ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಬಂಗಾರ, ಮಹಾ ಮಳೆಗೆ ಜನ ತತ್ತರ; ಜು.24ರ ಟಾಪ್ 10 ಸುದ್ದಿ!

By Suvarna NewsFirst Published Jul 24, 2021, 4:37 PM IST
Highlights

ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಭೇಟೆ ಆರಂಭಗೊಂಡಿದೆ. ವೆಯ್ಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಇಡೀ ಭಾರತವೇ ಚಾನುಗೆ ಶುಭಕೋರಿದೆ. ಇತ್ತ ಮಾವಿನ ಹಣ್ಣು ಇಷ್ಟ ಇಲ್ಲ ಎಂದು ರಾಹುಲ್ ಗಾಂಧಿಗೆ ಯೋಗಿ ತಿರುಗೇಟು ನೀಡಿದ್ದಾರೆ. ಕರ್ನಾಟಕ ಸಿಎಂ ಬದಲಾವಣೆ, ದೇಶದಲ್ಲಿನ ಮಹಾ ಮಳೆ ಹಾಗೂ ಪ್ರವಾಹ ಸೇರಿದಂತೆ ಜುಲೈ 24ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಸೈಕೋಮ್‌ ಮೀರಾಬಾಯಿ ಚಾನು

 ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಏಕೈಕ ವೇಟ್‌ಲಿಫ್ಟರ್‌ ಸೈಕೋಮ್‌ ಮೀರಾಬಾಯಿ ಚಾನು ದೇಶಕ್ಕೆ ಮೊದಲ ಪದಕ ಗೆದ್ದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಭಾಜನರಾದ ಮೀರಾಬಾಯಿ ಚಾನು, ಕರ್ಣಂ ಮಲ್ಲೇಶ್ವರಿ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ವೇಟ್‌ಲಿಫ್ಟರ್‌ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.

ಉತ್ತರ ಪ್ರದೇಶದ ಮಾವು ಇಷ್ಟ ಇಲ್ಲ ಎಂದ ರಾಹುಲ್: ಯೋಗಿ ಕೊಟ್ಟ ಉತ್ತರ ಇದು

ತನ್ನ ಒಂದು ಹೇಳಿಕೆಯಲ್ಲಿ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಮಾವಿನಹಣ್ಣುಗಳನ್ನು ಇಷ್ಟಪಡುವುದಿಲ್ಲ ಆದರೆ ಆಂಧ್ರಪ್ರದೇಶದವರನ್ನು ಪ್ರೀತಿತ್ತೇನೆ ಎಂದು ಹೇಳಿದ್ದಾರೆ.

ಕೊರೋನಾ ಲಸಿಕೆ, ಸಿಹಿ ಸುದ್ದಿ ಕೊಟ್ಟ AIIMS ನಿರ್ದೇಶಕ ಡಾ. ಗುಲೇರಿಯಾ!

ಭಾರತದಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಸೆಪ್ಟೆಂಬರ್ ವೇಳೆಗೆ ಪ್ರಾರಂಭವಾಗಬಹುದು. ಏಮ್ಸ್ ನಿರ್ದೇಶಕ ಡಾ.ರಣ್ದೀಪ್ ಗುಲೇರಿಯಾ ಸಂವಾದ ಒಂದರಲ್ಲಿ ಇಂತಹುದ್ದೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಪ್ರಚಂಡ ಮಳೆ: 2 ದಿನಕ್ಕೆ 136 ಬಲಿ!

