Karnataka Floods  

(Search results - 445)
 • Karnataka Minister Murugesh nirani meets union minister shobha karandlaje Newdelhi mah

  Karnataka DistrictsAug 12, 2021, 10:18 PM IST

  ರೈತರ ಬೆಳೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಮುರುಗೇಶ್ ನಿರಾಣಿ ಮನವಿ

  ನವದೆಹಲಿಯಲ್ಲಿ  ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರದ್ಲಾಂಜೆ ಅವರನ್ನು ಭೇಟಿಯಾದ  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ  ನಿರಾಣಿ ಅವರು ರೈತರಿಗೆ ನೀಡುವ ಬೆಳೆ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

 • Karnataka Floods: CM Bommai Announces Rs. 5 Lakh Compensation rbj
  Video Icon

  stateAug 1, 2021, 5:18 PM IST

  ಪ್ರವಾಹ ಪರಿಹಾರ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

  ಎನ್​ಡಿಆರ್​ಎಫ್​ನಿಂದ 150 ಕೋಟಿ ರೂಪಾಯಿ ಖರ್ಚು ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದು. ಮನೆ ಕಳೆದುಕೊಂಡವರಿಗೆ ಪರಿಹಾರವನ್ನು ಸಹ ಘೋಷಣೆ ಮಾಡಿದ್ದಾರೆ.
   

 • Karnataka Floods Helpless Old Woman Cries For Help in Athani mah
  Video Icon

  Karnataka DistrictsJul 29, 2021, 7:25 PM IST

  ಬೆಳಗಾವಿ;  ಚಳಿ-ಮಳೆ ಕೇಳುವರಿಲ್ಲ.. ಬಸ್‌ ಸ್ಟಾಪೇ ಅಜ್ಜಿಯ 'ಅರಮನೆ'!

  ಮಳೆ ಕಡಿಮೆಯಾಗಿದ್ದರೂ ಪ್ರವಾಹ ಇಳಿದಿಲ್ಲ. ಅದರ ಜತೆಗೆ ಬಂದ ಸಂಕಷ್ಟಗಳು ಕೊನೆಯಾಗಿಲ್ಲ. ಪ್ರವಾಹದ ಹೊಡೆತಕ್ಕೆ ಬಸ್ ನಿಲ್ದಾಣಕ್ಕೆ ಬದುಕು ಬಂದು ನಿಂತಿದೆ.   ಪ್ರವಾಹದಿಂದ ಬದುಕು ಕಳೆದುಕೊಂಡ ಅಜ್ಜಿಯ ಕರುಣಾಜನಕ ಕಥೆ ಇದು.

   

 • Karnataka Floods Mothers and Infants Crying For Help in Flood Affected Places mah
  Video Icon

  Karnataka DistrictsJul 28, 2021, 6:56 PM IST

  ಬೆಳಗಾವಿ; ಬಾಣಂತಿಯರು, ಹಸುಗೂಸುಗಳಿಗೆ ನರಕ ದರ್ಶ‌ನ, ಕಣ್ಣೀರ ಪ್ರವಾಹ

  ಪ್ರವಾಹದಿಂದ ಕಂಗೆಟ್ಟ ಬಾಣಂತಿಯರು, ಮಕ್ಕಳ ಕಣ್ಣೀರ ಕಥೆ ಇದು. ಪ್ರವಾಹದಲ್ಲಿ ಮನೆ ಮುಳುಗಿ ಬೀದಿಗೆ ಬಿದ್ದ ಬಾಣಂತಿಯರು, ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ.ಅಥಣಿ ತಾ. ಜನವಾಡ ಗ್ರಾಮದ ಬಾಣಂತಿಯರ ಗೋಳಾಟದ ಕಥೆ-ವ್ಯಥೆ ಇದು. ರಾತ್ರೋರಾತ್ರಿ ಮನೆ ಬಿಟ್ಟು ಓಡೋಡಿ ಹೊರಬರುವ ಪರಿಸ್ಥಿತಿ ನಿರ್ಮಾಣ ಆಗಿದೆ.

