ರಾಜ್ಯದಲ್ಲಿ ಕಾಂಗ್ರೆಸ್ ಬಂದ ಮೇಲೆ ಕ್ರೈಂ ಹೆಚ್ಚಿದೆ, ಬಾಂಬ್‌ ಬ್ಲಾಸ್ಟ್ ಪ್ರಸ್ತಾಪಿಸಿ ಮೋದಿ ವಾಗ್ದಾಳಿ

By Suvarna News  |  First Published Apr 28, 2024, 2:13 PM IST

ಉತ್ತರ ಕನ್ನಡದಲ್ಲಿ ಬಿಜೆಪಿ ಭರ್ಜರಿ ಸಮಾವೇಶ ನಡೆಸಿದ್ದು, ಶಿರಸಿಯಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.


ಶಿರಸಿ (ಏ.28): ಕರ್ನಾಟಕದ ಎರಡನೇ ಹಂತದ ಚುನಾವಣೆ ನಡೆಯಲಿರುವ ಹಿನ್ನೆಲೆ ಉತ್ತರ ಕನ್ನಡದಲ್ಲಿ ಬಿಜೆಪಿ ಭರ್ಜರಿ ಸಮಾವೇಶ ನಡೆಸಿದ್ದು, ಶಿರಸಿಯಲ್ಲಿ ನಡೆದ ಸಮಾವೇಶದಲ್ಲಿ ಮೋದಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಾರಿಕಾಂಬಾ, ವಾದಿರಾಜ ಸ್ವಾಮಿ, ಸಿದ್ಧರೂಢ ಸ್ವಾಮಿಗೆ ನೆನೆದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ ಕರ್ನಾಟಕದಲ್ಲಿ ಬಿಜೆಪಿಗರ ಅಭೂತಪೂರ್ವ ಜಯ ನಿಗದಿ ಮಾಡಿದ್ದೀರಾ? ಗುಜರಾತ್ ನಲ್ಲಿ ಸಿಎಂ ಆಗಿದ್ದಾಗ ಶಿರಸಿಗೆ ಬಂದಿದ್ದೆ. ಈ ಭೂಮಿಗೆ ಬಂದಿದ್ದೆ, ಖಾಲಿ ಕೈಯಲ್ಲಿ ಯಾವತ್ತೂ ಹೋಗಿಲ್ಲ ನೀವು ಬಹಳ ಬಿಸಿಲಿನಲ್ಲಿ ಕುಳಿತಿದ್ದೀರಿ. ನಿಮ್ಮ ತಪಸ್ಸನ್ನು ಮೋದಿ ವ್ಯರ್ಥ ಮಾಡಲ್ಲ. ಅಭಿವೃದ್ಧಿ ಮೂಲಕ ವಾಪಸ್ ಕೊಡ್ತೇನೆ ಎಂದರು.

Latest Videos

undefined

ಉತ್ತರ ಕರ್ನಾಟಕದಲ್ಲಿನ ಸರಣಿ ಹತ್ಯೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ಪಿಎಂ ಮೋದಿ ವಾಗ್ದಾಳಿ

ವಿಕಸಿತ ಭಾರತ ಮತ್ತು ವಿಕಸಿತ ಕರ್ನಾಟಕ ಸಲುವಾಗಿ ಆಶೀರ್ವಾದ ಕೇಳಲು ಬಂದಿದ್ದೇನೆ. ವಿಕಸಿತ ಭಾರತದ ವಿಶ್ವಾಸವಿದೆ. ನಿಮ್ಮ ಆಶೀರ್ವಾದದಲ್ಲಿ ಯಾವುದೇ ಕಮ್ಮಿಇಲ್ಲ. ಉತ್ತರಕನ್ನಡ ಹಳೆ ಸ್ನೇಹಿತ ಕಾಗೇರಿ. ಇಡೀ ಕರ್ನಾಟಕ ಒಂದೇ ಧ್ವನಿಯಲ್ಲಿ ಹೇಳ್ತಿದೆ. ಮತ್ತೊಂದು ಬಾರಿ ಮೋದಿ ಸರ್ಕಾರ. ನಿಮ್ಮ ಬೆಂಬಲದಲ್ಲಿ 2014 ರಲ್ಲಿ ಸರ್ಕಾರ ರಚನೆ ಮಾಡಲಾಯಿತು. ಉತ್ತರ ಕನ್ನಡ ದಲ್ಲಿ ವಿದ್ಯುತ್, ಮನೆ ಯೋಜನೆಯಲ್ಲಿ ಬಹಳ ಕೆಲಸ ಮಾಡಲಾಗಿದೆ, ಮೀನುಗಾರಿಕಾ ಬಂದರು ದೊಡ್ಡ ನಿರ್ಮಾಣ ಮಾಡಲಾಗ್ತಿದೆ. ಧಾರವಾಡದಲ್ಲಿ ಐಐಟಿ ಬಂದಿದೆ. ರೈಲ್ವೆ ನಿಲ್ದಾಣ ಆಗಿದೆ.

