ಒಲಿಂಪಿಕ್ಸ್ ಸಾಧಕರಿಗೆ ಪ್ರಧಾನಿ ಚಹಾ ಕೂಟ, ಉಪರಾಷ್ಟ್ರಪತಿಗೆ ಸಿಎಂ ಸ್ವಾಗತ; ಆ.16ರ ಟಾಪ್ 10 ಸುದ್ದಿ!

By Suvarna News  |  First Published Aug 16, 2021, 4:58 PM IST

ಒಲಿಂಪಿಕ್ಸ್ ಸಾಧಕರಿಗೆ ಪ್ರಧಾನಿ ಮೋದಿ ಚಹಾ ಕೂಟ ನೀಡಿದ್ದಾರೆ. ಈ ವೇಳೆ ಸಿಂಧು ಜೊತೆ ಐಸ್‌ಕ್ರೀಂ ತಿಂದು ಕೊಟ್ಟ ಮಾತು ಪೂರೈಸಿದ್ದಾರೆ. ಇತ್ತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬೆಂಗಳೂರಿಗೆ ಆಗಮಿಸಿದ್ದಾರೆ. ಅತ್ತ ಆಫ್ಘಾನಿಸ್ತಾನದ ಪರಿಸಿತ್ಥಿತಿ ವಿಡಿಯೋಗಳು ಹರಿದಾಡುತ್ತಿದ್ದು, ಮನಕಲುಕುವಂತಿದೆ. ಅರವಿಂದ್-ದಿವ್ಯಾ ಫ್ಯಾನ್ಸ್‌ಗೆ ಉತ್ತರ, ಲಸಿಕೆ ಹಾಕಿಸಲು 10 ಲಕ್ಷ ಬೇಡಿಕೆ ಇಟ್ಟ ಮಹಿಳೆ ಸೇರಿದಂತೆ ಆಗಸ್ಟ್ 16ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!

Latest Videos

undefined

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಸಾವಿರಾರು ಜನರು ದೇಶವನ್ನು ತೊರೆಯಲು ಮುಂದಾಗಿದ್ದಾರೆ. ಈ ಮಧ್ಯೆ ಕಾಬೂಲ್ ವಿಮಾನ ನಿಲ್ದಾಣದ ಕೆಲ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿವೆ. ಒಂದೆಡೆ ವಿಮಾನ ನಿಲ್ದಾಣದಲ್ಲಿ ಶವಗಳು ಬಿದ್ದಿದ್ದರೆ, ಮತ್ತೊಂದೆಡೆ ಜನರು ಜೀವ ಭಯದಿಂದ, ಕೊನೆಯ ವಿಮಾನ ಹತ್ತಲು ಯತ್ನಿಸುತ್ತಿರುವ ದೃಶ್ಯಗಳು ಬೆಚ್ಚಿ ಬೀಳುವಂತೆ ಮಾಡಿವೆ. 

ಮೈಸೂರು ಪೇಟ ತೊಡಿಸಿ ಉಪರಾಷ್ಟ್ರಪತಿಯನ್ನ ಸ್ವಾಗತಿಸಿದ ಸಿಎಂ

6 ದಿನಗಳ ರಾಜ್ಯ ಪ್ರವಾಸದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಆಗಮಿಸಿದರು.   ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು  ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಪೇಟ ತೊಡಿಸಿ   ಸ್ವಾಗತಿಸಿದರು.

ತಾಲಿಬಾನ್ ಅಟ್ಟಹಾಸ, ಅಫ್ಘಾನ್ ಪತನಕ್ಕೆ ಕಾರಣವಾಗಿದ್ದೇ ಆ ಒಂದು ಘೋಷಣೆ!

ಅಮೆರಿಕ ತನ್ನ ಸೇನೆ ಹಿಂದಕ್ಕೆ ಪಡೆದರೆ ಆಫ್ಘಾನಿಸ್ತಾನದಲ್ಲಿ ಏನಾಗಬಹುದೆಂಬ ಆತಂಕ ಇತ್ತೋ ಅದು ನಿರೀಕ್ಷೆಗೂ ಮೊದಲೇ ನಿಜವಾಗಿದೆ. ಸತತ 2 ದಶಕಗಳ ಕಾಲ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನೇ ಕಂಗೆಡಿಸಿದ್ದ ತಾಲಿಬಾನ್‌ ಉಗ್ರರು ಭಾನುವಾರ ರಾಜಧಾನಿ ಕಾಬೂಲ್‌ ಅನ್ನು ವಶಪಡಿಸಿಕೊಳ್ಳುವ ಮೂಲಕ ಅಕ್ಷರಶಃ ಇಡೀ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ 2 ದಶಕಗಳ ಬಳಿಕ ದೇಶ ಮತ್ತೆ ಕ್ರೂರಿಗಳ ಕೈವಶವಾಗಿದೆ.ಹಾಗಾದ್ರೆ ;ಅಪ್ಘಾನಿಸ್ತಾನ ತಾಲಿಬಾನಿಯರ ಕೈವಶವಾಗಿದ್ದು ಹೇಗೆ? ಇಲ್ಲಿದೆ ಟೈಮ್‌ಲೈನ್

Tokyo 2020: ಒಲಿಂಪಿಕ್ಸ್‌ ಸಾಧಕರನ್ನು ಮನೆಗೆ ಕರೆಸಿ ಐಸ್‌ ಕ್ರೀಂ ಪೇ ಚರ್ಚಾ ಮಾಡಿದ ಪ್ರಧಾನಿ ಮೋದಿ..!

