'ರುದ್ರ ಗರುಡ ಪುರಾಣ' ಟ್ರೇಲರ್ ಮೆಚ್ಚಿದ ನಟ ಡಾಲಿ ಧನಂಜಯ್: ಪುನರ್ಜನ್ಮದ ಕಥೆ ಹೇಳಲು 'ಬಂಡೆಕವಿ' ಆಗಮನ!

'ರುದ್ರ ಗರುಡ ಪುರಾಣ' ಟ್ರೇಲರ್ ಮೆಚ್ಚಿದ ನಟ ಡಾಲಿ ಧನಂಜಯ್: ಪುನರ್ಜನ್ಮದ ಕಥೆ ಹೇಳಲು 'ಬಂಡೆಕವಿ' ಆಗಮನ!

Published : Jan 18, 2025, 04:32 PM IST

ರಿಷಿ ನಾಯಕರಾಗಿ ನಟಿಸಿರುವ "ರುದ್ರ ಗರುಡ ಪುರಾಣ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ್ ಸಿನಿಮಾದ ಟ್ರೈಲರ್​ ಮೆಚ್ಚಿ ಬಿಡುಗಡೆ ಮಾಡಿದ್ದಾರೆ.
 

ವರಮಹಾಲಕ್ಷ್ಮಿ ಮೂವೀಸ್ ಬ್ಯಾನರ್ ನ ಅಡಿಯಲ್ಲಿ ಸಿ.ಜಿ.ಗಂಗರಾಜು ದಿಬ್ಬೂರು ಹಾಗೂ ಮೇಕೆ ಶಿವು ನಿರ್ಮಿಸುತ್ತಿರುವ,  ಶ್ರೀರಜನಿ ಪರಿಸರ ಪ್ರೇಮಿ ನಿರ್ದೇಶನದ ಹಾಗೂ ಮೋಹನ್ ಕುಮಾರ್ ನಾಯಕರಾಗಿ ನಟಿಸುತ್ತಿರುವ "ಬಂಡೆಕವಿ" ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ವರಮಹಾಲಕ್ಷ್ಮೀ ಆರಂಭ ಫಲಕ ತೋರಿದರು. ರವಿಶಂಕರ್ ರೆಡ್ಡಿ ಆರ್ ಅವರು ಕ್ಯಾಮರಾ ಚಾಲನೆ ಮಾಡಿ ಶುಭ ಹಾರೈಸಿದರು. ನಾಗೇಂದ್ರ ಅರಸ್ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರುದ್ರ ಗರುಡ ಪುರಾಣ ಟ್ರೇಲರ್ ಮೆಚ್ಚಿದ ನಟ ಡಾಲಿ ಧನಂಜಯ್: ರಿಷಿ ನಾಯಕರಾಗಿ ನಟಿಸಿರುವ "ರುದ್ರ ಗರುಡ ಪುರಾಣ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ್ ಸಿನಿಮಾದ ಟ್ರೈಲರ್​ ಮೆಚ್ಚಿ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದು, ನಿರ್ದೇಶಕ ನಂದೀಶ್ ಆಕ್ಷನ್ ಕಟ್ ಹೇಳಿದ್ದಾರೆ. ಜನವರಿ 24ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಆ್ಯಕ್ಷನ್ ಅವತಾರದಲ್ಲಿ ಗಮನ ಸೆಳೆದ ಅಜಿತ್: ಅಜಿತ್ ಕುಮಾರ್ ನಟನೆಯ ‘ವಿದಾಮುಯರ್ಚಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳು ಮತ್ತು ಅಜಿತ್ ಅವರ ಎರಡು ವಿಭಿನ್ನ ಲುಕ್ಗಳು ಟ್ರೇಲರ್ನ ಹೈಲೈಟ್ ಆಗಿದೆ. ಫೆಬ್ರವರಿ 6 ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

"ಮಾಂಕ್ ದಿ ಯಂಗ್" ಚಿತ್ರದ  "ಮಾಯೆ" ಹಾಡು ಬಿಡುಗಡೆ: ವಿಭಿನ್ನ ಕಥಾಹಂದರ ಹೊಂದಿರುವ "ಮಾಂಕ್ ದಿ ಯಂಗ್" ಚಿತ್ರದಿಂದ "ಮಾಯೆ" ಎಂಬ ಮನಮೋಹಕ ಹಾಡು ಬಿಡುಗಡೆ ಆಗಿದೆ. ಪ್ರತಾಪ್ ಭಟ್ ಬರೆದಿರುವ ಈ ಹಾಡನ್ನು ಸಿರಿ ಕಟ್ಟೆ ಹಾಡಿದ್ದಾರೆ. ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ. "ಮಾಂಕ್ ದಿ ಯಂಗ್" ವಿಂಟೇಜ್ ಫ್ಯಾಂಟಸಿ ಜಾನರ್ ನ ಕಥಾಹಂದರ ಹೊಂದಿರುವ ಚಿತ್ರ. ಮಾಸ್ಚಿತ್ ಸೂರ್ಯ ನಿರ್ದೇಶನ ಮಾಡಿದ್ದಾರೆ.  ಸರೋವರ್ ನಾಯಕನಾಗಿದ್ದು, ನಾಯಕಿಯಾಗಿ ಸೌಂದರ್ಯ ಗೌಡ ಅಭಿನಯಿಸಿದ್ದಾರೆ. 

ಸಂಸದ ತೇಜಸ್ವಿ ಸೂರ್ಯ ಮೆಚ್ಚಿದ ದೇಶಪ್ರೇಮದ ಕಥೆ: ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ "ಹೈನ" ಚಿತ್ರದ ಟ್ರೈಲರ್​ ರಿಲೀಸ್ ಆಗಿದೆ. ಸಂಸದ ತೇಜಸ್ವಿ ಸೂರ್ಯ ಈ ಸಿನಿಮಾದ ಟ್ರೈಲರ್​ ರಿಲೀಸ್ ಮಾಡಿದ್ದಾರೆ. ಇದೊಂದು ರಾಷ್ಟ್ರಭಕ್ತಿಯ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ತಾರಾಬಳಗದಲ್ಲಿ ಹರ್ಷ ಅರ್ಜುನ್, ದಿಗಂತ ಸ್ವರೂಪ, ರಾಜ್ ಕಮಲ್, ಲಕ್ಷ್ಮಣ ಶಿವಶಂಕರ್, ನಂದಕಿಶೋರ್ ಮತ್ತು ಲಾರೆನ್ಸ್ ಪ್ರೀತಂ ಅಭಿನಯಿಸಿದ್ದಾರೆ. 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more