ದೀದಿಗೆ ಮುಳುವಾಯ್ತು ಆರೋಪ, RCB ತಂಡಕ್ಕೆ ಆಘಾತ; ಎ.4ರ ಟಾಪ್ 10 ಸುದ್ದಿ!

By Suvarna NewsFirst Published Apr 4, 2021, 4:42 PM IST
Highlights

ನಂದಿಗ್ರಾಮ ಮತದಾನದಲ್ಲಿ ಮತಗಟ್ಟೆ ಹಾಗೂ ಬಿಜೆಪಿ ವಿರುದ್ಧ ದೂರು ನೀಡಿದ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.  ಭೀಕರ ನಕ್ಸಲ್ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಒಂದೇ ದಿನ ಒಂದೇ ದಿನ 93 ಸಾವಿರ ಕೇಸ್ ಪತ್ತೆಯಾದ ಕಾರಣ ಮೋದಿ ಮಹತ್ವದ ಸಭೆ ನಡೆಸಿದ್ದಾರೆ. ವೈಷ್ಣವಿ ಡ್ರೆಸ್ ನೋಡೋಕೆ ಬಿಗ್‌ಬಾಸ್ ನೋಡ್ತಿದ್ದಾರಾ ಹೆಣ್ಣುಮಕ್ಕಳು? ಆರ್‌ಸಿಬಿ ಆರಂಭಿಕನಿಗೆ ಕೊರೋನಾ ಧೃಡ ಸೇರಿದಂತೆ ಎಪ್ರಿಲ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

22 ಯೋಧರು ಹುತಾತ್ಮ, 30 ಮಂದಿ ನಾಪತ್ತೆ; ಚತ್ತೀಸ್‌ಘಡದಲ್ಲಿ ಅತೀ ಭೀಕರ ನಕ್ಸಲ್ ದಾಳಿ!...

ಈ ವರ್ಷ ನಡೆದ ಅತೀ ಭೀಕರ ದಾಳಿ ಇದಾಗಿದೆ. 22 ಯೋಧರು ಹುತಾತ್ಮರಾಗಿದ್ದರೆ, 30 ಮಂದಿ ಯೋಧರು ನಾಪತ್ತೆಯಾಗಿದ್ದಾರೆ. ಚತ್ತೀಸಘಟದಲ್ಲಿ ಈ ನಕ್ಸಲ ದಾಳಿ ನಡೆದ ಬೆನ್ನಲ್ಲೇ ಅಮಿತ್ ಶಾ, ಸಭೆ ನಡೆಸಿದ್ದಾರೆ. 

ಮಮತಾ ಬ್ಯಾನರ್ಜಿಗೆ ಮತ್ತೆ ಮುಖಭಂಗ; ಸುಳ್ಳು ಆರೋಪಕ್ಕೆ ಎಚ್ಚರಿಕೆ ಕೊಟ್ಟ ಆಯೋಗ!...

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೈಡ್ರಾಮಗಳೇ ನಡೆಯುತ್ತಿದೆ. ಮತದಾನ ಆರಂಭಕ್ಕೂ ಮುನ್ನ ಬಿಜೆಪಿ ದಾಳಿಯಿಂದ ಆಸ್ಪತ್ರೆ ಸೇರಿದ್ದೇನೆ ಎಂದಿದ್ದ ಮಮತಾಗೆ, ರಾಜ್ಯ ಪೊಲೀಸರು ಶಾಕ್ ನೀಡಿತ್ತು. ಇದೀಗ ನಂದಿಗ್ರಾಮ ಗಲಭೆ, ಬಿಜೆಪಿಯಿಂದ ಬೂತ್ ವಶಕ್ಕೆ ಪಡೆದ ಆರೋಪ ಮಾಡಿದ್ದ ಮಮತಾಗೆ ಚುನಾವಣಾ ಆಯೋಗ ಶಿಕ್ಷೆ ನೀಡುವುದಾಗಿ ಎಚ್ಚರಿಸಿದೆ.

Zoom ಮೀಟಿಂಗ್‌ನಲ್ಲಿ ನಾಯಕನ ಪತ್ನಿಯ ನಗ್ನ ದರ್ಶನ; ಪಾರ್ಲಿಮೆಂಟ್ ಕೊರೋನಾ ಸಭೆ ರದ್ದು...

