ಆಹಾ. ಹಾ... ಹಲ್ಲುಜ್ಜಿಸಿಕೊಳ್ಳುತ್ತಿರುವ ನೀರು ಕುದುರೆ: ವೀಡಿಯೋ ಸಖತ್ ವೈರಲ್

Published : Sep 25, 2024, 10:31 PM ISTUpdated : Sep 26, 2024, 02:45 PM IST
ಆಹಾ. ಹಾ... ಹಲ್ಲುಜ್ಜಿಸಿಕೊಳ್ಳುತ್ತಿರುವ ನೀರು ಕುದುರೆ: ವೀಡಿಯೋ ಸಖತ್ ವೈರಲ್

ಸಾರಾಂಶ

ಇಲ್ಲೊಂದು ಕಡೆ ನೀರಾನೆಯೊಂದು ಬಾಯಿ ತೆರೆದಿಟ್ಟು ಹಲ್ಲುಜ್ಜಿಸಿಕೊಳ್ಳುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಾಮಾನ್ಯವಾಗಿ ನಾವು ಮನುಷ್ಯರು ಬ್ಯೂಟಿಪಾರ್ಲರ್‌ಗೆ /ಸಲೂನ್‌ಗೆ ಹೋಗಿ ಪೆಡಿಕ್ಯೂರ್ ಮಾಡಿಸಿಕೊಳ್ಳುವುದು, ಹೇರ್ ಕಟ್ಟಿಂಗ್ ಮಾಡಿಸಿಕೊಳ್ಳುವುದು, ಮಸಾಜ್ ಮಾಡಿಸಿಕೊಳ್ಳುವುದು ಹೀಗೆ ಹಲವು ಸೌಲಭ್ಯಗಳನ್ನು ಎಂಜಾಯ್ ಮಾಡುತ್ತೇವೆ. ಹಲ್ಲು ನೋವಾದರೆ ವೈದ್ಯರ ಬಳಿ ಹೋಗಿ ಹಲ್ಲು ಕ್ಲೀನ್ ಮಾಡಿಸುತ್ತೇವೆ. ಆದರೆ ನೀರುಕುದುರೆಯೊಂದು ಹಲ್ಲಜ್ಜುವುದನ್ನು ಎಲ್ಲಾದರೂ ನೋಡಿದ್ದೀರಾ?  ಹಾಗಿದ್ರೆ ಈ ವೀಡಿಯೋ ನೋಡಿ..

ಇಲ್ಲೊಂದು ಕಡೆ ನೀರಾನೆಯೊಂದು ಬಾಯಿ ತೆರೆದಿಟ್ಟು ಹಲ್ಲುಜ್ಜಿಸಿಕೊಳ್ಳುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ನೇಚರ್ ಇಸ್ ಅಮೇಜಿಂಗ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, 4 ಲಕ್ಷಕ್ಕೂ ಅಧಿಕ ಮಂದಿ ಈ ಅಪರೂಪದ ವೀಡಿಯೋವನ್ನು ನೋಡಿದ್ದಾರೆ. ಇಲ್ಲಿ ಮೃಗಾಲಯದಲ್ಲಿ ಪ್ರಾಣಿಗಳ ಆರೈಕೆ ಮಾಡುತ್ತಿರುವ ಒಬ್ಬರು ದೊಡ್ಡದಾದ ಬ್ರಷ್‌ನಿಂದ ನೀರುಕುದುರೆಯ ಹಲ್ಲುಜ್ಜುತ್ತಿದ್ದು, ನೀರು ಕುದುರೆಯೂ ಕೂಡ ತನ್ನ ಗುಡ್‌ಟೈಮ್‌ನ್ನು ಎಂಜಾಯ್ ಮಾಡ್ತಿದೆ. ನೀರುಕುದುರೆ ಬಾಯನ್ನು ತೆರೆದು ನಿಂತುಕೊಂಡಿದ್ದು, ಅದರ ಹಲ್ಲನ್ನು ಉಜ್ಜುತ್ತಿರುವವರು ಬಾಯೊಳಗೆ ನೀರಿನ ಪೈಪನ್ನು ಹಿಡಿದುಕೊಂಡು ದೊಡ್ಡದಾದ ಬ್ರಷ್‌ ಹಿಡಿದುಕೊಂಡು ನೀರು ಕುದುರೆಯ ಹಲ್ಲಜ್ಜುತ್ತಿದ್ದು, ಈ ವೀಡಿಯೋದಲ್ಲಿ ನೀರುಕುದುರೆಯ ವರ್ತನೆ ನೋಡಿದರೆ  ಅದಕ್ಕೂ ಹಲ್ಲುಜ್ಜಿಸಿಕೊಂಡು ಅನುಭವ ಇರುವಂತೆ ಕಾಣಿಸುತ್ತಿದೆ. ಬ್ರಷ್ ಮಾಡುತ್ತಿರುವವನಿಗೆ ಸಹಕರಿಸುವಂತೆ ಅದು ಬಾಯನ್ನು ದೊಡ್ಡದಾಗಿ ತೆರೆದುಕೊಂಡು ನಿಂತಿದೆ. ಅದರ ಹಿಂದೆ ಇನ್ನೊಂದು ನೀರು ಕುದುರೆಯೂ ನಿಂತಿದ್ದು, ಹಲ್ಲುಜ್ಜಿಸಿಕೊಳ್ಳಲು ಕ್ಯೂ ನಿಂತತೆ ಕಾಣುತ್ತಿದೆ.

ತೀವ್ರ ಬರದಿಂದ ಬೇಸತ್ತ ನಮೀಬಿಯಾ: ಜನರ ಹಸಿವು ನೀಗಿಸಲು ಆನೆಗಳ ಹತ್ಯೆಗೆ ಮುಂದಾದ ಸರ್ಕಾರ

ಪ್ರಾಣಿಗಳ ಪ್ರಪಂಚವನ್ನು ತಿಳಿಯುವ ಸುಂದರ ವೀಡಿಯೋ ಇದಾಗಿದ್ದು, ಪ್ರಾಣಿಗಳು ಕೂಡ ತಮ್ಮ ದೇಹವನ್ನು ಸ್ವಚ್ಚಮಾಡಿಕೊಳ್ಳಲು ಇಷ್ಟಪಡುತ್ತವೆ. ಬೇರೆಯವರು ಆರೈಕೆ ಮಾಡಿದರೆ ಅವುಗಳು ಖುಷಿ ಪಡುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ವೀಡಿಯೋ. 42 ಸೆಕೆಂಡ್‌ಗಳ ಈ ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ತಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವುದನ್ನು ಅವುಗಳು ಇಷ್ಟಪಡುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಹಿಂದೆ ನಿಂತಿರುವ ಮತ್ತೊಂದು ನೀರ್ಗುದುರೆಯನ್ನು ನೋಡಿದ ಜನ ಅದು ತನ್ನ ಹಲ್ಲು ಸ್ವಚ್ಛಗೊಳಿಸುವುದಕ್ಕಾಗಿ ಕಾಯ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ. 

ಹಿಪ್ಪೋ ದಾಳಿಯಿಂದ ಮರಿ ರಕ್ಷಿಸಲು ತಕ್ಷಣ ನೆರೆವಿಗೆ ಧಾವಿಸಿ ತಾಯಿ ಆನೆ, ವೈರಲ್ ವಿಡಿಯೋ!

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದ ಬೀಡಿಗೆ ಫಿದಾ ಆದ ರಷ್ಯನ್ನರು, ಒಂದು ಪ್ಯಾಕೆಟ್‌ ಇಷ್ಟು ದುಬಾರಿನಾ?
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