ಭಾರತೀಯರ ರಕ್ಷಣೆಗೆ ರೋಚಕ ಕಾರ್ಯಾಚರಣೆ, LPG ಬೆಲೆ ಏರಿಕೆಯಿಂದ ಕಂಗೆಟ್ಟ ಜನ; ಆ.19ರ ಟಾಪ್ 10 ಸುದ್ದಿ!

By Suvarna NewsFirst Published Aug 19, 2021, 4:48 PM IST
Highlights

ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಬಿಸಿ ತಟ್ಟಿದೆ. ಇತ್ತ ಆಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ರೋಚಕ ಕಾರ್ಯಾಚರಣೆ ನಡೆಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿನಿಯರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಎನ್‌ಸಿಎ ಮುಖ್ಯಸ್ಥರಾಗಿ ರಾಹುಲ್ ದ್ರಾವಿಡ್ ಮರು ಆಯ್ಕೆಯಾಗುವು ಸಾಧ್ಯತೆ ಇದೆ. ಬೆಂಗಳೂರಿನ ಚಿಂದಿ ಆಯುವಾಕೆಯ ಇಂಗ್ಲೀಷ್‌ಗೆ ನೆಟ್ಟಿಗರು ಫಿದಾ, ಆಫ್ಘಾನ್, ಬಾಲಿವುಡ್ ನಂಟು ಸೇರಿದಂತೆ ಆಗಸ್ಟ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ರಾಜ್ಯ ಸಂಪುಟ ಸಭೆ : ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆ ಸೇರಿ ಹಲವು ತೀರ್ಮಾನ

ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. 

ಆಫ್ಘಾನಿಸ್ತಾನ ಸ್ವಾತಂತ್ರ್ಯ ದಿನಾಚರಣೆ; ಧ್ವಜ ಹಿಡಿದವರ ಮೇಲೆ ತಾಲಿಬಾನ್ ಗುಂಡಿನ ದಾಳಿ!

ಆಫ್ಘಾನಿಸ್ತಾನದಲ್ಲಿಂದು ಸ್ವಾತಂತ್ರ್ಯ ದಿನಾಚರಣೆ. 1919 ಆಗಸ್ಟ್ 19 ರಂದು ಬ್ರಿಟೀಷ್ ಆಳ್ವಿಕೆ ಅಂತ್ಯಗೊಂಡು ಆಫ್ಘಾನಿಸ್ತಾನ ಸ್ವತಂತ್ರಗೊಂಡಿತು. ಭಾರತಕ್ಕಿಂತ 28 ವರ್ಷಗಳ ಮುಂಚೆ ಆಫ್ಘಾನಿಸ್ತಾನ ಸ್ವತಂತ್ರಗೊಂಡಿದೆ. ಆದರೆ ಇಂದು ಆಫ್ಘಾನಿಸ್ತಾನದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಬಿಡಿಸಿಹೇಳಬೇಕಾದ ಅಗತ್ಯವಿಲ್ಲ. ಅದರಲ್ಲೂ ಈ ಬಾರಿಯ ಆಫ್ಘಾನಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಕರಾಳದಿನವಾಗಿ ಮಾರ್ಪಟ್ಟಿದೆ. ದೇಶಭಕ್ತಿ ಮೆರೆದ ಹಲವರ ಮೇಲೆ ತಾಲಿಬಾನ್‌ಗಳು ಗುಂಡಿನ ಸುರಿಮಳೆಗೆರೆದಿದ್ದಾರೆ.

ಬೆಂಗಳೂರಿನ ಚಿಂದಿ ಆಯುವಾಕೆಯ ಇಂಗ್ಲೀಷ್‌ಗೆ ನೆಟ್ಟಿಗರು ಫಿದಾ, ವೈರಲ್ ಆಯ್ತು ವಿಡಿಯೋ!

 ಬೆಂಗಳೂರಿನ ಚಿಂದಿ ಆಯುವ ಮಹಿಳೆಯೊಬ್ಬರು ತಮ್ಮ ಇಂಗ್ಲೀಷ್‌ ಮಾತುಗಾರಿಕೆಯಿಂದ ರಾತ್ರೋ ರಾತ್ರಿ ಫೇಮಸ್ ಆಗಿದ್ದಾರೆ. ಹೌದು ಇಂಗ್ಲೀಷ್‌ನಲ್ಲಿ ಪಟ ಪಟನೇ ಮಾತನಾಡುವ ಈ ಮಹಿಳೆ ಕೇಳಿದ ಪ್ರಶ್ನೆಗೆಲ್ಲಾ ಅದೇ ಭಾಷೆಯಲ್ಲಿ ಉತ್ತರಿಸಿದ್ದಾರೆ. ಇವರು ಇಂಗ್ಲೀಷ್‌ನಲ್ಲಿ ಮಾತನಾಡಿದ ಶೈಲಿ ನೆಟ್ಟಿಗರಿಗೆ ಭಾರೀ ಹಿಡಿಸಿದ್ದು, ಸದ್ಯ ಸೋಧಶಿಯಲ್ ಮೀಡಿಯಾದಲ್ಲಿ ಇವರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಸಿಸಿಲಿಯಾ ಮಾರ್ಗರೇಟ್ ಲಾರೆನ್ಸ್ ಎಂದು ಗುರುತಿಸಲಾಗಿದೆ.