 • Karnataka Floods Well Built Homes Collapsed Uttara Kannada mah
  Video Icon

  Karnataka DistrictsJul 28, 2021, 12:33 AM IST

  ಕಾರವಾರ; ಪ್ರವಾಹ ಭೀಕರ, ಗಟ್ಟಿ ಮುಟ್ಟಾದ ಮನೆಗಳೆ ನೀರು ಪಾಲು

  ಕದ್ರಾ ಒಳಭಾಗದ ಗಾಂಧೀನಗರ, ರಾಜೀವ ನಗರದಲ್ಲಿ 25ಕ್ಕೂ ಮಿಕ್ಕಿ ಮನೆಗಳು ಪುಡಿ-ಪುಡಿಯಾಗಿವೆ. ಪ್ರವಾಹದಿಂದಾಗಿ ಗಟ್ಟಿಮುಟ್ಟಾಗಿದ್ದ ಮನೆಗಳೇ ನೆಲಸಮವಾಗಿವೆ. ನಮಗೆ ಪರಿಹಾರದ ಬದಲು ಬೇರೆಡೆ ಜಾಗ ತೋರಿಸಿದರೆ ಅಲ್ಲೇ ಮನೆ ಮಾಡಿ‌ ಕುಳಿತುಕೊಳ್ತೇವೆ. 'ಅಧಿಕಾರಿಗಳು ಯಾರೂ ಸ್ಥಳಕ್ಕೆ ಭೇಟಿ ನೀಡಿಲ್ಲ, ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ನಮ್ಮ ನೋವು ಕೇಳಬೇಕಿದೆ'ಮತ್ತೆ ಜೀವನ ಕಟ್ಟಿಕೊಳ್ಳಲು ಸಹಾಯ ಬೇಕಿದೆ  ಎಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.

 • Karnataka Floods Uttara Kannada Flood Victims Demand Permanent Solution mah
  Video Icon

  Karnataka DistrictsJul 27, 2021, 7:07 PM IST

  ಪ್ರತೀ ವರ್ಷ ನಮ್ಮನ್ನು ಹೊತ್ತುಕೊಂಡೇ ಬರುತ್ತಾ ಇರಬೇಕಾ?

  ಕಾಳಿ ನದಿಯಿಂದ ಉಂಟಾದ ಪ್ರವಾಹದಿಂದ ನೂರಾರು ಜನರ ಬದುಕು ಬೀದಿಗೆ  ಬಂದಿದೆ. ಕದ್ರಾ ಸರಕಾರಿ ಶಾಲೆಯಲ್ಲಿರುವ ಕಾಳಜಿ ಕೇಂದ್ರದಲ್ಲಿ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಮಕ್ಕಳು, ಮರಿಮಕ್ಕಳ‌ ಜತೆ ಕಾಳಜಿ ವೃದ್ಧೆಯರು ಆಶ್ರಯ ಪಡೆದಿದ್ದಾರೆ ಸ್ಥಳೀಯ ಯುವಕರೇ‌ ನಮ್ಮನ್ನು ಹೊತ್ತುಕೊಂಡು ಬಂದು ರಕ್ಷಿಸಿದ್ದಾರೆ' 'ಪ್ರತೀ ವರ್ಷ ಯುವಕರು ನಮ್ಮನ್ನು ಹೊತ್ತುಕೊಂಡೇ ಬರುತ್ತಾ ಇರಬೇಕಾ?'  'ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ಇಲ್ಲವೇ?' ಸಂತ್ರಸ್ತರು ಪ್ರಶ್ನೆ ಮಾಡಿದ್ದಾರೆ.

