ಎಲ್ಲರ ಕಂಪ್ಯೂಟರ್‌ ಮೇಲೆ ಕಣ್ಣು : ಹಿಂದಿನಿಂದಲೂ ಇತ್ತು

By Web DeskFirst Published Dec 23, 2018, 12:47 PM IST
Highlights

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ವೇಳೆ  ಪ್ರತಿ ತಿಂಗಳೂ ಸರಾಸರಿ 7500-9000 ಫೋನ್‌ ಕರೆಗಳು ಮತ್ತು 300-500 ಇ-ಮೇಲ್‌ಗಳ ಮೇಲೆ ನಿಗಾವಹಿಸಲು ಅನುಮತಿ ನೀಡಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ನವದೆಹಲಿ: ದೇಶದ ಯಾವುದೇ ಪ್ರಜೆಯ ಕಂಪ್ಯೂಟರ್‌ಗಳ ಮೇಲೆ ಕಣ್ಗಾವಲು ವಹಿಸಲು 10 ತನಿಖಾ ಸಂಸ್ಥೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮತಿ ನೀಡಿದ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದು ಜನಸಾಮಾನ್ಯರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದೆಲ್ಲಾ ಕಿಡಿಕಾರಿತ್ತು. 

ಆದರೆ ಈ ಹಿಂದೆ ತಾನು ಅಧಿಕಾರದಲ್ಲಿದ್ದ ವೇಳೆ ಇದೇ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ, ಪ್ರತಿ ತಿಂಗಳೂ ಸರಾಸರಿ 7500-9000 ಫೋನ್‌ ಕರೆಗಳು ಮತ್ತು 300-500 ಇ-ಮೇಲ್‌ಗಳ ಮೇಲೆ ನಿಗಾವಹಿಸಲು ಅನುಮತಿ ನೀಡಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 2013ರಲ್ಲಿ ಆರ್‌ಟಿಐ ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗೆ ಸ್ವತಃ ಯುಪಿಎ ಸರ್ಕಾರವೇ ಈ ಮಾಹಿತಿಯನ್ನು ನೀಡಿತ್ತು.

ಪ್ರಸೋನ್‌ಜಿತ್‌ ಮಂಡಲ್‌ ಎಂಬುವರ ಸಲ್ಲಿಸಿದ್ದ ಆರ್‌ಟಿಐಗೆ ನೀಡಲಾದ ಉತ್ತರವನ್ನು ಕೇಂದ್ರ ಗೃಹ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದೆ. 

ಅಲ್ಲದೆ, ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದಡಿ ಬರುವ ಗುಪ್ತಚರ ಸಂಸ್ಥೆ, ಜಾರಿ ನಿರ್ದೇಶನಾಲಯ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿ, ಸಿಬಿಐ, ಎನ್‌ಐಎ ಮತ್ತು ರಾ ಮತ್ತು ಪೊಲೀಸ್‌ ಕಮಿಷನ್‌ಗಳಿಗೆ ಈ ಮಾಹಿತಿಗಳ ಮೇಲೆ ನಿಗಾ ವಹಿಸುವ ಹಕ್ಕು ನೀಡಲಾಗಿತ್ತು ಎಂದು ಸಹ ಆರ್‌ಟಿಐ ಅರ್ಜಿಗೆ ಉತ್ತರಿಸಲಾಗಿದೆ.

click me!