BSY ಜೊತೆ ಮೋದಿ ಮೀಟಿಂಗ್, ಪಕ್ಕದ ರಾಜ್ಯದಲ್ಲಿ ಸುದೀಪ್ ಶೂಟಿಂಗ್; ಜೂ.13ರ ಟಾಪ್ 10 ಸುದ್ದಿ!

By Suvarna NewsFirst Published Jun 13, 2020, 4:59 PM IST
Highlights

ಕೊರೋನಾ ವೈರಸ್‌ನಿಂದ ಹೈರಾಣಾಗಿರುವ ಜನತೆಗೆ ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬರೆ ಬಿದ್ದಿದೆ. ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ ಭಾಗವೆಂದ ಇಬ್ಬರು  ಪತ್ರಕರ್ತರನ್ನು ಪಾಕಿಸ್ತಾನ ಕೆಲಸದಿಂದ ವಜಾ ಮಾಡಿದೆ. ಪಕ್ಕದ ರಾಜ್ಯದಲ್ಲಿ ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಕೊರೋನಾ ವೈರಸ್ ಕಾರಣ ಪೊಲೀಸ್ ಕಾನ್ಸ್‌ಸ್ಟೇಬರ್ ಹುದ್ದ ಅರ್ಜಿ ಸಲ್ಲಿಕೆ ಅವದಿ ವಿಸ್ತರಿಸಲಾಗಿದೆ. ಬಿಎಸ್ ಯಡಿಯೂರಪ್ಪ ಜೊತೆ ಪ್ರಧಾನಿ ಮೋದಿ ಸಂವಾದ, ನದಿಯೊಳಗೆ ವಿಷ್ಣು ದೇವಸ್ಥಾನ ಪ್ರತ್ಯಕ್ಷ ಸೇರಿದಂತೆ ಜೂನ್ 13ರ ಟಾಪ್ 10 ಸುದ್ದಿ ಇಲ್ಲಿವೆ.

4 ಮದುವೆ, 13 ಯುವತಿಯರೊಂದಿಗೆ ಪ್ರೇಮದಾಟ: ಪೊಲೀಸರ ಬಲೆಗೆ ಬಿದ್ದ ಚಾಲಾಕಿ!

ಬ್ಯಾಡರಹಳ್ಳಿ ಪೊಲೀಸರ ಬಲೆಗೆ ಬಿದ್ದ‌ ಆರೋಪಿ ಸುರೇಶ್ ಎಂಬಾತನ ಕಾಮಪುರಾಣ ಸದ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಯುವತಿಯರೊಂದಿಗೆ ಪ್ರೇಮದಾಟವಾಡಿದ್ದಲ್ಲದೇ, ನಿರುದ್ಯೋಗ ಯುವಕರನ್ನೂ ಬಲೆಗೆ ಬಿಳಿಸಿ ಲಕ್ಷ ಲಕ್ಷ ಹಣ ಪೀಕುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. 

ಭಾರತಕ್ಕೆ ಕಾಶ್ಮೀರ ಸೇರಿಸಿದ ಇಬ್ಬರು ಪತ್ರಕರ್ತರ ಮನೆಗೆ ಕಳಿಸಿದ ಪಾಕ್!...

ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ ಭಾಗವೆಂದು ಇರುವ ಭೂಪಟವನ್ನು ಪ್ರಸಾರ ಮಾಡಿದಕ್ಕಾಗಿ ಇಬ್ಬರು ಪತ್ರಕರ್ತರನ್ನು ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ ಟೀವಿ ಕೆಲಸದಿಂದ ವಜಾ ಮಾಡಿದೆ.

Breaking: ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೊರೋನಾ ಪಾಸಿಟಿವ್..!

ಪಾಕಿಸ್ತಾನದ ಮಾಜಿ ನಾಯಕ ಶಾಹಿದಿ ಅಫ್ರಿದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅಫ್ರಿದಿಯೇ ಖಚಿತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಒಂದೆಡೆ ಕೊರೊನಾ ಕಾಟ, ಇನ್ನೊಂದೆಡೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ: ಗ್ರಾಹಕ ತತ್ತರ

ಒಂದು ಕಡೆ ಕೊರೊನಾ ಕಾಟದಿಂದ ಲಾಕ್‌ಡೌನ್‌ನಿಂದ ಜನ ಬೇಸತ್ತಿದ್ದರೆ ಇನ್ನೊಂದು ಕಡೆ ತೈಲ ದರ ಏರಿಕೆಯಾಗಿದ್ದು ಗ್ರಾಹಕರಿಗೆ ಬರೆ ಬಿದ್ದಿದೆ. ಪೆಟ್ರೋಲ್ 77.59 ರೂ ಆದರೆ ಡೀಸೆಲ್ 69.78 ರೂ ಆಗಿದೆ.  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದಾಗ ಸರ್ಕಾರ ಅಬಕಾರಿ ಸುಂಕ ಏರಿಸುವ ಮೂಲಕ ಗ್ರಾಹಕರಿಗೆ ವರ್ಗಾವಣೆ ಆಗದಂತೆ ತಡೆದಿತ್ತು. 

ಜೂ. 17 ರಂದು ಬಿಎಸ್‌ವೈ ಜೊತೆ ಮೋದಿ ಸಂವಾದ; ಇನ್‌ಸೈಡ್ ಪಾಲಿಟಿಕ್ಸ್‌ ಇದು!

