ಬೆಂಗಳೂರಲ್ಲಿ ಜಾರಿಯಾಗುತ್ತಿದೆ ಸೀಲ್‌ಡೌನ್, ಕ್ರಿಕೆಟಿಗನಿಗೆ ಲಾಕ್‌ಡೌನ್ ಫೈನ್; ಏ.10ರ ಟಾಪ್ 10 ಸುದ್ದಿ!

By Suvarna NewsFirst Published Apr 10, 2020, 5:13 PM IST
Highlights

ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರು ಸೀಲ್‌ಡೌನ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಲಾಕ್‌ಡೌನ್ ನಡುವೆಯೂ ಮಸೀದಿಯಲ್ಲಿ ಸೇರಿದ್ದ 40 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಇಷ್ಟೇ ನಿಯಮ ಉಲ್ಲಂಘಿಸಿದ ಟೀಂ ಇಂಡಿಯಾ ಕ್ರಿಕೆಟಿಗನಿಗೂ ದಂಡ ಹಾಕಲಾಗಿದೆ. ಕೋವಿಡ್ 19ರ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಐಷಾರಾಮಿ ಹೊಟೆಲ್ ನೀಡಿದ ಬಾಲಿವುಡ್ ನಟ, ನಿರ್ದೇಶಕನ ಅಸಲಿ ಮುಖ ಬಯಲು ಮಾಡಿದ ನಟಿ ಮಾನ್ವಿ ಗಾಗ್ರೂ ಸೇರಿದಂತೆ ಏಪ್ರಿಲ್ 10ರ ಟಾಪ್ 10 ಸುದ್ದಿ ಇಲ್ಲಿವೆ.

ಲಾಕ್‌ಡೌನ್‌ಗಿಂತ ಸೀಲ್‌ಡೌನ್‌ ಫುಲ್‌ ಸ್ಟ್ರಿಕ್ಟ್‌: ಜನ ಹೊರಗಡೆ ಬರೋದೆ ಕಷ್ಟ ಕಷ್ಟ!

ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಬೆಂಗಳೂರು ಸಿಟಿ ಪೊಲೀಸರು ಸೀಲ್‌ ಡೌನ್ ಮಾಡಲು ತಯಾರಿ ನಡೆಸಿದ್ದಾರೆ. ಒಂದು ವೇಳೆ ಸೀಲ್‌ ಡೌನ್‌ ಘೋಷಣೆ ಆದರೆ ಜನರ ವಾಹನಗಳಿಗೆ ನಿಷೇಧ ಹೇರಲಾಗುತ್ತದೆ. ಸೀಲ್‌ಡೌನ್‌ನಿಂದ ನಗರದಲ್ಲಿನ ಎಲ್ಲ ರಸ್ತೆಗಳು ಬಂದ್‌ ಆಗಲಿದೆ. 

ಮಸೀದಿಯೊಳಗೆ ಒಟ್ಟಾಗಿ ಸೇರಿದ 40 ಜನರ ಮೇಲೆ ಪ್ರಕರಣ ದಾಖಲು

 ಕೊರೋನಾ ವಿರುದ್ಧ ಹೋರಾಟಡಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ.  ಮಸೀದಿ-ಮಂದಿರ-ಚರ್ಚ್ ಎಲ್ಲಿಯೂ ಜನರು ಸೇರುವಂತೆ ಇಲ್ಲ ಎಂದು ಹೇಳಲಾಗಿದೆ. ಆದರೆ ಇಲ್ಲಿ ಯಾವುದಕ್ಕೂ ಕಿಮ್ಮತ್ತು ಇಲ್ಲ.