 • Karnataka Floods:Over 100 Houses in Athani's Satti Village Under Flood Water snr
  Video Icon

  Karnataka DistrictsJul 27, 2021, 2:45 PM IST

  ಮುಳುಗಿದ ಹಳ್ಳಿ : 100 ಅಧಿಕ ಮನೆಗಳು ಜಲಾವೃತ

  ಅಥಣಿ ತಾಲೂಕಿನ ಸತ್ತಿ ಗ್ರಾಮಕ್ಕೂ ಜಲಕಂಟಕ ಎದುರಾಗಿದೆ.  ಸತ್ತಿ ಗ್ರಾಮ ಭಾಗಶಃ ಜಲಾವೃತವಾಗಿದೆ. 100ಕ್ಕೂ ಅಧಿಕ ಮನೆಗಳು ಜಲಾವೃತವಾಗಿದ್ದು, ದೇಗುಲ, ದರ್ಗಾ, ಶಾಲೆಗಳು ಮುಳುಗಿವೆ. ಗ್ರಾಮದ ಚಾಮುಂಡೇಶ್ವರಿ ದೇಗುಲ ಬುಡಾನ್‌ಸಾಬ್ ದರ್ಗಾ ಜಲಾವೃತವಾಗಿದೆ.

  ಮನೆ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಸಂತ್ರಸ್ತರು ತೆರಳಿದ್ದಾರೆ. ಗ್ರಾಮದ ಉಳಿದ ಜನರಲ್ಲೂ ತೀವ್ರ ಆತಂಕ ಮನೆ ಮಾಡಿದೆ. 

 • Karnataka Floods: Infosys Foundation College in Satti Village Submerged snr
  Video Icon

  Karnataka DistrictsJul 27, 2021, 2:01 PM IST

  ಮುಂದುವರೆದ ಕೃಷ್ಣಾ ಪ್ರವಾಹದ ಅಬ್ಬರ : ಕಾಲೇಜು ಜಲಾವೃತ

  ಅಥಣಿ ತಾಲೂಕಿನ ಸತ್ತಿ ಗ್ರಾಮದಿಂದ ಏಷ್ಯಾನೆಟ್ ಸುವರ್ಣ ನ್ಯೂಸ್‌ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

  ಸತ್ತಿ ಗ್ರಾಮದ ಅಥಣಿ ರಸ್ತೆಯಲ್ಲಿರೋ  ಇನ್ಪೋಸಿಸ್ ಪ್ರತಿಷ್ಠಾನದ ಪಿ.ಯು. ಕಾಲೇಜು ಜಲಾವೃತವಾಗಿದ್ದು, ಇಡೀ ಕಾಲೇಜನ್ನ ನೀರು ಸುತ್ತುವರೆದಿದೆ.  

 • Karnataka Floods: Plight of Flood Victims in Athani Villages snr
  Video Icon

  Karnataka DistrictsJul 27, 2021, 1:43 PM IST

  ಕೃಷ್ಣಾನದಿ ತೀರದ ಗ್ರಾಮಸ್ಥರ ಪರದಾಟ‌‌ : ಪ್ರವಾಹಕ್ಕೆ ಬದುಕು ಬೀದಿಪಾಲು

  ಜೀವ ಉಳಿಸಿಕೊಳ್ಳಲು ಕೃಷ್ಣಾನದಿ ತೀರದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಈ ದೃಶ್ಯಗಳನ್ನ‌ ನೋಡಿದರೆ ಮನ ಕಲುಕುತ್ತದೆ. ಪ್ರವಾಹ ಪೀಡಿತ ಅಥಣಿ ತಾಲೂಕಿನ ಗ್ರಾಮಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಡಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
   

 • Karnataka Floods Flood Victims Vacate Homes, But Clueless About Shelter SNR

  Karnataka DistrictsJul 27, 2021, 1:29 PM IST

  ಪ್ರವಾಹ ಸಂತ್ರಸ್ತರ ಬದುಕೇ ಬರ್ಬಾದ್! ರಸ್ತೆಯಲ್ಲೇ ಬದುಕು

  ಅಥಣಿ ತಾಲೂಕಿನ ಪ್ರವಾಹ ಸಂತ್ರಸ್ತರ ಬದುಕೇ ಬರ್ಬಾದ್ ಆಗಿದೆ. ಪ್ರವಾಹದ ಹೊಡೆತಕ್ಕೆ ಬದುಕು ಬೀದಿಗೆ ಬಿದ್ದಿದೆ. ಮನೆ-ಮಠ ಬಿಟ್ಟು ಜನ ರಸ್ತೆ ಬದಿಗೆ ಬಂದು ನಿಂತಿದ್ದಾರೆ. 

