ಕುಮಾರಸ್ವಾಮಿ ತಾಜ್‌ವೆಸ್ಟ್‌ಎಂಡ್‌ಗೆ ಹೋಗುವ ಗುಟ್ಟು ಬಯಲು ಮಾಡಿದ ಅನಿತಾ

By Web Desk  |  First Published Nov 28, 2018, 8:45 PM IST

ನೂತನ ಶಾಸಕಿ ಅನಿತಾ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಸರಿಯಾದ ತಿರುಗೇಟು ನೀಡಿದ್ದಾರೆ. ಮನೆ ಬಿಟ್ಟು ಕುಮಾರಸ್ವಾಮಿ ಹೊಟೆಲ್‌ನಲ್ಲಿ ಉಳಿದುಕೊಳ್ಳುತ್ತಾರೆ ಎಂಬ ವಿಚಾರಕ್ಕೆ ಅನಿತಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Ramanagara MLA Anitha Kumaraswamy slams BJP Leader

ರಾಮನಗರ[ನ.28]  ಸಿಎಂ ಕುಮಾರಸ್ವಾಮಿ ಹಾಗೂ ಕುಟುಂಬದವರು ವಿಧಾನಸೌಧ ಬಿಟ್ಟು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ರೆಸ್ಟ್ ಮಾಡ್ತಾರೆ ಎಂದು ಬಿಜೆಪಿ ನಾಯಕರು ಆರೋಪಕ್ಕೆ ರಾಮನಗರದಲ್ಲಿ ಶಾಸಕಿ ಅನಿತಾಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ನಮ್ಮ ಮನೆ ಇರೋದು ಜೆಪಿ ನಗರದಲ್ಲಿ, ಕುಮಾರಸ್ವಾಮಿಯವರು ಕೆಲವೊಮ್ಮೆ ಕಾರ್ಯ ನಿಮಿತ್ತ ಬ್ಯುಸಿ ಇದ್ದಾಗ ತಾಜ್ ವೆಸ್ಟ್ ಎಂಡ್  ಕಡೆ ಇದ್ದಾಗ ಅಲ್ಲಿ ಹೋಗ್ತಾರೆ ಅಷ್ಟೇ. ಮನೆಗೆ ಬಂದು ಊಟ ಮಾಡಿ ಮತ್ತೆ ವಿಧಾನಸೌಧಕ್ಕೆ ಹೋಗಲು ತಡವಾಗುತ್ತೆ. ಹಾಗಾಗಿ ಕೆಲವೊಮ್ಮೆ ಅಲ್ಲಿಗೆ ಹೋಗಬಹುದು ಅಷ್ಟೇ, ಅದನ್ನ ಬಿಟ್ಟು ಅವರು ದಿನನಿತ್ಯ ಅಲ್ಲೇ ಇರೋದಿಲ್ಲ ಎಂದು ಹೇಳಿದ್ದಾರೆ.

Tap to resize

Latest Videos

ಅಧಿವೇಶನದ ಬಳಿಕ ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ! ಶುದ್ಧ ಸುಳ್ಳು

ಅಯ್ಯೋ ದೇವರೇ, ಇನ್ನು ನಾನಾಗಲಿ, ನನ್ನ ಮಗನಾಗಲಿ ಅಲ್ಲಿಗೆ ಹೋಗಲ್ಲ. ಇದೆಲ್ಲವನ್ನ ಕೆಲವರು ಸುಳ್ಳು ಅಪಪ್ರಚಾರ ಮಾಡ್ತಿದ್ದಾರೆ ಅಷ್ಟೇ ಬಿಡಿ ಎಂದು ಬಿಜೆಪಿ ಮಾಯಕರ ಮೇಲೆ ಅನಿತಾ ರೇಗಿದ್ದಾರೆ.

ನೂತನ ಶಾಸಕಿ ಅನಿತಾ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಸರಿಯಾದ ತಿರುಗೇಟು ನೀಡಿದ್ದಾರೆ. ಮನೆ ಬಿಟ್ಟು ಕುಮಾರಸ್ವಾಮಿ ಹೊಟೆಲ್‌ನಲ್ಲಿ ಉಳಿದುಕೊಳ್ಳುತ್ತಾರೆ ಎಂಬ ವಿಚಾರಕ್ಕೆ ಅನಿತಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

vuukle one pixel image
click me!
vuukle one pixel image vuukle one pixel image