
ಕೊಪ್ಪಳ(ಮೇ.01): ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನನ್ನ ಜೊತೆ ಸಂಧಾನ ಮಾಡಿಕೊಂಡಿದ್ರು ಎಂದು ಹೇಳುವ ಮೂಲಕ ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು(ಬುಧವಾರ) ಕೊಪ್ಪಳ ಜಿಲ್ಲೆಯ ಇರಕಲಗಡ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಸಿದ್ದರಾಮಯ್ಯ ಕಾಮನ್ ಫ್ರೆಂಡ್ ಮೂಲಕ ಸಂಧಾನ ಮಾಡಿಕೊಂಡರು. ಇಕ್ಬಾಲ್ ಅನ್ಸಾರಿ ತಲೆಯಲ್ಲಿ ಎಚ್.ಆರ್. ಶ್ರೀನಾಥ್ ಮತ್ತು ಮಲ್ಲಿಕಾರ್ಜುನ ನಾಗಪ್ಪ ನನಗೆ ಬುಕ್ ಆಗಿದ್ದಾರೆ ಅಂತ ತಲೆಯಲ್ಲಿ ಇದೆ. ಆದ್ರೆ ನಿಜಕ್ಕೂ ನನ್ನ ಜೊತೆ ಬುಕ್ ಆಗಿದ್ದು ಸಿದ್ದರಾಮಯ್ಯ. ಕೆಆರ್‌ಪಿಪಿ ಹತ್ತು ಸೀಟ್ ಗೆದ್ರೆ ಸರ್ಕಾರ ರಚನೆಗೆ ಬೇಕಾಗತ್ತೆ ಅಂತ ನನ್ನ ಜೊತೆ ಬುಕ್ ಆಗಿದ್ರು ಅಂತ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಮನಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ..!
ನನ್ನ ಜೊತೆ ಬುಕ್ ಆಗಿರೋದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಮತ್ತು ಬಳ್ಳಾರಿಗೆ ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬಂದಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಮನ್ ಫ್ರೆಂಡ್ ಮೂಲಕ ಹಿಂದೆ ಆಗಿರೋದನ್ನ ಮರೆತು ಒಂದಾಗೋಣ ಅಂತ ಡೀಲ್ ಮಾಡಿಕೊಂಡಿದ್ದರು. ನಿನ್ನೆ ಸಿಎಂ ಸಿದ್ದರಾಮಯ್ಯ ಗಂಗಾವತಿಯಲ್ಲಿ ಮಾನ್ಯ ಜನಾರ್ದನ ರೆಡ್ಡಿ ಅಂತ ಕರೆದ್ರು. ಅದು ಖುಷಿಯಾಯಿತು ಅವರು ಸಂಸ್ಕಾರವಂತರು ಎಂದು ಸಿದ್ದರಾಮಯ್ಯ ಅವರನ್ನ ಹಾಡಿ ಹೊಗಳಿದ್ದಾರೆ.
ಸಿದ್ದರಾಮಯ್ಯ ಡೀಲ್ ಮಾಡಿಕೊಂಡು ಗಂಗಾವತಿ, ಬಳ್ಳಾರಿಗೆ ಪ್ರಚಾರ ಮಾಡಿಲ್ಲ. ಇಕ್ಬಾಲ್ ಅನ್ಸಾರಿ ವಿರುದ್ಧವೂ ಶಾಸಕ ಜನಾರ್ದನ ರೆಡ್ಡಿ ಗುಡುಗಿದ್ದಾರೆ. ಇಕ್ಬಾಲ್ ಅನ್ಸಾರಿಗೆ ಸಂಸ್ಕಾರ ಅನ್ನೋದೇ ಇಲ್ಲ, ಅವನಿಗೆ ಹುಚ್ಚು ಹಿಡಿದಿದೆ. ನಿನ್ನೆ ಸಮಾವೇಶದಲ್ಲಿ ನನ್ನ ಬಗ್ಗೆ ಮಾತಾಡೋಕೆ ಹೋಗಿ ಇಕ್ಬಾಲ್ ತಮ್ಮ ಪಕ್ಷದವರ ಜೊತೆ ಜಗಳಕ್ಕಿಳಿದು ಬಿಟ್ರು. ಎಚ್.ಆರ್.ಶ್ರೀನಾಥ್ ರನ್ನ ತಡಿಯೋಕೆ ಸ್ವತಃ ಸಿಎಂ ಕೈನಲ್ಲೂ ಆಗ್ಲಿಲ್ಲ. ಯಾವತ್ತು ಎಚ್.ಆರ್. ಶ್ರೀನಾಥ್ ಇಷ್ಟೊಂದು ಸ್ಟ್ರಾಂಗ್ ಅಂತ ಗೊತ್ತಿರಲಿಲ್ಲ. ಯಾರ ಕೈನಲ್ಲೂ ಎಚ್.ಆರ್. ಶ್ರೀನಾಥ್ ರನ್ನ ತಡೆಯೋಕೆ ಆಗಿಲ್ಲ. ಹೀಗಾಗಿ ಸಿಎಂ ಎದ್ದು ಬಂದು ಮರ್ಯಾದೆ ಉಳಿಸು ಅಂತ ಕೈ ಮುಗಿದ್ರು. ಇಕ್ಬಾಲ್ ಅನ್ಸಾರಿಗೆ ಸಂಸ್ಕಾರ ಇಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಜರಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.