  ಟ್ರಾಕ್ಟರ್‌ಗಳಲ್ಲಿ ತಿಜೋರಿ, ಗ್ಯಾಸ್, ಸೇರಿ ಮನೆಯ ಸಾಮಾನು ಹೇರಿಕೊಂಡು ಮನೆ ಬಿಟ್ಟು ಬಂದಿದ್ದಾರೆ. ಬಾಣಂತಿ, ವಯಸ್ಸಾದವರು, ಪ್ರಾಣಿಪಕ್ಷಗಳನ್ನೆಲ್ಲಾ ಕರೆದುಕೊಂಡು ಬಂದು ನೆಲೆ ಇಲ್ಲದೆ ಪರದಾಡುತ್ತಿದ್ದಾರೆ. 

 • Karnataka Floods People Abandon Villages To Save Lives in Athani snr
  Video Icon

  Karnataka DistrictsJul 27, 2021, 1:17 PM IST

  ಸುತ್ತುವರೆದ ಪ್ರವಾಹ : ಇಡೀ ಊರು ತೊರೆದ ಗ್ರಾಮಸ್ಥರು

  ಅಥಣಿ ಹುಲಗಬಾಳ ಗ್ರಾಮವನ್ನು ಪ್ರವಾಹ ಸಂಪೂರ್ಣವಾಗಿ ಸುತ್ತುವರೆದಿದ್ದು, ಸತತ ಮೂರನೇ ಬಾರಿ ಹುಲಗಬಾಳ ಗ್ರಾಮ ಜಲಾವೃತವಾಗಿದೆ.  ಗ್ರಾಮದ ದಲಿತ ಕಾಲೋನಿ‌ಯ ಮನೆಗಳು ಸಂಪೂರ್ಣ ಮುಳುಗಡೆಯಾಗಿದೆ.

  ಏಕಾಏಕಿ ಪ್ರವಾಹದ ನೀರು ಬರುತ್ತಿದ್ದಂತೆ ರಾತ್ರೋರಾತ್ರಿ ಮನೆಗಳನ್ನ ಜನ ಬಿಟ್ಟು ಹೋಗಿದ್ದಾರೆ. ದಲಿತ ಕಾಲೋನಿಯ 60ಕ್ಕೂ ಅಧಿಕ ಮನೆಗಳು ಮುಳುಗಡೆಯಾಗಿವೆ. ಮನೆಗೆ ಬೀಗ ಹಾಕಿ ಜನರು ತೆರಳಿದ್ದಾರೆ. 

 • Karnataka Floods Athani Bridge Submerged in Flood Water, 10 Villages Remain Disconnected snr
  Video Icon

  Karnataka DistrictsJul 27, 2021, 1:05 PM IST

  ಪ್ರವಾಹಕ್ಕೆ ಸಂಪೂರ್ಣ ಮುಳುಗಿದ ಸೇತುವೆ : ಸಂಪರ್ಕ ಕಟ್

  ಹಲ್ಯಾಳ-ದರೂರ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಜತ್ತ್-ಜಾಂಬೋಟ ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.  ಅಥಣಿ ತಾಲೂಕಾ ಕೇಂದ್ರದ ಜೊತೆಗೆ 10ಕ್ಕೂ ಅಧಿಕ ಗ್ರಾಮಗಳು  ಸಂಪರ್ಕ‌ ಕಳೆದುಕೊಂಡಿವೆ.

