CM ಸ್ಥಾನಕ್ಕೆ BJPಯಲ್ಲಿ ಜಿದ್ದಾಜಿದ್ದು, ಭಾರತ-ಲಂಕಾ ಪಂದ್ಯ ರದ್ದು; ಜು.27ರ ಟಾಪ್ 10 ಸುದ್ದಿ!

By Suvarna NewsFirst Published Jul 27, 2021, 4:56 PM IST
Highlights

ಕರ್ನಾಟಕ ಮುಂದಿನ ಸಿಎಂ ಯಾರು? ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ಆದರೆ ರೇಸ್‌ನಲ್ಲಿ ಹಲವರ ಹೆಸರು ಕೇಳಿಬರುತ್ತಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಟಿ20 ರಂದ್ಯ ಮುಂದೂಡಿಕೆಯಾಗಿದೆ. ರಾಜ್ ಕುಂದ್ರಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ, Googleನಲ್ಲಿ 2 ಕೋಟಿ ರೂ. ವೇತನದ ಉದ್ಯೋಗ ಪಡೆದ ಹಳ್ಳಿ ಪ್ರತಿಭೆ ಸೇರಿದಂತೆ ಜುಲೈ 27ರ ಟಾಪ್ 10 ಸುದ್ದಿ ವಿವರ.

ಬಿಎಸ್‌ವೈ ರಾಜೀನಾಮೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಅಭಿಮಾನಿ!

ಕಳೆದ ಕೆಲ ಸಮಯದಿಂದ ಕೇಳಿ ಬಂದಿದ್ದ ಎಲ್ಲಾ ಗೊಂದಲಗಳಿಗೂ ಬಿ. ಎಸ್‌. ಯಡಿಯೂರಪ್ಪನವರ ರಾಜೀನಾಮೆ ತೆರೆ ಎಳೆದಿದೆ. ಬಿಎಸ್‌ವೈ ರಾಜೀನಾಮೆ ಒಂದೆಡೆ ಅವರ ವಿರೋಧಿ ಬಣವನ್ನು ಸಂತಸಕ್ಕೀಡು ಮಾಡಿದ್ದರೆ, ವಿರೋಧ ಪಕ್ಷಗಳಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುವಂತೆ ಮಾಡಿದೆ. ಆದರೆ ಇವೆಲ್ಲದರ ನಡುವೆ ಬಿಎಸ್‌ವೈ ಅಭಿಮಾನಿಗಳು ಮಾತ್ರ ಆಘಾತಕ್ಕೊಳಗಾಗಿದ್ದಾರೆ. ಅತ್ತ ಬಿಎಸ್‌ವೈ ತವರು ಕ್ಷೇತ್ರ ಶಿಕಾರಿಪುರದಲ್ಲಿ ನೀರವ ಮೌನ ಮನೆ ಮಾಡಿದೆ.

ತುಂಬಾ ಪಿಝಾ ತಿನ್ನಬೇಕು ಎಂದ ಚಾನು..! ಲೈಫ್‌ ಟೈಂ ಫ್ರೀ ಪಿಝಾ ಘೋಷಿಸಿದ ಡೊಮಿನೋಸ್

ನನಗೆ ಮೊದಲು ಪಿಝಾ ತಿನ್ನಬೇಕು. ಪಿಝಾ ತಿನ್ನದೆ ಬಹಳಷ್ಟು ಕಾಲವಾಯ್ತು.. ಇವತ್ತು ಹೆಚ್ಚು ಪಿಝಾ ತಿನ್ನಬೇಕು ಎಂದು ಚಾನು ಹೇಳಿದ್ದೇ ತಡ, ಲೈಫ್ ಟೈಂ ಫ್ರೀ ಪಿಝಾ ಘೋಷಿಸಿದ ಡೊಮಿನೋಸ್

ನೂತನ ಐಟಿ ಪೋರ್ಟಲ್‌ ಅಭಿವೃದ್ಧಿಗೆ ಇಸ್ಫೋಸಿಸ್‌ಗೆ 165 ಕೋಟಿ ರೂ.!

ಆದಾಯ ತೆರಿಗೆ ಸಲ್ಲಿಕೆಯ ನೂತನ ಇ-ಫೈಲಿಂಗ್‌ ಪೋರ್ಟಲ್‌ ಅಭಿವೃದ್ಧಿಪಡಿಸಿದ ಇಸ್ಫೋಸಿಸ್‌ ಸಂಸ್ಥೆಗೆ 2019ರ ಜನವರಿಯಿಂದ 2021ರ ಜೂನ್‌ವರೆಗೆ 164.5 ಕೋಟಿ ರು. ಸಂದಾಯ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಭಾರತ-ಲಂಕಾ ನಡುವಿನ ಎರಡನೇ ಟಿ20 ಪಂದ್ಯ ದಿಢೀರ್ ರದ್ದು..!

ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಮೇಲೆ ಕೊರೋನಾ ವೈರಸ್ ತನ್ನ ವಕ್ರದೃಷ್ಟಿ ಬೀರಿದ್ದು ಎರಡನೇ ಪಂದ್ಯವನ್ನು ದಿಢೀರ್ ರದ್ದು ಪಡಿಸಲಾಗಿದೆ. ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಕೋವಿಡ್ 19 ದೃಢಪಟ್ಟ ಬೆನ್ನಲ್ಲೇ ಎರಡನೇ ಟಿ20 ಪಂದ್ಯವನ್ನು ರದ್ದು ಪಡಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸದ್ಯ ಬಿಡುಗಡೆ ಇಲ್ಲ..! ರಾಜ್ ಕುಂದ್ರಾಗೆ ಮತ್ತೆ 14 ದಿನ ಕಸ್ಟಡಿ

ನೀಲಿ ಚಿತ್ರ ದಂಧೆ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾಗೆ ಮತ್ತೆ 14 ದಿನ ಕಸ್ಟಡಿ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಜು.27ರಂದು ನಟನ ಜಾಮೀನು ಅರ್ಜಿ ವಿಚಾರಣೆಯನ್ನು ಮಾಡಿದ ಬಾಂಬೆ ಹೈಕೋರ್ಟ್ ಈ ಆದೇಶವನ್ನು ನೀಡಿದೆ.

ಕ್ಯಾಪಿಟಲ್‌ ಸಭೆಯ ಕ್ಯಾಪ್ಟನ್ ಯಾರು? ಅವರನ್ ಬಿಟ್ ಇವರನ್ನ ಬಿಟ್ ಇನ್ಯಾರು?

ಕ್ಯಾಪಿಟಲ್‌ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಕ್ಯಾಪ್ಟನ್ ಯಾರು ಆಗುತ್ತಾರೆ ಉತ್ತರ ಸಿಗಲಿದೆ.

7 ತಿಂಗಳ ಶ್ರಮ: Googleನಲ್ಲಿ 2 ಕೋಟಿ ರೂ. ವೇತನದ ಉದ್ಯೋಗ ಪಡೆದ ಹಳ್ಳಿ ಪ್ರತಿಭೆ!

ಕಠಿಣ ಪರಿಶ್ರಮದಿಂದ ಅವರು ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ ಕೆಲಸವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ವಾರ್ಷಿಕ ಆದಾಯ 1.8 ಕೋಟಿ ರೂಪಾಯಿ ಆಗಿದೆ. ಅಷ್ಟಕ್ಕೂ ಈ ಹಳ್ಳಿ ಪ್ರತಿಭೆಗೆ ಈ ಉದ್ಯೋಗ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ

ಕೇಂದ್ರದಿಂದ ತಾರಮತ್ಯ ಬೇಡ; ಟೆಸ್ಲಾ ಆಮದು ಸುಂಕ ಕಡಿತ ಮನವಿಗೆ ಟಾಟಾ ಮೋಟಾರ್ಸ್ ತಿರುಗೇಟು!

ಭಾರತದಲ್ಲಿರುವ ಸ್ವದೇಶಿ ಹಾಗೂ ವಿದೇಶಿ ಎಲ್ಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಗಳನ್ನು ಕೇಂದ್ರ ಸರ್ಕಾರ ಒಂದೇ ರೀತಿಯಾಗಿ ನೋಡಬೇಕು. ಇದರಲ್ಲಿ ತಾರತಮ್ಯ ಸಲ್ಲದು ಎಂದು ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಆಗ್ರಹಿಸಿದೆ. ದೇಶದಲ್ಲಿ ಅಮೆರಿಕ ಮೂಲಕ ಟೆಸ್ಲಾ ಕಾರುಗಳ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಟೆಸ್ಲಾ ಆಮದು ಸುಂಕ ಕಡಿತಗೊಳಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಬೆಳವಣಿಗೆ ಕುರಿತು ಟಾಟಾ ಅಸಮಾಧಾನ ವ್ಯಕ್ತಪಡಿಸಿದೆ.

ಪೋಷಕರ ಆತಂಕ ದೂರ; ಮುಂದಿನ ತಿಂಗಳಿಂದ ಮಕ್ಕಳಿಕೆ ಕೊರೋನಾ ಲಸಿಕೆ ಅಭಿಯಾನ!

ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದೆ. ಈಗಾಗಲೇ 44 ಕೋಟಿಗೂ ಅಧಿಕ ಡೋಸ್ ನೀಡಲಾಗಿದೆ. ಇದರ ನಡುವೆ 3ನೇ ಅಲೆ ಭೀತಿ ಕಾಡುತ್ತಿದೆ. ವಿಶೇಷವಾಗಿ ಮಕ್ಕಳ ಮೇಲೆ ಪರಿಣಾಮ ಬೀರಲಿದೆ  ಅನ್ನೋ ತಜ್ಞರ ಮಾತುಗಳು ಪೋಷಕರ ಆತಂಕ ಹೆಚ್ಚಿಸಿದೆ. ಇದೀಗ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿಕೆ ಭಾರತೀಯರಲ್ಲಿ ನೆಮ್ಮದಿ ತಂದಿದೆ.

click me!