ಬಿಜೆಪಿಯಿಂದ ದೇಶದಲ್ಲಿ ಅರಾಜಕತೆ: ಬಿ.ಕೆ. ಹರಿಪ್ರಸಾದ

By Kannadaprabha News  |  First Published Apr 28, 2024, 12:54 PM IST

ಕಳೆದ 10 ವರ್ಷ ಆಡಳಿತ ನಡೆಸಿದ ಪ್ರಧಾನಿ ಮೋದಿ ಅವರು ರಾಷ್ಟ್ರಕ್ಕೆ ನೀಡಿದೆ ಕೊಡುಗೆ ಏನು? ವಿಶ್ವಗುರು ಎನಿಸಿಕೊಂಡಿರುವ ಮೋದಿ ಸಾಧನೆ ಎಲ್ಲಿದೆ ತೋರಿಸಿ ಎಂದ ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ 


ಗಂಗಾವತಿ(ಏ.28):  ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷ ಆಡಳಿತ ನಡೆಸಿದ ಪ್ರಧಾನಿ ಮೋದಿ ಅವರು ರಾಷ್ಟ್ರಕ್ಕೆ ನೀಡಿದೆ ಕೊಡುಗೆ ಏನು? ವಿಶ್ವಗುರು ಎನಿಸಿಕೊಂಡಿರುವ ಮೋದಿ ಸಾಧನೆ ಎಲ್ಲಿದೆ ತೋರಿಸಿ ಎಂದರು.

ದೇಶದಲ್ಲಿ ಯುವಕರಿಗೆ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದ ಮೋದಿ ಭರವಸೆ ಸುಳ್ಳಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಮಣಿಪುರ ಗಲಭೆ ನಿಯಂತ್ರಣ, ಕೃಷಿಕರಿಗೆ ಯೋಜನೆ ನೀಡುವಲ್ಲಿ ವಿಫಲ, ಆರ್ಥಿಕ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

Tap to resize

Latest Videos

undefined

ಲೋಕಸಭಾ ಚುನಾವಣೆ 2024: ರಾಜ್ಯದಲ್ಲಿ ಕಾಂಗ್ರೆಸ್‌ಗೆ 24ಕ್ಕೂ ಹೆಚ್ಚಿನ ಸ್ಥಾನ, ಆಜಾದ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ತಮ್ಮ ಕ್ಷೇತ್ರ ಅಭಿವೃದ್ಧಿಪಡಿಸಿದ್ದರೂ ಮತದಾರರು ಈ ಹಿಂದೆ ಸ್ಪಂದಿಸಿರಲಿಲ್ಲ. ಈ ಕಾರಣಕ್ಕೆ ಅವರಿಗೆ ಆದ ನೋವಿನ ಬಗ್ಗೆ ಹೇಳಿ, ಕೊನೆಗೆ ನನಗೆ ಮಣ್ಣಿಗಾದರೂ ಬನ್ನಿ ಎಂದು ಭಾವುಕರಾಗಿ ಹೇಳಿದ್ದಾರೆ ಎಂದರು.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆಯನ್ನು ಮುಖ್ಯಮಂತ್ರಿ ಖಂಡಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ಉಡುಪಿಯಲ್ಲಿ ಮುಸ್ಲಿಂ ಸಮುದಾಯದವರು ಕೊಲೆಯಾದರೆ ಬಿಜೆಪಿ ಮೌನ ವಹಿಸಿತ್ತು. ಈಗ ಹುಬ್ಬಳ್ಳಿಯಲ್ಲಿ ಆದ ಘಟನೆ ಬಗ್ಗೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದರು.

'ಲೇ ಇಕ್ಬಾಲ್' ಅಂತಾ ನಾನೂ ಅನ್ನಬಹುದು ಆದರೆ ಅದು ನನ್ನ ಸಂಸ್ಕೃತಿ ಅಲ್ಲ: ಜನಾರ್ದನ ರೆಡ್ಡಿ

ನಮ್ಮ ದೇಶದ ಲೋಕಸಭಾ ಚುನಾವಣೆ ವಿಶ್ವದಲ್ಲೇ ಮಹತ್ವ ಪಡೆದಿದೆ. ಆದರೆ ಬಿಜೆಪಿ ಹಾಗೂ ಪ್ರಧಾನಿ ಚುನಾವಣಾ ಭಾಷಣಗಳಲ್ಲಿ ಪದೇ ಪದೇ ಮಟನ್, ಮಚಲಿ, ಮುಸ್ಲಿಂ ಮತ್ತು ಮಂಗಳಸೂತ್ರದ ಬಗ್ಗೆ ಚರ್ಚೆ ಮಾಡಿ ಜನರನ್ನು ಭಾವನಾತ್ಮಕ ಕೆರಳಿಸುತ್ತಿದ್ದಾರೆ. ಕ್ಷುಲ್ಲಕ ರಾಜಕಾರಣ ಮಾಡುತ್ತ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು,

ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಕಾಂಗ್ರೆಸ್ ಯುವ ಮುಖಂಡ ಸರ್ವೇಶ್ ಮಾಂತಗೊಂಡ, ಮೂಸ್ಟೂರು ರಾಜಶೇಖರ್, ನಾಗರಾಜ್ ನಂದಾಪುರ ಇದ್ದರು.

click me!