ಮೇಲ್ಜಾತಿಯವರು ಪೇಪರ್‌ ಸೆಲೆಕ್ಟ್‌ ಮಾಡುವ ಕಾರಣ ದಲಿತರು ಫೇಲ್‌ ಆಗುತ್ತಿದ್ದಾರೆ ಎಂದ ರಾಹುಲ್‌ ಗಾಂಧಿ!

Published : May 06, 2024, 08:38 PM ISTUpdated : May 06, 2024, 08:46 PM IST
ಮೇಲ್ಜಾತಿಯವರು ಪೇಪರ್‌ ಸೆಲೆಕ್ಟ್‌ ಮಾಡುವ ಕಾರಣ ದಲಿತರು ಫೇಲ್‌ ಆಗುತ್ತಿದ್ದಾರೆ ಎಂದ ರಾಹುಲ್‌ ಗಾಂಧಿ!

ಸಾರಾಂಶ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಡಿರುವ ಮಾತುಗಳು ಶಿಕ್ಷಣ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿವೆ. ಹೆಚ್ಚಿನ ಜನರು ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.

ನವದೆಹಲಿ (ಮೇ.6): ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಂಚಿತ ವರ್ಗಗಳು, ಪರಿಶಿಷ್ಟ ವರ್ಗಗಳು ಮತ್ತು ಮುಂದುವರಿದ ಜಾತಿಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ರಾಹುಲ್ ಗಾಂಧಿ, ಕೆಲವು ಜನರೊಂದಿಗೆ ಮಾತನಾಡುವಾಗ, ಇಡೀ ವ್ಯವಸ್ಥೆಯನ್ನು ಪ್ರಶ್ನೆ ಮಾಡಿದ್ದು, ಮೇಲ್ವರ್ಗದ ಜನರು ಪರೀಕ್ಷೆಯಲ್ಲಿ ಪೇಪರ್ ಸೆಟ್ ಮಾಡುತ್ತಾರೆ, ಆದ್ದರಿಂದ ದಲಿತ ಜಾತಿಗಳ ಜನರು ಫೇಲ್‌ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಕರಿಯರು ಮತ್ತು ಬಿಳಿಯರ ನಡುವೆ ಬಹಳ ಹಿಂದಿನಿಂದಲೂ ಇರುವ ಇಂತಹ ತಾರತಮ್ಯವನ್ನು ರಾಹುಲ್ ಗಾಂಧಿ ಉದಾಹರಣೆ ನೀಡಿ ಸಾಮಾನ್ಯ ಜನರಿಗೆ ವಿವರಿಸುತ್ತಿರುವುದು ಕಂಡು ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೋಗೆ ಸಂಬಂಧಿಸಿದಂತೆ ಯೂಸರ್ಸ್‌ಗಳು, ಕಾಂಗ್ರೆಸ್ ನಾಯಕ ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಸಾಮಾಜಿಕ ರಚನೆಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?: ದೇಶದಲ್ಲಿ ಉನ್ನತ ಹುದ್ದೆಗಳಿಗೆ ನೇಮಕಾತಿಗಳು ಕೇವಲ ಅರ್ಹತೆಯ ಆಧಾರ ಆಗಬಾರದು ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿದ್ದಾರೆ. ಪ್ರಮುಖ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ಮತ್ತು ಮಾಜಿ ಉಪಕುಲಪತಿಗಳನ್ನು ಗುರಿಯಾಗಿಸಿಕೊಂಡು ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ದೇಶದ ಉನ್ನತ ಹುದ್ದೆಗಳ ನೇಮಕಾತಿಯು ಅರ್ಹತೆಯ ಆಧಾರದ ಮೇಲೆ ನಡೆಯಬಾರದು ಎಂದು ಅವರು ಹೇಳಿದ್ದರು. ಪ್ರತಿಭಾವಂತರನ್ನು ಆಯ್ಕೆ ಮಾಡುವವರು ಯಾರು? ದಲಿತರು ಫೇಲ್ ಆಗುತ್ತಾರೆ ಏಕೆಂದರೆ ಪರೀಕ್ಷೆಯ ಪತ್ರಿಕೆಗಳನ್ನು ಮೇಲ್ಜಾತಿಯವರು ಹೊಂದಿಸುತ್ತಾರೆ. ವ್ಯವಸ್ಥೆಯನ್ನು ಈ ರೀತಿಯಲ್ಲಿಯೇ ಸ್ಥಾಪಿಸಲಾಗಿದೆ. ದಲಿತರನ್ನು ಉನ್ನತ ಸ್ಥಾನದಲ್ಲಿಟ್ಟರೆ ಎಲ್ಲ ಮೇಲ್ವರ್ಗದವರು ಫೇಲ್ ಆಗುತ್ತಾರೆ, ದಲಿತರು ಉತ್ತೀರ್ಣರಾಗುತ್ತಾರೆ’ ಎಂದು ಅವರು ಹೇಳಿದ್ದರು. ತಮ್ಮ ಮಾತನ್ನು ಸಾಬೀತು ಮಾಡಲು ಅವರು ಅಮೇರಿಕಾದ ಉದಾಹರಣೆಯನ್ನೂ ನೀಡಿದ್ದರು.

