
ದೇವುತ್ಥಾನ ಏಕಾದಶಿ (Devutthana Ekadashi) ನಂತ್ರ ಮದುವೆ ಸೀಸನ್ (Wedding season) ಶುರುವಾಗಿದೆ. ಜನರಿಗೆ ಇನ್ನೆರಡು ತಿಂಗಳು ಮದುವೆ ಮನೆ ತಿರುಗೋದೆ ಕೆಲ್ಸ. ಆದ್ರೆ ಬೇರೆಯವರ ಮದುವೆಗೆ ಹೋಗಿ ಪೆಚ್ಚು ಮೋರೆ ಹಾಕಿಕೊಂಡು ಕುಳಿತುಕೊಳ್ಳುವ ಕೆಲ ಪೇರೆಂಟ್ಸ್ ನಮ್ಮಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಮಕ್ಕಳು. ವಯಸ್ಸಿಗೆ ಬಂದ್ರೂ ಮಗ ಅಥವಾ ಮಗಳು ಮದುವೆ ಆಗ್ತಿಲ್ಲ ಎನ್ನುವ ಚಿಂತೆ ಪಾಲಕರನ್ನು ಕಾಡುತ್ತಿದೆ. ಭಾರತ (India) ದಲ್ಲಿ ಮದುವೆ ಆಗ್ತಿರೋರ ಸಂಖ್ಯೆ ಹೆಚ್ಚಿದೆ ಎನ್ನಿಸಿದ್ರೂ ಮದುವೆ ನಿರಾಕರಿಸ್ತಿರೋರ ಸಂಖ್ಯೆ ಅದ್ರ ಡಬಲ್ ಇದೆ. ಸಮೀಕ್ಷೆ (Survey)ಯೊಂದು ಯುವಕರು ಏಕೆ ಮದುವೆ ನಿರಾಕರಿಸ್ತಿದ್ದಾರೆ ಎಂಬ ಬಗ್ಗೆ ವರದಿ ನೀಡಿದೆ.
ಸಮೀಕ್ಷೆ ಪ್ರಕಾರ, ಯುವಕರು ಎರಡು ಕಾರಣಕ್ಕೆ ತಮ್ಮ ಮದುವೆ ನಿರಾಕರಿಸ್ತಿದ್ದಾರೆ. ಇದ್ರಲ್ಲಿ ಒಂದು ಕಾರಣ ಮದುವೆ ಭಯ. ಅದನ್ನು ಗ್ಯಾಮೋಫೋಬಿಯಾ ಎನ್ನಲಾಗುತ್ತದೆ. ಸೌರಾಷ್ಟ್ರ ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳಾದ ದಾಮದೀಯ ಪೂಜಾ ಮತ್ತು ರಾಥೋರ್ ನ್ಯಾನ್ಸಿ ಮದುವೆಯ ಬಗ್ಗೆ ಇರುವ ಭಯದ ಬಗ್ಗೆ ಸಮೀಕ್ಷೆ ನಡೆಸಿ, ಆಘಾತಕಾರಿ ವಿಷ್ಯಗಳನ್ನು ನಮ್ಮ ಮುಂದಿಟ್ಟಿದ್ದಾರೆ.
ತುಂಬಿದ ಸಭಾಂಗಣದಲ್ಲಿ ಮದುವೆ ಕನಸು, ಬಂದ ಗೆಸ್ಟ್ ನೋಡಿ ದಂಪತಿ ದಂಗು!
ಮದುವೆ ಬೇಡ ಎನ್ನಲು ಇವು ಕಾರಣ : ವಿದ್ಯಾರ್ಥಿಗಳು 1242 ಯುವಕರ ಸಮೀಕ್ಷೆ ನಡೆಸಿದ್ದಾರೆ. ಯುವಕರು ತಾವು ಮದುವೆ ನಿರಾಕರಿಸಲು ಕಾರಣವೇನು ಎಂಬುದನ್ನು ಹೇಳಿದ್ದಾರೆ. ಅದ್ರಲ್ಲಿ ಶೇಕಡಾ 90.10ರಷ್ಟು ಜನರು ಲೇಟಾಗಿ ಮದುವೆ ಆಗ್ತೇವೆ, ಮದುವೆ ಆಗೋದಿಲ್ಲ ಎನ್ನುವ ಉತ್ತರ ನೀಡಿದ್ದಾರೆ.
ಕುಟುಂಬ ಎನ್ನುವ ಜವಾಬ್ದಾರಿ : ಈಗಿನ ಯುವಕರಿಗೆ ಕುಟುಂಬದ ಜವಾಬ್ದಾರಿ ಹೊರೆಯಾಗ್ತಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇಕಡಾ 67.80ರಷ್ಟು ಮಂದಿ ಮದುವೆಯ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿಲ್ಲ. ಇನ್ನು ಶೇಕಡಾ 63.60 ಜನರು ಮದುವೆ, ತಮ್ಮ ಗುರಿಗಳಿಗೆ ಅಡ್ಡಿ ಎನ್ನುತ್ತಾರೆ. ಶೇಕಡಾ 70.20ರಷ್ಟು ಜನರು, ಮದುವೆ ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಎಂದು ನಂಬುತ್ತಾರೆ.
