ಎನ್.ಟಿ.ಆರ್‌ಗೆ ಬಸವತಾರಕಮ್ಮ ಜೊತೆ 1943ರಲ್ಲಿ ಮದುವೆ ಆಯಿತು. ಅವರಿಗೆ 12 ಮಕ್ಕಳು. ಅದರಲ್ಲಿ ಎಂಟು ಜನ ಗಂಡು ಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳು. ಬಾಲಕೃಷ್ಣ, ಹರಿಕೃಷ್ಣ, ಪುರಂದೇಶ್ವರಿ, ಭುವನೇಶ್ವರಿ (ಚಂದ್ರಬಾಬು ನಾಯ್ಡು ಪತ್ನಿ) ಪ್ರಸಿದ್ಧರಾದರು.
ಉಳಿದವರೆಲ್ಲ ತೆರೆಮರೆಯಲ್ಲೇ ಇದ್ದರು. 1985ರಲ್ಲಿ ಬಸವತಾರಕಮ್ಮ ಕ್ಯಾನ್ಸರ್‌ನಿಂದ ನಿಧನರಾದರು. ಅವರ ನೆನಪಿಗಾಗಿ, ಕ್ಯಾನ್ಸರ್‌ನಿಂದ ಯಾರೂ ಸಾಯಬಾರದೆಂದು ಬಸವತಾರಕಂ ಇಂಡೋ ಅಮೇರಿಕನ್ ಕ್ಯಾನ್ಸರ್ ಆಸ್ಪತ್ರೆಯನ್ನು ಎನ್.ಟಿ.ಆರ್ ಸ್ಥಾಪಿಸಿದರು.