ಸಿದ್ದರಾಮಯ್ಯ ಮೋಸ ಮಾಡೋದ್ರಲ್ಲಿ ನಿಸ್ಸೀಮರು: ಗೋವಿಂದ ಕಾರಜೋಳ ವಾಗ್ದಾಳಿ

By Girish Goudar  |  First Published May 1, 2024, 10:49 PM IST

ಸಿದ್ದರಾಮಯ್ಯ ಅವರು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ತಿದಾರೆ. ಎಸ್ಸಿ, ಎಸ್ಟಿ ಹಣ ಬಳಸಿಕೊಳ್ಳಲು ಕಾನೂನು ತಂದಿದ್ದೀನಿ ಅಂತಾರೆ. ಆದ್ರೆ ಅದೇ ಕಾನೂನನ್ನು ಸಿದ್ದರಾಮಯ್ಯ ಅವ್ರು ದುರುಪಯೋಗ ಮಾಡಿಕೊಳ್ತಿದಾರೆ. ಹೀಗಾಗಿ ಈ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಲು ನಾವು ನಿರ್ಧಾರ ಮಾಡಿದ್ದೇವೆ ಎಂದ ಗೋವಿಂದ ಕಾರಜೋಳ 


ಬಾಗಲಕೋಟೆ(ಮೇ.01): ಸಿದ್ದರಾಮಯ್ಯ ಸರ್ಕಾರ 25 ಸಾವಿರ ಕೋಟಿ ರೂಪಾಯಿ ಎಸ್ ಸಿ, ಎಸ್ ಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಆರೋಪ‌ ಮಾಡಿದ್ದಾರೆ.

ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೋವಿಂದ ಕಾರಜೋಳ ಅವರು, ಸಿದ್ದರಾಮಯ್ಯ ಅವರು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ತಿದಾರೆ. ಎಸ್ಸಿ, ಎಸ್ಟಿ ಹಣ ಬಳಸಿಕೊಳ್ಳಲು ಕಾನೂನು ತಂದಿದ್ದೀನಿ ಅಂತಾರೆ. ಆದ್ರೆ ಅದೇ ಕಾನೂನನ್ನು ಸಿದ್ದರಾಮಯ್ಯ ಅವ್ರು ದುರುಪಯೋಗ ಮಾಡಿಕೊಳ್ತಿದಾರೆ. ಹೀಗಾಗಿ ಈ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಲು ನಾವು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.  

Tap to resize

Latest Videos

undefined

BAGALKOTE LOK SABHA CONSTITUENCY: 4 ಬಾರಿ ವಿನ್ನರ್‌ ಗದ್ದಿಗೌಡರಿಗೆ ಹೊಸ ಮುಖ ಸಂಯುಕ್ತಾ ಸವಾಲ್‌!

ಕಾಂಗ್ರೆಸ್‌ನವರಿಗೆ ಸೋಲಿನ ಭೀತಿ ಎದುರಾದಾಗ ಬಿಜೆಪಿ ಬಂದ್ರೆ ಸಂವಿಧಾನ ಬದಲು ಮಾಡ್ತಾರೆ ಅಂತಾರೆ. ಹತ್ತು ವರ್ಷದ ಮೋದಿ ಅವರ ಆಡಳಿತದಲ್ಲಿ ಸಂವಿಧಾನಕ್ಕೆ ಧಕ್ಕೆ ಬರುವ ಯಾವುದೇ ಕ್ರಮವನ್ನು ಎನ್‌ಡಿಎ ಸರ್ಕಾರ ತೆಗೆದುಕೊಂಡಿಲ್ಲ. ಆದ್ರೆ ಸುಳ್ಳು ಹೇಳಿ, ದಲಿತರಿಗೆ ಮೋಸ ಮಾಡಿ ದಾರಿ ತಪ್ಪಿಸುವ ಕೆಲಸ ಸಿದ್ದರಾಮಯ್ಯ ಮಾಡ್ತಿದಾರೆ. ಸಿದ್ದರಾಮಯ್ಯ ದಾರಿ ತಪ್ಪಿಸುವ, ಮೋಸ ಮಾಡುವುದ್ರಲ್ಲಿ ನಿಸ್ಸೀಮರು ಎಂದು ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. 

click me!