  ದರೂರು, ತೀರ್ಥ, ಸಪ್ತಸಾಗರ, ನದಿ ಇಂಗಳಗಾಂವ ಸೇರಿದಂತೆ 10ಕ್ಕು ಅಧಿಕ ಗ್ರಾಮಗಳ  ಸಂಪರ್ಕ ಕಟ್ ಆಗಿದೆ. ಬೆಳಗಾವಿ ಜಿಲ್ಲೆಯ ಸೌಂದತ್ತಿ, ಗೋಕಾಕ್, ರಾಯಭಾಗ ಸೇರಿ ಹಲವು ತಾಲೂಕುಗಳ ಜೊತೆಗು ಅಥಣಿ ಸಂಪರ್ಕ ಕಟ್ ಆಗಿದೆ.  ಸೇತುವೆ ಮುಳುಗಿ ಮೇಲೆ  4ಅಡಿಗೂ ಅಧಿಕ ನೀರು ನಿಂತಿದೆ.  

 • MLC shantaram siddi visits flood hit yellapur taluk uttara Kannada mah

  Karnataka DistrictsJul 25, 2021, 10:02 PM IST

  ಜೆಸಿಬಿ ಆಪರೇಟರ್‌ ಸನ್ಮಾನಿಸಿದ ಶಾಸಕ ಶಾಂತಾರಾಮ ಸಿದ್ಧಿ

  ಯಲ್ಲಾಪುರ(ಜು. 25)  ತಾಲೂಕಿನ ರಾಷ್ಟೀಯ ಹೆದ್ದಾರಿ ಅರಬೈಲ್ ಹತ್ತಿರ ಗುಡ್ಡ ಕುಸಿತ ಹಾಗೂ ರಸ್ತೆ ಕುಸಿದ ಪ್ರದೇಶಕ್ಕೆ  ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ  ಜೆಸಿಬಿ ಆಪರೇಟರ್ ರನ್ನು ಸನ್ಮಾನಿಸಿದ್ದಾರೆ.

 • Karnataka CM Yediyurappa Takes aerial survey of flood hit districts writes modi for special package pod

  stateOct 22, 2020, 7:14 AM IST

  10000 ಕೋಟಿ ಕೊಡಿ, ವಿಶೇಷ ಪ್ಯಾಕೇಜ್‌ ನೀಡುವಂತೆ ಮೋದಿಗೆ ಸಿಎಂ ಪತ್ರ!

  ನೆರೆ: .10000 ಕೋಟಿ ಕೊಡಿ| ವಿಶೇಷ ಪ್ಯಾಕೇಜ್‌ ನೀಡುವಂತೆ ಮೋದಿಗೆ ಸಿಎಂ ಪತ್ರ| 3 ಹಂತದಲ್ಲಿ ರಾಜ್ಯದಲ್ಲಿ ಪ್ರವಾಹ| ಒಟ್ಟಾರೆ 21,609 ಕೋಟಿ ಆಸ್ತಿ-ಪಾಸ್ತಿ ನಷ್ಟ

 • Karnataka Floods Siddaramaiah Takes Potshot At BJP MPs hls
  Video Icon

  stateOct 17, 2020, 4:11 PM IST

  'ರಾಜ್ಯದ 25 ಬಿಜೆಪಿ ಸಂಸದರಿಗೆ ಧಮ್ ಇಲ್ಲ, ಕೇಂದ್ರದ ಮುಂದೆ ಕೈಕಟ್ಟಿ ನಿಲ್ತಾರೆ'

  ಕರ್ನಾಟಕ ಮಳೆಯಿಂದ, ಪ್ರವಾಹದಿಂದ ತತ್ತರಿಸಿ ಹೋಗಿದೆ. ಆದರೆ ನಮ್ಮ ನಾಯಕರು, ಅಧಿಕಾರಿಗಳಿಗೆ ಮಾತ್ರ ಇದರ ಬಗ್ಗೆ ಲಕ್ಷ್ಯವಿಲ್ಲ. ನಮ್ಮ ರಾಜ್ಯದ 25 ಸಂಸದರಿಗೆ ಧಮ್ ಇಲ್ಲ. ಕೇಂದ್ರ ನಾಯಕರ ಮುಂದೆ ಕೈಕಟ್ಟಿ ನಿಂತುಕೊಳ್ತಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.