ಲಾಕ್‌ಡೌನ್‌ ತೆರವು ನಂತರದ ಪರಿಸ್ಥಿತಿಯ ಅವಲೋಕನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇದೇ 16, 17ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್‌ ನಡೆಸಲಿದ್ದಾರೆ. 17ರ ಮಧ್ಯಾಹ್ನ 3ಕ್ಕೆ ನಡೆಯುವ ಸಭೆಯಲ್ಲಿ ಕರ್ನಾಟಕ ಸಿಎಂ ಬಿಎಸ್‌ವೈ ಪಾಲ್ಗೊಳ್ಳಲಿದ್ದಾರೆ.


ಕನ್ನಡ ಸಿನಿ ಶೂಟಿಂಗ್‌ ಹೈದ್ರಾಬಾದ್‌ಗೆ ಶಿಫ್ಟ್; ಸುದೀಪ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್..!...

ಕರ್ನಾಟಕದಲ್ಲಿ ಸಿನಿಮಾ ಶೂಟಿಂಗ್‌ಗೆ ಅನುಮತಿ ಇಲ್ಲದಿರುವುದರಿಂದ ಪಕ್ಕದ ರಾಜ್ಯಗಳಾದ ಆಂಧ್ರ ಹಾಗೂ ತೆಲಂಗಾಣದಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದು, ಕನ್ನಡ ಚಿತ್ರರಂಗವೀಗ ನೆರೆ ರಾಜ್ಯಗಳಲ್ಲಿ ಶೂಟಿಂಗ್‌ ನಡೆಸಲು ಸಜ್ಜಾಗಿದೆ.

ನಿಖಿಲ್‌ ಕುಮಾರಸ್ವಾಮಿ ಪತ್ನಿ ಜತೆ ಅಪ್ಲೋಡ್‌ ಮಾಡೋ ಫೋಟೋಸ್ ವೈರಲ್ ಆಗೋದೇಕೆ?.

ಕಳೆದ ಏಪ್ರಿಲ್‌ನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಸಕ್ರಿಯರಾಗಿದ್ದಾರೆ. ಅದರಲ್ಲೂ ಪತ್ನಿ ರೇವತಿ ಜತೆ ಅಪ್ಲೋಡ್‌ ಮಾಡುವ ಪ್ರತಿಯೊಂದೂ ಫೋಟೋಗಳು ತುಂಬಾ ವೈರಲ್ ಆಗುತ್ತವೆ....

7 ಸೀಟರ್ ಹ್ಯುಂಡೈ ಕ್ರೆಟಾ ರೋಡ್ ಟೆಸ್ಟ್ ಯಶಸ್ವಿ; ಶೀಘ್ರದಲ್ಲಿ ಬಿಡುಗಡೆ!...

ಭಾರತದಲ್ಲಿನ ಬೇಡಿಕೆಗೆ ಅನುಗುಣವಾಗಿ ಕಾರುಗಳ ಉತ್ಪಾದನೆಯಾಗುತ್ತಿದೆ. ಕೊರೋನಾ ವೈರಸ್ ಕಾರಣ ತಾತ್ಕಾಲಿಕ ಬ್ರೇಕ್ ಬಿದ್ದಿದ್ದರೂ, SUV ಕಾರುಗಳ ಬೇಡಿಕೆ ಕುಗ್ಗಿಲ್ಲ. ಇದೀಗ ಬಹುತೇಕ ಎಲ್ಲಾ ಆಟೋಮೇಕರ್‌ಗಳು ಭಾರತದಲ್ಲ ಹೊಸ ಹೊಸ ಮಾಡೆಲ್ SUV ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇತ್ತ ಹ್ಯುಂಡೈ ತನ್ನ ಯಶಸ್ವಿ SUV ಕಾರಾದ ಕ್ರೆಟಾವನ್ನು ಹೊಸ ರೂಪಜಲ್ಲಿ ಬಿಡುಗಡೆ ಮಾಡುತ್ತಿದೆ.

ಕೊರೋನಾ ಹಾಗೂ ಲಾಕ್‌ಡೌನ್‌ನಿಂದಾಗಿ 2020-21ನೇ ಸಾಲಿನ ಪೊಲೀಸ್‌ ಕಾನ್ಸ್‌ಟೇಬಲ್‌ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿಲಾಗಿದ್ದು, ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ರರಿಸಲಾಗಿದೆ.

ನದಿಯೊಳಗಿಂದ ಅಚಾನಕ್ಕಾಗಿ ಪ್ರತ್ಯಕ್ಷವಾಯ್ತು 500 ವರ್ಷ ಹಳೆಯ ವಿಷ್ಣು ದೇವಸ್ಥಾನ!

​​​​​​​

ಒಡಿಶಾದ ನಯಾಗಢದ  ಪದ್ಮಾವತಿ ನದಿ ಆಸು ಪಾಸಿನ ಜನರೆಲ್ಲಾ, ಇದ್ದಕ್ಕಿದ್ದಂತೆ ಐನೂರು ವರ್ಷ ಹಳೆಯ ವಿಷ್ಣು ದೇಗುಲವೊಂದು ಇದ್ದಕ್ಕಿದ್ದಂತೆ ನೀರಿನೊಳಗೆ ಪ್ರತ್ಯಕ್ಷವಾದುದನ್ನು ಕಂಡು ಅಚ್ಚರಿಗೀಡಾಗಿದ್ದಾರೆ.

click me!