ಮೋದಿಯೊಟ್ಟಿಗೆ ರಾಮಾಯಣದ ಸೀತೆ, ಥ್ರೋ ಬ್ಯಾಕ್ ಇಮೇಜ್ ಶೇರ್ ಮಾಡಿಕೊಂಡ ದೀಪಿಕಾ

By Suchethana D  |  First Published Nov 25, 2024, 4:05 PM IST

 ಮೋದಿಯೊಟ್ಟಿಗೆ ರಾಮಾಯಣದ ಸೀತೆ, ಥ್ರೋ ಬ್ಯಾಕ್ ಇಮೇಜ್ ಶೇರ್ ಮಾಡಿಕೊಂಡಿದ್ದಾರೆ ದೀಪಿಕಾ ಚಿಖಲಿಯಾ


1987-88ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ  ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ (Ramayana) ಯಾರಿಗೆ ತಾನೆ ನೆನಪಿಲ್ಲ. ರಾಮನ ಪಾತ್ರಧಾರಿಯಾಗಿದ್ದ ಅರುಣ್​ ಗೋವಿಲ್​, ಸೀತೆಯ ಪಾತ್ರಧಾರಿ ದೀಪಿಕಾ ಚಿಖಲಿಯಾ(Deepika Chikhalia) ಅವರಿಗೆ ವಿಶೇಷ ಮನ್ನಣೆಯೇ ಸಿಗುತ್ತಿದ್ದ ಕಾಲವದು. ಹೋದಲ್ಲಿ, ಬಂದಲ್ಲಿ ಜನರು ನಿಜವಾಗಿಯೂ ಪಾದಪೂಜೆ ಮಾಡಿದ್ದೂ ಇದೆ. ಆದರೆ ಕುತೂಹಲದ ಸಂಗತಿ ಏನೆಂದರೆ, ಇದೇ ಸೀತಾಮಾತೆ ಅರ್ಥಾತ್‌ ನಟಿ ದೀಪಿಕಾ ಚಿಖಲಿಯಾ ಅವರು 1991 ರಲ್ಲಿ ಅವರು ವಡೋದರಾದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆ ಸಮಯದಲ್ಲಿನ ಫೋಟೋ ಒಂದು ಇದೀಗ ವೈರಲ್‌ ಆಗುತ್ತಿದೆ. ಈ ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಅವರನ್ನೂ ನೋಡಬಹುದು.  

   1991ರಲ್ಲಿ ದೀಪಿಕಾ ಚಿಖಲಿಯಾ ವಡೋದರಾದಿಂದ ಆಯ್ಕೆಯಾಗಿದ್ದರು. ಆದರೆ ಕಾಲಕ್ರಮೇಣ ರಾಜಕೀಯ ಜೀವನದಿಂದ ದೀಪಿಕಾ ನಿವೃತ್ತಿ ಪಡೆದಿದ್ದಾರೆ. ನಟನೆಯನ್ನು ಮುಂದುವರೆಸಿದ ಅವರು, ಈಗಲೂ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಕೆಲ ದಿನಗಳ ಹಿಂದೆ ಖುದ್ದು ದೀಪಿಕಾ ಅವರೇ ನರೇಂದ್ರ ಮೋದಿಯವರ ಜೊತೆಗಿನ ಫೋಟೋಗಳನ್ನು ಶೇರ್‍‌ ಮಾಡಿಕೊಂಡಿದ್ದಾರೆ. ಆ ಸಮಯದಲ್ಲಿ ಚುನಾವಣೆಯಲ್ಲಿ ಸಹಕರಿಸಿದ್ದ ನರೇಂದ್ರ ಮೋದಿ ಅವರು ಮೊದಲು ಚುನಾವಣೆಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದವರು.  1985ರಲ್ಲಿ  ಅವರನ್ನು ಬಿಜೆಪಿಗೆ ಆರ್‌ಎಸ್‌ಎಸ್‌ ನೇಮಿಸಿತು.  1986ರಲ್ಲಿ ಎಲ್‌.ಕೆ ಅಡ್ವಾಣಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದಾಗಲೂ ಮೋದಿ ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು.  1987ರಲ್ಲಿ ಗುಜರಾತ್‌ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡರು.  