ನಾವು ವಿಕಾಸ ಹಾಗೂ ಪರಂಪರೆಯನ್ನ ಜತೆ ಜತೆಗೆ ಕರೆದುಕೊಂಡು ಹೋಗುವವರು. ಪ್ರಪಂಚವೇ ಇದನ್ನ ಒಪ್ಪಿದೆ. ನೀವೇ ಹೇಳಿ, ವಿದೇಶದಲ್ಲೂ ಭಾರತದ ಗುಣಗಾನ ಆಗ್ತಾ ಇಲ್ವಾ? ಅಮೇರಿಕಾ, ಯುರೋಪ್ ಎಲ್ಲಲ್ಲೂ ಗೌರವ ಸಿಗ್ತಾ ಇಲ್ವಾ? ಇದನ್ನ ಮಾಡಿದ್ದು  ಯಾರು? ಎಂದಾಗ ನೆರೆದಿದ್ದ ಸಭಿಕರು ಮೋದಿ ಮೋದಿ  ಎಂದು ಜೋರಾಗಿ ಕೂಗಿದರು. ಇದಕ್ಕೆ ಮೋದಿ, ಇದು ಮೋದಿ ಮಾಡಿದ್ದಲ್ಲ. ಬದಲಾಗಿ ನಿಮ್ಮ ಮತ ಮಾಡಿದ್ದು. ನೀವು ಕೊಟ್ಟ ಮತದಿಂದ ಇವೆಲ್ಲಾ ಆಗಿದೆ. ನಿಮ್ಮ ಮತಕ್ಕೆ ಅಷ್ಟು ಶಕ್ತಿ ಇದೆ ಎಂದರು.

ನಿಮ್ಮ ಒಂದು ಮತದ ತಾಕತ್ತನ್ನು ದೇಶ ನೋಡಿದೆ. ನಿಮ್ಮ ಒಂದು ಮತದ ತಾಕತ್ತಿನ್ನಿಂದ ವಿಶ್ವದ ಆರಾರು ಅಡಿ‌ ನಾಯಕರು, ಬಿಳಿ  ಚರ್ಮದ ನಾಯಕರನ್ನು ಭೇಟಿಯಾದೆ. ಮೋದಿ ಏಕಾಂಗಿಯಾಗಿ ಭೇಟಿಯಾಗೊಲ್ಲ. 140 ಕೋಟಿ ಜನ ನನ್ನ ಹಿಂದೆ ಇರ್ತಾರೆ. ಎದೆ ಎತ್ತರಿಸಿ ಅವರ ಜತೆ ಮಾತಾಡ್ತಿನಿ. ಭೇಟಿಯಾಗ್ತಿನಿ. ಅದು ನಿಮ್ಮ ತಾಕತ್ತು. 

