ರಾಜ್ಯದ ಡ್ಯಾಂಗಳು ಬಹುತೇಕ ಭರ್ತಿ!

By Kannadaprabha NewsFirst Published Aug 16, 2019, 9:52 AM IST
Highlights

13 ದಿನದಲ್ಲಿ ಡ್ಯಾಂಗಳಿಗೆ 900 ಟಿಎಂಸಿ ನೀರು! ಇದು ಸಾರ್ವಕಾಲಿಕ ದಾಖಲೆ | ಆದರೆ ಅರ್ಧದಷ್ಟುನೀರು ಡ್ಯಾಂನಿಂದ ಬಿಡುಗಡೆ |  ಕೃಷ್ಣಾ ಕಣಿವೆಯ 6 ಡ್ಯಾಂಗೆ 600, ಕಾವೇರಿ ಕಣಿವೆಯ 4 ಅಣೆಗಳಿಗೆ 130 ಟಿಎಂಸಿ

ಬೆಂಗಳೂರು (ಆ. 16):  ರಾಜ್ಯದಲ್ಲಿ ಸುರಿದ ಪ್ರಳಯ ಸದೃಶ್ಯಮಳೆ ಜನ​- ಜಾನುವಾರು ತಲ್ಲಣಗೊಳಿಸುವುದರ ಜತೆಗೆ ಹಲವಾರು ದಾಖಲೆಗಳನ್ನು ಸೃಷ್ಟಿಸಿದೆ. ಆ.1ರಿಂದ ಆ.14ರ ನಡುವಣ 13 ದಿನಗಳಲ್ಲಿ ರಾಜ್ಯದ ಜಲಾಶಯಗಳಿಗೆ ಹರಿದು ಬಂದಿರುವ ನೀರಿನ ಪ್ರಮಾಣ ಬರೋಬ್ಬರಿ 900 ಟಿಎಂಸಿ. ಇದು ಸಾರ್ವಕಾಲಿಕ ದಾಖಲೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ದೃಢಪಡಿಸಿದೆ.

ನೆರೆ ಸಂತ್ರಸ್ತರಿಗೆ ನೆರವಾಗಲು ಪುನೀತ್ 5 ಲಕ್ಷ ರೂ ದೇಣಿಗೆ

ಈ 13 ದಿನಗಳಲ್ಲಿ ರಾಜ್ಯದ ಜಲಾಶಯಗಳಿಗೆ ಬಂದ ನೀರಿನ ಪ್ರಮಾಣವು ರಾಜ್ಯದ ಜಲಾಶಯಗಳ ಒಟ್ಟಾರೆ ನೀರು ಸಂಗ್ರಹಣಾ ಸಾಮರ್ಥ್ಯಕ್ಕಿಂತ (825 ಟಿ.ಎಂ.ಸಿ.) ಹೆಚ್ಚು. ರಾಜ್ಯದಲ್ಲಿ ಹಿಂದೆಂದೂ, ಕೇವಲ 13 ದಿನಗಳಲ್ಲಿ ಈ ಪ್ರಮಾಣದ ನೀರು ಜಲಾಶಯಗಳಿಗೆ ಹರಿದು ಬಂದ ಉದಾಹರಣೆ ಇಲ್ಲ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಈ ಅಧಿಕಾರಿಗಳ ಪ್ರಕಾರ, ಆ.1ರಿಂದ 14ರ ಅವಧಿಯಲ್ಲಿ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಾದ ಕೆಆರ್‌ಎಸ್‌, ಹಾರಂಗಿ, ಹೇಮಾವತಿ ಹಾಗೂ ಕಬಿನಿ ಜಲಾಶಯಗಳಿಗೆ 130 ಟಿಎಂಸಿ ನೀರು ಬಂದಿದೆ. ಕೃಷ್ಣಾ ಕಣಿವೆಯ ಆರು ಜಲಾಶಯಗಳಾದ ಭದ್ರಾ, ತುಂಗಾಭದ್ರಾ, ಘಟಪ್ರಭ, ಮಲಪ್ರಭ, ಆಲಮಟ್ಟಿಹಾಗೂ ನಾರಾಯಣಪುರ ಜಲಾಶಯಗಳಿಗೆ ಬರೋಬ್ಬರಿ 600 ಟಿಎಂಸಿ ಬಂದರೆ, ಉಳಿದಂತೆ ವಿದ್ಯುತ್‌ ಉತ್ಪಾದನಾ ಉದ್ದೇಶಕ್ಕಾಗಿ ನಿರ್ಮಿಸಲಾದ ಮೂರು ಜಲಾಶಯಗಳಾದ ಲಿಂಗನಮಕ್ಕಿ, ಸುಪಾ ಹಾಗೂ ವಾರಾಹಿ ಜಲಾಶಯಗಳಿಗೆ 140 ಟಿಎಂಸಿ ನೀರು ಹರಿದು ಬಂದಿದೆ.