ಎನ್‌ಸಿಎ ಮುಖ್ಯಸ್ಥ ಸ್ಥಾನ: ರಾಹುಲ್ ದ್ರಾವಿಡ್ ಮರು ಆಯ್ಕೆ?

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ) ಮುಖ್ಯಸ್ಥ ಸ್ಥಾನಕ್ಕೆ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.

ಶ್ರೀದೇವಿ-ಅಮಿತಾಬ್ ಶೂಟಿಂಗ್‌ ಭದ್ರತೆಗೆ ಅರ್ಧ ಏರ್‌ಫೋರ್ಸ್ ಕೊಟ್ಟಿತ್ತು ಅಫ್ಘಾನಿಸ್ತಾನ್

 ಬಾಲಿವುಡ್‌ಗೆ ಅಫ್ಘಾನಿಸ್ತಾನದ ಜೊತೆ ಬಹಳ ಹಿಂದಿನ ನಂಟಿದೆ. ಈ ನಂಟು ಇಂದು ನಿನ್ನೆಯದಲ್ಲ. ಬಾಲಿವುಡ್‌ನ ಪ್ರಸಿದ್ಧ ಸಿನಿಮಾಗಳು ಅಫ್ಘಾನಿಸ್ತಾದಲ್ಲಿ ಶೂಟಿಂಗ್ ಆಗಿದೆ. ಅಲ್ಲಿ ಶೂಟಿಂಗ್ ಆದ ಪ್ರಸಿದ್ಧ ಸಿನಿಮಾಗಳಲ್ಲಿ ಖುದಾ ಗವಾ ಕೂಡಾ ಒಂದು. ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ ಹಾಗೂ ಲೇಡಿ ಸೂಪರ್‌ಸ್ಟಾರ್ ಶ್ರಿದೇವಿ ನಟಿಸಿದ್ದ ಈ ಸಿನಿಮಾದ ಶೂಟಿಂಗ್ ಅಫ್ಘಾನಿಸ್ತಾನದಲ್ಲಿ ನಡೆದಿತ್ತು.

ಗ್ರಾಹಕರಿಗೆ ಎಲ್‌ಪಿಜಿ ಶಾಕ್: ಸಿಲಿಂಡರ್ ಬೆಲೆ 25 ರೂ. ಹೆಚ್ಚಳ!

ಬೆಲೆ ಏರಿಕೆಯ ಸಂಕಷ್ಟದಲ್ಲಿದ್ದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೆ ಶಾಕ್‌ ನೀಡಿದೆ. ಬುಧವಾರದಿಂದ ಜಾರಿಯಾಗುವಂತೆ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 25 ರು.ನಷ್ಟುಹೆಚ್ಚಿಸಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ 14.5 ಕೆಜಿ ಸಿಲಿಂಡರ್‌ ಬೆಲೆ 837 ರು.ಗೆ ಏರಿದೆ. ಕಳೆದ ಜು.1ರಂದು 25 ರು. ಏರಿಕೆಯಾಗಿತ್ತು. ಇದೀಗ ಸತತ ಎರಡನೇ ತಿಂಗಳೂ ಬೆಲೆ ಏರಿಕೆ ಮಾಡಲಾಗಿದೆ.

ಅಪ್ಘಾನ್‌ನಲ್ಲಿದ್ದ ಭಾರತೀಯರ ರಕ್ಷಣೆ: ಮಧ್ಯರಾತ್ರಿ ನಡೆದ ರೋಚಕ ಕಾರ್ಯಾಚರಣೆ!

ಮಿಡ್‌ನೈಟ್‌ ಆಪರೇಷನ್, ಅಪ್ಘಾನಿಸ್ತಾನದಲ್ಲಿದ್ದ 150 ಭಾರತೀಯರ ರೋಚಕ ಏರ್‌ಲಿಫ್ಟ್. ತಾಲಿಬಾನಿಯರ ಕಪಿಮುಷ್ಠಿಯಲ್ಲಿದ್ದವರು ಸುರಕ್ಷಿತವಾಗಿ ಭಾರತ ತಲುಪಿದ್ರು ಹೇಗೆ? ಹೇಗಿತ್ತು ಮಧ್ಯರಾತ್ರಿ ನಡೆದ ಆರೋಮಾಂಚಕ ಕಾರ್ಯಾಚರಣೆ.

ಅಬ್ಬಬ್ಬಾ! ಒಂದಲ್ಲ, ಎರಡು ಐಷಾರಾಮಿ ಕಾರು ಖರೀದಿಸಿದ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ

ಎರಡು ಐಷಾರಾಮಿ ಕಾರಿನ ಒಡತಿಯಾದ ಅನು ಸಿರಿಮನೆ. ಮೇಡಂ ಇಷ್ಟೊಂದು ಹಣ ಇಷ್ಟು ದಿನ ಎಲ್ಲಿತ್ತು? ಎಂದು ಕಾಲೆಳೆದ ನೆಟ್ಟಿಗರು.  

click me!