15 ಸಾವಿರ ಕೋಟಿ ರುಪಾಯಿ ಕೊರೋನಾ ವೈರಸ್ ಪ್ಯಾಕೇಜ್ ಘೋ‍ಷಿಸಿದ ಕೇಂದ್ರ

ಕೊರೋನಾ ವೈರಸ್ ವಿರುದ್ಧ ಸೆಣಸುತ್ತಿರುವ ರಾಜ್ಯಗಳಿಗೆ ತುರ್ತು ಕ್ರಮವಾಗಿ ಕೇಂದ್ರ ಸರ್ಕಾರ 15 ಸಾವಿರ ಕೋಟಿ ರುಪಾಯಿ ಘೋಷಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಆಸ್ಪತ್ರೆಯಲ್ಲೇ ಮಾರಾಮಾರಿ: ಜಗಳ ಬಿಡಿಸಲು ಪೊಲೀಸ್ ಪೇದೆ ಹರಸಾಹಸ!

ರೋಗಿಗಳಿಗೆ ಚಿಕಿತ್ಸೆಗಿಂತಲೂ ಹೆಚ್ಚಾಗಿ, ಹೊರಗಿನವರ ಮಾರಾಮಾರಿಗೆ ಅನೇಕ ಬಾರಿ ಸಾಕ್ಷಿಯಾಗಿರುವ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಮಧ್ಯರಾತ್ರಿಯೂ ಇಲ್ಲಿನ ಆವರಣದಲ್ಲಿ ರಣಾಂಗಣದ ವಾತಾವರಣ ಸೃಷ್ಟಿಯಾದಂತಿತ್ತು. ಪದೇ ಪದೇ ಇಂತಹ ಘಟನೆಗಳು ಇಲ್ಲಿನ ವೈದ್ಯರು, ಸಿಬ್ಬಂದಿಗಳು ಹಾಗೂ ರೋಗಿಗಳ ರಕ್ಷಣೆಯ ವಿಚಾರದಲ್ಲಿ ಸೋತಂತಿವೆ ಅನ್ನೋದೂ ಈ ಸನ್ನಿವೇಶ ಹೇಳುವಂತಿತ್ತು.

ಲಾಕ್‌ಡೌನ್ ಉಲ್ಲಂಘಿಸಿದ ಟೀಂ ಇಂಡಿಯಾ ಕ್ರಿಕೆಟಿಗನಿಗೆ ಬಿತ್ತು ದಂಡ!.

 ಕೊರೋನಾ ವೈರಸ್ ಕಾರಣ ಭಾರತದಲ್ಲಿ ಲಾಕ್‌ಡೌನ್ ಹೇರಲಾಗಿದೆ. ಜೊತೆಗೆ ಯಾರೂ ಕೂಡ ಮನೆಯಿಂದ ಹೊರಬರಬೇಡಿ ಎಂದು ಮನವಿಯನ್ನೂ ಮಾಡಲಾಗಿದೆ. ಆದರೆ ಜನರೂ ಮಾತ್ರ ಅರ್ಥಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಅನವಶ್ಯಕವಾಗಿ ಹೊರಬಂದವರಿಗೆ, ವಾಹನಕ್ಕೆ ದುಬಾರಿ ಫೈನ್ ಹಾಕಲಾಗುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ಹೊರಬಂದು ದಂಡಕ್ಕೆ ಗುರಿಯಾಗಿದ್ದಾರೆ.

ಹಣ ಬೇಕಂದ್ರೆ 'Compromise'ಆಗಿ ಎಂದು ನಟಿಗೆ ಟಾಂಗ್‌ ಕೊಟ್ಟ ಖ್ಯಾತ ನಿರ್ದೇಶಕ!

ಖಾಸಗಿ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್‌ ಬಗ್ಗೆ ಮಾತನಾಡಿದ ಬಾಲಿವುಡ್‌ ನಟಿ. ಹಣ ಬೇಕೆಂದರೆ ಕಾಂಪ್ರಮೈಸ್‌ ಆಗಿ ಎಂದು ನಿರ್ದೇಶಕ ಹೇಳಿದ ವಿಚಾರವನ್ನು ವಿವರಿಸಿದ್ದಾರೆ. 

ಕೋವಿಡ್‌19: ವೈದ್ಯರಿಗೆ ಐಷಾರಾಮಿ ಹೋಟೆಲ್‌ ಬಿಟ್ಟುಕೊಟ್ಟ ನಟ!

