#MeToo ಅಬ್ಬರದ ಮಧ್ಯೆ ಇದೂ ನಿಮ್ಮ ಗಮನದಲ್ಲಿರಲಿ...

By Web DeskFirst Published Dec 2, 2018, 3:13 PM IST
Highlights

ವಾರದಲ್ಲಿ 40 ತಾಸು ಆಫೀಸ್‌ನಲ್ಲಿ ಕಳೆಯುವ ನಾವು ಅದನ್ನೇ ನಮ್ಮ ಎರಡನೇ ಮನೆಯಾಗಿಸುತ್ತೇವೆ. ಆದರೆ, ಬಾಸ್ ಜತೆ ಕೆಲಸ ಮಾಡುವಾಗ ನಮ್ಮ ಮನಸ್ಸು ಮಾತ್ರ ಮುದುಡಿರುತ್ತದೆ. ಏಕೆ ಹೀಗೆ?

#MeToo ಅಬ್ಬರದಲ್ಲಿ ಉದ್ಯೋಗ ಸ್ಥಳದಲ್ಲಿ ಯಾರು, ಯಾವ ರೀತಿ ವರ್ತಿಸಬೇಕೆಂಬುವುದು ಅರಿವು ಮೂಡಿಸುವ ಕಾರ್ಯವಾಗುತ್ತಿದೆ. ಜತೆ, ಜತೆಗೆ ನಾವು ನಮ್ಮ ಕೆಲಸವನ್ನು ಚೊಕ್ಕವಾಗಿ ಮಾಡುವುದರೊಂದಿಗೆ ಖುಷ್ ಖುಷಿಯಾಗಿರುವುದನ್ನು ಕಲಿಯುವುದೂ ಇಂದಿನ ಅನಿವಾರ್ಯತೆ.ಆಗ ಮಾತ್ರ #StressFree ಬದುಕು ನಮ್ಮದಾಗುತ್ತದೆ. ಇದಕ್ಕೆ ಆಫೀಸ್‌ನಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಏನವು?

  • ನಿಮ್ಮ ತಪ್ಪಿದ್ದರೆ ಒಪ್ಪೊಕೊಂಡು ಬಿಡಿ. ಮಾತು ಮರೆಸುವ ಕೆಲಸ ಆಗದಿರಲಿ. ತಪ್ಪನ್ನು ತಿದ್ದಿಕೊಂಡು ಮುನ್ನಡೆಯಿರಿ.
  • ಇ-ಮೇಲ್ ಬರೆಯುವಾಗ ಸಬ್ಜೆಕ್ಟ್ ಲೈನ್ ಸಣ್ಣದಾಗಿರಬೇಕು.
  • ಸಹೋದ್ಯೋಗಿಗಳು ಅಥವಾ ಬಾಸ್ ಬೇರೆಯೊಂದು ಕರೆಯಲ್ಲಿದ್ದರೆ, ಕಾಯಿರಿ. ಮತ್ತೆ ಮತ್ತೆ ಕರೆ ಮಾಡಿ ತೊಂದರೆ ನೀಡಬೇಡಿ. 
  • ಸಮಯ ಪ್ರಜ್ಞೆ ಇರಬೇಕು, ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ. ಬೇರೆಯವರ ಕೆಲಸದಲ್ಲಿ ಎಂದಿಗೂ ಮೂಗು ತೂರಿಸಬೇಡಿ. 
  • ಟಾಯ್ಲೆಟ್ ಸ್ವಚ್ಚತೆ ಕಾಪಾಡಿ. ಶೌಚದ ನಂತರ ನೀರು ಹಾಕಿ.
  • ಮೀಟಿಂಗ್ ಇದ್ದರೆ, ಆನ್ ಟೈಂ ಹೋಗಿ. ಮುಂಚಿತವಾಗಿಯೇ ಹೋದರೂ ಪರ್ವಾಗಿಲ್ಲ, ತಡ ಮಾಡಬೇಡಿ. ಕೊಟ್ಟ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿ. 
  • ಆಫೀಸ್ ಕೆಲಸಕ್ಕೆ ಸಂಬಂಧಕ್ಕೆ ಮಾತ್ರ ಸಹೋದ್ಯೋಗಿಗಳು ಹಾಗೂ ಬಾಸ್‌ನೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳಿ. ಸುಖಾ ಸುಮ್ಮನೆ ನಿಮ್ಮ ವ್ಯವಹಾರವನ್ನು ಕೆಲಸದ ಅವಧಿ ಮುಗಿದ ನಂತರವೂ ಮುಂದುವರಿಸಲು ಯತ್ನಿಸಬೇಡಿ.
  • ಕಚೇರಿಯಲ್ಲಿ ಫೋನ್ ಬಳಸಿದರೆ, ಜೋರಾಗಿ ಮಾತಾಡಬೇಡಿ, ಬೇರೆಯವರಿಗೆ ತೊಂದರೆ ಆಗದಂತೆ ಗಮನವಿರಲಿ.
  • ಯಾರಾದರೂ ತಪ್ಪು ಮಾಡಿದರೆ, ಅವರನ್ನು ತಿದ್ದಲು ಹೇಳಿ ಕೊಡಿ. ನಿಮ್ಮ ಜ್ಞಾನವನ್ನು ಹಂಚಿಕೊಳ್ಳಿ. 
  • ಇನ್ನೊಬ್ಬರ ಕೆಲಸವನ್ನು ಹೀಯಾಳಿಸಬೇಡಿ. ಅವರ ಮೇಲೆ ರೇಗುವುದು ಎಲ್ಲಾ ಮಾಡಬಾರದು. 
  • ಕಚೇರಿಯ ವಸ್ತುಗಳನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳಬೇಡಿ.
click me!