ಕೊಡಗಿನಲ್ಲಿ ಸಿಹಿ ತಿಂಡಿಯಿಂದ ಎದುರಾಯ್ತು ವಿಘ್ನ, ಮಂಟಪದಲ್ಲೇ ಮುರಿದು ಬಿತ್ತು ಲಗ್ನ!

By Suvarna NewsFirst Published May 6, 2024, 3:52 PM IST
Highlights

ಭಾನುವಾರ ಅದ್ಧೂರಿ ಮದುವೆ, ಅದಕ್ಕೂ ಮೊದಲು ಅಂದರೆ ಶನಿವಾರ ರಾತ್ರಿ ಚಪ್ಪರ(ಮೆಹಂದಿ) ಜೊತೆಗೆ ನಿಶ್ಚಿತಾರ್ಥ. ಆದರೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿನ ಒಂದು ಸ್ವೀಟ್ ಮದುವೆಯನ್ನೇ ನಿಲ್ಲಿಸಿಬಿಟ್ಟಿದೆ.  ಕೊಡಗಿನಲ್ಲಿನ ಮುರಿದುಬಿದ್ದ ಈ ಮದುವೆಗೆ ಸ್ವೀಟ್ ಕಾರಣವಾಗಿದ್ದು ಹೇಗೆ?

ಸೋಮವಾರಪೇಟೆ(ಮೇ.06)  ವರದಕ್ಷಿಣೆ ಕಾರಣಕ್ಕೆ ಮದುವೆ ನಿಂತ ಘಟನೆ, ಕೊನೆಯ ಕ್ಷಣದಲ್ಲಿ ರಹಸ್ಯ ಮಾಹಿತಿಗಳು ಸೋರಿಕೆಯಾಗಿ ಮದುವೆ ನಿಂತಿರುವ ಉದಾಗರಣೆಗಳು ಸಾಕಷ್ಟಿವೆ. ಇತ್ತೀಚೆಗೆ ಊಟದ ವಿಚಾರದಲ್ಲಿ, ಆತಿಥ್ಯದ ವಿಚಾರದಲ್ಲಿ ಜಗಳ ಶುರುವಾಗಿ ಮದುವೆ ನಿಂತ ಘಟನೆಗಳು ಇವೆ. ಇದೀಗ ಕೇವಲ ಒಂದು ಸ್ವೀಟ್ ಸಿಗಲಿಲ್ಲ ಅನ್ನೋ ಕಾರಣಕ್ಕೆ ಮದುವೆ ಮುರಿದು ಬಿದ್ದ ಘಟನೆ ನಡೆದಿದೆ. ಕೊಡಗಿನ ಸೋಮವಾರಪೇಟೆಯಲ್ಲಿ ಆಯೋಜನೆಗೊಂಡಿದ್ದ ಮದುವೆ ಮುರಿದು ಬಿದ್ದಿತ್ತು, ಎರಡೂ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹೋರಾಟ ಶುರು ಮಾಡಿದ್ದಾರೆ.

ಸೋಮವಾರಪೇಟೆಯ ಹಾನಗಲ್ ಗ್ರಾಮದ ಯುವತಿಯ ಮದುವೆ ನಿಶ್ಚಯಗೊಂಡಿತ್ತು. ತುಮಕೂರಿನ ಹರ್ಷಿತ್ ನೊಂದಿಗೆ ಮೇ.05ರ( ಭಾನುವಾರ ) ಮದುವೆ ನಿಗದಿಯಾಗಿತ್ತು. ಜಾನಕಿ ಕನ್ವೆನ್ಷನ್ ಹಾಲ್‌ನಲ್ಲಿ ಎಲ್ಲಾ ತಯಾರಿಗಳು ನಡೆದಿತ್ತು. ಶನಿವಾರ(ಮೇ.04) ರಾತ್ರಿ ಮೆಹಂದಿ ಕಾರ್ಯಕ್ರಮದ ಜೊತೆಗೆ ಶುಭಮೂಹೂರ್ತಲ್ಲಿ ನಿಶ್ಚಿತಾರ್ಥ ಆಯೋಜಿಸಲಾಗಿತ್ತು.

ಬಲವಂತವಾಗಿ ಸ್ವೀಟ್ ತಿನ್ನಿಸಿದ ವರ, ಮುಖಕ್ಕೆ ಉಗುಳಿ, ಕಾಲಿನಿಂದ ತುಳಿದು ರಂಪಾಟ ಮಾಡಿದ ವಧು!