ದಿಢೀರ್ ಕೊರೋನಾ ಪ್ರಕರಣಗಳು ಹೆಚ್ಚಾದ ಕಾರಣ ನಡೆಯುತ್ತಿದ್ದ ಮಹತ್ವದ ಸಭೆ. 23 ನಾಯಕರು, ವೈದ್ಯರು, ತಜ್ಞರ ತಂಡ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸುತ್ತಿರುವಾಗ ಸಚಿವರೊಬ್ಬರ ಪತ್ನಿ ನಗ್ನವಾಗಿ ಕಾಣಿಸಿಕೊಂಡ ಘಟನೆ ನಡೆದಿದೆ

ಒಂದೇ ದಿನ 93 ಸಾವಿರ ಕೇಸ್..! ಕೊರೋನಾ ಸಂಬಂಧ ಮೋದಿ ಮಹತ್ವದ ಸಭೆ...

ಕೊರೋನವೈರಸ್ (ಕೋವಿಡ್ -19) ಸಂಬಂಧಿತ ಸಮಸ್ಯೆಗಳು ಮತ್ತು ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

IPL 2021: ಆರ್‌ಸಿಬಿಗೆ ಎದುರಾಯ್ತು ಬಿಗ್ ಶಾಕ್‌: ದೇವದತ್‌ ಪಡಿಕ್ಕಲ್‌ಗೆ ಕೋವಿಡ್‌ ಸೋಂಕು ದೃಢ..!...

ಚೆನ್ನೈ: ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 14ನೇ ಆವೃತ್ತಿಯಲ್ಲಿ ಕಪ್‌ ಎತ್ತಿಹಿಡಿಯುವ ಕನವರಿಕೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಏಪ್ರಿಲ್ 09ರಿಂದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಆರಂಭವಾಗಲಿದೆ. ಹೀಗಿರುವಾಗಲೇ ವಿರಾಟ್‌ ಕೊಹ್ಲಿ ಪಡೆಗೆ ಆರಂಭಿಕ ವಿಘ್ನ ಎದುರಾಗಿದೆ. 

ಮಾಸ್ಕ್ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದ ನಟ ಅಕ್ಷಯ್ ಕುಮಾರ್‌ಗೆ ಕೊರೋನಾ ಪಾಸಿಟಿವ್...

ನಟ ಅಕ್ಷಯ್ ಕುಮಾರ್ ಅವರಿಗೆ COVID-19 ಪಾಸಿಟಿವ್ ದೃಢಪಟ್ಟಿದೆ. ಅಕ್ಷಯ್ ಕುಮಾರ್ ಅವರು ಕೊರೋನಾ ಪರೀಕ್ಷೆ ಮಾಡಿದ್ದು, ಪಾಸಿಟಿವ್ ಬಂದಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಅಗ್ನಿಸಾಕ್ಷಿ ವೈಷ್ಣವಿ ಹಾಕೊಳ್ತಿರೋ ಬಟ್ಟೆ ನೋಡೋಕೆನೇ 'ಬಿಗ್‌ ಬಾಸ್‌' ನೋಡ್ತಿದ್ದಾರೆ ಹೆಣ್ಣುಮಕ್ಕಳು?...

ಕಿರುತೆರೆ ಸುಂದರಿ ವೈಷ್ಣವಿ ಬಿಗ್ ಬಾಸ್‌ ಸೀಸನ್‌ 8ರ ಸ್ಪರ್ಧಿ. ಸೈಲೆಂಟ್‌ ಆಗಿದ್ರೂ, ಸ್ಟ್ರಾಂಗ್ ಎಂದು ಪ್ರೂವ್ ಮಾಡುತ್ತಿರುವ ವೈಷ್ಣವಿ ಸ್ಟೈಲಿಷ್‌ ಬಟ್ಟೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

PSI ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ...

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಹುದ್ದೆ ನೇಮಕಾತಿಗೆ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಅಧಿಸೂಚನೆ ಹೊರಡಿಸಿದೆ. 

'ಅರೋಪ ಸಾಬೀತಾದ್ರೆ ರಮೇಶ್ ಜಾರಕಿಹೊಳಿ ಅರೆಸ್ಟ್ ಆಗ್ತಾರೆ'...

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರು ಪ್ರತಿಕ್ರಿಯಿಸಿದ್ದು, ಆರೋಪ ಸಾಬೀತಾದ್ರೆ ರಮೇಶ್ ಜಾರಕಿಹೊಳಿ ಅರೆಸ್ಟ್ ಆಗ್ತಾರೆ ಎಂದು ಹೇಳಿದ್ದಾರೆ.

click me!