ಬೊಮ್ಮಾಯಿ ಸಂಪುಟ ಸೇರಿದ ಸಚಿವರ ಪಟ್ಟಿ, ಗಡಿ ದಾಟಿದ ಬಾಲಕ ಪೊಲೀಸರ ಅತಿಥಿ; ಆ.4ರ ಟಾಪ್ 10 ಸುದ್ದಿ!

By Suvarna NewsFirst Published Aug 4, 2021, 4:41 PM IST
Highlights

ಬಸವರಾಜ ಬೊಮ್ಮಾಯಿ ಸಂಪುಟ ರಚನೆಯಾಗಿದೆ. 29 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮನೆಯಲ್ಲಿ ಜಗಳ ಮಾಡಿ ಸಿಟ್ಟಿನಿಂದ ಗಡಿ ದಾಟಿದ ಬಾಲಕ ಇದೀಗ ಭಾರತೀಯ ಸೇನೆ ವಶಕ್ಕೆ ಪಡೆದಿದೆ. ಪದಕ ಗೆದ್ದ ಬಾಕ್ಸರ್ ಲೋವ್ಲಿನಾಗೆ ಮೋದಿ ಶುಭಾಶಯ ಕೋರಿದ್ದಾರೆ. ಕೊರೋನ ಪಾಸೌಟ್ ವಿದ್ಯಾರ್ಥಿಗಳಿ ಸಿಗುತ್ತಿಲ್ಲ ಉದ್ಯೋಗ, ವರ್ಜಿನ್ ಟೈಗರ್ ಶ್ರಾಫ್ ಸೇರಿದಂತೆ ಆಗಸ್ಟ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಗೆದ್ದ ಬಿಎಸ್‌ವೈ, ಬೊಮ್ಮಾಯಿ ಸಂಪುಟಕ್ಕೆ 29 ಸಚಿವರ ಸೇರ್ಪಡೆ: ಇಲ್ಲಿದೆ ಮಂತ್ರಿಗಳ ಪಟ್ಟಿ!

ಅಂತೂ ಇಂತೂ ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ಸಚಿವ ಸಂಪುಟ ರಚನೆಯಾಗಿದೆ. ಬೊಮ್ಮಾಯಿ ಸಂಪುಟಕ್ಕೆ 29 ಮಂದಿ ನೂತನ ಸಚಿವರು ಸೇರ್ಪಡೆಗೊಂಡಿದ್ದು, ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜಾತಿ, ಕ್ಷೇತ್ರ ಎಂದು ಅನೇಕ ಬಗೆಯ ಲೆಕ್ಕಾಆಚಾರ ಹಾಕಿ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.

ಮನೆಯಲ್ಲಿ ಜಗಳ, ಸಿಟ್ಟಿನಿಂದ ಗಡಿ ದಾಟಿ ಭಾರತಕ್ಕೆ ಬಂದ ಪಾಕ್ ಬಾಲಕ!

ಅಪ್ಪ ಅಮ್ಮ ತಮ್ಮ ಮಾತು ಕೇಳದಾಗ ಮಕ್ಕಳು ಕೋಪ ಪಟ್ಟುಕೊಳ್ಳುವುದು ಸಹಜ, ಅನೇಕ ಬಾರಿ ಮಕ್ಕಳು ಇದೇ ವಿಚಾರವಾಗಿ ಮನೆಯಿಂದ ಓಡಿ ಹೋದ ಪ್ರಕರಂಣಗಳೂ ವರದಿಯಾಗಿವೆ. ಆದರೀಗ ಬಲು ಅಪರೂಪದ ಹಾಗೂ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಪಾಕಿಸ್ತಾನದ ಒಬ್ಬ ಬಾಲಕನೊಬ್ಬ ಮನೆಯಲ್ಲಿ ಜಗಳವಾಡಿ ಮನೆಯಿಂದ ಓಡಿ ಹೋಗುವ ನಿರ್ಧಾರವನ್ನು ಅದೆಷ್ಟು ಗಂಭಿರವಾಗಿ ಪರಿಗಣಿಸಿದ್ದಾನೆಂದರೆ, ಆತ ಪಾಕಿಸ್ತಾನ ಬಿಟ್ಟು ಗಡಿ ದಾಟಿ ಭಾರತಕ್ಕೆ ಬಂದಿದ್ದಾನೆ.

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಬಾಕ್ಸರ್ ಲೊವ್ಲಿನಾಗೆ ಶುಭ ಕೋರಿದ ಮೋದಿ!

