ಅತಂತ್ರವಾಯ್ತು 2 ಪಾಲಿಕೆ, ಬಿಸಿ ಏರಿಸಿದ ಉರ್ಫಿ ಉಡುಗೆ: ಸೇ.6ರ ಟಾಪ್ 10 ಸುದ್ದಿ!

By Suvarna NewsFirst Published Sep 6, 2021, 4:47 PM IST
Highlights

ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬೆಳಗಾವಿ ಹೊರತು ಪಡಿಸಿದರೆ, ಇನ್ನೆರಡು ಪಾಲಿಕೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದೆ. ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹೋಗಿ ರಾಹುಲ್ ಎಡವಟ್ಟು ಮಾಡಿಕೊಂಡಿದ್ದಾರೆ. ಕುಟುಂಬಸ್ಥರ ಕಣ್ಣೆದುರೇ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ತಾಲಿಬಾನ್ ಹತ್ಯೆಗೈದಿದೆ. ಸಮುದ್ರ ದಂಡೆಯಲ್ಲಿ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡ ಉರ್ಫಿ, ಸೆಪ್ಟೆಂಬರ್ 27ಕ್ಕೆ ಭಾರತ್ ಬಂದ್ ಸೇರಿದಂತೆ ಸೆಪ್ಟೆಂಬರ್ 6ರ ಟಾಪ್ 10 ಸುದ್ದಿ ಇಲ್ಲಿವೆ.

 ರೈತ ಪ್ರತಿಭಟನೆ ಹೆಸರಲ್ಲಿ ಹಳೇ ಫೋಟೋ ಶೇರ್ ಮಾಡಿ ಪೇಚಿಗೆ ಸಿಲುಕಿದ ರಾಹುಲ್!

ಒಂಭತ್ತು ತಿಂಗಳಿಂದ ನಡೆಯುತ್ತಿರುವ ರೈತರ ಚಳುವಳಿ ಮತ್ತಷ್ಟು ಬಲ ಪಡೆದುಕೊಳ್ಳುತ್ತಿದ್ದರೆ, ಇತ್ತ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸುವಲ್ಲಿ ತಲ್ಲೀನರಾಗಿದ್ದಾರೆ. ಸದ್ಯ ಈ ಧಾವಂತದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ರೈತ ಪ್ರತಿಭಟನೆಯ ಫೋಟೋ ಶೇರ್ ಮಾಡಿ ಪೇಚಿಗೀಡಾಗಿದ್ದಾರೆ. 

ಕುಟುಂಬಸ್ಥರ ಕಣ್ಣೆದುರೇ ಗರ್ಭಿಣಿ ಪೊಲೀಸ್ ಅಧಿಕಾರಿಯ ಹತ್ಯೆಗೈದ ತಾಲಿಬಾನ್ ರಕ್ಕಸರು!

ಅಪ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬೆನ್ನಲ್ಲೇ, ಬರ್ಬರ ಹತ್ಯೆಯ ಘಟನೆಗಳು ಬೆಳಕಿಗೆ ಬರಲಾರಂಭಿಸಿವೆ. ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ, ತಾಲಿಬಾನ್ ಉಗ್ರರು ಗರ್ಣಿಣಿ ಪೊಲೀಸ್ ಪೊಲೀಸ್ ಅಧಿಕಾರಿಯನ್ನು ಆಕೆಯ ಕುಟುಂಬಸ್ಥರ ಕಣ್ಣೆದುರೇ ರಕ್ತಸಿಕ್ತವಾಗಿ ಕೊಂದು ಹಾಕಿರುವ ಘಟನೆ ಘೋರ್ ಪ್ರಾಂತ್ಯದಲ್ಲಿ ನಡೆದಿದೆ

ಅಂದು ಅಂತ ಡ್ರೆಸ್‌ನಿಂದ ಶಾಕ್.. ಇಂದು ಸಮುದ್ರ ದಂಡೆಯ ಮೇಲಿನ ಬಿಸಿ ಲುಕ್!

ಒಟಿಟಿ ಮಾದರಿಯ ಬಿಗ್ ಬಾಸ್ ನಲ್ಲಿ ಸೆಕ್ಸ್ ನಡೆದಿದೆ..ಕ್ಯಾಮರಾದಲ್ಲಿ ತೋರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಬಾಂಬ್ ಸಿಡಿಸಿದ್ದ  ಉರ್ಫಿ ಜಾವೇದ್ ವಿಚಿತ್ರ ಡ್ರೆಸ್ ಧರಿಸಿ ಟ್ರೋಲ್ ಆಗಿದ್ದರು. ಈಗ ಅದನ್ನು ಮೀರಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಹಾಜರಿ ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿ ಇತಿಹಾಸ ಸೃಷ್ಟಿ : MESಗೆ ಭಾರೀ ಮುಖಭಂಗ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಗದ್ದುಗೆ ಏರಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಭಾರೀ ಕುತೂಹಲ ಸೃಷ್ಟಿಸಿದ್ದ ಫಲಿತಾಂಶದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ. 

