ಅಧಿವೇಶನದ ಬಳಿಕ ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ! ಶುದ್ಧ ಸುಳ್ಳು

ರಾಜ್ಯ ಮಾತ್ರ ಅಲ್ಲ ದೇಶದ ರಾಜಕಾರಣವನ್ನೇ ಬೆಚ್ಚಿ ಬೀಳಿಸುವ ಸುದ್ದಿ ಬುಧವಾರ ಸಂಜೆಯಿಂದ ಹರಿದಾಡುತ್ತಿತ್ತು. ಬೆಳಗಾವಿಯ ಚಳಿಗಾಲದ ಅಧಿವೇಶನದ ನಂತರ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸಿಎಂ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ.

 

Karnataka CM HD Kumaraswamy May Resign From His Post After Belagavi session Rumours

ಬೆಂಗಳೂರು[ನ.28] ಕುಮಾರಸ್ವಾಮಿ ನಿರಂತರ ಅನಾರೋಗ್ಯ ಕಾಡುತ್ತಿದ್ದು ಈ ಹಿಂದೆಯೂ ಹಲವು ಬಾರಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಬಿತ್ತರವಾದ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಯಾವುದೇ ಆಧಾರ ಅದಕ್ಕೆ ಇರುವುದಿಲ್ಲ ಎಂದು  ಸ್ಪಷ್ಟಪಡಿಸಲಾಗಿದೆ,

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಕುಮಾರಸ್ವಾಮಿ ಲೈಫೋ ಸೆಕ್ಷನ್ ಸರ್ಜರಿಗಾಗಿ 3 ತಿಂಗಳುಗಳ ಕಾಲ ಲಂಡನ್‌ಗೆ ತೆರಳುವ ಸಾಧ್ಯತೆ ಹೆಚ್ಚಿದೆ.  ಲೈಫೋ ಸೆಕ್ಷನ್ ಸರ್ಜರಿ ಬೊಜ್ಜು ಕರಗಿಸುವ ವಿಧಾನವಾಗಿದ್ದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕುಮಾರಸ್ವಾಮಿಗೆ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿತ್ತು.

ಮಾಲೀಕರಿಲ್ಲದ ಸಭೆಯಲ್ಲಿ ದೊರೆ ತೀರ್ಮಾನ, ರೈತರಿಗೆ ಅಂತಿಮವಾಗಿ ಸಿಕ್ಕಿದ್ದೇನು?

ಈ ಹಿಂದೆ ಕೂಡ ಕುಮಾರಸ್ವಾಮಿ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅದರಂತೆ ಮತ್ತೊಮ್ಮೆ ಶಸ್ತ್ರ ಚಿಕಿತ್ಸೆಗೆ ಒಳಗಾದರೆ ಸಿಎಂ ಜವಾಬ್ದಾರಿ ನಿರ್ವಹಿಸುವುದು ಕುಮಾರಸ್ವಾಮಿಗೆ ಕಷ್ಟ ಸಾಧ್ಯವಾಗಲಿದೆ.  ಈ ಎಲ್ಲ ಬೆಳವಣಿಗೆಗಳ ಆಧಾರದ ಮೇಲೆ  ಬೆಳಗಾವಿಯ ಚಳಿಗಾಲದ ಅಧಿವೇಶನದ ನಂತರ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವದಂತಿಗಳು ಹರಿದಾಡಿದ್ದವು. ಆದರೆ ಇದೆಲ್ಲದಕ್ಕೆ ಸಿಎಂ ವಾಟ್ಸಪ್ ನ್ಯೂಸ್ ಗ್ರೂಪ್‌ನಲ್ಲಿ ಅಧಿಕೃತ ಸ್ಪಷ್ಟೀಕರಣ ನೀಡಲಾಗಿದೆ.

 

 

Latest Videos
Follow Us:
Download App:
  • android
  • ios