ಅಕ್ಕನ ಮನೆಯವರು ಹಬ್ಬದ ನಿಮಿತ್ತ ಊರಿಗೆ ಹೋಗುತ್ತಿದ್ದೇವೆ ಮನೆಯ ಕಡೆ ಹುಷಾರಾಗಿ ನೋಡಿಕೋ ಎಂದು ಜವಾಬ್ದಾರಿ ಕೊಟ್ಟು ಹೋದರೆ, ತಂಗಿ ಮನೆಯಲ್ಲಿದ್ದ 50 ಲಕ್ಷ ರೂ. ಕ್ಯಾಷ್ ಹಾಗೂ ಚಿನ್ನಾಭರಣ ಕದ್ದು ಪರಾರಿ ಆಗಿದ್ದಾಳೆ.
ಬೆಂಗಳೂರು (ಮೇ 07): ನಾವು ಹಬ್ಬಕ್ಕಾಗಿ ಊರಿಗೆ ಹೋಗುತ್ತಿದ್ದು, ನೀನು ನಮ್ಮ ಮನೆಯಲ್ಲಿಯೇ ಉಳಿದುಕೊಂಡು ಜವಾಬ್ದಾರಿ ನೋಡಿಕೋ ಎಂದು ಹೇಳಿ ಹೋದ ಅಕ್ಕನ ಮನೆಯಲ್ಲಿಯೇ ಚಾಲಾಕಿ ತಂಗಿ ಕನ್ನ ಹಾಕಿದ್ದಾಳೆ. ಬರೋಬ್ಬರಿ 50 ಲಕ್ಷ ರೂ. ನಗದು ಹಾಗೂ ಚಿನ್ನಾಭರಣವನ್ನು ಕದ್ದು ಪರಾರಿ ಆಗಿದ್ದಾಳೆ.
ಹೌದು, ಅಕ್ಕನ ಮನೆಗೆ ಕನ್ನ ಹಾಕಿದ ಚಾಲಾಕಿ ತಂಗಿಯ ಇಲ್ಲಿದ್ದಾಳೆ ನೋಡಿ. ಈಕೆಯ ಹೆಸರು ಉಮಾ. ಕೆಂಗೇರಿ ಪೊಲೀಸರಿಂದ ಚಾಲಾಕಿ ತಂಗಿ ಉಮಾ ಬಂಧನವಾಗಿದೆ. ಅಕ್ಕ ಊರ ಹಬ್ಬಕ್ಕೆ ಹೋಗುವಾಗ ತಂಗಿಯನ್ನೂ ಕರೆದಿದ್ದಾಳೆ. ಆದರೆ, ತಂಗಿ ನಾನು ಕೆಲಸವನ್ನು ಬಿಟ್ಟು ಬರುವುದಕ್ಕೆ ಆಗೊಲ್ಲ, ನೀನು ಹೋಗಿಬಾ ಎಂದು ಕಳಿಸಿದ್ದಾಳೆ. ಸರಿ ನೀನು ಊರಿಗೆ ಬರದಿದ್ದರೂ ಪರವಾಗಿಲ್ಲ, ರಾತ್ರಿ ವೇಳೆ ನಮ್ಮ ಮನೆಯಲ್ಲಿ ಬಂದು ಮಲಗು. ಇಲ್ಲಿ ಮನೆಯ ಕಡೆ ನೀನು ಹುಷಾರಾಗಿ ನೋಡಿಕೊಳ್ಳಬೇಕು ಎಂದು ಮನೆಯ ಕೀ ಕೊಟ್ಟು ಹೋಗಿದ್ದಾರೆ.
ಇನ್ನು ಮನೆಯ ಜವಾಬ್ದಾರಿ ನೋಡಿಕೊಳ್ಳುವುದಕ್ಕೆಂದು ಕೀ ಕೊಟ್ಟು ಹೋದಾಗ, ರಾತ್ರಿ ಅಕ್ಕನ ಮನೆಯಲ್ಲಿ ಮಲಗಲು ಬಂದಿದ್ದಾಳೆ. ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ ಆಕೆ ಮನೆಯಲ್ಲಿ ಎಲ್ಲ ಕಡೆಗೂ ಕದಿಯಲು ಏನಾದರೂ ಸಿಗುತ್ತದೆಯೇ ಎಂದು ಹುಡುಕಿದ್ದಾಳೆ. ನಂತರ, ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಇರುವ ಬೀರುವನ್ನು ತೆಗೆದು ನೋಡಿದಾಗ ಅದರಲ್ಲಿದ್ದ ಕಂತೆ, ಕಂತೆ ನೋಟುಗಳು ಹಾಗೂ ಚಿನ್ನಾಭರಣ ನೋಡಿ ಸಂತಸಪಟ್ಟಿದ್ದಾಳೆ. ಹಣ, ಚಿನ್ನಾಭರಣ ನೋಡಿ ಹುಚ್ಚು ಕೋಡಿಯಂತೆ ನಿಯಂತ್ರಣ ಕಳೆದುಕೊಂದ ಆಕೆಯ ಮನಸ್ಸು ಎಲ್ಲ ಹಣವನ್ನೂ ಕದ್ದುಕೊಂಡು ಹೋಗುವಂತೆ ತಿಳಿಸಿದೆ. ಅದರಂತೆ ಬೀರುವಿನಲ್ಲಿದ್ದ ಎಲ್ಲ ಹಣ ಹಾಗೂ ಚಿನ್ನಾಭರಣವನ್ನು ಕದ್ದುಕೊಂಡು ಹೋಗಿದ್ದಾಳೆ.
