳು ಮೊದಲ ಅಲೆಯಲ್ಲಿ ಹೆಚ್ಚಿನ ಪರಿಣಾಮದಿಂದ ತಪ್ಪಿಸಿಕೊಂಡಿದ್ದರೂ ಕೂಡ 2ನೇ ಅಲೆಯ ಭೀತಿ ಆ ಪ್ರದೇಶಗಳಿಗೂ ತಟ್ಟಲಿದೆ ಎಂದು ತಜ್ಞರ ಸಮಿತಿ ಎಚ್ಚರಿಸಿದೆ.

ಪತಿ ರಾಬರ್ಟ್ ವಾದ್ರಾಗೆ ಕೊರೋನಾ; ಚುನಾವಣಾ ರ‍್ಯಾಲಿ ರದ್ದು ಮಾಡಿದ ಪ್ರಿಯಾಂಕಾ!...

ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರಸ್ ಮತ್ತೆ ಅಧಿಪತ್ಯ ಸಾಧಿಸಲು ಹವಣಿಸುತ್ತಿದೆ. ಇದಕ್ಕಾಗಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಇದೀಗ ಕಾಂಗ್ರೆಸ್ ರ‍್ಯಾಲಿಗೆ ಕೊರೋನಾ ತೀವ್ರ ಹಿನ್ನಡೆ ತಂದಿದೆ. ಪತಿ ರಾಬರ್ಟ್ ವಾದ್ರಾಗೆ ಕೊರೋನಾ ಅಂಟಿಕೊಂಡಿದೆ. ಹೀಗಾಗಿ ಅಸ್ಸಾಂ, ತಮಿಳುನಾಡು ಹಾಗೂ ಕೇರಳದಲ್ಲಿ ಆಯೋಜಿಸಿದ್ದ ಚುನಾವಣಾ ರ‍್ಯಾಲಿಯನ್ನು ಪ್ರಿಯಾಂಕಾ ಗಾಂಧಿ ರದ್ದು ಮಾಡಿದ್ದಾರೆ. ಈ ಕುರಿತು ಸ್ವತಃ ಪ್ರಿಯಾಂಕ ಗಾಂಧಿ ಮಾಹಿತಿ ನೀಡಿದ್ದಾರೆ.

ವಿಚಾರಣೆಗೆ ಬರದ ರಮೇಶ್, ಜತೆಗಿದ್ದವರ ಬಗ್ಗೆ ಯುವತಿ ಕೊಟ್ಟ ಮಾಹಿತಿ!...

ಮಾಜಿ ಸಚಿವರ  ಸಿಡಿ ಪ್ರಕರಣದಲ್ಲಿ ವಿಚಾರಣೆ ಮುಂದುವರಿದಿದೆ ಅಡುಗೋಡಿ ಟೆಕ್ನಿಕಲ್ ಸೆಂಟರ್ ಗೆ ಭೇಟಿ ನೀಡಿದ ಬಳಿಕ ವಕೀಲ ಕೆ.ಎನ್.ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಆರ್ ಪಿಸಿ 161ಡಿಯಲ್ಲಿ ಸಂತ್ರಸ್ತೆಯ ವಿಚಾರಣೆ ಮುಂದುವರೆದಿದೆ. ಆರೋಪಿ ವಿಚಾರಣೆಗೆ ಹಾಜರಾಗಬಹುದು ಎಂದು ನಾನು ಸಹ ಬಂದಿದ್ದೆ. ಆದರೆ ಆರೋಪಿ ಇಂದು ವಿಚಾರಣೆಗೆ ಹಾಜರಾಗಿಲ್ಲ.

click me!