75 ವರ್ಷ ಮೇಲ್ಪಟ್ಟವರಿಗೆ ಐಟಿ ರಿಟರ್ನ್ಸ್ ವಿನಾಯ್ತಿ ಫಾರಂ ಬಿಡುಗಡೆ!

ವರ್ಷ ಮೇಲ್ಪಟ್ಟವರು ಪಿಂಚಣಿ ಮತ್ತು ನಿಶ್ಚಿತ ಠೇವಣಿಗೆ ಸಿಗುವ ಬಡ್ಡಿಯ ಆದಾಯ ಮಾತ್ರ ಹೊಂದಿದ್ದರೆ ಅಂತಹವರು ಇನ್ನುಮುಂದೆ ಆದಾಯ ತೆರಿಗೆ ರಿಟನ್ಸ್‌ರ್‍ ಸಲ್ಲಿಕೆ ಮಾಡುವ ಅಗತ್ಯವಿಲ್ಲ. ಈ ಆದಾಯದಾರರಿಗೆ ತೆರಿಗೆ ರಿಟನ್ಸ್‌ರ್‍ ಸಲ್ಲಿಸುವ ಗೊಡವೆಯಿಂದ ಮುಕ್ತಿ ನೀಡುವ 12ಬಿಬಿಎ ಎಂಬ ಹೊಸ ಫಾರಂ ಅನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ 27ಕ್ಕೆ ಭಾರತ್ ಬಂದ್; ಸಂಪೂರ್ಣ ಬೆಂಬಲ ಘೋಷಿಸಿದ ಕಾಂಗ್ರೆಸ್!

ಸೆಪ್ಟೆಂಬರ್ 27 ರಂದು ಭಾರತ್ ಬಂದ್‌ಗೆ ಕರೆ ನೀಡುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ಚುರುಕುಗೊಳಿಸಲು ರೈತ ಸಂಘಟನೆ ಮುಂದಾಗಿದೆ. ರೈತರು ಕರೆ ನೀಡಿದ ಭಾರತ್ ಬಂದ್‌ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ.

ಮಹಾನಗರ ಪಾಲಿಕೆ ಎಲೆಕ್ಷನ್ ರಿಸಲ್ಟ್: ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

ರಾಜ್ಯದ 3 ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಇಂದು (ಸೆ.06) ಪ್ರಕಟವಾಗಿದ್ದು, ಒಂದರಲ್ಲಿ (ಬೆಳಗಾವಿ) ಬಿಜೆಪಿ ಬಹುಮತ ಸಾಧಿಸಿದ್ರೆ, ಕಲಬುರಗಿ ಹಾಗೂ ಹುಬ್ಬಳ್ಳಿ ಧಾರವಾಡದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಇದರಿಂದ ಮೂರಲ್ಲಿ ಒಂದು ಸ್ವತಂತ್ರವಾಗಿದ್ರೆ, ಇನ್ನುಳಿದ ಎರಡು ಪಾಲಿಕೆಗಳು ಅತಂತ್ರವಾಗಿವೆ. 

ಕಲಬುರಗಿ ಅತಂತ್ರ : 4 ಸ್ಥಾನದಲ್ಲಿ ಗೆದ್ದ ಜೆಡಿಎಸ್ ಕಿಂಗ್ ಮೇಕರ್

 ಕಲಬುರಗಿ ಮಹಾನಗರ ಪಾಲಿಕೆ ಮತ್ತೆ ಅತಂತ್ರವಾಗಿದೆ.  ಯಾವುದೇ ಪಕ್ಷಕ್ಕೂ ಮತದಾರರು ಬಹುಮತ ನೀಡಿಲ್ಲ. 

ಪಾಲಿಕೆ ಎಲೆಕ್ಷನ್‌ ಪ್ರಚಾರಕ್ಕೆ ಸಿದ್ದರಾಮಯ್ಯ ಗೈರು: ಕಾರಣ ಕೊಟ್ಟ ನಳಿನ್ ಕುಮಾರ್ ಕಟೀಲ್

 3 ಮಹಾನಗರ ಪಾಲಿಕೆಗಳ ಚುನಾವಣೆಯ ಸಂಪೂರ್ಣ ಫಲಿತಾಂಶ ಇಂದು (ಸೆ.06) ಹೊರಬಿದ್ದಿದೆ. ಬೆಳಗಾವಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕರೇ ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರವಾಗಿದೆ.

click me!