ಡಿಕೆಶಿಗೆ ಆತಂಕ ತಂದ ಹೆಲಿಕಾಪ್ಟರ್, ರಾಮ್‌ದೇವ್‌ಗೆ ನಿರ್ಬಂಧವಿಲ್ಲ ಎಂದ ಹೈಕೋರ್ಟ್; ಜೂ.4ರ ಟಾಪ್ 10 ಸುದ್ದಿ

By Suvarna NewsFirst Published Jun 4, 2021, 6:59 PM IST
Highlights

ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಗೊಂಡಿದೆ. ರಾಮ್‌ದೇವ್ ಮಾತಿಗೆ ನಿರ್ಬಂಧವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆಪ್ತರನ್ನು ಅನ್‌ಫಾಲೋ ಮಾಡಿದ ರಾಹುಲ್ ಗಾಂಧಿ,  ನಟಿ ವಿಜಯಲಕ್ಷ್ಮಿಗೆ ಆರ್ಥಿಕ ಸಹಾಯ ಮಾಡಿದ ವಿನೋದ್ ರಾಜ್ ಸೇರಿದಂತೆ ಜೂನ್ 4ರ ಟಾಪ್ 10 ಸುದ್ದಿ ವಿವರ.
 

ದೇಶದಲ್ಲಿರುವ ಕಂಪನಿ ಭಾರತದ ನಿಯಮ ಪಾಲಿಸಬೇಕು, ಅಮೆರಿಕದ್ದಲ್ಲ; RS ಪ್ರಸಾದ್!...

ಟೆಲಿಕಾಂ ಹಾಗೂ ಐಟಿ ಸಚಿವ ರವಿಶಂಕರ್ ಪ್ರಸಾದ್, ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಹಾಗೂ ನೈತಿಕ ಜವಾಬ್ದಾರಿ ಕುರಿತು ಖಡಕ್ ಸೂಚನೆ ನೀಡಿದ್ದಾರೆ.

ರಾಮ್‌ದೇವ್ ಮಾತಿಗೆ ನಿರ್ಬಂಧವಿಲ್ಲ ಎಂದ ಹೈಕೋರ್ಟ್...

ಯೋಗ ಇನ್‌ಸ್ಟ್ರಕ್ಟರ್ ಹಾಗೂ ಉದ್ಯಮಿ ರಾಮ್‌ದೇವ್ ಅವರು ಅಲೋಪತಿ ವಿರುದ್ಧ ಅಥವಾ ಪತಂಜಲಿ ಕೊರೋನಿಲ್ ಕಿಟ್ ಪರವಾಗಿ ಮಾತನಾಡುವುದನ್ನು ನಿರ್ಬಂಧಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಕಾನೂನಿನಡಿಯಲ್ಲಿ ಅವರು ಅಭಿಪ್ರಾಯ ತಿಳಿಸಲು ಅವರು ಅರ್ಹರಾಗಿದ್ದಾರೆ ಎಂದಿದ್ದಾರೆ.

ಟ್ವಿಟ್ಟರ್‌ನಲ್ಲಿ 50 ಮಂದಿ ಅನ್‌ಫಾಲೋ : ಕುತೂ​ಹಲ ಕೆರ​ಳಿ​ಸಿದ ರಾಹುಲ್‌ ನಿರ್ಧಾ​ರ...

ಟ್ವೀಟ​ರ್‌​ನಲ್ಲಿ 1.8 ಕೋಟಿ ಜನರ ಫಾಲೋ​ವ​ರ್‌​ಗ​ಳನ್ನು ಹೊಂದಿ​ರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಗುರು​ವಾರ ಬಾಲಿ​ವುಡ್‌ ಸೂಪರ್‌ ಸ್ಟಾರ್‌ ಅಮಿ​ತಾಬ್‌ ಬಚ್ಚನ್‌, ಪತ್ರ​ಕ​ರ್ತ​ರು ಹಾಗೂ ತಮ್ಮ ಆಪ್ತ​ರಾದ ಕೆ.ಬಿ ಬೈಜು, ಕನ್ನ​ಡಿ​ಗ​ರಾದ ನಿಖಿಲ್‌ ಮತ್ತು ನಿವೇ​ದಿತ್‌ ಆಳ್ವಾ ಸೇರಿ​ದಂತೆ ಒಟ್ಟಾರೆ 50 ಖ್ಯಾತ​ನಾ​ಮ​ರನ್ನು ಅನ್‌​ಫಾಲೋ ಮಾಡಿ​ದ್ದಾರೆ.

ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಮೋದಿ...

ಕೋವಿಡ್‌ ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇಶದ ದಿಗ್ಗಜ ಅಥ್ಲೀಟ್‌ ಮಿಲ್ಖಾ ಸಿಂಗ್ ಅವರ ಯೋಗ ಕ್ಷೇಮವನ್ನು ಪ್ರಧಾನಿ ನರೇಂದ್ರ ಮೋದಿ ವಿಚಾರಿಸಿದ್ದಾರೆ. ಮಿಲ್ಖಾ ಸಿಂಗ್ ಆದಷ್ಟು ಬೇಗ ಗುಣಮುಖರಾಗಿ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಅಥ್ಲೀಟ್‌ಗಳಿಗೆ ಆರ್ಶಿವದಿಸುವಂತಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.