ಶನಿವಾರ ರಾತ್ರಿ ಮೆಹಂದಿ ಹಾಗೂ ನಿಶ್ಚಿತಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ವರನ ಕುಟುಂಬಸ್ಥರು ಸಂಜೆ 4 ಗಂಟೆ ಹೊತ್ತಿಗೆ ಮಂಟಪಕ್ಕೆ ಆಗಮಿಸಿದ್ದಾರೆ. ಆದರೆ 7 ಗಂಟೆ ನಂತರ ಕಾರ್ಯಕ್ರಮ ಕಾರಣ ವಧುವಿನ ಕುಟುಂಬಸ್ಥರು ತಡವಾಗಿ ಆಗಮಿಸಿದ್ದಾರೆ. ಇದು ಹುಡುಗನ ಕುಟುಂಬಸ್ಥರ ಪಿತ್ತ ನೆತ್ತಿಗೇರಿಸಿದೆ. ವರ ಹಾಗೂ ಕುಟುಂಬಸ್ಥರು ಆಗಮಿಸಿದರೂ ಸ್ವಾಗತಿಸಲು ಹುಡುಗಿ ಕುಟುಂಬಸ್ಥರು ಇರಲಿಲ್ಲ. ಹುಡುಗನ ಕುಟುಂಬಸ್ಥರನ್ನೇ ಕಾಯಿಸಿದ್ದಾರೆ ಅನ್ನೋ ಕಾರಣದಲ್ಲಿ ಮುಸುಕಿನ ಗುದ್ದಾಟ ನಡೆದಿತ್ತು.

ನಿಶ್ಚಿತಾರ್ಥ ಸಮಯದಲ್ಲಿ ವರನ ಸ್ನೇಹಿತರಿಗೆ ಸ್ವೀಟ್ ಸಿಗಲಿಲ್ಲ ಅನ್ನೋ ಕಾರಣವನ್ನು ತೆಗೆದ ಜಗಳ ಶುರುವಾಗಿದೆ. ವರ ಹಾಗೂ ವಧುವಿನ ಕುಟಂಬಸ್ಥರು ನಡುವೆ ತೀವ್ರ ವಾಗ್ವಾದ ಶುರುವಾಗಿದೆ. ನಮಗೆ ಈ ಮದುವೆ ಬೇಡ ಎಂದು ಹುಡುಗನ ಕುಟುಂಬಸ್ಥರ ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಮರುದಿನ ನಡೆಯಬೇಕಿದ್ದ ಮದುವೆ ಕೇವಲ ಒಂದು ಸ್ವೀಟ್ ಕಾರಣಕ್ಕೆ ಮುರಿದು ಬಿದ್ದಿದೆ.

ಗಂಡನೂ ಬೇಡ, ಈ ಮದ್ವೆನೂ ಬೇಡ; ವಜ್ರದ ನೆಕ್ಲೇಸ್ ಕದ್ದು ಪ್ರೇಮಿಯೊಂದಿಗೆ ನವವಧು ಪರಾರಿ!

ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದ್ದಕ್ಕಿದ್ದಂತೆ ರದ್ದು ಮಾಡಿದರೆ ಹುಡುಗಿಯ ಭವಿಷ್ಯವೇನು? ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಮತ್ತೆ ಜಗಳ ತಾರಕಕ್ಕೇರಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟೇಲೇರಿದೆ. ಮದುವೆ ನಿಂತು ನಮ್ಮ ಮರ್ಯಾದೆ ಹೋಗಿದೆ. ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಈ ಎಲ್ಲಾ ನಷ್ಟ ವರನ ಕುಟುಂಬದವರು ತುಂಬಿಕೊಡುವಂತೆ ವಧುವಿನ ಕುಟುಂಬಸ್ಥರಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಆದರೆ ವರನ ಕುಟುಂಬಸ್ಥರು ರಾಜಕೀಯ ಬೆಂಬಲದ ಕಾರಣ ಪೊಲೀಸರು ಸರಿಯಾಗಿ ದೂರು ಸ್ವೀಕರಿಸಿಲ್ಲ. ದೂರಿನಲ್ಲಿ ಆರೋಪಗಳನ್ನು ಬದಲಿಸಲಾಗಿದೆ ಎಂದು ಹುಡುಗಿ ಕುಟುಂಬಸ್ಥರು ನ್ಯಾಯ ಕೇಳಿ ಮಾಧ್ಯಮದ ಮುಂದೆ ನಡೆದ ಘಟನೆ ವಿವರಿಸಿದ್ದಾರೆ.
 
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಹರ್ಷಿತ್, ಮ್ಯಾಟ್ರಿಮೋನಿಯಲ್ಲಿ ಹುಡುಗಿಯ ಪರಿಚಯವಾಗಿ ಮದುವೆ ಪ್ರಪೋಸಲ್ ನೀಡಲಾಗಿತ್ತು. ಆದರೆ ಈ ಮದುವೆ ಇದೀಗ ಮುರಿದುಬಿದ್ದಿದೆ.
 

click me!