ಸಂಚಾರದಲ್ಲಿ ಅಂತ್ಯವಾಯ್ತು ಸಂಚಾರಿ ಜೀವನ, ಭುಗಿಲೆದ್ದ ನಾಯಕತ್ವ ಅಸಮಾಧಾನ; ಜೂ.15ರ ಟಾಪ್ 10!

By Suvarna NewsFirst Published Jun 15, 2021, 5:11 PM IST
Highlights

ಅಪಘಾತದಿಂದ ಮೆದೆಳು ನಿಷ್ಕ್ರೀಯಗೊಂಡ ನಟ ಸಂಚಾರಿ ವಿಜಯ್ ಅಂಗಾಂಗ ದಾನದ ಬಳಿಕ ಕೊನೆಯುಸಿರೆಳಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟನಿಗೆ ಸ್ಯಾಂಡ‌ವುಡ್ ಸೇರಿದಂತೆ ಗಣ್ಯರು ಅಶ್ರುತರ್ಪಣ ಸಲ್ಲಿಸಿದ್ದಾರೆ. ಇತ್ತ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಚುರುಕಾಗಿದೆ. ಮಹಾ’ ಮೈತ್ರಿಯಲ್ಲಿ ಬಿರುಕು, ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೆಲ ಬದಲಾವಣೆ ಸೇರಿದಂತೆ ಜೂನ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಗಲ್ವಾನ್ ಸಂಘರ್ಷದ ಬಳಿಕ ಶೇ.43ರಷ್ಟು ಭಾರತೀಯರು ಚೀನಾ ಉತ್ಪನ್ನಕ್ಕೆ ಗುಡ್ ಬೈ; ಸಮೀಕ್ಷೆ!...

ಗಲ್ವಾನ್ ಘರ್ಷಣೆಗೆ ಒಂದು ವರ್ಷ ಸಂದಿದೆ. ಕಳೆದೊಂದು ವರ್ಷದಲ್ಲಿ ಶೇಕಡಾ 43 ರಷ್ಟು ಭಾರತೀಯರು ಸಂಪೂರ್ಣವಾಗಿ ಚೀನಾ ಉತ್ಪನ್ನಕ್ಕೆ ಗುಡ್ ಬೈ ಹೇಳಿದ್ದಾರೆ. ಇನ್ನು ಶೇಕಡಾ 60 ರಷ್ಟು ಭಾರತೀಯರು ಚೀನಾದ ಕೇವಲ 1 ಉತ್ಪನ್ನ ಖರೀದಿಸಿದ್ದಾರೆ. ಲೋಕಲ್ ಸರ್ಕಲ್ ಹಾಗೂ ಕಮ್ಯೂನಿಟಿ ಸೋಶಿಯಲ್ ಮೀಡಿಯಾ ಸಮೀಕ್ಷೆ ಮಾಡಿ ಇದೀಗ ವರದಿ ಬಹಿರಂಗ ಪಡಿಸಿದೆ.

ದೀದೀ ತಂತ್ರಕ್ಕೆ ಬಿಜೆಪಿ ತತ್ತರ: 24 ಶಾಸಕರು ಮತ್ತೆ ಟಿಎಂಸಿಗೆ?...

ಬಿಜೆಪಿ ನಾಯಕ ರಾಜೀವ್ ಬ್ಯಾನರ್ಜಿ, ಟಿಎಂಸಿ ನಾಯಕ ಕುನಾಲ್ ಘೋಷ್‌ರನ್ನು ಭೇಟಿಯಾಗಿದ್ದು, ಬಂಗಾಳ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ. ಸದ್ಯ ಬಿಜೆಪಿಯ 24 ಶಾಸಕರು ಟಿಎಂಸಿ ಸಂಪರ್ಕದಲ್ಲಿದ್ದಾರೆನ್ನಲಾಗಿದೆ. ಈ ಎಲ್ಲಾ ಆಗು ಹೋಗುಗಳ ಮಧ್ಯೆ ಇಲ್ಲಿನ ಗವರ್ನರ್ ಜಗದೀಪ್ ಧನ್‌ಖಡ್‌ ಜೂನ್ 15ರಿಂದ ದೆಹಲಿ ಪ್ರವಾಸದಲ್ಲಿದ್ದಾರೆ. ಜೂನ್ 18 ರಂದು ರಾಷ್ಟ್ರ ರಾಜಧಾನಿಯಿಂದ ಬಂಗಾಳಕ್ಕೆ ಮರಳಲಿದ್ದಾರೆ.