ವೃತ್ತಿಗೆ ಮಹತ್ವ : ವೃತ್ತಿ ಜೀವನಕ್ಕೆ ಆದ್ಯತೆ ನೀಡುವ ಜನರಿಗೆ ಮದುವೆಯಂತಹ ಸಾಮಾಜಿಕ ಪದ್ಧತಿ ಅನುಸರಿಸಲು ಇಷ್ಟವಿಲ್ಲ. ಇದ್ರಿಂದ ತಮ್ಮ ವೃತ್ತಿಗೆ ಹೊಡೆತ ಬೀಳುತ್ತದೆ ಎಂದು ಅವರು ಬಲವಾಗಿ ನಂಬುತ್ತಾರೆ.
ಸಿಗದ ಸೂಕ್ತ ಸಂಗಾತಿ : ಕೆಲವರಿಗೆ ಅವರ ಮೆಚ್ಚಿನ ಸಂಗಾತಿ ಸಿಕ್ಕಿಲ್ಲ. ಹಾಗಾಗಿಯೇ ಮದುವೆ ಮುಂದೂಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಎನ್ನುವ ಕಾರಣ ಹೇಳಿ, ಮದುವೆಯಿಂದ ದೂರ ಓಡ್ತಿದ್ದಾರೆ.
ವಿಫಲ ವಿವಾಹ : ಯುವಕರು ಮದುವೆಯಾಗದಿರಲು ಪೂರ್ವಾಗ್ರಹ ಕಾರಣ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ. ಶೇಕಡಾ 73.60 ರಷ್ಟು ಮಂದಿ ವಿವಾಹಕ್ಕೆ ಸಂಬಂಧಿಸಿದಂತೆ ಪೂರ್ವಾಗ್ರಹ ಹೊಂದಿದ್ದಾರೆ. ಶೇಕಡಾ 75.60ರಷ್ಟು ಯುವಕರು ತಮ್ಮ ಪಾಲಕರ ವಿಫಲ ವಿವಾಹವನ್ನು ನೋಡಿದ್ದಾರೆ. ಇದು ಅವರ ಮನಸ್ಸಿನ ಮೇಲೆ ಗಂಭೀರ ಪ್ರಭಾವ ಬೀರಿದೆ. ತಮ್ಮ ಜೀವನದಲ್ಲೂ ಇಂಥ ಘಟನೆ ನಡೆದ್ರೆ ಎಂಬ ಆತಂಕದಲ್ಲಿಯೇ ಅವರು ಮದುವೆಯನ್ನು ನಿರಾಕರಿಸುತ್ತಿದ್ದಾರೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಆಕ್ಟರ್‌ಗಿದೆ ಅಮ್ಮನ ಜೊತೆ ಸಂಬಂಧ ! ಸತ್ಯ ಬಾಯ್ಬಿಟ್ಟ ನಟ
ಲಿವ್ ಇನ್ ಮೇಲೆ ಪ್ರೀತಿ : ಮದುವೆಯಲ್ಲಿ ನಂಬಿಕೆ ಕೂಡ ಮುಖ್ಯವಾಗುತ್ತದೆ. ಬಹುತೇಕ ಯುವಕರಿಗೆ ಇತರರನ್ನು ಕಣ್ಮುಚ್ಚಿ ನಂಬಲು ಸಾಧ್ಯವಾಗ್ತಿಲ್ಲ. ಪಾಶ್ಚಿಮಾತ್ಯ ದೇಶಗಳ ಅನುಕರಣೆ ಮಾಡುವವರು ನಮ್ಮ ದೇಶದಲ್ಲಿ ಹೆಚ್ಚಾಗಿರೋದು ಒಂದು ಕಾರಣವಾಗಿದೆ. ಮದುವೆಯನ್ನು ನಿರಾಕರಿಸುವ ಇಲ್ಲವೇ ಮುಂದೂಡುವ ಯುವಕರು, ಲಿವ್-ಇನ್ ಸಂಬಂಧವನ್ನು ಹೆಚ್ಚು ಬಯಸುತ್ತಿದ್ದಾರೆ. ಈ ಪ್ರವೃತ್ತಿ ಭಾರತದಲ್ಲಿ ಹೆಚ್ಚಾಗ್ತಿದೆ. ಮದುವೆ, ಮನೆ, ಮಕ್ಕಳ ಜವಾಬ್ದಾರಿಯ ಆಲೋಚನೆ ಯುವಕರನ್ನು ಆತಂಕಕ್ಕೆ ತಳ್ಳುತ್ತಿದೆ. ಈ ಎಲ್ಲ ಜವಾಬ್ದಾರಿ, ಹೊಣೆಯಿಂದ ತಪ್ಪಿಸಿಕೊಳ್ಳಲು ಅವರು ಮದುವೆಯಾಗ್ತಿಲ್ಲ. ಸಂಬಂಧಿಕರ ಕಹಿ ಅನುಭವಗಳು ಮತ್ತು ಹಿಂದಿನ ಕೆಟ್ಟ ಅನುಭವಗಳು ಜನರನ್ನು ಮದುವೆಯಿಂದ ದೂರವಿಡುತ್ತಿವೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.