ಲೋಕಸಭಾ ಚುನಾವಣೆ 2024: ಸ್ವಾರ್ಥಿ ಯಡಿಯೂರಪ್ಪ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ, ಈಶ್ವರಪ್ಪ

By Girish Goudar  |  First Published May 1, 2024, 7:33 PM IST

ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ಮಾಡಲು ಸಿನಿಮಾ ನಟರು ಬರುತ್ತಾರೆ. ರಾಘವೇಂದ್ರ ಪರ ಪ್ರಚಾರ ಮಾಡಲು ರಾಷ್ಟ್ರ ನಾಯಕರು ಬರುತ್ತಾರೆ. ಆದರೆ ನನ್ನ ಪರ ಪ್ರಚಾರ ಮಾಡಲು ಶ್ರೀಸಾಮಾನ್ಯರು ಬರುತ್ತಾರೆ ಅವರೇ ನನ್ನ ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ. ಸ್ವಾರ್ಥಿ ಯಡಿಯೂರಪ್ಪ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ ಎಂದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ  


ಶಿವಮೊಗ್ಗ(ಮೇ.01):  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನ ಸಾಮಾನ್ಯರು ಈ ಬಾರಿ ಚುನಾವಣೆಯಲ್ಲಿ ಕೆ.ಎಸ್.ಈಶ್ವರಪ್ಪ ರವರನ್ನು ಗೆಲ್ಲಿಸಬೇಕೆಂದು ತೀರ್ಮಾನ ಮಾಡಿದ್ದಾರೆ. ಶಿವಮೊಗ್ಗದ ಜನ ನನ್ನ ಜಾತಿ ನೋಡದೆ ಹಿಂದುತ್ವವಾದಿ ಎಂದು ಐದು ಬಾರಿ ಗೆಲ್ಲಿಸಿದ್ದಾರೆ. ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ಮಾಡಲು ಸಿನಿಮಾ ನಟರು ಬರುತ್ತಾರೆ. ರಾಘವೇಂದ್ರ ಪರ ಪ್ರಚಾರ ಮಾಡಲು ರಾಷ್ಟ್ರ ನಾಯಕರು ಬರುತ್ತಾರೆ. ಆದರೆ ನನ್ನ ಪರ ಪ್ರಚಾರ ಮಾಡಲು ಶ್ರೀಸಾಮಾನ್ಯರು ಬರುತ್ತಾರೆ ಅವರೇ ನನ್ನ ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ. ಸ್ವಾರ್ಥಿ ಯಡಿಯೂರಪ್ಪ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ

ಇಂದು(ಬುಧವಾರ) ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬೆಜ್ಜವಳ್ಳಿ, ಆಗುಂಬೆ, ಮೇಗರವಳ್ಳಿ, ಕೈಮರ, ದೇವಂಗಿ, ಮೇಲಿನ ಕುರುವಳ್ಳಿ, ಕೋಣಂದೂರಿನಲ್ಲಿ ಮತ ಯಾಚನೆ ಮಾಡಿದ್ದಾರೆ. 

Tap to resize

Latest Videos

undefined

ಕ್ಷೇತ್ರದ ಬಗ್ಗೆ ಗೀತಾ ಶಿವರಾಜ್‌ಕುಮಾರ್‌ಗೆ ಯಾವುದೇ ಜ್ಞಾನ ಇಲ್ಲ; ಗೆಲ್ಲಿಸಬೇಡಿ: ಹರತಾಳು ಹಾಲಪ್ಪ ಮನವಿ

ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ ಅವರು, ನಾನು ಯಾವುದೇ ಜಾತಿಯ ಬಳಿ ಮತ ಕೇಳುತ್ತಿಲ್ಲ. ಎಲ್ಲ ಜಾತಿಗಳು ಸೇರಿದ ಹಿಂದೂ ಸಮಾಜದ ಮತ ಕೇಳುತ್ತಿದ್ದೇನೆ ಹಿಂದುತ್ವ ಉಳಿಸಲು ಮತ ಕೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಮಹೇಶ್, ಶಿವು, ಸಾತ್ವಿಕ್ ಪೂಜಾರಿ, ಮಂಜುನಾಥ್ ಜೋಗಿ, ಗಣೇಶ್ ಪ್ರಸಾದ್, ಅವಿನಾಶ್, ರಾಜು, ನವುಶಾ, ಶಶಿ, ಉದಯ್, ಶಶಿ ಕುಂದರ್, ಅರುಣ್, ಕಿರಣ್, ಕವನ, ಪ್ರವೀಣ್, ನೀಲಕಂಠ, ಅಭಿಷೇಕ್ ಉಪಸ್ಥಿತರಿದ್ದರು.

click me!