2ನೇ ಹಂತದ ಆರ್ಥಿಕ ಪ್ಯಾಕೇಜ್ ಪ್ರಕಟ, ಸರ್ಕಾರಕ್ಕೆ ಐಡಿಯಾ ಕೊಟ್ಟ ಹುಚ್ಚ ವೆಂಕಟ; ಮೇ.14ರ ಟಾಪ್ 10 ಸುದ್ದಿ!

By Suvarna NewsFirst Published May 14, 2020, 6:04 PM IST
Highlights

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಪ್ರಕಟಿಸಲಾಗಿರುವ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಕುರಿತ 2ನೇ ಹಂತದ ವಿವರಣೆಯನ್ನು ನಿರ್ಮಲಾ ಸೀತಾರಾಮನ್ ನೀಡಿದ್ದಾರೆ. ಇತ್ತ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ 600 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆಗೆ ತಯಾರಿ ನಡೆಸಿದ್ದಾರೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಭಯಾನಕ ಎಚ್ಚರಿಕೆ ನೀಡಿದೆ. ಮಲೈಕಾ ಆರೋರ ಬೆಡ್ ಸೀಕ್ರೆಟ್, ಕೊರೋನಾ ನಿಯಂತ್ರಣಕ್ಕೆ ಹುಚ್ಚ ವೆಂಕಟ್ ಐಡಿಯಾ ಸೇರಿದಂತೆ ಮೇ.14ರ ಟಾಪ್ 10 ಸುದ್ದಿ ಇಲ್ಲಿವೆ.

 

ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳಲು ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಇದೀಗ ಮೊತ್ತವನ್ನು ವಿವಿಧ ಕ್ಷೇತ್ರಗಳಿಗೆ ಹಂಚಲಾಗಿದೆ. ಯಾವ ಕ್ಷೇತ್ರಕ್ಕೆ ಎಷ್ಟು ಹಣ ನೀಡಲಾಗುತ್ತಿದೆ ಅನ್ನೋ ವಿವರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.


ಲಾಕ್ ಡೌನ್ ಸಡಿಲಿಕೆಗೆ ವೇಳೆ WHO ಕೊಟ್ಟ ಭಯಾನಕ ಎಚ್ಚರಿಕೆ!

 ಕೊರೋನಾ ಮಹಾಮಾರಿ ಈ ಜಗತ್ತನ್ನು ಬಿಟ್ಟು ಹೊರಡುವುದಿಲ್ಲ. ಎಚ್‌ಐವಿಯಂತೆ  ಶಾಶ್ವತವಾಗಿ ನೆಲೆಯೂರಲಿದೆ ಎಂಬ ಎಚ್ಚರಿಕೆಯನ್ನು ವಿಶ್ವ  ಆರೋಗ್ಯ ಸಂಸ್ಥೆ ನೀಡಿದೆ. ವಿಶ್ವದ ಎಲ್ಲ ರಾಷ್ಟ್ರಗಳು ಅರ್ಥ ವ್ಯವಸ್ಥೆಯನ್ನು ಸರಿದೂಗಿಸಲು ಹೆಣಗಾಡುತ್ತಿರುವ ಸಂದರ್ಭ ಇಂಥದ್ದೊಂದು ಹೇಳಿಕೆ ಹೊರಬಂದಿದೆ. 

ಲಾಕ್‌ಡೌನ್:‌ ಕೆಲಸ ಕಳೆದುಕೊಂಡವರಿಗಾಗಿ ಹೊಸ ಪ್ರಯತ್ನ, ನೋಂದಣಿ ಆರಂಭ

ಕೋವಿಡ್‌ -19 ತಡೆ​ಗ​ಟ್ಟಲು ಲಾಕ್‌ ಡೌನ್‌ ಜಾರಿ​ಯಾದ ನಂತರ ಮುಂದಿನ ಜೀವನ ಹಾಗೂ ಉದ್ಯೋಗದ ಬಗ್ಗೆ ಚಿಂತಿ​ಸು​ತ್ತಿ​ರುವ ಕಾರ್ಮಿ​ಕ​ರಿಗೆ ಉದ್ಯೋಗ ಕಲ್ಪಿ​ಸುವ ನಿಟ್ಟಿ​ನಲ್ಲಿ ಜಿಲ್ಲಾ​ಡ​ಳಿತ ನೋಂದಣಿ ಮಾಡಿ​ಕೊ​ಳ್ಳುವ ಮೂಲಕ ವಿನೂ​ತನ ಪ್ರಯ​ತ್ನಕ್ಕೆ ಮುಂದಾ​ಗಿದೆ.

