ಶಿವಮೊಗ್ಗದಲ್ಲೊಬ್ಬ ಮಹಿಳೆ ತನ್ನ ಗಂಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವಿಚಾರ ತಿಳಿದರೂ ತನ್ನ ಸಂವಿಧಾನ ಬದ್ಧ ಹಕ್ಕಾಗಿರುವ ಮತದಾನ ಮಾಡಿ ಗಂಡನ ಶವ ನೋಡಲು ತೆರಳಿದ್ದಾರೆ.
ಶಿವಮೊಗ್ಗ (ಮೇ 07): ದೇಶದಲ್ಲಿ ಎಲ್ಲ ಅನುಕೂಲಗಳು ಇದ್ದರೂ ಮತಗಟ್ಟೆಗೆ ಹೋಗಿ ಮತದಾನ ಮಾಡುವುದಿಲ್ಲ. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಗಂಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿದರೂ ತನ್ನ ಮತದಾನದ ಹಕ್ಕನ್ನು ಚಲಾಯಿಸಿ ಗಂಡನ ಶವ ಅಂತ್ಯಕ್ರಿಯೆ ಕಾರ್ಯಕ್ಕೆ ತೆರಳಿದ್ದಾರೆ. ಈ ಮೂಲಕ ಮತದಾನ ಮಾಡದೇ ಇರುವವರಿಗೆ ಈ ಮಹಿಳೆ ನೀತಿ ಪಾಠವಾಗಿದ್ದಾರೆ.
ಹೌದು, ಪತಿ ಸಾವನಪ್ಪಿದ ದುಃಖದಲ್ಲೂ ಮಹಿಳೆ ತನ್ನ ಜವಾಬ್ದಾರಿಯನ್ನು ಬಿಡದೇ ಮತಗಟ್ಟೆಗೆ ಬಂದು ಮತದಾನ ಮಾಡಿರುವುದು ಮಾದರಿಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಪ್ರತಿ ಸಾವನಪ್ಪಿದ ವಿಷಯ ತಿಳಿದ ನಂತರ, ತರಾತುರಿಯಲ್ಲಿ ಮತಗಟ್ಟೆಗೆ ಆಗಮಿಸಿದ ಮಹಿಳೆ ಮತದಾನ ಮಾಡಿ ತೆರಳಿದ್ದಾರೆ. ಈ ಘಟನೆ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿಯ ಆಡುಗೋಡಿಯಲ್ಲಿ ನಡೆದಿದೆ.
undefined
ಲೋಕಸಭಾ ಚುನಾವಣೆ 2024: ಕರ್ತವ್ಯನಿರತ ಇಬ್ಬರು ಅಧಿಕಾರಿಗಳು ಹೃದಯಾಘಾತದಿಂದ ಸಾವು
ಮಹಿಳೆ ಕಲಾವತಿ ಅವರ ಪತಿ ವೆಂಕಟೇಶ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಕೊಡಲಿಸಲು ಮನೆಯ ಪುರುಷರು ತೆರಳಿದ್ದುಮ ಕಲಾವತಿ ಮಕ್ಕಳೊಂದಿಗೆ ಮನೆಯಲ್ಲಿಯೇ ಇದ್ದರು. ಇಂದು ಬೆಳಗ್ಗೆ ಮತದಾನ ಇರುವ ಎಂದಿನಂತೆ ಮತಗಟ್ಟೆಗೆ ತೆರಳಿ ಮತ ಚಲಾಯಿಸುವುದಕ್ಕೆ ಮುಂದಾಗಿದ್ದರು. ಆದರೆ, ಮತ ಚಲಾವಣೆಗೆ ತೆರಳುವ ಮುನ್ನವೇ ನಿಮ್ಮ ಪತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಂದಿದೆ. ಗಂಡನ ಸಾವಿನ ದುಃಖ ಆಕೆಗೆ ಬರಸಿಡಿಲು ಬಡಿದಂತಾಗಿದೆ. ಒಂದು ಕ್ಷಣ ದುಃಖಿತಳಾದ ಮಹಿಳೆ ತನ್ನ ಗಂಡನ ಆತ್ಮಶಾಂತಿಗಾಗಿ ಮತ ಚಲಾವಣೆ ಮಾಡಬೇಕೆಂದು ನಿರ್ಧಾರ ಮಾಡಿದ್ದಾಳೆ.
ನಂತರ ತರಾತುರಿಯಲ್ಲಿ ಗಂಡನಿರುವ ಆಸ್ಪತ್ರೆಗೆ ತೆರಳುವ ಮುನ್ಮನ ಹಿಳೆ ಕಲಾವತಿ ತಮ್ಮ ಗ್ರಾಮದಲ್ಲಿದ್ದ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡಿದ್ದಾಳೆ. ಮತದಾನ ಮಾಡುವ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅರ್ಹ ಅಭ್ಯರ್ಥಿ ಆಯ್ಕೆ ಮಾಡುವ ಹಕ್ಕನ್ನು ಚಲಾಯಿಸಿದ್ದಾರೆ. ನಂತರ, ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದಾರೆ. ಈ ಮೂಲಕ ಎಲ್ಲ ವ್ಯವಸ್ಥೆಗಳಿದ್ದರೂ ಮತದಾನ ಮಾಡದೇ ನಿರ್ಲಕ್ಷ್ಯ ಮಾಡುವವರಿಗೆ ನೀತಿ ಪಾಠವಾಗಿದ್ದಾಳೆ. ಜೊತೆಗೆ, ಮತದಾನದ ಮಹತ್ವವನ್ನು ತಿಳಿಸಿದ್ದಾಳೆ.
ಜನಾರ್ದನ ರೆಡ್ಡಿ ತನ್ನನ್ನು ತಾನೇ ಮಹಾನ್ ನಾಯಕ ಅಂತ ಅಂದುಕೊಂಡಿದ್ದಾನೆ: ಶಿವರಾಜ್ ತಂಗಡಗಿ ಗರಂ
ನನ್ನ ಗಂಡ ಪ್ರತಿ ಬಾರಿ ಚುನಾವಣೆ ಬಂದಾಗಲೂ ಬಿಜೆಪಿ, ಮೋದಿ.. ಮೋದಿ ಎಂದು ಹೇಳುತ್ತಿದ್ದರು. ಅವರ ಆತ್ಮ ಶಾಂತಿ ಸಿಗಲೆಂದು ಮತ ಹಾಕಲು ನಿರ್ಧರಿಸಿದ್ದೆನು. ಅದರಂತೆ, ಗಂಡನ ಸಾವಿನ ವಿಚಾರ ತಿಳಿದರೂ ಮತದಾನ ಮಾಡಿ ಅವರಿಗೆ ಸಮರ್ಪಣೆ ಮಾಡಿದ್ದೇನೆ.
- ಕಲಾವತಿ, ಮಾದರಿ ಮತದಾನ ಮಹಿಳೆ