ದೇಶಕ್ಕೆ ಸ್ವಾತಂತ್ರ್ಯ ಬಂದ ಮರುದಿನ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ. ಇಂತಹ ಕೆಲಸ ಮಾಡಲು 56 ಇಂಚಿನ ಎದೆಗಾರಿಕೆ ಬೇಕು. ರಾಮಮಂದಿರ ನಿಮಗೆ ಹೆಮ್ಮೆ ಅನಿಸಲ್ವಾ..? ಪವಿತ್ರ ಕೆಲಸ ಅನಿಸಲ್ವಾ..? ಈ ಪುಣ್ಯದ ಹಕ್ಕುದಾರ ನಿಮ್ಮ ಒಂದು ಮತ. ಕಾಂಗ್ರೆಸ್ ಪಕ್ಷ ಶ್ರೀರಾಮ ಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿದರು. ಕೊನೆ ಕ್ಷಣದವರೆಗೂ ಮಂದಿರ ನಿರ್ಮಾಣ ಆಗದಂತೆ ಹೋರಾಡಿದರು. ನಾವು ಎಲ್ಲವನ್ನೂ ಮರೆತು ಆಮಂತ್ರಣ ಪತ್ರಿಕೆ ನೀಡಿದರೆ ಅದನ್ನು ಹರಿದು ಹಾಕಿದರು. ಆದರೆ ರಾಮಜನ್ಮಭೂಮಿ ವಿವಾದದಲ್ಲಿ ಕಾನೂನು ಹೋರಾಟ ಮಾಡಿದ ಅನ್ಸಾರಿ ಕುಟುಂಬಕ್ಕೆ ಆಹ್ವಾನ ನೀಡಲಾಯಿತು. ಅನ್ಸಾರಿ ಕುಟುಂಬದ ಸದಸ್ಯರು ಕಾರ್ಯಕ್ರಮ ದಲ್ಲಿ ಭಾಗಿಯಾದರು.

ಆದರೆ ಎಷ್ಟು ವಿಕೃತಿ ಹಂತಕ್ಕೆ ಹೋಗಿದ್ದಾರೆ ಎಂದರೆ, ಸುಪ್ರಿಂ ಕೋರ್ಟ್ ತೀರ್ಪಿನ ಬಳಿಕವೂ  ಈ ರೀತಿ ಮಾಡ್ತಾರೆ. ನೀವೆಲ್ಲಾ ದಾನ ಮಾಡಿ ಪ್ರಭು ರಾಮನ ಮಂದಿರವಾಗಿದೆ. ಸರ್ಕಾರದಿಂದ ಮಂದಿರವಾಗಿಲ್ಲ. ಭಕ್ತರ ಜೇಬಿನಿಂದ ರಾಮ ಮಂದಿರ ನಿರ್ಮಾಣ ವಾಗಿದೆ. ಕಾಂಗ್ರೆಸ್ ಪಾರ್ಟಿ ಮತ್ತು ಇತರರು 70 ವರ್ಷ ರಾಮ ಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿದ್ದರು. ಇಷ್ಟೆಲ್ಲಾ ಆದರೂ ರಾಮ ಮಂದಿರ ಟ್ರಸ್ಟ್ ಅವರು ಕಾಂಗ್ರೆಸ್ ಪಾಪ ಬದಿಗಿಟ್ಟು  ಆಹ್ವಾನಿಸಿದರು. ಆದರೆ ಕಾಂಗ್ರೆಸ್ ನಾಯಕರು ರಾಮ ಮಂದಿರ ಆಹ್ವಾನವನ್ನು ತಿರಸ್ಕರಿಸಿದರು. ಈಗ ಕರ್ನಾಟಕ ಜನ ಅವರನ್ನ ತಿರಸ್ಕರಿಸ್ತಾರೋ ಇಲ್ವಾ..?

ಶಿರಸಿ ಅಡಿಕೆ ಹಾಗೂ ಕರ್ನಾಟಕದ ಮಿಲೆಟ್ ಅನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಇದರಿಂದ ಕರ್ನಾಟಕಕ್ಕೆ ಇಲ್ಲಿನ ರೈತರಿಗೆ ಅನಕೂಲ ಆಗಿದೆ. ಅಮೇರಿಕಾದ ರಾಷ್ಟ್ರ ಪತಿ ನನಗಾಗಿ ಭೋಜನ ಕೂಟ ಆಯೋಜಿಸಿದ್ರು. ದೊಡ್ಡ ದೊಡ್ಡವರು ಸಹ ಬಂದಿದ್ರು. ವಿಶೇಷ ಅಂದರೆ ಅಲ್ಲಿ ಸಾವಯವ ಭೋಜನವನ್ನ ಎಲ್ಲರ ತಟ್ಟೆಗೆ ಬಡಿಸಿದ್ರು. ಕನ್ನಡದ ಮಿಲೆಟ್ ಅಮೇರಿಕದ ಜೋ ಬೈಡನ್ ತಟ್ಟೆಯಲ್ಲಿ ಅಂದರೆ ಅದು ಗೌರವ ವಿಷಯ ಅಲ್ಲವಾ? ಎಂದರು.