‘ಮಹಾ’ ಮೈತ್ರಿಯಲ್ಲಿ ಬಿರುಕು?: ಶಿವ​ಸೇನೆ, ಎನ್‌​ಸಿ​ಪಿ​ ಪಕ್ಷ​ಗ​ಳಿಂದ ಕಾಂಗ್ರೆಸ್‌ ದೂರ-ದೂರ?...

ಮಹಾ​ರಾಷ್ಟ್ರ ಮುಖ್ಯ​ಮಂತ್ರಿ ಉದ್ಧವ್‌ ಠಾಕ್ರೆ ನೇತೃ​ತ್ವದ ಮಹಾ ವಿಕಾಸ್‌ ಅಘಾಡಿ(ಎಂವಿ​ಎ) ಮೈತ್ರಿಯ ಸರ್ಕಾ​ರ​ದಲ್ಲಿ ಬಿಕ್ಕಟ್ಟು ಉದ್ಭ​ವಿ​ಸಿದೆ ಎಂಬ ಮುನ್ಸೂ​ಚ​ನೆ​ಯೊಂದು ಲಭ್ಯ​ವಾ​ಗಿದೆ. ಮುಂಬ​ರುವ 2024ರ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ತಮ್ಮ ಪಕ್ಷವು ಏಕಾಂಗಿ​ಯಾಗಿ ಸ್ಪರ್ಧೆ ಮಾಡ​ಲಿದ್ದು, ಹೈಕ​ಮಾಂಡ್‌ ನಿರ್ಧ​ರಿ​ಸಿ​ದಲ್ಲಿ ಪಕ್ಷದ ಮುಖ್ಯ​ಮಂತ್ರಿ ಅಭ್ಯ​ರ್ಥಿ​ಯಾ​ಗಲು ಸಿದ್ಧ ಎಂದು ಕಾಂಗ್ರೆಸ್‌ ರಾಜ್ಯಾ​ಧ್ಯಕ್ಷ ನಾನಾ ಪಟೋಲೆ ಹೇಳಿ​ದ್ದಾರೆ.

ರಾಮ ಮಂದಿರ ಭೂ ಖರೀದಿಯಲ್ಲಿ ಅಕ್ರಮ: ಆಪ್‌ ಆರೋಪಕ್ಕೆ ಟ್ರಸ್ಟ್‌ ತಿರುಗೇಟು!...

ಭವ್ಯ ರಾಮ​ಮಂದಿರ ನಿರ್ಮಾ​ಣ​ವಾ​ಗ​ಲಿ​ರುವ ಉತ್ತರ ಪ್ರದೇ​ಶದ ಅಯೋ​ಧ್ಯೆ​ಯಲ್ಲಿ 2 ಕೋಟಿ ರು. ಮೌಲ್ಯದ ಜಮೀ​ನೊಂದನ್ನು 18.5 ಕೋಟಿ ರು. ಖರೀ​ದಿ​ಸುವ ಮುಖಾಂತರ ಅಕ್ರಮ ಎಸ​ಗ​ಲಾ​ಗಿದೆ ಎಂಬ ಆಪ್‌ ಮತ್ತು ಸಮಾ​ಜ​ವಾದಿ ಪಕ್ಷ​ಗಳ ಆರೋ​ಪಕ್ಕೆ ರಾಮ​ಜನ್ಮ ಭೂಮಿ ಟ್ರಸ್ಟ್‌ ತಿರು​ಗೇಟು ನೀಡಿದೆ.

ಮುಂದಿನ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಕೆಲ ಬದಲಾವಣೆ ತರಲು ಮುಂದಾದ ಐಸಿಸಿ...

ತೀವ್ರ ಚರ್ಚೆಗೊಳಗಾಗಿರುವ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಅಂಕ ನೀಡಿಕೆ ಮಾದರಿಯನ್ನು ಬದಲಾಯಿಸಲು ಐಸಿಸಿ ಚಿಂತನೆ ನಡೆಸಿದೆ ಎಂದು ಅದರ ಹಂಗಾಮಿ ಸಿಇಒ ಜೆಫ್‌ ಅಲರ್ಡೈಸ್‌ ತಿಳಿಸಿದ್ದಾರೆ. 