Tap to resize

Latest Videos

ಆತನಿಗೆ ಶೇಕ್‌ಹ್ಯಾಂಡ್‌ ಮಾಡ್ದೆ: ನನ್ನ ಕೈಯಿಂದ ಬಳ ಬಳ ಎಂದು ರಕ್ತ ಸೋರಲು ಶುರುವಾಯ್ತು! ಆ ಘಟನೆ ನೆನೆದ ಅಕ್ಷಯ್

2001ರಲ್ಲಿ ಗುಜರಾತ್‌ನ ಆಗಿನ ಸಿಎಂ ಕೇಶುಭಾಯಿ ಪಟೇಲ್ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ,   ಪಟೇಲ್ ಆಡಳಿತದ ವಿರುದ್ಧ  ಭಿನ್ನದನಿ ಶುರುವಾಗತೊಡಗಿತ್ತು. ಆಗಲೇ ಬಿಜೆಪಿಗೆ ಬಲಿಷ್ಠ ನಾಯಕರೊಬ್ಬರು ಬೇಕು ಎಂದಾಗ ಮೋದಿಯವರ ಹೆಸರು ಮುನ್ನೆಲೆಗೆ ಬಂದಿತ್ತು.  ಅಲ್ಲಿಂದ ಶುರುವಾದ ಅವರ ನಾಯಕತ್ವದ ಜೀವನ ಇಂದು ಮೂರು ಅವಧಿಗೆ ಪ್ರಧಾನಿಯಾಗುವವರೆಗೆ ಬಂದು ನಿಂತಿದೆ. 2001 ಅಕ್ಟೋಬರ್ 3ರಂದು ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಆಯ್ಕೆಯಾದರು.  ಇದರ ಬಳಿಕ ನಡೆದ 2002ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ಗುಜರಾತ್ ವಿಧಾನಸಭೆ ಪ್ರವೇಶಿಸಿದರು. 2014 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದರು. 
 
2007ರಲ್ಲಿ ಇಂಡಿಯಾ ಟುಡೇ ಮಾಧ್ಯಮ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡರು. ಆ ಸಂದರ್ಭದಲ್ಲಿ ಟೈಮ್ ಮ್ಯಾಗಜೀನ್ ನಿಯತಕಾಲಿಕೆಯ ಏಷ್ಯಾ ಅವತರಣಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡ ಹೆಗ್ಗಳಿಗೆ ಇವರದ್ದು.  2014ರಲ್ಲಿ CNN IBN ಸುದ್ದಿಸಂಸ್ಥೆಯ ಇಂಡಿಯನ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾದರು.  2014, 2015 ಹಾಗೂ 2017ರ ಅತಿ ಪ್ರಭಾವಶಾಲಿ 100 ಭಾರತೀಯ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನೂ ಪಡೆದರು.  2014ರಲ್ಲಿ ಫೋರ್ಬ್ಸ್ ನಿಯತಕಾಲಿಕೆಯ ಜಾಗತಿಕ ಅತಿ ಬಲಿಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ 15ನೇ ಸ್ಥಾನ ಗಿಟ್ಟಿಸಿಕೊಂಡರು. 2015, 2016 ಹಾಗೂ 2018ನೇ ಸಾಲಿನಲ್ಲಿ ಜಗತ್ತಿನಲ್ಲಿ 9ನೇ ಅತಿ ಬಲಿಷ್ಠ ವ್ಯಕ್ತಿಯಾಗಿ ಹೆಸರು ಮಾಡಿದರು.  2015ರಲ್ಲಿ ಫಾರ್ಚ್ಯೂನ್ ಮ್ಯಾಗಜೀನ್ ಪ್ರಥಮ ವಾರ್ಷಿಕ ಜಾಗತಿಕ ಅತಿ ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರು. ತಮ್ಮ ಪ್ರಧಾನಿಯಾಗಿರುವ ಹತ್ತ ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕತೆಯನ್ನು 11ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ತಂದಿರುವ ಹೆಗ್ಗಳಿಕೆ ಇವರದ್ದು. 2047ರಲ್ಲಿ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಪಣತೊಟ್ಟಿರುವ ಇವರು, ಆ ನಿಟ್ಟಿನತ್ತ ಹೆಜ್ಜೆ ಇಡುತ್ತಿದ್ದಾರೆ. 

ದಿನಕ್ಕೆ ಒಂದು ಲಕ್ಷ ಗಳಿಸೋ ಯೋಜನೆ ತಿಳಿಸಿದ್ರಾ ಸುಧಾ ಮೂರ್ತಿ? ವೈರಲ್‌ ವಿಡಿಯೋದಲ್ಲಿ ಅವ್ರು ಹೇಳಿದ್ದೇನು?
 

click me!