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ 69 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಯುವ ಮಹಿಳಾ ಲೊವ್ಲಿನಾ ಬೊರ್ಗೊಹೈನ್‌ ಹಾಲಿ ವಿಶ್ವ ಚಾಂಪಿಯನ್‌ ಟರ್ಕಿಯ ಬುಸಾನೆಜ್‌ ಸುರ್ಮೆನೆಲಿ ಎದುರು 5-0 ಅಂಕಗಳ ಅಂತರದಲ್ಲಿ ಮುಗ್ಗರಿಸಿದ್ದಾರೆ. ಈ ಮೂಲಕ ಅಸ್ಸಾಂನ ಲೊವ್ಲಿನಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಸದ್ಯ ಕಂಚಿನ ಪದಕ ಗೆದ್ದ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ಹಾಟ್ ಗರ್ಲ್‌ಫ್ರೆಂಡ್ ಇದ್ರೂ ವರ್ಜಿನ್ ಅಂತೆ ಟೈಗರ್ ಶ್ರಾಫ್

ಶೋದಲ್ಲಿ ಭಾಗಿಯಾದ ನಂತರ ಈಗ ನಟನೂ ಸುದ್ದಿಯಲ್ಲಿದ್ದಾರೆ. ಹಿರಿಯ ನಟ ಜಾಕಿ ಶ್ರಾಫ್ ಅವರ ಪುತ್ರ ಟೈಗರ್ ಶ್ರಾಫ್ ಹಾಸ್ಯಭರಿತ ಉತ್ತರ ಹಾಗೂ ಕಮೆಂಟ್‌ಗಳನ್ನು ಮಾಡಿ ಸುದ್ದಿಯಾಗಿದ್ದಾರೆ.

ಭುಗಿಲೆದ್ದ ಅಸಮಾಧಾನ: ಸಿಎಂವಿರುದ್ಧ ಸಂಘ ಪರಿವಾರಕ್ಕೆ ದೂರು ನೀಡಲು ನಿರ್ಧರಿಸಿದ ಶಾಸಕ

ಬಹು ನಿರೀಕ್ಷಿತ ಬೊಮ್ಮಾಯಿ ಸಂಪುಟ ಕೊನೆಗೂ ರಚನೆಗೊಂಡಿದ್ದು, ಇಂದು (ಬುಧವಾರ) 29 ಜನರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

2021ರ ಪಾಸ್‌ಔಟ್ ಬ್ಯಾಚ್‌ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ಉದ್ಯೋಗವಿಲ್ಲ!'

ಕಳೆದ 18 ತಿಂಗಳು ವಿಶ್ವಾದ್ಯಂತ ವಿದ್ಯಾರ್ಥಿಗಳ ಪಾಳಿಗೆ ಕರಾಳ ದಿನಗಳಂತಿದ್ದವು. ನಿಯಮಿತ ತರಗತಿಗಳಿಗೆ ಹೊಸ ವ್ಯವಸ್ಥೆಗೆ ಒಗ್ಗಿಕೊಂಡಿದ್ದಲ್ಲದೇ, ಪರೀಕ್ಷೆಗಳು, ಪ್ರವೇಶಾತಿ ಮತ್ತು ಉದ್ಯೋಗಕ್ಕಾಗಿ ಅನೇಕ ಸಮಸ್ಯೆಗಳನ್ನೆದುರಿಸುವಂತಾಗಿದೆ. 2020 ಹಾಗೂ 2021ರಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ತಮ್ಮ ಶಿಕ್ಷಣ ಪೂರೈಸಿದ್ದಾರೆ, ಹೀಗಿರುವಾಗ ಇದು 'ಐಡಿಯಲ್ ಲರ್ನಿಂಗ್ ಇಯರ್' ಅಲ್ಲ ಎಂಬುವುದು ಅನೇಕರ ವಾದವಾಗಿದೆ.

ಇ ವಾಹನ ಖರೀದಿಸಿದ್ರೆ ನೋಂದಣಿ ಸರ್ಟಿಫಿಕೇಟ್ ಶುಲ್ಕ ಕೊಡಬೇಕಿಲ್ಲ!

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದು ಖುಷಿಯ ಸುದ್ದಿ. ಇನ್ನು ಮುಂದೆ ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿಸಿದರೆ ಗ್ರಾಹಕರು ನೋಂದಣಿ ಸರ್ಟಿಫಿಕೇಟ್ ಶುಲ್ಕವನ್ನು ಕಟ್ಟಬೇಕಿಲ್ಲ. ಈ  ಶುಲ್ಕ ವಿನಾಯ್ತಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

ಮದುವೆ ಫೊಟೊಗ್ರಫಿ ಮಾಡಿಕೊಂಡಿದ್ದ ಕೋಟಾ ಇಂದು 2ನೇ ಬಾರಿ ರಾಜ್ಯದ ಮಂತ್ರಿ

ಮದುವೆ ಫೋಟೊಗ್ರಫಿ ಮಾಡಿಕೊಂಡಿದ್ದ ಯುವಕ, ಸಂಘದ ಸಂಪರ್ಕಕ್ಕೆ ಬಂದು, ಹಿಂದುಳಿದ ಸಮುದಾಯದ ನಾಯಕನಾಗಿ ಬೆಳೆದು, ಇದೀಗ 62ರ ಹರೆಯದ ಕೋಟ ಶ್ರೀನಿವಾಸ ಪೂಜಾರಿ 2ನೇ ಬಾರಿ ರಾಜ್ಯದ ಮಂತ್ರಿಯಾಗಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಮುಜರಾಯಿ, ಮೀನುಗಾರಿಕಾ ಖಾತೆ ನಿರ್ವಹಿಸಿದ ಕೋಟಾಗೆ ಇದೀಗ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಒಲಿದಿದೆ. 

click me!