ಹಿಂದುತ್ವ ವಿರೋಧಿಸಿದ ರಾಹುಲ್ ವಿರುದ್ಧ ಆಕ್ರೋಶ, ಫಸ್ಟ್‌ನೈಟ್ ಹೇಳಿಕೆಯಿಂದ ರಚಿತಾಗೆ ಸಂಕಷ್ಟ; ನ.13ರ ಟಾಪ್ 10 ಸುದ್ದಿ

By Suvarna NewsFirst Published Nov 13, 2021, 4:46 PM IST
Highlights

ಹಿಂದುತ್ವ ವಿರೋಧಿಸಿದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇತ್ತ ಮದ್ಯ, ಬಟ್ಟೆ ಸೇರಿದಂತೆ ಹಲವು ವಸ್ತಗಳು ಬೆಲೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಬಿಟ್‌ಕಾಯಿನ್ ಬಿರುಗಾಳಿ ಸದ್ಯಕ್ಕೆ ಕೊನೆಯಾಗುವ ಲಕ್ಷಣಗಳಿಲ್ಲ. ಕಾಂಗ್ರೆಸ್ ಮತ್ತೊಂದು ಬಾಂಬ್ ಸಿಡಿಸಿದೆ. ಫಸ್ಟ್‌ನೈಟ್ ಹೇಳಿಕೆಯಿಂದ ರಚಿತಾ ರಾಮ್‌ಗೆ ಶುರುವಾಯ್ತು ಸಂಕಷ್ಟ, ಮೊಬೈಲ್ ಆಯ್ತು ಈಗ ಲ್ಯಾಪ್ ಬಿಡುಗಡೆ ಜಿಯೋ ಸಜ್ಜು ಸೇರಿದಂತೆ ನವೆಂಬರ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Hindutva Controversy: 'ರಾಹುಲ್ ಆದೇಶದಂತೆ ಕಾಂಗ್ರೆಸ್ ನಾಯಕರು ಹಿಂದುತ್ವ ವಿರೋಧಿ ಹೇಳಿಕೆ ಕೊಡ್ತಾರೆ!'

 ಕಾಂಗ್ರೆಸ್ ನಾಯಕತ್ವವು ಹಿಂದುತ್ವದ (Hindutva) ಬಗ್ಗೆ "ದ್ವೇಷ ಭಾವನೆ" ಹೊಂದಿದೆ ಎಂದು ಭಾರತೀಯ ಜನತಾ ಪಕ್ಷ (BJP) ಶುಕ್ರವಾರ ಆರೋಪಿಸಿದೆ. ಹಿಂದುತ್ವ ಟೀಕಿಸಿದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು (Rahul Gandhi) ತರಾಟೆಗೆ ತೆಗೆದುಕೊಂಡಿದೆ.

Price Hike ಶಾಕ್; ಶೀಘ್ರದಲ್ಲೇ ಮದ್ಯ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ದರ ಹೆಚ್ಚಳ!

ದೇಶದಲ್ಲಿ ಬೆಲೆ ಏರಿಕೆ(Price Hike) ಬಿಸಿ ಜನಸಾಮನ್ಯರಿಗೆ ಇನ್ನಿಲ್ಲದಂತೆ ಕಾಡುತ್ತಿದೆ. ಪೆಟ್ರೋಲ್, ಡೀಸೆಲ್(Petrol Diesel) ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೊಟೆಲ್ ಆಹಾರದ ಬೆಲೆ ಏರಿಕೆ, ಆಟೋ ಪ್ರಯಾಣದ ದರ ಏರಿಕೆ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಶೀಘ್ರದಲ್ಲೇ  ಮದ್ಯ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತ ಇತರ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಶೇಕಡಾ 8 ರಿಂದ 10 ರಷ್ಟು ಬೆಲೆ ಏರಿಕೆ ಆಗಲಿದೆ.

ಅಚಾನಕ್ಕಾಗಿ ಅಮಿತ್ ಶಾ ಕಾಲು ಮುಟ್ಟಿದ ಪುಟ್ಟ ಬಾಲಕ, ಗೃಹ ಸಚಿವರಿಂದ ಸಿಕ್ತು ಅಮೂಲ್ಯ ಗಿಫ್ಟ್!

 ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಯುಪಿ ಪ್ರವಾಸದಲ್ಲಿದ್ದಾರೆ. ಶುಕ್ರವಾರ ವಾರಾಣಸಿ ತಲುಪಿದ್ದಾರೆ. ಇಲ್ಲಿ ಅವರು ಕಾಲ ಭೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ಮಹಂತ್ ನವೀನ್ ಗಿರಿ ಮಾತನಾಡಿ, ಶಾ ಪರವಾಗಿ ಕಾಲಭೈರವನ ವಿಶೇಷ ಪೂಜೆ ಮತ್ತು ಎಣ್ಣೆ ಹಾಕಲಾಗಿದೆ ಹಾಗೂ ಆರತಿಯನ್ನೂ ಮಾಡಲಾಗಿದೆ. ಇಂತಹ ಪೂಜೆಯನ್ನು ಮಾಡುವುದರಿಂದ ಯಾವುದೇ ಅಡೆತಡೆಗಳು ಬಂದರೂ ಅವು ದೂರವಾಗುತ್ತವೆ ಎಂದು ನಂಬಲಾಗಿದೆ. ಚುನಾವಣೆಗೂ ಮುನ್ನ ಇಂತಹ ಪೂಜೆ ಮಾಡುವುದರಿಂದ ಬಿಜೆಪಿಗೆ (BJP) ಯಶಸ್ಸು ಖಂಡಿತ ಎಂದು ನಂಬಲಾಗಿದೆ.