10 ಕೋಟಿ ಕೊಟ್ಟರೆ ಗ್ರಾಮಕ್ಕೆ ದಾನಿ ಹೆಸರು : BSY

ಶೇ.50 ಕ್ಕಿಂತ ಅಧಿಕ ನೀರು ಹೊರಗೆ:

ವಾಡಿಕೆಯಂತೆ ಜುಲೈ ಅಂತ್ಯಕ್ಕೆ ಜಲಾಶಯಗಳಲ್ಲಿ ಸುಮಾರು 600 ಟಿಎಂಸಿ ನೀರು ಸಂಗ್ರಹವಾಗಬೇಕಾಗಿತ್ತು. ಆದರೆ, ಮಳೆ ಕೊರತೆಯಿಂದ ಜುಲೈ ಅಂತ್ಯಕ್ಕೆ ಜಲಾಶಯಗಳು ಭರ್ತಿಯಾಗಿದ್ದು ಕೇವಲ ಶೇ.47.6 ರಷ್ಟುಅಂದರೆ 393 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು.

ಆದಾದ ಬಳಿಕ ಆ.1 ರಿಂದ ಆ.14ರ ಅವಧಿಯಲ್ಲಿ ಸುರಿದ ಮಹಾಮಳೆಗೆ 900 ಟಿಎಂಸಿಗೂ ಅಧಿಕ ಪ್ರಮಾಣ ನೀರು ಹರಿದು ಬಂದಿದ್ದರಿಂದ ನಮ್ಮ ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯದ ಶೇ.50ಕ್ಕಿಂತ ಹೆಚ್ಚು ಅಂದರೆ, 500 ಟಿಎಂಸಿಗೂ ಅಧಿಕ ಪ್ರಮಾಣದ ನೀರನ್ನು ಜಲಾಶಯಗಳಿಂದ ಹೊರ ಬಿಡಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇವಲ 13 ದಿನಗಳಲ್ಲಿ ರಾಜ್ಯದ ಜಲಾಶಯಗಳಿಗೆ 900 ಟಿಎಂಸಿಗೂ ಹೆಚ್ಚು ನೀರು ಹರಿದು ಬಂದಿದೆ. ಅದರಲ್ಲಿ 500 ಟಿಎಂಸಿಗೂ ಅಧಿಕ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿದೆ. ಇಷ್ಟೊಂದು ಪ್ರಮಾಣದ ನೀರು ಈ ಹಿಂದೆ ಹರಿದು ಬಂದಿರುವ ದಾಖಲೆಗಳಿಲ್ಲ. ಹಾಗಾಗಿ, ಇದೊಂದು ಸಾರ್ವಕಾಲಿಕ ದಾಖಲೆ ಎನ್ನಬಹುದು.

- ಶ್ರೀನಿವಾಸ್‌ ರೆಡ್ಡಿ, ನಿರ್ದೇಶಕರು, ಕೆಎಸ್‌ಎನ್‌ಡಿಎಂಸಿ

 

ಎಲ್ಲಿಗೆ ಎಷ್ಟುನೀರು ಬಂದು? (ನೀರಿನ ಪ್ರಮಾಣ ಟಿಎಂಸಿಗಳಲ್ಲಿ)

ಕಣಿವೆಗಳು ಜಲಾಶಯಗಳ ಸಂಖ್ಯೆ ಜಲಾಶಯಗಳ ಗರಿಷ್ಠ ಆ.15 ನೀರಿನ ಸಂಗ್ರಹಣೆ ಆ.1 ನೀರಿನ ಸಂಗ್ರಹಣೆ ಆ.1ರಿಂದ ಆ.14ರವರೆಗೆ ನೀರಿನ ಪ್ರಮಾಣ

ಕಾವೇರಿ ಕಣಿವೆ 04 104.55 102.97 35.28 130

ಕೃಷ್ಣಾ ಕಣಿವೆ 06 392.63 330.17 220.55 600

ವಿದ್ಯುತ್‌ ಉದ್ದೇಶಿತ ಜಲಾಶಯ 03 328.18 283.28 139.54 140

ಪರಿಹಾರ ಕೇಂದ್ರಗಳಾದ ಶಾಲೆಗಳು : ಆಗಸ್ಟ್ 20ರವರೆಗೆ ರಜೆ ವಿಸ್ತರಣೆ

ಜಲಾಶಯಗಳ ವಿವರ (ಟಿಎಂಸಿಗಳಲ್ಲಿ)

ಜಲಾಶಯ ಗರಿಷ್ಠ ಮಟ್ಟ ಆ.1ರ ನೀರಿನ ಮಟ್ಟ ಆ.15ರ ನೀರಿನಮಟ್ಟ

ಲಿಂಗನಮಕ್ಕಿ 151.75 51.80 131.75

ಸುಪಾ 145.33 79.36 134.64

ವಾರಾಹಿ 31.10 8.38 16.89

ಹಾರಂಗಿ 8.07 3.15 7.69

ಹೇಮಾವತಿ 35.76 14.02 35.33

ಕೆಆರ್‌ಎಸ್‌ 45.05 8.51 45.05

ಕಬಿನಿ 15.67 9.60 14.90

ಭದ್ರಾ 63.4 21.95 59.23

ತುಂಗಭದ್ರಾ 100.86 28.40 92.36

ಘಟಪ್ರಭ 48.98 32.00 42.50

ಮಲಪ್ರಭ 34.35 15.75 27.30

ಆಲಮಟ್ಟಿ 119.26 102.05 95.42

ನಾರಾಯಣಪುರ 26.14 20.40 23.46

- ವಿಶ್ವನಾಥ ಮಲೆಬೆನ್ನೂರು 

click me!