ಹುಟ್ಟೂರಿಗೆ ಬಂದ ವಿಜಯ್ ಪಾರ್ಥಿವ ಶರೀರ, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ಸಂಸ್ಕಾರ...

ನಟ ಸಂಚಾರಿ ವಿಜಯ್ ಪಾರ್ಥೀವ ಶರೀರ ಹುಟ್ಟೂರು ಪಂಚನಹಳ್ಳಿ ತಲುಪಿದೆ. ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯಲಿದೆ. 

ವಾರ ಕಳೆದರೂ ಸರಿಯಾಗದ ಆದಾಯ ತೆರಿಗೆ ಹೊಸ ವೆಬ್‌ಸೈಟ್‌!...

ಆದಾಯ ತೆರಿಗೆ ಇಲಾಖೆಯ ಬಹುನಿರೀಕ್ಷಿತ ಹೊಸ ವೆಬ್‌ಸೈಟ್‌ ಬಿಡುಗಡೆಯಾಗಿ ಒಂದು ವಾರ ಕಳೆದರೂ ಅದರಲ್ಲಿನ ತಾಂತ್ರಿಕ ದೋಷಗಳು ನಿವಾರಣೆಯಾಗದಿರುವುದರಿಂದ ಬಳಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವೆಬ್‌ಸೈಟ್‌ನಲ್ಲಿ ಈಗಲೂ ಇರುವ ಅನೇಕ ದೋಷಗಳಿಂದ ನಮಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಚಾರ್ಟರ್ಡ್‌ ಅಕೌಂಟೆಂಟ್‌ಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಯಕತ್ವ ಬದಲಾವಣೆ: ಬಿಜೆಪಿ ಪಾಳದಲ್ಲಿ ಬಿರುಸಿನ ಚಟುವಟಿಕೆ...

ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ಅರುಣ್ ಸಿಂಗ್ ಅವರು ನಾಯಕತ್ವ ಗೊಂದಲಗಳ ಬಗ್ಗೆ ಸಚಿವರು, ಶಾಸಕರ ಜತೆ ಸುದೀರ್ಘ ಚರ್ಚೆ ಮಾಡಲಿದ್ದಾರೆ. ಇದರಿಂದ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. 

ಮಮತಾ ಬ್ಯಾನರ್ಜಿ ಚುನಾವಣಾ ರಣನೀತಿ ತಂಡದಿಂದ ಹೊರಬಂದ ಪ್ರಶಾಂತ್ ಕಿಶೋರ್!...

2026ರ ವರೆಗೆ ಚಾಣಾಕ್ಯ ಪ್ರಶಾಂತ್ ಕಿಶೋರ್ ತಂಡದ ಜೊತೆಗೆ ಮಮತಾ ಬ್ಯಾನರ್ಜಿ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಈ ಪ್ರಶಾಂತ್ ಕಿಶೋರ್ ಬಂಗಾಳದಿಂದ ಹೊರಬಂದಿದ್ದಾರೆ.

ಸಂಚಾರ ನಿಲ್ಲಿಸಿದ ಸಂಚಾರಿ ವಿಜಯ್; ಮರೆಯಲಾಗದ ದಿನಾಂಕ ಜೂನ್‌ 14!...

ಕನ್ನಡ ಚಿತ್ರರಂಗದ ಅದ್ಭುತ ನಟ ಸಂಚಾರಿ ವಿಜಯ್, ಬಹುಭಾಷಾ ನಟನಾಗಿ ಗುರುತಿಸಿಕೊಂಡು ಚಿಕ್ಕ ವಯಸ್ಸಿಗೇ 'ನಾನು ಅವನಲ್ಲ ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಅದ್ಭುತ ಕಲಾವಿದ.  ಪ್ರತಿಯೊಂದೂ ಚಿತ್ರದಲ್ಲಿಯೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ವಿಜಯ್‌ಗೆ ಏನಾಯ್ತು? ರಸ್ತೆ ಅಪಘಾತ ಆಗಿದ್ದು ಹೇಗೆ? ಈ ವಿಡಿಯೋದಲ್ಲಿದ ಸಂಚಾರಿ ಜೀವನದ ಅಂತಿಮ ಕ್ಷಣಗಳ ಬಗ್ಗೆಯೊಂದು ವರದಿ ಇದೆ.

click me!