ಕರ್ನಾಟಕ ದ ಸರ್ಕಾರ ಸುಳ್ಳಿನ ಸರ್ಕಾರ. ಕ್ರೈಮ್ ಕಂಟ್ರೋಲ್ ಮಾಡ್ತಾ ಇಲ್ಲ. ಹುಬ್ಬಳ್ಳಿಯಲ್ಲಿ ಹುಡುಗಿಯ ಹತ್ಯೆಯಾಯ್ತು. ಇಡಿ ದೇಶ ಇದರಿಂದ ದುಖವಾಗಿದೆ. ಕಾಂಗ್ರೆಸ್ ನ ಪಾಪದ ಕಾರಣದಿಂದ ಈ ಕೊಲೆ ಆಯ್ತು. ಹಾಡು ಹಗಲೇ ಕಾಲೇಜು ಕ್ಯಾಂಪಸ್ ನಲ್ಲು ಕೊಲೆ ಮಾಡುವ ಧೈರ್ಯ ಬಂದಿದ್ದು ಹೇಗೆ..? ಅವರಿಗೆ ಗೊತ್ತು ಕೆಲ ದಿನಗಳ ಬಳಿಕ ವೋಟ್ ಬ್ಯಾಂಕ್ ಕಾರಣ  ಅವರನ್ನ ರಕ್ಷಿಸಲಾಗುತ್ತದೆ ಅಂತಾ ಎಂದು ಆರೋಪಿಸಿದರು.

ಕಾಂಗ್ರೆಸ್  ಸರ್ಕಾರ ಇದ್ದಾಗ ಹಿಂದೆ ಮಂಗಳೂರು , ಬೆಂಗಳೂರು, ಅಯೋಧ್ಯೆ ಸೂರತ್ ಹೀಗೆ ಬಾಂಬ್  ಬ್ಲಾಸ್ಟ್ ಹೆಡ್ ಲೈನ್ಸ್ ಆಗಿತ್ತು. ನಾವು ಬಂದ ಮೇಲೆ ಬಂದ್ ಆಗಿಲ್ವಾ? ಈಗ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಬೆಂಗಳೂರಲ್ಲಿ ಬ್ಲಾಸ್ಟ್ ಆಯ್ತು. ಐಟಿ ಸಿಟಿ ಬೆಂಗಳೂರು ವಿಶ್ವ ಮಟ್ಟದ ನಗರ. ಇದಕ್ಕೆ ಕಾಂಗ್ರೆಸ್ ನಾಯಕರು ಸಿಲೆಂಡರ್ ಬ್ಲಾಸ್ಟ್ ಅಂದರು. ಸಿಲೆಂಡರ್ ಬ್ಲಾಸ್ಟ್ ಆಯ್ತಾ ಅಥವಾ ನಿಮ್ ತಲೆ ಬ್ಲಾಸ್ಟ್ ಆಯ್ತಾ...? ಎಂದು ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ತರಾಟೆಗೆತ್ತಿಕೊಂಡರು.

