ಹಾವಿನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾವಿನ ಜೊತೆ ವೇದಿಕೆ ಮೇಲೆ ಮಹಿಳೆ ಮಾಡಿದ ಕೆಲಸ ಎಲ್ಲರನ್ನು ಬೆರಗುಗೊಳಿಸಿದೆ. ನೆಟ್ಟಿಗರ ಕೋಪಕ್ಕೂ ಆಕೆ ಕಾರಣವಾಗಿದ್ದಾಳೆ.
ಸುದ್ದಿಯಾಗೋಕೆ ಜನರು ಏನೇನಲ್ಲ ಮಾಡ್ತಾರೆ. ಸೋಶಿಯಲ್ ಮೀಡಿಯಾ (Social media) ದಲ್ಲಿ ದಿನಕ್ಕೊಂದಿಷ್ಟು ವಿಡಿಯೋ ವೈರಲ್ (video viral) ಆಗ್ತಾನೆ ಇರುತ್ತೆ. ಇದ್ರಲ್ಲಿ ಕೆಲವರು ಮೂಗಿನ ಮೇಲೆ ಬೆರಳಿಡುವಂತ ಸಾಹಸ ಮಾಡ್ತಾರೆ. ವೈರಲ್ ಆಗೋಕೆ ಹೋಗಿ ಯಡವಟ್ಟು ಮಾಡ್ಕೊಂಡು ಯಮಲೋಕ ಸೇರಿದವರೂ ನಮ್ಮಲ್ಲಿದ್ದಾರೆ. ಈಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಇಲ್ಲಿ ಡಾನ್ಸರ್ ಒಬ್ಬಳ ಕೆಲಸ ನೋಡಿ ಜನರು ದಂಗಾಗಿದ್ದಾರೆ. ಇದೆಲ್ಲ ಬೇಡಮ್ಮ, ಎಚ್ಚರವಾಗಿರು ಅಂತ ಜನರು ಸಲಹೆ ನೀಡಿದ್ದಾರೆ
ವೈರಲ್ ಆದ ವಿಡಿಯೋ ನೋಡಿದ್ರೆ ಮೈ ಜುಮ್ಮೆನ್ನುತ್ತೆ. ಹಾವಿ (snake) ನ ಜೊತೆ ಡಾನ್ಸ್ ಮಾಡ್ತಾ ಅದಕ್ಕೆ ಮುತ್ತಿಟ್ಟಿದ್ದಾಳೆ ಹುಡುಗಿ. ರಾಜಸ್ತಾನಿ ಹಾಡಿಗೆ ಡಾನ್ಸ್ ಮಾಡುವ ಹುಡುಗಿ ಪಕ್ಕದಲ್ಲೇ ಹಾವಿದೆ. ಆಗಾಗ ಹಾವನ್ನು ಕೆಣಕುವ ಡಾನ್ಸರ್, ಹಾವಿನ ತಲೆಯನ್ನು ನೆಕ್ಕುತ್ತಾಳೆ.
ಬಿಗ್ ಬಾಸ್ 11: ಐಶ್ವರ್ಯಾ ಜೊತೆ ಡ್ಯಾನ್ಸ್ ಮಾಡಿದ ಶಿಶಿರ್‌ಗೆ ಹೊಡೆದ ಧರ್ಮ ಕೀರ್ತಿರಾಜ್
ಲಕ್ಕಿ ಉಡಾನ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಡಾನ್ಸರ್, ಹಾವಿನ ಜೊತೆ ವೇದಿಕೆ ಮೇಲಿರೋದನ್ನು ನೀವು ಕಾಣ್ಬಹುದು. ವೀಡಿಯೊದಲ್ಲಿ ರಾಜಸ್ತಾನಿ ಹಾಡು, ಕಾಳಿ ನಾಗಿನ್ ಬಾನೆ ಬಾವಡಿ ಪ್ಲೇ ಆಗುತ್ತಿರುವುದನ್ನು ನೀವು ನೋಡಬಹುದು. ಹಾವನ್ನು ಆಗಾಗ ಕೆರಳಿಸ್ತಾ ಬಹು ಸಮಯ ಡಾನ್ಸ್ ಮಾಡ್ತಾಳೆ ಮಹಿಳೆ.