ನಟಿ ವಿಜಯಲಕ್ಷ್ಮಿಗೆ ಆರ್ಥಿಕ ಸಹಾಯ ಮಾಡಿದ ವಿನೋದ್ ರಾಜ್; 'ಅಕ್ಕ ಮಾತನಾಡುತ್ತಿರುವುದು ನಿಮ್ಮಿಂದ'...

ಕೆಲವು ದಿನಗಳಿಂದ ಕನ್ನಡದ ನಟಿ ವಿಜಯಲಕ್ಷ್ಮಿ ತಮ್ಮ ಸಹೋದರಿ ಉಷಾ ಅನಾರೊಗ್ಯದ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ನಟ ವಿನೋದ್ ರಾಜ್‌ ಮತ್ತು ಲೀಲಾವತಿ ಆರ್ಥಿಕ ಸಹಾಯ ಮಾಡಿರುವ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದಾರೆ. ಸಹೋದರಿ ಉಷಾ ಚೇತರಿಸಿಕೊಳ್ಳುತ್ತಿದ್ದು, ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಸುಶಾಂತ್ ಶರೀರ ಮೊದಲು ನೋಡಿದ್ದವಗೆ ಡ್ರಗ್ಸ್ ಕಂಟಕ,  NCB ವಿಚಾರಣೆ ಮುಗಿಯಿತು...

ನಟ ಸುಶಾಂತ್ ಸಿಂಗ್ ರಾಜಪೂತ್ ಸಾವು  ಮತ್ತು ಬಾಲಿವುಡ್ ಡ್ರಗ್ಸ್  ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸುಶಾಂತ್ ಒಂದು ಕಾಲದ ಗೆಳೆಯ ಸಿದ್ಧಾರ್ಥ್ ಪಿಠಾಣಿಯನ್ನು  14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಭಾರಿ ಟಿ-ಟೌನ್‌ ಕಿಸ್ಸರ್‌ ಗರ್ಲ್‌ ರಶ್ಮಿಕಾ ಮಂದಣ್ಣಗೆ ಸಿಕ್ಕಿರೋ ಆ ಕೀರ್ತಿ ಏನು ಗೊತ್ತಾ?...

ನನಗೆ ಪ್ರಭಾಸ್‌ ಜೊತೆ ಡೇಟಿಂಗ್ ಹೋಗುವ ಆಸೆ ಎಂದು ಹೇಳುವ ಮೂಲಕ ಟಾಲಿವುಡ್‌ ಸಿನಿ ಪ್ರೇಮಿಗಳ ಹೃದಯ ಕದ್ದ ರಶ್ಮಿಕಾ ಮಂದಣ್ಣ ಮುಡಿಗೆ ಮತ್ತೊಂದು ಕಿರೀಟ ಸೇರಿಕೊಂಡಿದೆ. ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಈಗ ಮೋಸ್ಟ್‌ ಡಿಸೈರಬಲ್ ವುಮೆನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 

ವಾರಕ್ಕೆ ಮೂರು ಸಲ ಆಫೀಸಿಗೆ ಬನ್ನಿ; ಆ್ಯಪಲ್ ಇ-ಮೇಲ್!...

ಕೊರೋನಾ ವೈರಸ್ ಕಾರಣ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿತ್ತು. ಪ್ರತಿಷ್ಠಿತ ಆ್ಯಪಲ್ ಕಂಪನಿ ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ನೀಡಿ ವರ್ಷಗಳೇ ಉರುಳಿವೆ. ಇದೀಗ ಮತ್ತೆ ಕಚೇರಿಯಲ್ಲಿ ಕೆಲಸ ಮಾಡಲು ಆ್ಯಪಲ್ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ.

ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಹೀಗೆ ಬಹುತೇಕ ಎಲ್ಲರಿಗೂ ಮ್ಯಾಗಿ ನೂಡಲ್ಸ್ ಅಂದ್ರೆ ಬಹಳ ಇಷ್ಟ. ವಿವಿಧ ಫ್ಲೇವರ್‌ಗಳಲ್ಲಿ ಬರುವ ಐದೇ ನಿಮಿಷದಲ್ಲಿ ತಯಾರಾಗುವ ಮ್ಯಾಗಿಗೆ ಭಾರೀ ಡಿಮ್ಯಾಂಡ್‌.  ಆದರೆ ಇದೇ ಮ್ಯಾಗಿಯ ಬಗ್ಗೆ ಅಘಾತಕಾರಿ ವಿಚಾರವೊಂದು ಹೊರ ಬಿದ್ದಿದೆ. 

ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ...

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರ ಕಾಂಗ್ರೆಸ್ ಮುಖಂಡರು ದಾವಣಗೆರೆಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದೆ.

click me!