ಆದರೆ, ಅವರ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಹಲವರು ರಾಹುಲ್ ಗಾಂಧಿಯವರ ಹೇಳಿಕೆಯನ್ನು ಹಾನಿಕಾರಕ ಎಂದು ಬಣ್ಣಿಸಿದ್ದಾರೆ. ಹಲವರು ರಾಹುಲ್ ಗಾಂಧಿಯನ್ನು ಭಯೋತ್ಪಾದಕನಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ದೇಶದ ಜನರನ್ನು ವಿಭಜನೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ದೂರಿದ್ದಾರೆ. ಅವರು ಕೇವಲ ಹಿಂದೂಗಳನ್ನು ವಿಭಜಿಸುತ್ತಿಲ್ಲ, ಮುಸ್ಲಿಮರು ಮತ್ತು ದಲಿತರನ್ನು ಸಹ ವಿಭಜಿಸುತ್ತಿದ್ದಾರೆ ಎಂದಿದ್ದಾರೆ.

ಚುನಾವಣೆ ಮುಗಿಯುವವರೆಗೂ ಅಮೇಠಿ, ರಾಯ್‌ಬರೇಲಿ ಪ್ರಿಯಾಂಕಾ ಠಿಕಾಣಿ, ಸಹೋದರನನ್ನು ಗೆಲ್ಲಿಸಲು ಪಣ

ರಾಹುಲ್ ಗಾಂಧಿಯವರ ಹೇಳಿಕೆಯನ್ನು ಬಗ್ಗೆ, ಮಾಜಿ ವಿಸಿ ಸೇರಿದಂತೆ 181 ಉಪಕುಲಪತಿಗಳು ರಾಹುಲ್ ಗಾಂಧಿಯವರ ಹೇಳಿಕೆಯನ್ನು ತೀವ್ರವಾಗಿ ಟೀಕೆ ಮಾಡಿದ್ದಾರೆ. ದೇಶವು ಇಂದು ಶೇಕಡಾ 80 ಕ್ಕಿಂತ ಹೆಚ್ಚು ಖಾಸಗಿ ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಅಲ್ಲಿ ಸಂಘಟನೆ ಇಲ್ಲ. ಅರ್ಹತೆಯ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ರಾಹುಲ್‌ ಹೇಳಿಕೆಯ ಬಗ್ಗೆ ಚುನಾವಣಾ ಆಯೋಗವನ್ನು ಸಂಪರ್ಕಿಸುವುದಾಗಿಯೂ ತಿಳಿಸಿದ್ದಾರೆ.

ಸರಳತೆ, ಪಾರದರ್ಶಕತೆಯ ಉದ್ದೇಶದಿಂದ ಟೀ ಶರ್ಟ್ ಧರಿಸುವೆ: ರಾಹುಲ್‌ ಗಾಂಧಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