ಕೋವಿಡ್‌ನಿಂದ ನಲುಗಿದ್ದ ಮಹಾರಾಷ್ಟ್ರದಲ್ಲಿ ಇದೀಗ ಮುಂಗಾರು ಮಳೆ ತನ್ನ ರೌದ್ರನರ್ತನ ತೋರಿದ್ದು, ಕಳೆದ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ 136 ಜನರನ್ನು ಬಲಿ ಪಡೆದಿದೆ. ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ್ದು, ನೂರಾರು ಸಂಖ್ಯೆಯಲ್ಲಿ ಮನೆಗಳು ಭೂಸಮಾಧಿಯಾಗಿವೆ. ರಾಯಗಢ ಜಿಲ್ಲೆಯ ತಲಾಯಿ ಎಂಬ ಒಂದೇ ಗ್ರಾಮದಲ್ಲಿ ಶುಕ್ರವಾರ 24 ಮನೆಗಳು ಧರಾಶಾಯಿಯಾಗಿದ್ದು, 38 ಜನರು ಸಾವನ್ನಪ್ಪಿದ್ದಾರೆ.

ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಚಾನುಗೆ ಜೈ ಹೋ ಎಂದ ಟೀಂ ಇಂಡಿಯಾ

ಭಾರತೀಯರ ಪಾಲಿಗಿಂದು ಶುಭ ಶನಿವಾರ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮಹಿಳೆಯರ 49 ಕೆ.ಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಇಂಪಾಲ ಮೂಲದ ಸೈಕೋಮ್‌ ಮೀರಾಬಾಯಿ ಚಾನು ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್‌ ಎನ್ನುವ ದಾಖಲೆಗೆ 26 ವರ್ಷದ ಚಾನು ಪಾತ್ರರಾಗಿದ್ದಾರೆ.

ಮಗಳ ಕ್ಯೂಟ್ ಫೋಟೊ ಶೇರ್ ಮಾಡಿದ ಗೌರಿ, ಶಾರೂಖ್ ಕಮೆಂಟ್ ಹೀಗಿತ್ತು

ಬಾಲಿವುಡ್ ನಿರ್ಮಾಪಕಿ ಮತ್ತು ಇಂಟೀರಿಯರ್ ಡಿಸೈನರ್ ಗೌರಿ ಖಾನ್ ತನ್ನ ಮಗಳು ಸುಹಾನಾ ಖಾನ್ ಅವರ ಕೆಲವು ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ

ನೋಕಿಯಾ 110 4ಜಿ ಫೀಚರ್ ಫೋನ್ ಲಾಂಚ್, ಮಾರಾಟ ಶುರು

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿರುವ ನೋಕಿಯಾ ಇದೀಗ ವಿಶಿಷ್ಟ ಫೀಚರ್‌ ಫೋನ್ ಮೂಲಕ ಮತ್ತೆ ಮರಳಿದೆ. ನೋಕಿಯಾ 110 4ಜಿ ಫೀಚರ್‌ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಜುಲೈ 24ರಿಂದ ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಸಿಗಲಿದೆ. ಈ ಫೋನ್ ಬೆಲೆ 2,799 ರೂಪಾಯಿ ಮಾತ್ರ.

500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

ದೇಶದಲ್ಲಿ ಅತ್ಯಂತ ಸುರಕ್ಷಿತ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ಮೋಟಾರ್ಸ್, ಅತ್ಯಾಕರ್ಷಕ ವಿನ್ಯಾಸ ಹಾಗೂ ತಂತ್ರಜ್ಞಾನ ಹೊಂದಿದೆ. ಟಾಟಾ ಮೋಟಾರ್ಸ್ ಈಗಾಗಲೇ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ನೂತನ ಕಾರಿನ ಮೈಲೇಜ್ ಸಂಪೂರ್ಣ ಚಾರ್ಜ್‌ಗೆ 500 ಕಿ.ಮೀ ಅನ್ನೋದು ಬಯಲಾಗಿದೆ.

ಸಿಎಂ ರೇಸ್‌ನಲ್ಲಿರೋ ಮುರುಗೇಶ್ ನಿರಾಣಿಯ ಮನದ ಮಾತು

 ನಾನು ಮುಖ್ಯಮಂತ್ರಿ ಸ್ಥಾನಕ್ಕೆ ವರಿಷ್ಠರ ಬಳಿ ಯಾವುದೇ ರೀತಿಯ ಲಾಬಿ ನಡೆಸಿಲ್ಲಘಿ.  ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ದರಾಗಿರುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಹೇಳಿದರು. 
 

click me!