ರೈಲು ಸೇವೆ ರದ್ದು: ಜೂನ್ 30ರವರೆಗಿನ ಎಲ್ಲಾ ಟಿಕೆಟ್ ಕ್ಯಾನ್ಸಲ್!

ಕೊರೋನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಪ್ರಯಾಣಿಕ ರೈಲು ಸೇವೆಯನ್ನು ಜೂನ್ 30ರವರೆಗೆ ರದ್ದುಗೊಳಿಸಿದೆ.  ಇದರ ಅನ್ವಯ ಈಗಾಗಲೇ ಮುಂಗಡವಾಗಿ ಕಾಯ್ದರಿಸಿದ ಎಲ್ಲ ಪ್ರಯಾಣಿಕ ರೈಲು ಟಿಕೆಟ್‌ಗಳನ್ನು ಇಲಾಖೆ  ಕ್ಯಾನ್ಸಲ್ ಮಾಡಿದೆ. 

ರಾಜ್ಯಕ್ಕೆ ಬಿಎಸ್‌ವೈ 600 ಕೋಟಿ ಘೋಷಣೆ..? ಯಾರ್ಯಾರಿಗೆ ನೆರವು..?

ಕೊರೋನಾ ವೈರಸ್‌ ವ್ಯಾಪಿಸಿ ಲಾಕ್‌ಡೌನ್‌ನಿಂದಾಗಿ ಜನರ ಸಂಕಷ್ಟ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ತನ್ನ ಸಹಾಯ ಹಸ್ತ ಚಾಚಿದೆ. ಮೊನ್ನೆ ಮೋದಿ ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ ಇದೀಗ ಯಡಿಯೂರಪ್ಪ ಅವರು ಎರಡನೇ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆ ಇದೆ. 

45 ವರ್ಷದ ಮಲೈಕಾ ಅರೋರಾ ಬೆಡ್‌ರೂಮ್‌ ಸಿಕ್ರೇಟ್‌ ರಿವೀಲ್!

ಬಾಲಿವುಡ್‌ನ ಹಾಟ್‌ ಆಂಡ್‌ ಬೋಲ್ಡ್‌ ನಟಿ ಮಲೈಕಾ ಅರೋರಾ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಪತಿ ಅರ್ಬಾಜ್‌ ಖಾನ್‌ನಿಂದ ಬೇರೆಯಾಗಿ ನಟ ಅರ್ಜುನ್‌ ಕಪೂರ್‌ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಮಲೈಕಾ. ವರ್ಷ45 ಆದರೂ ಇನ್ನೂ ಪಡ್ಡೆ ಹುಡುಗರ ನಿದ್ರೆ ಕೆಡಿಸುವ ಈ ನಟಿ ಈಗ ಮತ್ತೆ ನ್ಯೂಸ್‌ನಲ್ಲಿದ್ದಾರೆ. ತಮ್ಮ ಬೆಡ್‌ರೂಮ್‌ ರಹಸ್ಯಗಳ ಬಗ್ಗೆ ಮಾತಾನಾಡಿರುವ ಇವರ  ಹಳೆಯ ಇಂಟರ್‌ವ್ಯೂವ್‌ ಒಂದು ವೈರಲ್‌ ಆಗಿದೆ.


ಕೊರೋನಾದಿಂದ ಜನ ಹೇಗೆ ಸಾಯುತ್ತಾರೆಂಬುದು ಕೊನೆಗೂ ಪತ್ತೆ!...