ಮಾಜಿ ಸಚಿವ ಕೈ ನಾಯಕ ಪ್ರಿಯಾಂಕ ಖರ್ಗೆ ಹೊಸ ಬಾಂಬ್

ಬಿಟ್‌ಕಾಯಿನ್ (Bitcoin) ಹಗರಣದ ಆರೋಪಿ ಶ್ರೀಕಿ (ಶ್ರೀಕೃಷ್ಣ)ಯನ್ನು ಪೊಲೀಸರು (Police) ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದರು. ಆ ವೇಳೆ ಆತನಿಗೆ ಪೊಲೀಸರು ಡ್ರಗ್ಸ್ (Drugs) ನೀಡಿದ್ದಾರೆ ಎಂದು ಶ್ರೀಕಿ ತಂದೆ ಕೋರ್ಟಿಗೆ (Court) ರಿರ್ಟ್ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ವಶದಲ್ಲಿ ಡ್ರಗ್ಸ್ ಸೇವಿಸಿದ್ದಾಗಿ ಶ್ರೀಕಿ ಜಡ್ಜ್ (Judge) ಮುಂದೆಯೇ ಹೇಳಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ (Priyank Kharge) ಹೊಸ ಬಾಂಬ್ ಸಿಡಿಸಿದ್ದಾರೆ. 

CWG 2022 ಕಾಮನ್‌ವೆಲ್ತ್‌ ಗೇಮ್ಸ್‌ ಕ್ರಿಕೆಟ್‌: Ind vs Pak ಒಂದೇ ಗುಂಪಲ್ಲಿ ಭಾರತ-ಪಾಕ್‌!

2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ (Commonwealth Games 2022) ಮಹಿಳಾ ಟಿ20 ಕ್ರಿಕೆಟ್‌ (Women's T20 Cricket) ನಡೆಯಲಿದ್ದು, ಶುಕ್ರವಾರ ವೇಳಾಪಟ್ಟಿ ಪ್ರಕಟಗೊಂಡಿತು. ಎಡ್ಜ್‌ ಬಾಸ್ಟನ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಜುಲೈ 29ರಿಂದ ಆಗಸ್ಟ್ 07ರವರೆಗೆ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ.

ಕಿಡಿ ಹಚ್ಚಿದ 'ಫಸ್ಟ್‌ನೈಟ್' ಹೇಳಿಕೆ: ರಚಿತಾ ರಾಮ್ ಕ್ಷಮೆಗೆ ಪಟ್ಟು

ಲವ್ ಯು  ರಚ್ಚು ಸಿನಿಮಾ ಸುದ್ದಿಗೋಷ್ಢಿಯಲ್ಲಿ ನೀಡಿದ 'ಫಸ್ಟ್‌ನೈಟ್' ಹೇಳಿಕೆ ವಿಚಾರವಾಗಿ ರಾಜ್ಯದ ಜನತೆಯಲ್ಲಿ ರಚಿತಾ ರಾಮ್ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಕನ್ನಡ ಕ್ರಾಂತಿದಳ ಒತ್ತಾಯಿಸಿದೆ. 

ಶೀಘ್ರವೇ Jiobook ಲ್ಯಾಪ್‌ಟ್ಯಾಪ್ ಲಾಂಚ್? ಬೆಲೆ ಕೂಡ ಕಡಿಮೆ ಇರುತ್ತಾ?

ದೀಪಾವಳಿ ಹಬ್ಬಕ್ಕೆ ಅಗ್ಗದ ಬೆಲೆಯ ಜಿಯೋ ಫೋನ್ ನೆಕ್ಸ್ಟ್ (JioPhone Next) ಲಾಂಚ್ ಮಾಡಿದ್ದ ರಿಲಯನ್ಸ್ ಇದೀಗ ತನ್ನ ಮೊದಲ ಲ್ಯಾಪ್‌ಟ್ಯಾಪ್ ಕೂಡ ಲಾಂಚ್ ಮಾಡುವ ಸಿದ್ಧತೆಯಲ್ಲಿದೆ. ಗೂಗಲ್ (Google) ಜತೆಗೂಡಿ ರಿಲಯನ್ಸ್ (Reliance) ಜಿಯೋ ಫೋನ್ ನೆಕ್ಸ್ಟ್ ಅಭಿವೃದ್ಧಿಪಡಿಸಿ, ಕಡಿಮೆ ಬೆಲೆಗೆ ಬಿಡುಗಡೆ ಮಾಡಿತ್ತು. ಈ ಫೋನ್ ‌ಬಗ್ಗೆ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈಗ ಲ್ಯಾಪ್‌ಟ್ಯಾಪ್ ಕೂಡ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

'ದೇಶದ ಅಭಿವೃದ್ಧಿ ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ'

ಮಾಜಿ ಸಚಿವರು ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿತುಕೊಳ್ಳಲಿ, ಎಲ್ಲರಿಗೂ ಗೌರವ ಎನ್ನುವುದು ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್(Halappa Achar)  ಹೇಳಿದ್ದಾರೆ

click me!