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸಕ್ಕೆ ಆಹ್ವಾನಿಸಿ ಚಹ ಕುಡಿಸಿ ಕುಶಲೋಪರಿ ವಿಚಾರಿಸಿದ್ದಾರೆ. ಈ ಹಿಂದೆ ಪಿ.ವಿ. ಸಿಂಧು ಅವರಿಗೆ ನೀಡಿದ್ದ ಮಾತಿನಂತೆ ಬ್ಯಾಡ್ಮಿಂಟನ್ ತಾರೆ ಜತೆ ಐಸ್ ಕ್ರೀಂ ಕೂಡಾ ಸವಿದಿದ್ದಾರೆ. 

ಬೀಪ್‌ ಪದಗಳಿಂದ ಬಿಗ್ ಬಾಸ್‌ ನಿಂದಿಸಿದ ಅರವಿಂದ್-ದಿವ್ಯಾ ಫ್ಯಾನ್ಸ್‌ಗೆ ಉತ್ತರ ಕೊಟ್ಟ ಗುಂಡ್ಕಲ್!

ಅರವಿಂದ್ ಹಾಗೂ ದಿವ್ಯಾ ಫಿನಾಲೆ ವೀಕ್‌ನಲ್ಲಿದ್ದರೂ ಫಿನಾಲೆ ತಲುಪಿಲ್ಲ ಎಂಬ ಕಾರಣಕ್ಕೆ ಅವರ ಫ್ಯಾನ್‌ ಪೇಜ್‌ಗಳು ಶೋ ಅನ್ನೇ ನಿಂದಿಸುತ್ತಿದ್ದಾರೆ. ಇದರ ಬಗ್ಗೆ ಖಾಸಗಿ ಸಂದರ್ಶನದಲ್ಲಿ ಕಲರ್ಸ್‌ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್‌ ಪರಮೇಶ್ವರ್ ಗುಂಡ್ಕಲ್ ಮಾತನಾಡಿದ್ದಾರೆ. 

ಶೇ.57 ಭಾರತೀಯರಿಗೆ ವರ್ಕ್ ಫ್ರಮ್ ಹೋಮ್‌ನಲ್ಲಿ ಹೆಚ್ಚು ಕೆಲಸದ ಭಾರ; ಸಮೀಕ್ಷಾ ವರದಿ!

ವರ್ಕ ಫ್ರಮ್ ಹೋಮ್‌ನಲ್ಲಿ ಭಾರತೀಯರ ಕೆಲಸ ಹೇಗೆ ಸಾಗುತ್ತಿದೆ. ಕೆಲಸದ ಒತ್ತಡ, ಅನುಭವ ಹೇಗಿದೆ ಅನ್ನೋ ಕುರಿತು ಸಮೀಕ್ಷೆ ವರದಿ ಹೊರಬಿದ್ದಿದೆ.

ಬಾಲಕಿಯ ನಂಬಿಸಿ ಗಂಡನ ಬಳಿ ಕರೆದುಕೊಂಡು ಹೋಗಿ ಬಿಟ್ಟಳು!

ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. 16 ವರ್ಷದ ಬಾಲಕಿಯ ಮೇಲೆ ಈ ಪಾಪಿ ಪುರುಷ ತನ್ನ ಪತ್ನಿಯ ಎದುರಿನಲ್ಲೇ ಅತ್ಯಾಚಾರ ಎಸಗಿದ್ದಾನೆ.

ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಅಂದ್ರೆ 10 ಲಕ್ಷ ರೂ ಕೊಡಿ ಎಂದು ಡಿಮ್ಯಾಂಡ್ ಇಟ್ಟ ಮಹಿಳೆ!

ಲಸಿಕೆ ಕೊಡೋಕೆ ಹೋದ್ರೆ ಮಹಿಳೆಯೊಬ್ಬರು. ಲಸಿಕೆ ಹಾಕಿಸಿಕೊಳ್ಳಬೇಕು ಅಂದ್ರೆ 10 ಲಕ್ಷ ರೂ ಕೊಡಿ ಎಂದಿದ್ದಾರೆ. ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಲಸಿಕೆ ಹಾಕಿಸಿಕೊಂಡರೆ ನಮ್ಮ ಮಕ್ಕಳನ್ನು ನೋಡಿಕೊಳ್ಳುವವರ್ಯಾರು..? ನೀವು ಬಂದು ನೋಡ್ತೀರಾ.? ಎಂದು ಲಸಿಕೆ ಹಾಕುವವರನ್ನೇ ಪ್ರಶ್ನಿಸಿದ್ದಾರೆ. 

ಪೋಸ್ಟರ್ಸ್ ಮೂಲಕವೇ ಕ್ಯೂರಿಯಾಸಿಟಿ ಹುಟ್ಟಿಸಿದ ವಿಕ್ರಾಂತ್ ರೋಣ!

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು ಚಿತ್ರತಂಡದ ಕಲಾವಿದರ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡುವ ಪೋಸ್ಟರ್ ಚಿತ್ರದ ಕಥೆ ಹೇಳುತ್ತಿದೆ. ನೋಡಲು ಒಂದೇ ಥೀಮ್‌ನಂತೆ ಕಂಡರೂ ಪೋಸ್ಟರ್‌ನಲ್ಲಿರುವ ಕ್ಯೂರಿಯಾಸಿಟಿ ಹೆಚ್ಚಾಗುತ್ತಿದೆ. ಈವರೆಗೂ ರಿಲೀಸ್ ಮಾಡಿರುವ ಎರಡು ಪೋಸ್ಟರ್‌ಗಳಿವು.  

click me!