ಕೊರೋನಾ ವೈರಸ್‌ ನಮ್ಮ ದೇಹದೊಳಗೆ ಪ್ರವೇಶಿಸಿದರೆ ಏನೇನಾಗುತ್ತದೆ ಮತ್ತು ಏಕೆ ಜನರು ಈ ವೈರಸ್‌ನಿಂದ ಸಾವನ್ನಪ್ಪುತ್ತಾರೆ ಎಂಬುದನ್ನು ಚೀನಾದ ವಿಜ್ಞಾನಿಗಳು ಶೋಧಿಸಿದ್ದಾರೆ. ಅವರ ಪ್ರಕಾರ, ನಮ್ಮ ದೇಹದಲ್ಲಿರುವ ರೋಗನಿರೋಧಕ ವ್ಯವಸ್ಥೆಯು ಕೊರೋನಾ ವೈರಸ್‌ಗೆ ಅತಿಯಾಗಿ ಪ್ರತಿಕ್ರಿಯಿಸುವುದೇ ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ.

ದೇಶದಲ್ಲಿ 78 ಸಾವಿರದ ಗಡಿ ದಾಟಿದ ಕೊರೋನಾ ರಕ್ಕಸ.

ಇಂದು ಬೆಳ್ಳಗ್ಗೆಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 78,055ಕ್ಕೆ ಬಂದು ತಲುಪಿದೆ. ಸದ್ಯ ಭಾರತದ್ದೇ ಒಂದು ಲೆಕ್ಕವಾದರೆ, ಮತ್ತೊಂದೆಡೆ ಮಹಾರಾಷ್ಟ್ರದ್ದೇ ಒಂದು ಲೆಕ್ಕ ಎಂಬಂತೆ ಆಗಿದೆ. ಇನ್ನು ಮೋದಿ ತವರು ರಾಜ್ಯ ಗುಜರಾತ್‌ನಲ್ಲೂ ಕೊರೋನಾ ಅಬ್ಬರ ಮಿತಿ ಮೀರಿದೆ.

ಸೇನೆಯಲ್ಲಿ ಯುವಕರಿಗೆ 3 ವರ್ಷ ಸೇವೆ ಅವಕಾಶ?

ಯುವ ವೃತ್ತಿಪರರೂ ಸೇರಿದಂತೆ ದೇಶದ ನಾಗರಿಕರು ಸೇನಾಧಿಕಾರಿಗಳು ಹಾಗೂ ಸೇನೆಯ ಇನ್ನಿತರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಮೂರು ವರ್ಷಗಳ ಮಟ್ಟಿಗೆ ಅವಕಾಶ ನೀಡುವ ಕುರಿತು ಭಾರತೀಯ ಸೇನೆ ಗಂಭೀರ ಪರಿಶೀಲನೆಯಲ್ಲಿ ತೊಡಗಿದೆ.

ಕೊರೋನಾ ವೈರಸ್‌ ನಿಯಂತ್ರಿಸಲು ಹುಚ್ಚಾ ವೆಂಕಟ್‌ ಕೊಟ್ಟ ಐಡಿಯಾ; ಕೇಳುತ್ತಾ ಸರ್ಕಾರ ?...

ಮಹಾಮಾರಿ ಕೊರೋನಾ ವೈರಸ್‌ನಿಂದ  ಜನರನ್ನು ರಕ್ಷಿಸಲು ವೈದ್ಯರು, ಪೊಲೀಸರು ಹಾಗೂ ಪೌರಕಾರ್ಮಿಕರು ಯೋಧರಂತೆ ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರ ಲಾಕ್ ಸಡಿಲಿಸಿ ಕೊಂಚ ರಿಲೀಫ್‌ ಕೊಟ್ಟ ಕಾರಣ  ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಇದನ್ನು ಪತ್ತೆ ಹಚ್ಚಲು ಹುಚ್ಚಾ ವೆಂಕಟ್‌ ಸಲಹೆವೊಂದನ್ನು ನೀಡಿದ್ದಾರೆ... 

click me!