ನನ್ನ ಸಿಡಿ ಕೇಸ್‌ನಲ್ಲಿಯೂ ಡಿಕೆಶಿ ಆಡಿಯೋ ಇದೆ; ಸಿಎಂ, ಹೋಮ್ ಮಿನಿಸ್ಟ್ರರ್ ಸಿಡಿಯೂ ಬರಲಿದೆ: ರಮೇಶ್ ಜಾರಕಿಹೊಳಿ
ಹಬ್ಬಕ್ಕೆಂದು ಊರಿಗೆ ತೆರಳಿದ್ದ ಮನೆಯವರು ವಾಪಸ್ ಬಂದಾಗ ಬೀರು ತೆಗೆದಿರುವುದು ಗಮನಕ್ಕೆ ಬಂದಿದೆ. ಅದರಲ್ಲಿದ್ದ ಹಣ ಮತ್ತು ಚಿನ್ನಾಭರಣ ಇದೆಯೇ ಎಂದು ಪರಿಶೀಲನೆ ಮಾಡಿದಾಗ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಳ್ಳತನ ಆಗಿರುವುದು ತಿಳಿದಿದೆ. ಸುಮಾರು 50ಲಕ್ಷ ರೂ.ಗಿಂತ ಅಧಿಕ ಹಣ ಹಾಗೂ ಚಿನ್ನಾಭರಣ ಕಳ್ಳತನವಾಗಿದೆ ಎಂದು ಕೂಡಲೇ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಇನ್ನು ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕಿಂಗ್ ವಿಚಾರ ತಿಳಿದುಬಂದಿದೆ.
ಅಕ್ಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಕಳ್ಳತನ ಆಗಿದ್ದರೂ ಆರಾಮಾಗಿದ್ದ ಉಮಾ ಬಗ್ಗೆ ಅಕ್ಕ ಅನುಮಾನ ವ್ಯಕ್ತಪಡಿಸಿದ್ದಾಳೆ. ಮನೆಯಲ್ಲಿ ಕಳ್ಳತನವಾಗಿದೆ ಎಂದು ದೂರು ಕೊಟ್ಟ ವ್ಯಕ್ತಿ ಕೂಡ ನಾದಿನಿ (ಪತ್ನಿಯ ತಂಗಿ) ಕಳ್ಳತನ ಮಾಡಿದ್ದಾಳೆಂಬ ಸುಳಿವನ್ನು ಪೊಲೀಸರಿಗೆ ಕೊಟ್ಟಿದ್ದಾರೆ.ಪೊಲೀಸರು ದೂರುದಾರನ ನಾದಿನಿ ಉಮಾಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇಲ್ಲಿ ಆರೋಪಿತೆ ಉಮಾ ಅಕ್ಕನ ಮನೆಯ ಬೀರುವಿನ ನಕಲಿ ಕೀ ಮಾಡಿಸಿಕೊಂಡಿದ್ದೇ, ಕಳ್ಳತನಕ್ಕೆ ಹಲವು ದಿನಗಳಿಂದ ಯೋಜನೆ ರೂಪಿಸಿದ್ದಳು ಎಂದು ತಿಳಿದುಬಂದಿದೆ. ಇನ್ನು ಅಕ್ಕ-ಬಾವ ಸೇರಿ ಮನೆಯವರೆಲ್ಲರೂ ಊರ ಹಬ್ಬಕ್ಕೆಂದು ತೆರಳಿದ್ದಾಗ ಸಮಯ ನೋಡಿ ಕಳ್ಳತನ ಮಾಡಿದ್ದಾಳೆ.
ಶಿವಮೊಗ್ಗ ಗಂಡನ ಸಾವಿಗೆ ಮತದಾನ ಸಮರ್ಪಿಸಿದ ಹೆಂಡತಿ; ಶವ ಬಿಟ್ಟುಬಂದು ಮತ ಹಾಕಿದ ಮಹಿಳೆ
ಲಗ್ಗೆರೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದ ಉಮಾ ಅಕ್ಕನ ಮನೆಯಲ್ಲಿ ಕಳ್ಳತನ ಆಗಿದ್ದರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಆರಾಮವಾಗಿದ್ದಳು. ಆದರೆ, ತಾನು ಕದ್ದ ಹಣವನ್ನು ಮನೆಯಲ್ಲಿ ಇಟ್ಟುಕೊಂಡರೆ ಆಪತ್ತು ಬರುತ್ತದೆ ಎಂಬುದನ್ನು ಎಚ್ಚೆತ್ತುಕೊಂಡಿದ್ದ ಉಮಾ, ತಾನು ಕೆಲಸ ಮಾಡುವ ಕಂಪನಿಯ ಮಾಲೀಕನಿಗೆ ಕೊಟ್ಟಿದ್ದಳು. ನಮ್ಮ ಮನೆಯಲ್ಲಿ ಯಾರು ಇಲ್ಲ, ಹಾಗಾಗಿ ಹಣವನ್ನು ಇಟ್ಟುಕೊಳ್ಳಲು ಆಗುತ್ತಿಲ್ಲ. ನೀವೆ ಸ್ವಲ್ಪ ಹಣ ಇಟ್ಟುಕೊಳ್ಳಿ ಎಂದು ಹೇಳಿ ಕದ್ದಿರುವ ಹಣವನ್ನು ಕಂಪನಿ ಮಾಲೀಕನಿಗೆ ಕೊಟ್ಟಿದ್ದಳು. ಉಮಾಳನ್ನು ಬಂಧಿಸಿದ ಪೊಲೀಸರು ಆರೋಪಿಯಿಂದ ಚಿನ್ನಾಭರಣ ಸೇರಿ 50 ಲಕ್ಷ ರೂ.ಗಿಂತ ಅಧಿಕ ಹಣ ರಿಕವರಿ ಮಾಡಿಕೊಂಡಿದ್ದಾರೆ.