ಕೊರೋನಾ ಪೀಡಿತರಿಗೆ ಸಹಾಯ ಮಾಡಲು ದಕ್ಷಿಣ ಭಾರತದ ಖ್ಯಾತ ವಿಲನ್ ಸೋನು ಸೂದ್‌ ಸಹಾಯ ಮಾಡಲು ಮುಂದಾಗಿದ್ದಾರೆ.


ವೆಡ್ಡಿಂಗ್ ಆ್ಯನಿವರ್ಸರಿಗೆ ದುಬಾರಿ ಗಿಫ್ಟ್; ಉಡುಗೊರೆ ಪಡೆದು ದಾಖಲೆ ಬರೆದ ಪತ್ನಿ!...

ಮದುವೆಯಾದವರಿಗೆ  ವೆಡ್ಡಿಂಗ್ ಆ್ಯನಿವರ್ಸರಿ ಸ್ಪೆಷಲ್. ಹಲವು ಗಂಡಂದಿರುವ ಮದವೆ ದಿನಾಂಕವನ್ನೇ ಮರೆತು ಬಿಡುತ್ತಾರೆ. ಆದರೆ ಪತ್ನಿಯರು ಹಾಗಲ್ಲ, ಎಲ್ಲೂವ ಕಂಪ್ಯೂಟರೈಸಡ್ ಆಗಿರುತ್ತೆ. ಮರೆತು ಹೋದರೆ ಕತೆ ಮುಗಿಯಿತು. ಇದು ಬಹುತೇಕರ ಸಮಸ್ಯೆ. ಇನ್ನು ಹಲವರು ತಮ್ಮ ವೆಡ್ಡಿಂಗ್ ಆ್ಯನಿವರ್ಸಿಗೆ 6 ತಿಂಗಳ ಮೊದಲೇ ಪ್ಲಾನ್ ಮಾಡುತ್ತಾರೆ. ಸರ್ಪ್ರೈಸ್ ಗಿಫ್ಟ್ ನೀಡೋ ಮೂಲಕ ಪತ್ನಿ ಸಂತಸ ಡಬಲ್ ಮಾಡುತ್ತಾರೆ. ಹೀಗೆ ಪತ್ನಿಗೆ ಸರ್ಪ್ರೈಸ್ ಮಾತ್ರವಲ್ಲ ದುಬಾರಿ ಗಿಫ್ಟ್ ನೀಡಿ ವಿಶ್ವದಲ್ಲೇ ಸದ್ದು ಮಾಡುತ್ತಿದ್ದಾರೆ. 

COVID19: ವೈದ್ಯರಿಗೆ ದುಪ್ಪಟ್ಟು ವೇತನ ನೀಡಲು ನಿರ್ಧಾರ

ಕೊರೋನಾ ವೈರಸ್ ಸೋಂಕಿತರಿಗೆ ಹಗಲಿರುಳು ಸೇವೆ ಮಾಡಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾದಿಯರಿಗೆ ನೆರವಾಗಲು ಸರ್ಕಾರ ನಿರ್ಧರಿಸಿದೆ. ವೈದ್ಯ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದು, ಅವರಿಗೆ ದುಪ್ಪಟ್ಟು ವೇತನ ನೀಡಲು ನಿರ್ಧರಿಸಲಾಗಿದೆ.

ಲಾಕ್‌ಡೌನ್‌ ಮಧ್ಯೆಯೂ ಅಕ್ರಮ ಮದ್ಯ ಮಾರಾಟ: ಪ್ರಕರಣ ದಾಖಲು

ಲಾಕ್‌ಡೌನ್‌ ಸಂದರ್ಭದಲ್ಲಿ ಕದ್ದುಮುಚ್ಚಿ ಮದ್ಯದ ವ್ಯಾಪಾರದಲ್ಲಿ ತೊಡಗಿದ್ದ ಈಶ್ವರನಗರದಲ್ಲಿರುವ ಮೆ.ಓರಿಜಿನಲ್‌ ಬಾರ್‌ ರೆಸ್ಟೋರೆಂಟ್‌ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡಸಿ ಪ್ರಕರಣ ದಾಖಲು ದಾಖಲಿಸಿದ್ದಾರೆ.

click me!