ಪಿಎಫ್ ಐ ನಿರ್ಬಂಧ ವಿಧಿಸಿರುವ ಸಂಘಟನೆ ಜತೆ ಕಾಂಗ್ರೆಸ್ ಸಂಬಂಧ ಇದೆ. ಪಕ್ಕದ ಪಾಕಿಸ್ಥಾನದಿಂದ ಭಯೋತ್ಪಕರನ್ನು ಇಂಪೋರ್ಟ್ ಮಾಡ್ತಾ ಇದ್ರು. ಆದರೆ ಈಗಿನ ಭಾರತ ಮನೆಯೊಳಗೆ ನುಗ್ಗಿ ಹೊಡೆಯುತ್ತದೆ. ನಾವು ಸರ್ಜಿಕಲ್ ಸ್ಟ್ರೈಕ್ ಮಾಡ್ತಿವಿ. ಭಯೋತ್ಪಾದಕರು ಸತ್ತಿದ್ದಕ್ಕೆ ಕಾಂಗ್ರೆಸ್ ನಾಯಕರು ಕಣ್ಣಿರು ಹಾಕಿದ್ರು. 

ಶಿವಾಜಿ ಮಹಾರಾಜ್ ಗೆ ಕಾಂಗ್ರೆಸ್ ನಾಯಕರು ಬೈತಾರೆ. ಅವರ ಬಾಯಲ್ಲಿ ನವಾಬರಿಗೆ ಸುಲ್ತಾನರಿಗೆ ಬೈದಿರೋದೋ ನೋಡಿದ್ದಿರಾ. ವೋಟ್ ಬ್ಯಾಂಕ್ ಇದಕ್ಕೆ ಕಾರಣ. ಇಲ್ಲಿ ಈ ನೆಲದಲ್ಲಿ ಕದಂಬ ರಾಜವಂಶ ಕನ್ನಡಕ್ಕಾಗಿ ಕೆಲಸ ಮಾಡಿದೆ. ಅದನ್ನ ನಾವು ಮರೆಯಲು ಸಾಧ್ಯವೇ. ಮೈಸೂರು ಸಂಸ್ಥಾನದ ಕೊಡುಗೆ ಕರ್ನಾಟಕ ಮರೆಯಲು ಸಾಧ್ಯವೇ. ಬರೋಡ ಸಂಸ್ಥಾನ ಅಂಬೇಡ್ಕರ್ ಅವರಿಗೆ ವಿದ್ಯಾಭ್ಯಾಸಕ್ಕೆ  ವಿದೇಶಕ್ಕೆ ಕಳುಹಿಸಿದ್ದರು. ಆದರೆ ರಾಜಕುಮಾರ ( ರಾಹುಲ್ ಗಾಂಧಿ) ರಾಜ‌ಮನೆತನಕ್ಕೆ ಬೈತಾರೆ. ಅವರನ್ನ ಅತ್ಯಾಚಾರಿ ಅಂತಾರೆ. ರಾಜಕುಮಾರ ಎಕ್ಸರೇ ಮಾಡ್ತಾರಂತೆ. ನಿಮ್ಮ ಲಾಕರ್ ಎಕ್ಸರೇ ಮಾಡ್ತಾರಂತೆ. ನಿಮ್ಮ‌ಮನೆ ಜಮೀನು ಎಕ್ಸರೇ ಮಾಡ್ತಾರಂತೆ. ನಮ್ಮ ಮಾತೆಯರು ಕೂಡಿಟ್ಟ ಸಂಪತ್ತಿನ ಮೇಲೆ ಅವರ ಕಣ್ಣಿಟ್ಟಿದ್ದಾರೆ. ಇದನ್ನ ಕೇಳಿದ್ರೆ ಮೋದಿ ಬೈತಾರೆ ಅಂತಾರೆ. ಬೈಯದೇ  ಕ್ಷಮಿಸಿ ಬಿಡಲಾ? ಮೋದಿ ಮೋಜು ಮಾಡಲು. ಹುಟ್ಟಿಲ್ಲ. ಮೋದಿ ನಿಮ್ಮ ಸೇವೆಗಾಗಿ ಭಗವಂತ ಹುಟ್ಟಿಸಿದ್ದಾನೆ. ನನ್ನ ಕ್ಷಣಕ್ಷಣ ನಿಮಗಾಗಿ. ನನ್ನ ಕ್ಷಣಕ್ಷಣ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ. ನನ್ನ ಕ್ಷಣ ಕ್ಷಣ ದೇಶಕ್ಕಾಗಿ ಎಂದಿದ್ದಾರೆ.

click me!