ಪುಲ್ವಾಮಾ ದಾಳಿಗೆ ಪ್ರತಿದಾಳಿ ಮಾಡಿರುವ ಭಾರತ ಉಗ್ರರ ಕ್ಯಾಂಪ್‌ಗಳನ್ನ ಧ್ವಂಸಗೊಳಿಸಿದೆ. ಭಾರತೀಯ ವಾಯುಸೇನೆ ಗಡಿ ನಿಯಂತ್ರಣ ರೇಖೆ ದಾಟಿದೆ ಎಂದು ಪಾಕಿಸ್ತಾನ ಬಾಯಿ ಬಡ್ಕೋಳ್ಳುತ್ತಿದೆ.
ಜಮ್ಮ ಮತ್ತು ಕಾಶ್ಮೀರ(ಫೆ.26): ಪುಲ್ವಾಮಾ ದಾಳಿಗೆ ಭಾರತೀಯ ವಾಯುಸೇನೆ ತಕ್ಕ ತಿರುಗೇಟು ನೀಡಿದೆ. ಇಂಡೋ-ಪಾಕ್ ಗಡಿ ನಿಂಯತ್ರಣ ರೇಖೆ ದಾಟಿ ವಾಯು ದಾಳಿ ನಡೆಸಿರುವ ಭಾರತೀಯ ವಾಯು ಸೇನೆ ಕೇವಲ 21 ನಿಮಿಷದಲ್ಲಿ ಕಾರ್ಯಾಚರಣೆ ಮುಗಿಸಿದೆ. ಬೆಳಗಿನ ಜಾವ 3.48ಕ್ಕೆ ದಾಳಿ ನಡೆಸಿದ ಭಾರತೀಯ ವಾಯು ಸೇನೆ 10 ಉಗ್ರರ ಕ್ಯಾಂಪ್‌ಗಳನ್ನ ಧ್ವಂಸಗೊಳಿಸಿದೆ.
Indian Air Force violated Line of Control. Pakistan Air Force immediately scrambled. Indian aircrafts gone back. Details to follow.
— Maj Gen Asif Ghafoor (@OfficialDGISPR)
undefined
ಇದನ್ನೂ ಓದಿ: ಪುಲ್ವಾಮಾ ಸೇಡು: LOC ದಾಟಿದ ಭಾರತೀಯ ವಾಯುಸೇನೆಯಿಂದ ಉಗ್ರರ ಕ್ಯಾಂಪ್ ಉಡೀಸ್!
ಭಾರತೀಯ ಯುದ್ಧವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿದೆ ಎಂದು ಪಾಕಿಸ್ತಾನ ಸೇನೆಯ ಮೇಜರ್ ಜನರಲ್ ಆಸೀಫ್ ಗಪೂರ್ ಹೇಳಿದ್ದಾರೆ. ಆದರೆ ತಕ್ಷಣವೇ ಭಾರತೀಯ ಯುದ್ಧವಿಮಾನಗಳನ್ನ ಪಾಕಿಸ್ತಾನ ಹಿಮ್ಮೆಟ್ಟಿಸಿದೆ ಎಂದು ಗಪೂರ್ ಟ್ವೀಟ್ ಮೂಲಕ ಹೇಳಿದ್ದಾರೆ. ಇಷ್ಟೇ ಅಲ್ಲ ಕೆಲ ಫೋಟೋಗಳನ್ನ ಅಪ್‌ವೋಡ್ ಮಾಡಿರುವ ಗಪೂರ್,ಮುಜಾಫರ್ ಬಾದ್ ಹಾಗೂ ಬಾಲಾಕೋಟ್ ನಿಯಂತ್ರಣ ರೇಖೆ ಬಳಿ ಭಾರತೀಯ ವಾಯು ಸೇನೆಯಿಂದ ಹಾನಿಗೊಳಗಾದ ಪ್ರದೇಶಗಳ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪುಲ್ವಾಮ ದಾಳಿಯ JEM ಉಗ್ರರ ಕ್ಯಾಂಪ್ ಧ್ವಂಸ - ಯುದ್ಧ ಆರಂಭ!
Payload of hastily escaping Indian aircrafts fell in open. pic.twitter.com/8drYtNGMsm
— Maj Gen Asif Ghafoor (@OfficialDGISPR)
Indian aircrafts intruded from Muzafarabad sector. Facing timely and effective response from Pakistan Air Force released payload in haste while escaping which fell near Balakot. No casualties or damage.
— Maj Gen Asif Ghafoor (@OfficialDGISPR)