ಕಪ್ಪು ಬಣ್ಣದ ಹಾವಿನ ತಲೆಗೆ ನಾಲಿಗೆ ಟಚ್ ಮಾಡುವ ಡಾನ್ಸರ್ , ಹಾವು ಹತ್ತಿರ ಬರ್ತಿದ್ದಂತೆ ತಪ್ಪಿಸಿಕೊಂಡು ಹಿಂದೆ ಹೋಗ್ತಾಳೆ. ಹಾವುಗಳು ದುರ್ಬಲ ದೃಷ್ಟಿಯನ್ನು ಹೊಂದಿರುತ್ತವೆ. ಬಣ್ಣಗಳನ್ನು ಅವು ಗುರುತಿಸುವುದಿಲ್ಲ. ಆದ್ರೆ ಗದ್ದಲದ ಸ್ಥಳಗಳಲ್ಲಿ ಹಾವು ಅಸಮಾಧಾನಗೊಳ್ಳುತ್ತವೆ ಮತ್ತು ಆಕ್ರಮಣಕಾರಿಯಾಗುತ್ತವೆ. ಅವು ಯಾರ ಮೇಲಾದ್ರೂ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ವೇದಿಕೆ ಮೇಲಿರುವ ಹಾವಿನ ಹಲ್ಲನ್ನು ತೆಗೆಯಲಾಗಿದೆ. ಹಾವಿಗೆ ಹಲ್ಲು ತೆಗೆದ್ರೆ ಅದು ವಿಷಕಾರಿಯಲ್ಲವಾದ್ರೂ ಇದು ಪ್ರಾಣಿಗೆ ನೀಡ್ತಿರುವ ಹಿಂಸೆ.
ಈ ವಿಡಿಯೋಕ್ಕೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಲೈಕ್ ಒತ್ತಿದ್ದಾರೆ. ಹಾಗೆಯೇ ಕಮೆಂಟ್ ಸುರಿಮಳೆಯಾಗಿದೆ. ಬಹುತೇಕರು ಮಹಿಳೆ ಈ ಕೆಲಸವನ್ನು ಖಂಡಿಸಿದ್ದಾರೆ. ಯಾವುದೇ ಪ್ರಾಣಿಗೆ ತೊಂದರೆ ನೀಡಬಾರದು. ಜನರಿಗೆ ಇದ್ರಿಂದ ಏನು ಸಿಗುತ್ತೆ ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ. ಹಾವು ಕಿಸ್ ಮಾಡ್ಲಿ ಅಂತ ಡಾನ್ಸರ್ ಕಾಯ್ತಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಈ ಹಾವಿನ ಹಲ್ಲು ಕೀಳಲಾಗಿದೆ. ಅದ್ರಲ್ಲಿ ವಿಷವಿಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ವೈರಲ್ ಆಗೋಕೆ ಜನ ಏನೆಲ್ಲ ಮಾಡ್ತಾರೆ. ಪ್ರಾಣಿಗಳನ್ನು ಬಿಟ್ಟುಬಿಡಿ ಎಂದು ಬಳಕೆದಾರರು ಮನವಿ ಮಾಡಿದ್ದಾರೆ.
₹67,538 ಕೋಟಿ ಮೌಲ್ಯದ ಅಮೆಜಾನ್ ಷೇರು ಮಾರಾಟ ಮಾಡಿದ ಜೆಫ್ ಬೆಜೋಸ್ ಮಾಜಿ ಪತ್ನಿ!
ಜನರು ಅಪಾಯಕಾರಿ ಹಾವಿನ ಜೊತೆಯೂ ತಮ್ಮ ಹುಚ್ಚಾಟ ತೋರಿಸ್ತಿರೋದು ಇದೇ ಮೊದಲಲ್ಲ. ಅನೇಕರು ಹಾವಿನ ಜೊತೆ ಆಟವಾಡಲು ಹೋಗಿ ಕಚ್ಚಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾವನ್ನು ಕೈನಲ್ಲಿ ಹಿಡಿದು ಪ್ರಾಣ ಕಳೆದುಕೊಂಡ ಕೆಲ ಕುಡುಕರು ಸುದ್ದಿಗೆ ಬಂದಿದ್ದರು.
ನಾಗರ ಹಾವು ಹಾಗೂ ಕಿಂಗ್ ಕೋಬ್ರಾ ಮಧ್ಯೆ ವ್ಯತ್ಯಾಸವಿದೆ. ನಾಗರಹಾವುಗಳು ದಕ್ಷಿಣ ಆಫ್ರಿಕಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾದ ದ್ವೀಪಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸರೋವರಗಳು, ನದಿಗಳಂತಹ ನೀರಿನ ಮೂಲಗಳ ಬಳಿ ವಾಸಿಸಲು ಹಾವುಗಳು ಇಷ್ಟಪಡುತ್ತವೆ. ಅವು ಸಣ್ಣ ಹಾವುಗಳನ್ನು ತಿನ್ನುತ್ತವೆ. ನಾಗರಹಾವಿನ ವಯಸ್ಸು ಸಾಮಾನ್ಯವಾಗಿ 25-30 ವರ್ಷಗಳ ನಡುವೆ ಇರುತ್ತದೆ. ಆದರೆ ಮೃಗಾಲಯದಲ್ಲಿ ಅಥವಾ ಸೆರೆಯಲ್ಲಿ ಇರುವ ಹಾವು 35-40 ವರ್ಷ ಬದುಕುತ್ತದೆ. ಹಾವು ಯಾರನ್ನೂ ದ್ವೇಷ ಮಾಡೋದಿಲ್ಲ, ಹಾಲು ಕುಡಿಯೋದಿಲ್ಲ ಎಂದು ವಿಜ್ಞಾನಿಗಳು ಹೇಳ್ತಾರೆ.